ಹರ್ಷ ಭುವಿಗೆ ಮದುವೆ ಆಗಿ ಒಂದು ವಾರನೂ ಆಗಿಲ್ಲ. ಆದರೆ ಅಷ್ಟರೊಳಗೆ ಒಂದು ಅರ್ಧ ಜೀವನಕ್ಕಾಗೋವಷ್ಟು ಕಷ್ಟಗಳ ಸರಮಾಲೆ ಬಂದು ಕೂತಿದೆ. ಅದರ ಪಟ್ಟಿಗೆ ಈಗ ಮತ್ತೊಂದು ಸೇರ್ಪಡೆ ಡಿವೋರ್ಸ್. ಈ ಹಿಂಸೆ ನೋಡೋಕ್ಕಾಗ್ದೇ ಅಮ್ಮಮ್ಮ ವಿದೇಶಕ್ಕೆ ಹೋದ್ರು ಅಂತ 'ಕನ್ನಡತಿ' ಸೀರಿಯಲ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.
ಹರ್ಷ ಭುವಿ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (social media) ವೈಬ್ ಸೃಷ್ಟಿಯಾದಷ್ಟು ಬೇರ್ಯಾವ ಸೀರಿಯಲ್‌ಗೂ (serial) ಆಗಿಲ್ವೇನೋ.. ಏಕೆಂದರೆ ಈ ಮದುವೆಯಲ್ಲಿ ಆ ಪರಿ ಡ್ರಾಮಾ ಇತ್ತು. ಹರ್ಷನ ಸ್ನೇಹವನ್ನೇನೋ ಭುವಿ ಸುಲಭವಾಗಿ ಒಪ್ಪಿಕೊಂಡು ಬಿಟ್ಟಳು. ಆದರೆ ಪ್ರೀತಿಯನ್ನು ಒಪ್ಪಿಕೊಳ್ಳೋಕೆ ಸಾಕಷ್ಟು ಸಮಯ ಬೇಕಾಯ್ತು. ಅದಕ್ಕೆ ಕಾರಣ ಈ ಮದುವೆಯಿಂದ ಸೃಷ್ಟಿಯಾಗಲಿದ್ದ ಸಮಸ್ಯೆಗಳ ಸರಮಾಲೆ. ಈ ಜೋಡಿ ಮದುವೆ ತಯಾರಿಗಳೆಲ್ಲ ಒಂದು ಕಡೆ ಶಾಸ್ತ್ರೋಕ್ತವಾಗಿ ಅರ್ಥಪೂರ್ಣವಾಗಿ ನಡೀತಾ ಇದ್ದರೆ ಇನ್ನೊಂದು ಕಡೆ ಈ ಮದುವೆ ಮುರಿಯೋ ಆತಂಕವನ್ನೂ ಸೀರಿಯಲ್ ಕಟ್ಟಿಕೊಡ್ತಾ ಹೋಯ್ತು. ಟಿ 20 ಮ್ಯಾಚ್‌ನ ರೋಚಕತೆಯಲ್ಲಿ ಟೆಸ್ಟ್ ಮ್ಯಾಚಿಗಿಂತಲೂ ನಿಧಾನ ಗತಿಯಲ್ಲಿ ಕೊನೆಗೂ ಈ ಜೋಡಿ ಮದುವೆ ಆಯ್ತು. ಅಬ್ಬಾ, ಇನ್ನು ನೆಮ್ಮದಿ ಅಂತ ನಿಟ್ಟುಸಿರು ಬಿಡೋ ಹಾಗಿಲ್ಲ. ಮದುವೆ ಆದ್ರೂ ಇವರಿಬ್ಬರೂ ಒಟ್ಟಿಗೆ ಸಿಗೋದಕ್ಕಾಗ್ತಿಲ್ಲ. ಸಾನಿಯಾ ಮತ್ತ ವರೂ ಜಾಯಿಂಟ್ ವೆಂಚರ್‌ನಲ್ಲಿ ಮಾಡ್ತಿರೋ ಪ್ಲಾನ್ ಇವರಿಬ್ಬರನ್ನೂ ದೂರ ಮಾಡ್ತಿದೆ. ಮದುವೆ ಆಗಿ ವಾರವೂ ಆಗಿಲ್ಲ. ಆಗಲೇ ಸೀರಿಯಲ್‌ನಲ್ಲಿ ಡಿವೋರ್ಸ್ (divorce) ನ ಸುದ್ದಿ.
