ಮಳೆಯಲಿ ಜೊತೆಯಲಿ.. ಕನ್ನಡ ಸೀರಿಯಲ್‌ನಲ್ಲಿ ರೈನ್ ರೊಮ್ಯಾನ್ಸ್!

By Suvarna News  |  First Published Jul 31, 2023, 12:00 PM IST

ಮುಂಗಾರು ಮಳೆಯ ರೊಮ್ಯಾಂಟಿಕ್‌ ಹವಾ ಕನ್ನಡ ಸೀರಿಯಲ್‌ಗೂ ಹಬ್ಬಿದೆ. ನಟ ನಟಿಯರ ರೈನ್ ರೊಮ್ಯಾನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ.


ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ.. ಅಂತ ಸದ್ಯಕ್ಕೆ ಹಾಡ್ತಿರೋದು ಸೋನು ನಿಗಮ್ ಅಲ್ಲ, ಆಕ್ಟ್‌ ಮಾಡ್ತಿರೋದು ಗಣೇಶ್ ಅಲ್ಲ, ಇದು ಭಟ್ರ ಮುಂಗಾರು ಮಳೆ ಸಿನಿಮಾನೂ ಅಲ್ಲ. ಆಕ್ಚುವಲೀ, ಇಲ್ಲಿ ಈ ಹಾಡೂ ಇಲ್ಲ, ಜಸ್ಟ್ ಹಾಡಿನ ಭಾವ ಇದೆಯಷ್ಟೇ. ಅಷ್ಟಕ್ಕೂ ಇದೆಲ್ಲ ಏನು ಅಸಂಬದ್ಧ ಅಂತ ಪೇಜ್ ಮೂವ್ ಮಾಡಂಗಿಲ್ಲ. ಹಾಗೇನಾದ್ರು ಮಾಡಿದ್ರೆ ಒಂದು ರೊಮ್ಯಾಂಟಿಕ್ ಕ್ಷಣವನ್ನ, ಆ ಫೀಲನ್ನು ಖಂಡಿತಾ ಮಿಸ್ ಮಾಡ್ಕೊಳ್ತೀರಿ. ಅಷ್ಟಕ್ಕೂ ಎಲ್ಲ ಕಡೆ ಮುಂಗಾರು ಮಳೆ ಧಾರಾಕಾರವಾಗಿ ಸುರೀತಿದೆ. ಬೆಂಗಳೂರಲ್ಲಿ ಮುಂಗಾರು ಮಳೆ ಹೂ ಮಳೆಯ ಹಾಗೆ ಸಂಜೆ ಸುರಿಯುತ್ತೆ. ಮಲೆನಾಡು, ಕರಾವಳಿಯ ಮುಂಗಾರಿನ ಅಬ್ಬರ ಇಲ್ಲಿಲ್ಲ. ಆದರೆ ರೊಮ್ಯಾಂಟಿಕ್ ಆಗಿರಲು ಐ ಮೀನ್ ಈ ಪ್ರೊಪೋಸ್ ಮಾಡಿದ ಒಪ್ಪಿಕೊಂಡ ಮರುಕ್ಷಣ ಮೂವಿಯಲ್ಲೆಲ್ಲ ಸುರಿಯುತ್ತಲ್ವಾ ಆ ಥರದ ಮಳೆ ಬೆಂಗಳೂರಲ್ಲಿ ಸುರಿಯುತ್ತಿದೆ. ಇದಕ್ಕೆ ಪ್ರೀತಿಯ ಮಳೆ ಅಂತಲೂ ಹೇಳಬಹುದೇನೋ.

