ರಾಮಾಚಾರಿ: ಮದುಮಗನ ವೇಷದಲ್ಲಿ ರಾಮಾಚಾರಿ, ಇನ್ನು ಮದುಮಗಳು ಚಾರು ಬರೋದಷ್ಟೇ ಬಾಕಿ!

Published : Jul 20, 2022, 05:16 PM IST
ರಾಮಾಚಾರಿ: ಮದುಮಗನ ವೇಷದಲ್ಲಿ ರಾಮಾಚಾರಿ, ಇನ್ನು ಮದುಮಗಳು ಚಾರು ಬರೋದಷ್ಟೇ ಬಾಕಿ!

ಸಾರಾಂಶ

ಸಖತ್ ಮಜಾ ಕೊಡೋ ಎಪಿಸೋಡ್‌ಗಳಿಂದ ರಾಮಾಚಾರಿ ಗಮನ ಸೆಳೀತಿದೆ. ರಾಮಾಚಾರಿಯನ್ನು ಕೆರಳಿಸಿದ ಚಾರುವನ್ನು ರಾಮಾಚಾರಿ ಎಲ್ಲ ಕಡೆಯಿಂದ ಕಟ್ಟಿ ಹಾಕೋದಕ್ಕೆ ರೆಡಿ ಆಗಿದ್ದಾನೆ. ಚಾರುಗೆ ವಿಷ್ಯ ಗೊತ್ತಿಲ್ಲದೆ ಮದುವೆಗೆ ಅಣಿಯಾಗ್ತಿದ್ದಾನೆ. ಮದುಮಗನ ವೇಷದಲ್ಲಿ ಮಂಟಪಕ್ಕೆ ಬಂದಿದ್ದಾನೆ. ಚಾರು ಹೇಗೆ ಬರ್ತಾಳೆ ಅನ್ನೋದೇ ಈಗ ಸಸ್ಪೆನ್ಸ್.  

ತನಗೊಂದು ಸರ್ಟಿಫಿಕೇಟ್ ಸಿಗಬೇಕು. ಅದನ್ನು ಕೊಡೋದು ರಾಮಾಚಾರಿ. ಅದನ್ನು ರಾಮಾಚಾರಿ (Ramachari) ಕೊಟ್ಟರೆ ತಂದೆ ಉದ್ಯಮಿ ಜೈ ಶಂಕರ್ ಅವರ ಕಂಪನಿಗಳಿಗೆ ತಾನೇ ಸಿಇಓ ಆಗ್ತೀನಿ, ಆಮೇಲೆ ಅಷ್ಟೂ ಕಂಪನಿಗಳ ಒಡತಿ ಆಗ್ತೀನಿ ಅನ್ನೋ ಕನಸಲ್ಲಿ ತೇಲ್ತಾ ಇದ್ದಾಳೆ ಚಾರು ಲತಾ (Charu latha). ತನ್ನ ಕನಸನ್ನು ಈಡೇರಿಸಿಕೊಳ್ಳಲು ರಾಮಾಚಾರಿಯಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಲು ಅವಳು ಆಡಿರುವ ನಾಟಕ ಒಂದೆರಡಲ್ಲ. ಆರಂಭದಲ್ಲಿ ಅವನ ಜೊತೆಗೆ ನೇರವಾಗಿ ತನಗೆ ಸರ್ಟಿಫಿಕೇಟ್ ಕೊಡುವಂತೆ ಕೇಳಿದ್ದಾಳೆ. ಹದಿನೈದು ದಿನದೊಳಗೆ ಕೆಲಸದಲ್ಲಿ ಪ್ರತಿಭೆ ತೋರಿಸಿದರೆ ಸರ್ಟಿಫಿಕೇಟ್ ಕೊಡುವ ಭರವಸೆಯನ್ನು ರಾಮಾಚಾರಿ ನೀಡಿದ್ದಾನೆ. ಆದರೆ ಅವಳು ಕೆಲಸದಲ್ಲಿ ತನ್ನ ಪ್ರತಿಭೆ ತೋರಿಸಲ್ಲ, ಬದಲಿಗೆ ಶಾರ್ಟ್ ಕಟ್ ಮೂಲಕ ರಾಮಾಚಾರಿಯಿಂದ ಸರ್ಟಿಫಿಕೇಟ್ ಪಡೆಯುವ ಪ್ಲಾನ್ ಮಾಡಿದ್ದಾಳೆ. ಮೊದಲಿಗೆ ತನ್ನ ಒನಪು, ಒಯ್ಯಾರದಿಂದ ರಾಮಾಚಾರಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾಳೆ.