ಮದುವೆಯ ಮರುದಿನ ಎಲ್ಲರೂ ಹನಿಮೂನ್‌ಗೆ (Honeymoon) ಹೊರಟರೆ ಹರ್ಷ ಭುವಿ ಹೊರಟಿದ್ದು ಆಫೀಸಿಗೆ. ಅಮ್ಮಮ್ಮ ಜೊತೆಯಲ್ಲಿಲ್ಲದ ಕಾರಣ ಅವರಿಬ್ಬರಿಗೂ ಹನಿಮೂನ್‌ಗೆ ಹೋಗುವ ಮೂಡ್ ಇಲ್ಲ. ಅವರಿಬ್ಬರ ಫಸ್ಟ್ ನೈಟೂ (First Night) ಆಗಿಲ್ಲ. ಜೊತೆಯಲ್ಲಿದ್ದೂ ಜೊತೆಯಾಗಲಾರದ ಕಷ್ಟದಿಂದ ಪಾರಾಗಲು ಇಬ್ಬರೂ ಕೆಲಸದಲ್ಲಿ ಮುಳುಗಿ ಹೋಗಬೇಕು ಅಂತ ಡಿಸೈಡ್ ಮಾಡಿದ್ದಾರೆ. ಹಾಗೆ ಹೊರಟವರಿಗೆ ಸಾನಿಯಾ ಪ್ಲಾನ್ ಮಾಡಿ ಅವಮಾನ ಮಾಡಿದ್ದಾಳೆ. ಆಫೀಸಿನ ಸಿಬ್ಬಂದಿ ಬರೀ ಭುವಿಗೆ ಹೂ ಹಾರ ಹಾಕಿ ಅವಳ ಬಗ್ಗೆ ಮಾತ್ರ ಹೊಗಳೋ ಹಾಗೆ ಮಾಡಿದ್ದಾಳೆ. ಜೊತೆಗೆ ಭುವಿಯ ಕೈಯಲ್ಲಿ ಫೈಲ್ ಕಳಿಸಿ ಅವಳ ಮೇಲೆ ಹರ್ಷ ಸಿಟ್ಟಲ್ಲಿ ಎಗರಾಡುವಂತೆ ಮಾಡಿದ್ದಾಳೆ. ಭುವಿಗಾದ ಅವಮಾನ ಅವಳಿಗೆ ಬಹಳ ಖುಷಿ ಕೊಟ್ಟಿದೆ.
ಭುವಿ ಇದನ್ನು ಮರೆಯೋದಕ್ಕೆ ಸಮಯ ಬೇಕು. ಇನ್ನೊಂದು ಕಡೆ ಅವತ್ತು ರಾತ್ರಿಯಿಡೀ ಭುವಿಗೆ ಆಫೀಸ್ ಕೆಲಸ ಹಚ್ಚಿದ್ದಾಳೆ. ಆ ಮೂಲಕ ಹರ್ಷ ಭುವಿ ಪರಸ್ಪರ ಸಿಗದ ಹಾಗೆ ಮಾಡಿದ್ದಾಳೆ. ಮದುವೆ ಆದ ಮೇಲೆ ಭುವಿಯ ವರ್ತನೆಯಲ್ಲಿ ಸೂಕ್ಷ್ಮ ಬದಲಾವಣೆ ಆಗಿದ್ದು ಎದ್ದು ಕಾಣ್ತಿದೆ. ಅವಳೀಗ ಮೊದಲಿನಂತೆ ಲವಲವಿಕೆಯಲ್ಲಿಲ್ಲ. ಬದಲಿಗೆ ಭಾರದ ಬಂಡೆಯನ್ನು ಹೊತ್ತು ನಡೆಯೋ ಹಾಗೆ ಅವಳ ಬಿಹೇವಿಯರ್ ಇದೆ. ಬಹುಶಃ ಅಮ್ಮಮ್ಮ ಅವಳಿಗೆ ವಹಿಸಿರುವ ಜವಾಬ್ದಾರಿ ಅವಳನ್ನು ಅಷ್ಟು ಸೀರಿಯಸ್ ಮಾಡಿರಬಹುದೇನೋ..