ಇಷ್ಟೆಲ್ಲ ಪೀಠಿಕೆ ಹಾಕೋದಕ್ಕೆ ಕಾರಣ ನಮ್ ಸೀರಿಯಲ್‌ಗಳು. ಹೊರಗೆ, ಒಳಗೆ ಮಾತ್ರ ಅಲ್ಲ ನಾವು ಟಿವಿ ಎದುರು ಕೂತರೆ ಅಲ್ಲೂ ಮುಂಗಾರು ಮಳೆಯ ರೊಮ್ಯಾಂಟಿಕ್ ಸೀನ್‌ಗಳು. ಕಲರ್ಸ್ ಕನ್ನಡದ ಮೂರು ಸೀರಿಯಲ್‌ಗಳಲ್ಲಿ ಕರಾವಳಿ, ಬೆಂಗಳೂರು ಮತ್ತು ಮಲೆನಾಡ ಮಳೆ ಸುರಿಯುತ್ತಿದೆ. ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಕರಾವಳಿಯ ಅಬ್ಬರದ ಮಳೆ ಸುರೀತಿದೆ. ಅಮಾಯಕಿ ಸುಮನಾ ವಂಚಕರ ಮಾತು ಕೇಳ್ಕೊಂಡು ಮನೆಯಿಂದ ಆಚೆ ಬಂದಿದ್ದಾಳೆ. ಅವಳ ಗಂಡ ಎಂಎಲ್‌ಎ ತೀರ್ಥಂಕರ ಕಾಲ್ ಮಾಡಿದರೂ ರಿಸೀವ್ ಮಾಡ್ತಿಲ್ಲ. ಕತ್ತಲಲ್ಲಿ ದಾರಿ ಕಾಣದೇ ನಡೆಯುತ್ತಿರುವ ಸುಮನಾಗೆ ಸುರಿಯೋ ಮಳೆಯಲ್ಲಿ ಕೊನೆಗೂ ಆಕೆಯ ಪ್ರೀತಿಯ ಸಾಹೇಬ್ರು ತೀರ್ಥಂಕರ ಸಿಗ್ತಾನೆ.

Tap to resize

Latest Videos

ಅಮೃತಧಾರೆ: ಛಾಯಾ ಸಿಂಗ್ ರಾಜೇಶ್ ನಟರಂಗಗೆ ಅಣ್ಣಾ ಅಂತಿದ್ರಂತೆ! ಕಾರಣವಿಲ್ಲಿದೆ

ಅಬ್ಬರ ಮಳೆಯಲ್ಲಿ ಗಂಡ ಹೆಂಡತಿ ಕಣ್ಣೀರೂ ಸೇರಿ ಹೋಗುತ್ತೆ. ಮಳೆಯಲ್ಲಿ ನೆನೆದು ತತ್ತರಿಸಿದ ಗರ್ಭಿಣಿ ಸುಮನಾಳನ್ನು ತೀರ್ಥಂಕರ ಕಾಪಾಡಿ ಮನೆಗೆ ಕರೆದೊಯ್ಯುತ್ತಿದ್ದಾನೆ. ಮಳೆಯಲ್ಲಿ ನೆನೆದು ಅವಳ ಪ್ರಜ್ಞೆ ತಪ್ಪಿದೆ. ಅವಳನ್ನು ತೀರ್ಥಂಕರನ ಪ್ರೀತಿಯೇ ಬೆಚ್ಚಗೆ ಮಾಡಿ ಅಪಾಯದಿಂದ ರಕ್ಷಿಸುತ್ತೆ.

