ರಕ್ಕಸರು ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ; ಸೋತು ಶರಣಾದರಾ ಗಂಧರ್ವರು!

By Shriram Bhat  |  First Published Dec 7, 2023, 12:33 PM IST

ರಕ್ಕಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ.. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಕಿರುಚಾಡಿದ್ದಾರೆ. ‘ಅವ್ರು ವರ್ಸ್ಟ್‌ ಆಗಿ ಮಾಡ್ತಿರೋದಕ್ಕೆ ಅವ್ರು ಹೊಣೆ ಮ್ಯಾಮ್… ನಾನದಕ್ಕೆ ಕಾರಣ ಅಲ್ಲ’ ಎಂದು ಸಂಗೀತಾ ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರು ಹಾಕುತ್ತಿದ್ದಾರೆ. 


ಬಿಗ್‌ಬಾಸ್‌ ಮನೆಯಲ್ಲಿ ರಕ್ಕಸ-ಗಂಧರ್ವರ ಜಿದ್ದಾಜಿದ್ದು ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಆದರೆ ಆ ಟಾಸ್ಕ್‌ ಈಗ ಒಂದು ಹಂತಕ್ಕೆ ಬಂದು ನಿಂತಿರುವ ಸೂಚನೆ ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅಪಮಾನ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ. 

ಈ ನಡುವೆ ಸದ್ಯ ಗಂಧರ್ವರಾಗಿರುವ ಸಂಗೀತಾ ತಂಡ ದಣಿದಂತೆ ಕಾಣಿಸುತ್ತಿದೆ. ನಿರಂತರವಾದ ರಕ್ಕಸರ ಕಿರುಕುಳವನ್ನು ತಾಳಿಕೊಳ್ಳಲಾಗದೆ ಕಾರ್ತಿಕ್, ‘ನನ್ನ ಕೈಲಿ ಸಾಧ್ಯವಾಗುತ್ತಿಲ್ಲ’ ಎಂದು ನೆಲಕ್ಕೊರಗಿದ್ದಾರೆ. ನಾಯಕಿ ಸಂಗೀತಾ, ಸಿರಿ ಅವರೊಂದಿಗೆ, ‘ಪನಿಷ್ಮೆಂಟ್ ತೆಗೆದುಕೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ. ನಾವು ತಗೊಳ್ಳಲ್ಲ ಎಂದು ಹೇಳೋಣ’ಎನ್ನುತ್ತಿದ್ದಾರೆ. 

Tap to resize

Latest Videos

ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ; ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್‌ ಹೀಟ್ ಶುರು!

ಇತ್ತ ರಕ್ಕಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ.. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಕಿರುಚಾಡಿದ್ದಾರೆ. ‘ಅವ್ರು ವರ್ಸ್ಟ್‌ ಆಗಿ ಮಾಡ್ತಿರೋದಕ್ಕೆ ಅವ್ರು ಹೊಣೆ ಮ್ಯಾಮ್… ನಾನದಕ್ಕೆ ಕಾರಣ ಅಲ್ಲ’ ಎಂದು ಸಂಗೀತಾ ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರು ಹಾಕುತ್ತಿದ್ದಾರೆ. ಇಡೀ ಮನೆ ರಣರಂಗವಾಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು ವೀಕೆಂಡ್‌ವರೆಗೂ ಕಾಯಲೇಬೇಕು. 

ಮೀಸೆ ತೆಗೆಯಲ್ಲ ಅಂದ್ಬಿಟ್ಟು ಅರ್ಜುನ ರೋಲ್ ಕಳ್ಕೊಂಡೆ; ಮಹಾಭಾರತದ ಕರ್ಣ!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು..

click me!