ನಾನು ಕನ್ನಡತಿ, ನನ್ನ ಭಾಷೆನೇ ನನ್ನ ಶಕ್ತಿ: ನಿರೂಪಕಿ ರೀನಾ ಡಿಸೋಜಾ

By Suvarna NewsFirst Published Apr 24, 2022, 2:41 PM IST
Highlights

ಗಿಚಿ ಗಿಲಿಗಿಲಿ ನಿರೂಪಣೆ ಎಂಜಾಯ್ ಮಾಡುತ್ತಿರುವ ಸ್ಪೂರ್ಟ್ಸ್‌ ಹೋಸ್ಟ್‌ ರೀನಾ ಡಿಸೋಜಾ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. 

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚಿ ಗಿಲಿಗಿಲಿ (Gichi GiliGili) ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿರುವ ಐಪಿಎಲ್‌ ಹೋಸ್ಟ್‌ (IPL Host) ರೀನಾ ಡಿಸೋಜಾ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿರುವುದಕ್ಕೆ ಕನ್ನಡ ವೀಕ್ಷಕರಿಗೆ ಬೇಗ ಹತ್ತಿರವಾಗಿದ್ದಾರೆ.

ಗಿಚಿ ಗಿಲಿಗಿಲಿ: 

'ಮನೋರಂಜನೆ ಕ್ಷೇತ್ರ ತುಂಬಾನೇ ಮಜವಾಗಿದೆ. ಇಷ್ಟು ದಿನ ನಾನು ಕ್ರೀಡಾ ಚರ್ಚೆಗಳನ್ನು ಮಾಡುತ್ತಿದ್ದ ಈಗ ಮನೋರಂಜನೆ ಮಾಡುತ್ತಿರುವುದು ದೊಡ್ಡ ಬದಲಾವಣೆ ತಂದಿದೆ. ಗಿಚಿ ಗಿಲಿಗಿಲಿ ತಂಡ ನನ್ನನ್ನು ಆಯ್ಕೆ ಮಾಡಿದಕ್ಕೆ ಸಂತೋಷವಿದೆ. ಮೊದಲ ಬಾರಿ ನನ್ನನ್ನು ನೋಡುತ್ತಿದ್ದರೂ ನನ್ನನ್ನು ಒಪ್ಪಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಲೋಕಲ್ ಚಾನೆಲ್‌ನಲ್ಲಿ ನಾನು ಕೆಲಸ ಶುರು ಮಾಡಿದ್ದು, ಒಳ್ಳೆ ಅವಕಾಶಕ್ಕೆ ನಾನು ನನ್ನ ರೆಕ್ಕೆ ಹರಡಿದೆ ನಿಜ ಹೇಳಬೇಕು ಅಂದ್ರೆ ಇದು ದೊಡ್ಡ ಚಾಲೆಂಜ್ ಆಗಿತ್ತು. ನಾನು ಅತ್ತಿದ್ದೀನಿ, ನಕ್ಕಿದ್ದೀನಿ ..ವೃತ್ತಿ ಜೀವನದಲ್ಲಿ ಏರು ಪೇರುಳನ್ನು ಅನುಭವಿಸಿದ್ದೀನಿ. ಪ್ರತಿಯೊಬ್ಬರು ಕೊಡುವ ಸಲಹೆಯನ್ನು ನಾನು ಸ್ವೀಕರಿಸುವೆ, ಇದೆಲ್ಲಾ ನನಗೆ ತುಂಬಾನೇ ಸಹಾಯ ಮಾಡಿದೆ' ಎಂದು ರೀನಾ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಕ್ರಿಕೆಟ್‌ ಕ್ಷೇತ್ರದಲ್ಲಿರುವ ದಿಗ್ಗಜರ ಸಂದರ್ಶನ ಮಾಡಿದ್ದೀನಿ ನಾನು ಮಾಡಿರುವ ಪುಣ್ಯ. ಕ್ರೀಡೆಯ ಬಗ್ಗೆ ಅವರಿಗಿರುವ ಜ್ಞಾನವು ನಿಜವಾಗಿಯೂ ಹಂಚಿಕೊಳ್ಳಬೇಕು. ಒಂದು ಚರ್ಚೆ ಆರಂಭಿಸುವ ಮುನ್ನ ತುಂಬಾನೇ observation ಮತ್ತು ರೀ-ಸರ್ಚ್‌ ನಡೆಯುತ್ತದೆ. ಬೇಕಾಬಿಟ್ಟಿ ಮಾಹಿತಿ ನೀಡುವುದಕ್ಕೆ ಆಗೋಲ್ಲ ವಿಚಾರಗಳು ನಿಜವಾಗಿರಬೇಕು. ನಮ mannerism ಬೇರೆ ಇರಬೇಕು. ಆದರೆ ಮನೋರಂಜನೆ ಕ್ಷೇತ್ರದಲ್ಲಿ ಸಖತ್ ಡಿಫರೆಂಟ್ ಆಗಿರುತ್ತದೆ' ಎಂದು ರೀನಾ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ:

'ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ನನ್ನ ಶಕ್ತಿ ಮತ್ತು weekness ಏನೆಂದು ಅರ್ಥ ಮಾಡಿಕೊಳ್ಳಲು ತುಂಬಾನೇ ಸಹಾಯವಾಗಿದೆ. 2020 ನನ್ನ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್. ಕನ್ನಡ ಭಾಷೆ ನನ್ನ ಶಕ್ತಿ ಎಂದು ತಿಳಿಯುತ್ತಿದ್ದಂತೆ ಅದನ್ನು ಇನ್ನೂ ಹೆಚ್ಚು improve ಮಾಡಿಕೊಳ್ಳಲು ಮುಂದಾದೆ. ಸೋಷಿಯಲ್ ಮೀಡಿಯಾ ನನ್ನ ವೃತ್ತಿ ಜೀವನಕ್ಕೆ ಸಹಾಯ ಮಾಡಿತ್ತು. ನನಗೆ ಫಾಲೋವರ್ಸ್‌ ಕೂಡ ಹೆಚ್ಚಾದರು. ಈಗ ಜೀವನ ಅದ್ಭುತವಾಗಿದೆ.  consistency is the key ಎಂದು ಅರ್ಥ ಮಾಡಿಕೊಂಡಿರುವೆ. ಈಗ ಹೆಚ್ಚಿಗೆ ಕಾನ್ಫಿಡೆಂಟ್ ಆಗಿರುವೆ. ತುಂಬಾ ಕೆಲಸಗಳು ಲೈನ್‌ನಲ್ಲಿದೆ ಯಾವ ಕೆಲಸ ಬಂದರೂ ಮಾಡಲು ಸಿದ್ಧ' ಎಂದಿದ್ದಾರೆ ರೀನಾ.

IPL ಹೋಸ್ಟ್‌ ರೀನಾ ಡಿಸೋಜಾ ಈಗ ಗಿಚಿ ಗಿಲಿಗಿಲಿ ಶೋನಲ್ಲಿ!

ಸೋಷಿಯಲ್ ಮೀಡಿಯಾದಲ್ಲಿ content create ಮಾಡುವುದು ಅಷ್ಟು ಸುಲಭವಲ್ಲ. ತುಂಬಾ ರೀ-ಟೇಕ್, ಬ್ರೈನ್‌ ಸ್ಟ್ರಾಮಿಂಗ್ ನಡೆಯುತ್ತದೆ. ಎರಡು ವರ್ಷಗಳಿಂದ ಮಾಡುತ್ತಿರುವ ಕಾರಣ ಇದು ಚಾಲೆಂಜ್‌. ನಾನು ಹೆಮ್ಮೆಯ ಕನ್ನಡತಿ. ವೀಕ್ಷಕರು ಕೊಟ್ಟಿರುವ ಪ್ರೀತಿ ಅಪಾರ. ನನ್ನ ವೃತ್ತಿ ಜೀವನದಲ್ಲಿ ನಾನು ಯಾವ ಕಾರಣಕ್ಕೂ ಟ್ರೋಲ್ ಆಗಿಲ್ಲ ನಾನು ಏನೇ ತಪ್ಪು ಮಾಡಿದ್ದರೂ ನೇರವಾಗಿ ಮೆಸೇಜ್ ಮಾಡಿ ಹೇಳುತ್ತಾರೆ. ನನ್ನ ದಿನದಲ್ಲಿ ಅರ್ಧ ಗಂಟೆ ಫಾಲೋವರ್ಸ್‌ಗೆ ಪ್ರತಿಕ್ರಿಯೆ ಕೊಡುವೆ' ಎಂದು ರೀನಾ ಮಾತನಾಡಿದ್ದಾರೆ.

click me!