ಏಕ ಇಷ್ಕ್ ಏಕ್ ಜುನೂರ್, ಏ ಪ್ಯಾರ್ ನಾ ಹೋಗಾ ಕಾಮ್ ಸೇರಿದಂತೆ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಜನಮನ್ನಣೆಗೆಳಿಸಿದ ನಟ ಇದೀಗ ಹೀರೋ ಆಗಲು ಹೋಗಿ ಇದೀಗ ಜೈಲು ಸೇರಿದ್ದಾರೆ.
ಬಿಜ್ನೂರ್(ಡಿ.07) ರಿಷ್ತೋನ್ ಕಾ ಚಕ್ರವ್ಯೂವ್, ತೇರೆ ಶೆಹರ್ ಮೇನೆ ಸೇರಿದಂತೆ ಕೆಲ ಧಾರವಾಹಿಗಳಲ್ಲಿ ತನ್ನ ನಟನೆ ಹಾಗೂ ಭಿನ್ನ ಮ್ಯಾನರಿಸಂ ಮೂಲಕ ಜನ ಮನ್ನಣೆಗಳಿಸಿದ್ದ ನಟ ಭೂಪಿಂದರ್ ಸಿಂಗ್ ಇದೀಗ ಜೈಲು ಪಾಲಾಗಿದ್ದಾರೆ. ಹಿಂದಿ ಧಾರವಾಹಿ ನಟ ಭೂಪಿಂದ್ ಸಿಂಗ್ ತನ್ನ ಜಮೀನಿನ ಬೇಲಿ ಹಾಕುವ ವಿಚಾರದಲ್ಲಿ ನೆರಮನೆಯವರ ಜೊತೆ ಜಗಳ ಮಾಡಿದ್ದಾರೆ. ಆಕ್ರೋಶಗೊಂಡ ಭೂಪಿಂದ್ ಸಿಂಗ್ ನೆರಮನೆಯವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರರೆ. ಈ ದಾಳಿಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಬಿಜ್ನೂರ್ ಪಟ್ಟಣದ ಬಳಿ ಈ ಘಟನೆ ನಡೆದಿದೆ.
54 ವರ್ಷದ ನಟ ಭೂಪಿಂದರ್ ಸಿಂಗ್ ಇತ್ತೀಚೆಗಷ್ಟೇ ತಮ್ಮ ಸ್ವಗ್ರಾಮಕ್ಕೆ ಮರಳಿದ್ದರು. ಧಾರವಾಹಿಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಗ್ರಾಮಕ್ಕೆ ಮರಳಿದ ಭೂಪಿಂದರ್ ಸಿಂಗ್, ತಮ್ಮ ಕೃಷಿ ಜಮೀನು ಅಭಿವೃದ್ಧಿಗೆ ಮುಂದಾಗಿದ್ದಾರೆ. ಆದರೆ ಭೂಪಿಂದರ್ ಸಿಂಗ್ ಜಮೀನಿಗೆ ತಾಗಿಕೊಂಡು ಗ್ರಾಮದ ಇತರ ನಿವಾಸಿಗಳ ಜಮೀನು ಇದೆ. ಈ ಜಮೀನುಗಳಲ್ಲಿ ಭಾರಿ ಗಾತ್ರದ ಮರಗಳು, ಕೆಲ ಅತ್ಯಮ್ಯೂಲ ಗಿಡಮೂಲಿಕೆಗಳು ಇವೆ.
ಬೆಂಗಳೂರು: ಲೇಡಿ ಎಸ್‌ಐ ಬಟ್ಟೆ ಬಿಚ್ಚಿಸುವೆ ಎಂದ ಹೋಟೆಲ್ ಮಾಲೀಕ..!
ಭೂಪಿಂದರ್ ಸಿಂಗ್ ತಮ್ಮ ಜಮೀನಿಗೆ ಬೇಲಿ ಹಾಕಲು ನೆರಮನೆವರ ಜಮೀನು ಹಾಗೂ ತನ್ನ ಜಮೀನಿಗೆ ತಾಗಿಕೊಂಡಿದ್ದ ಮರಗಳನ್ನು ಕತ್ತರಿಸಿದ್ದಾರೆ. ಅಮೂಲ್ಯ ಮರ ಹಾಗೂ ಗಿಡಗಳನ್ನು ಕತ್ತರಿಸಿದ್ದಾರೆ. ಬೇಲಿ ಹಾಕಲು ತಮ್ಮ ಜಮೀನಿನಲ್ಲಿರುವ ಮರ-ಗಿಡಗಳನ್ನು ಕತ್ತರಿಸಲಾಗಿದೆ ಎಂದು ನೆರೆಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ನೆರೆಮನೆಯವರಿಗೆ ಬೆದರಿಕೆ ಹಾಕಿ ತನ್ನ ಕೆಲಸ ಮುಂದುವರಿಸಿದ ಭೂಪಿಂದರ್ ಸಿಂಗ್ ವಿರುದ್ಧ ಪ್ರತಿಭಟನೆ ಜೋರಾಗಿದೆ. ನೆರಮನೆಯವರ ಸಂಪೂರ್ಣ ಕುಟುಂಬ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ.
ಇದರಿಂದ ಆಕ್ರೋಶಗೊಂಡ ಭೂಪಿಂದರ್ ಸಿಂಗ್ ತನ್ನ ಬಳಿ ಇರುವ ಲೈಸೆನ್ಸ್ ಗನ್ ಬಳಸಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನೆರೆಮನೆಯ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೃತ ವ್ಯಕ್ತಿಯ ಪೋಷಕರು ಹಾಗೂ ಸಹೋದರ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಸಹೋದರನ ಪತ್ನಿ ಜಮೀನಿನಲ್ಲಿ ಅಡಗಿ ಕುಳಿತ ಕಾರಣ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಚಿತ್ರದುರ್ಗ: ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ನಾಲ್ವರು ಕುಖ್ಯಾತ ಕಳ್ಳರ ಬಂಧನ
ವಿವಾದ ಕುರಿತು ಗ್ರಾಮಸ್ಥರು ಅಕ್ಟೋಬರ್ 17 ರಂದೇ ಪೊಲೀಸರಿಗೆ ದೂರು ನೀಡಿದ್ದರು. ಭೂಪಿಂದರ್ ಸಿಂಗ್ ಹಣಬ ಬಳಸಿ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಾಗಿದ್ದರೂ ಭದ್ರತೆ ಒದಗಿಸಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಇತ್ತ ಘಟನೆ ನಡೆದ ಮೂರು ದಿನದ ಬಳಿಕ ಭೂಪಿಂದರ್ ಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಭೂಪಿಂದರ್ ಸಿಂಗ್ ಬಂಧಿಸಿ ತನಿಖೆ ಆರಂಭಿಸಿದ್ದಾರೆ.