ಆದರೆ ಅದು ವರ್ಕೌಟ್ ಆಗಿಲ್ಲ. ಆಮೇಲೆ ತಾನು ರಾಮಾಚಾರಿಯನ್ನು ಪ್ರೀತಿಸುತ್ತಿರುವುದಾಗಿ ರಾಮಾಚಾರಿ ಮನೆಯಲ್ಲಿ ಹೇಳಿದ್ದಾಳೆ. ಇದು ಮನೆಯವರಿಗೆ ಶಾಕ್ ತಂದಿದೆ. ಜೊತೆಗೆ ಮನೆಯವರ ಜೊತೆಗೆ ರಾಮಾಚಾರಿ ಸಂಬಂಧ (Relationship) ಹಾಳಾಗುವ ಹಾಗೆ ಮಾಡಿದೆ. ಚಾರು ತನ್ನ ಕೆಲಸದಲ್ಲಿ ಇನ್ನಷ್ಟು ಮುಂದುವರಿದಾಗ ರಾಮಾಚಾರಿ ವರ್ಕೌಟ್ ಮಾಡಲೇ ಬೇಕಿದೆ. ಅವಳನ್ನು ಆ ಕನಸಿಂದ ಎಚ್ಚರಗೊಳಿಸೋದಕ್ಕೆ ಲೈಫನ್ನೇ ಬದಲಾಯಿಸೋದಕ್ಕೆ ರಾಮಾಚಾರಿಯ ಮಾಸ್ಟರ್ ಪ್ಲಾನ್ ರೆಡಿ ಆಗಿದೆ. ಇದಕ್ಕೆ ಸಕಲ ಸಿದ್ಧತೆಗಳೂ ಆಗಿವೆ. ಒಂದೊಂದೇ ಕಾರ್ಯರೂಪಕ್ಕೆ ಬರುತ್ತಿವೆ. 

 

ರಾಮಾಚಾರಿಯ ಮಾಸ್ಟರ್ ಪ್ಲಾನ್ ಚಾರುಲತಾಳನ್ನು ಮದುವೆ (Wedding) ಆಗೋದು. ಅದಕ್ಕೆ ಕಾರಣ ಚಾರುವೇ. ಸರ್ಟಿಫಿಕೇಟ್‌ಗೋಸ್ಕರ ರಾಮಾಚಾರಿ ಬದುಕಲ್ಲಿ ಆಟ ಆಡಿ ಅವನಿಗೆ ಪಾಠ ಕಲಿಸ್ತೀನಿ ಅಂತ ಚಾರು ಚಾಪೆ ಕೆಳಗೆ ನುಸುಳೋ ಪ್ರಯತ್ನ ಮಾಡಿದರೆ, ಅತ್ತ ರಾಮಾಚಾರಿ ರಂಗೋಲಿ ಕೆಳಗೆ ನುಸುಳುವ ಪ್ರಯತ್ನದಲ್ಲಿದ್ದಾನೆ. ಚಾರುವನ್ನು ಮದುವೆ ಆಗೋಕೆ ಸರ್ವವನ್ನೂ ರೆಡಿ ಮಾಡ್ಕೊಂಡಿದ್ದಾನೆ. ಮೊದಲಿಂದಲೂ ಶಿಸ್ತು, ಶಾಸ್ತ್ರ ಬದ್ಧತೆಯಲ್ಲಿ ರಾಮಾಚಾರಿಗೆ ಹೆಚ್ಚು ಮನಸ್ಸು. ಹೀಗಾಗಿ ಸಿಂಪಲ್ ಆಗಿ ಆದರೆ ಶಾಸ್ತ್ರಬದ್ಧವಾಗಿ ಮದುವೆ ಆಗೋದಕ್ಕೆ ರೆಡಿ ಆಗಿದ್ದಾನೆ. ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಲಗ್ನ ಪತ್ರಿಕೆ ರೆಡಿ ಮಾಡಿಸಿದ್ದಾನೆ. ಸ್ನೇಹಿತನನ್ನೇ ಪುರೋಹಿತ ಮಾಡಿದ್ದಾನೆ. ಅವರ ದೇವಸ್ಥಾನದಲ್ಲೇ ಮದುವೆ ನಿಗದಿ ಮಾಡಿ ತನ್ನ ಮನೆಯವರನ್ನು ಕರೆದಿದ್ದಾನೆ. ಜೊತೆಗೆ ಚಾರುಲತಾ ತಂದೆ ಉದ್ಯಮಿ ಜೈ ಶಂಕರ್‌ ಅವರನ್ನೂ ಮದುವೆಗೆ ಆಹ್ವಾನಿಸಿದ್ದಾನೆ.ಆದರೆ ಅವರಿಗೆ ತಾನು ಮದುವೆ ಆಗ್ತಾ ಇರೋದು ಅವರ ಮಗಳು ಚಾರುವನ್ನು ಅಂತ ಹೇಳಿಲ್ಲ. 