ಇನ್ನೊಂದು ಕಡೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಲ್ಲಿ ಮಲೆನಾಡ ಮಳೆ, ಬೆಂಗಳೂರು ಮಳೆ ಎರಡೂ ಹೊಯ್ದಂಗಿದೆ. ಸಿಂಗರ್ ವೈಷ್ಣವ್ ಮುನಿಸಿಕೊಂಡಿದ್ದಾನೆ. ಸುಪ್ರೀತಾ ಹೇಳಿದ ಸತ್ಯವನ್ನು ಕೇಳಿ ವೈಷ್ಣವ್‌ ಏನು ಮಾಡಲೂ ತೋಚದೇ ಮನಸ್ಸು ಕೆಡಿಸಿಕೊಂಡು ಮನೆ ಹೊರಗಿನ ಬಾಲ್ಕನಿಯಲ್ಲಿ ನಿಂತಿದ್ದಾನೆ. ನೆಪ ಮಾತ್ರಕ್ಕೆ ಪೇಪರ್ ಪೆನ್ನು ಇದೆ. ಮಳೆಯ ಎರಚಲು ಹೊಡೆಯುತ್ತಿದ್ದರೂ ಆತನಿಗೆ ಅಲ್ಲಿಂದೇಳೋ ಮನಸ್ಸಾಗ್ತಿಲ್ಲ. ಅಲ್ಲಿಗೆ ಬರೋ ಹೆಂಡತಿ ಲಕ್ಷ್ಮಿ ಮೇಲೂ ರೇಗ್ತಾನೆ. ಇನ್ನು ಲಕ್ಷ್ಮಿ ಅವಳು ಚಾಲೆಂಜ್‌ಗೆ ಬಿದ್ರೆ ಮುಗೀತು, ಮಾತು ಪೂರೈಸೋ ತನಕ ಅಲ್ಲಾಡಲ್ಲ. ಇಲ್ಲೂ ವೈಷ್ಣವ್‌ಗೆ ಸೆಡ್ಡು ಹೊಡೆದು ಸುರಿಯುವ ಮಳೆಯಲ್ಲಿ ನಿಂತಿದ್ದಾಳೆ. ಆತ ಒಳಹೋಗೋ ತನಕ ತಾನೂ ಒಳ ಹೋಗಲ್ಲ ಅಂತಾಳೆ. ಆದರೆ ಸುರಿವ ಮಳೆ ಒಂದು ಹಂತದಲ್ಲಿ ವೈಷ್ಣವ್ ಮನಸ್ಸಿನ ಗಾಯಕ್ಕೆ ಮುಲಾಮು ಹಚ್ಚಿ ಕ್ಷಣದಲ್ಲಿ ನೋವು ಮಾಯುವಂತೆ ಮಾಡಿದೆ. ಲಕ್ಷ್ಮಿ ಮಳೆಯಲ್ಲಿ ಅವನ ಕೈ ಹಿಡಿದು ರೊಮ್ಯಾಂಟಿಕ್ ಆಗಿ ನೋಡುತ್ತಿದ್ದಾಳೆ.

ಮಗದೊಂದು ಕಡೆ ಪದ್ಮನಿ ಸೀರಿಯಲ್‌ನಲ್ಲೂ ಮುಂಗಾರು ಮಳೆಯ ಹನಿಗಳ ಲೀಲೆ ನಂದನ್ ಮತ್ತು ಪದ್ಮನಿ ಹೃದಯ ಅರಳುವಂತೆ ಮಾಡಿದೆ. ಇತ್ತೀಚಿನ ಎಪಿಸೋಡ್‌ನಲ್ಲಿ ಸುರಿವ ಮಳೆಯಲ್ಲಿ ನಂದನ್ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ತನ್ನ ಬದುಕಿಡೀ ನಂದನ್ ಪ್ರೀತಿಯ ಮಳೆಯಲ್ಲಿ ತೋಯಲು ರೆಡಿ ಆಗಿದ್ದಾಳೆ.

ಕಲರ್ಸ್ ಕನ್ನಡದ ಸೀರಿಯಲ್‌ನ ಮುಂಗಾರು ಮಳೆಯನ್ನು ವೀಕ್ಷಕರೂ ಖುಷಿಯಿಂದ ಎನ್ ಜಾಯ್ ಮಾಡ್ತಿದ್ದಾರೆ.

Divya Shridhar: ಹಸುಗೂಸಿನೊಡನೆ ಶೂಟಿಂಗ್‌ ಬರ್ತಾರೆ ಈ ನಟಿ!

click me!