ಕನ್ನಡತಿ : ಜಗಳವಾಡಿಕೊಂಡ ಹರ್ಷ ಭುವಿ, ಹರ್ಷನಿಗೆ ನೆಟ್ಟಿಗರ ಕ್ಲಾಸ್
ಸದ್ಯಕ್ಕಂತೂ ಹರ್ಷ ಭುವಿಗಾಗಿ ಕಾಯ್ತಾ ಕಾಯ್ತಾ ಫ್ರಸ್ಟ್ರೇಟ್ ಆಗಿದ್ದಾನೆ. ಆಫೀಸಿಂದ ಮನೆಗೆ ಹೋಗುವಾಗಲೂ ಅವಳ ಜೊತೆಗೆ ಸಾನಿಯಾ ಬಂದು ಅವಳ ಮನಸ್ಸಿಗೆ ಮತ್ತಷ್ಟು ಹಿಂಸೆ ಆಗುವ ಹಾಗೆ ಮಾಡಿದ್ದಾಳೆ. ಆಫೀಸಲ್ಲೂ ಸಾನಿಯಾ ಇನ್ ಡೈರೆಕ್ಟ್ ಟಾಂಗ್ ಕೊಡೋದು, ಚುಚ್ಚಿಕೊಡೋದು ನಡೀತಾನೇ ಇದೆ. ಇನ್ನೊಂದು ಕಡೆ ಹರ್ಷ ಅವಳಿಗಾಗಿ ಹಂಬಲಿಸೋದು ಹೆಚ್ಚಾಗಿದೆ. ಅವಳಿಗಾಗಿ ಕಾಲೇಜ್ ಹತ್ರ ಬಂದು ತನ್ನ ಮನಸ್ಥಿತಿಯನ್ನು ಅವಳ ಬಳಿ ತೋಡಿಕೊಂಡಿದ್ದಾನೆ. ಭುವಿ ಅದಕ್ಕೆ ಮೌನವಾಗಿ ರಿಯಾಕ್ಟ್ ಮಾಡುತ್ತಿದ್ದಾಳೆ.
ಈಗ ಅವೆಲ್ಲಕ್ಕಿಂತ ಶಾಂಕಿಂಗ್ ಆಗಿರೋದು ಹರ್ಷ ಭುವಿ ಡಿವೋರ್ಸ್ ವಿಷ್ಯ. ಹಾಗಂತ ಹರ್ಷ ಭುವಿನೇ ಈ ನಿರ್ಧಾರಕ್ಕೆ ಬಂದರಾ ಅಂದರೆ ಖಂಡಿತಾ ಇಲ್ಲ. ಬದಲಿಗೆ ವರೂ ಈ ಕೆಲಸ ಮಾಡುತ್ತಿದ್ದಾಳೆ. ಲಾಯರ್‌ನ ಭೇಟಿಯಾಗಿ ಹರ್ಷ ಭುವಿ ಅಂದರೆ ಸೌಪರ್ಣಿಕಾ ವಿಚ್ಛೇದನ ತೆಗೆದುಕೊಳ್ಳುವ ಪೇಪರ್ಸ್ ರೆಡಿ ಮಾಡ್ತಿದ್ದಾಳೆ. ವರೂಗೆ ಇರುವ ಹಠ ನೋಡಿದರೆ ಅವಳಿದನ್ನು ಮೌನವಾಗಿ ಸಾಧಿಸೋದು ಖಂಡಿತಾ ಅನಿಸುತ್ತೆ. ಒಂದು ಹಂತದಲ್ಲಿ ಅವಳ ಹಾಗೂ ಸಾನಿಯಾ ಕಿತಾಪತಿಯಲ್ಲಿ ಹರ್ಷ ಮತ್ತು ಭುವಿ ಬೇರೆ ಬೇರೆ ಆದರೂ ಆದ್ರೇ. ಪುಣ್ಯಕ್ಕೆ ಇವನ್ನೆಲ್ಲ ನೋಡೋದಕ್ಕೆ ಆಗದೇ ಅಮ್ಮಮ್ಮ ಅಮೇರಿಕಾಗೆ ಹೋಗಿರ್ಬೇಕು ಅಂತ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
ಜೊತೆ ಜೊತೆಯಲಿ : ಅನು ಕಾರು ಬ್ರೇಕ್ ಫೇಲ್ ಆಗೋಯ್ತು, ಆರ್ಯನಿಗೆ ತಪ್ಪಿದ ಪ್ರಜ್ಞೆ, ಮುಂದೇನು?