ಜೊತೆ ಜೊತೆಯಲಿ : ಅನು ಕಾರು ಬ್ರೇಕ್ ಫೇಲ್ ಆಗೋಯ್ತು, ಆರ್ಯನಿಗೆ ತಪ್ಪಿದ ಪ್ರಜ್ಞೆ, ಮುಂದೇನು?

ಇಷ್ಟೆಲ್ಲ ಆಗಿದ್ದು ಚಾರುವಿನ ಗಮನಕ್ಕೆ ಬಂದಿಲ್ಲ. ಅವಳು ಇನ್ನೂ ಸರ್ಟಿಫಿಕೇಟ್ ಪಡೆದು ಅಪ್ಪನ ಕಂಪನಿಗೆ ಸಿಇಓ ಆಗೋ ಕನಸಿನಲ್ಲೇ ಇದ್ದಾಳೆ. ರಾಮಾಚಾರಿ ಅವಳಿಗೆ ತಾನು ಸರ್ಟಿಫಿಕೇಟ್ ಕೊಡೋದಾಗಿ ಹೇಳಿ ದೇವಸ್ಥಾನಕ್ಕೆ ಮದುವೆ ಮುಹೂರ್ತದ ಸಮಯಕ್ಕೇ ಬರುವಂತೆ ಹೇಳಿದ್ದಾನೆ. ಮರುದಿನ ಹೇಳಿದ ಮಾತಿನಂತೆ ರಾಮಾಚಾರಿ ಮದು ಮಗನ ವೇಷದಲ್ಲಿ ಮಂಟಪಕ್ಕೆ ಬಂದಿದ್ದಾನೆ. ಆತನ ಸ್ನೇಹಿತ ಪೌರೋಹಿತ್ಯಕ್ಕೆ ಎಲ್ಲ ರೆಡಿ ಮಾಡಿಟ್ಟುಕೊಂಡಿದ್ದಾನೆ. ಇನ್ನೇನು ಮದುಮಗಳು ಚಾರು ಬರೋದೊಂದೇ ಬಾಕಿ. ಅವಳು ಯಾವ ವೇಷದಲ್ಲಿ ಬರ್ತಾಳೆ. ರಾಮಾಚಾರಿ ಅರೇಂಜ್‌ಮೆಂಟ್ಸ್‌ಗಳನ್ನು ನೋಡಿ ಹೇಗೆ ರಿಯಾಕ್ಟ್‌ ಮಾಡ್ತಾಳೆ, ಉದ್ಯಮಿ ಜೈ ಶಂಕರ್ ಈ ಕೆಲಸಕ್ಕೆ ಒಪ್ತಾರಾ? ಹೀಗೆ ಕುತೂಹಲ ಹೆಚ್ಚಿಸುತ್ತಿದೆ ರಾಮಾಚಾರಿ. 

ಕನ್ನಡತಿ ಮದುವೆಯನ್ನು ಬಹಳ ತಡವಾಗಿ ಸತಾಯಿಸಿ ಸತಾಯಿಸಿ ಮಾಡಿದ್ದಾರೆ ಅಂತ ಕಮೆಂಟ್‌ ಮಾಡ್ತಿದ್ದವರಿಗೆ 'ರಾಮಾಚಾರಿ' ಮೂಲಕ ಕಲರ್ಸ್ ಕನ್ನಡ ಸಪ್ರ್ರೈಸ್ ಕೊಟ್ಟಿದೆ. ಜನ ನಿರೀಕ್ಷಿಸೋ ಮೊದಲೇ ಭಾರೀ ಜಲ್ದಿಯಲ್ಲಿ ಮದುವೆ ಮುಗಿಸಲು ಹೊರಟಿದೆ. ಜೊತೆಗೆ ಕುತೂಹಲವನ್ನೂ ಕಾಯ್ದಿರಿಸಿದೆ. ಕೆ ಎಸ್ ರಾಮ್‌ ಜೀ ನಿರ್ದೇಶನದ ಈ ಸೀರಿಯಲ್‌ನಲ್ಲಿ ರಿತ್ವಿಕ್ ಕೃಪಾಕರ್, ಮೌನಾ ಗುಡ್ಡೆಮನೆ, ಶಂಕರ್ ಅಶ್ವತ್ಥ, ಚಿ ಗುರುದತ್ತ್ ಮೊದಲಾದವರು ನಟಿಸಿದ್ದಾರೆ. 

ಕನ್ನಡತಿ : ಜಗಳವಾಡಿಕೊಂಡ ಹರ್ಷ ಭುವಿ, ಹರ್ಷನಿಗೆ ನೆಟ್ಟಿಗರ ಕ್ಲಾಸ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?