ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸ ಆಚರಿಸಿಕೊಳ್ಳುತ್ತಿರುವ ಕಾವ್ಯ ಗೌಡ. ಗಂಡನಿಗೆ ವಿಶ್ ಮಾಡಲು ಬರೆದ ಸಾಲುಗಳು ಸಖತ್ ವೈರಲ್....
ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಗೌಡ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪತಿ ಸೋಮಶೇಖರ್ ಮತ್ತು ಪುತ್ರಿ ಸಿಯಾ ಜೊತೆ ಕಬಿನಿಯಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಪತಿ ಜೊತೆ ಇಷ್ಟು ವರ್ಷಗಳಿಂದ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳನ್ನು ಹಾಕಿ ತಮ್ಮ ವಿಶ್ ಬರೆದುಕೊಂಡಿದ್ದಾರೆ.
ಕಾವ್ಯ ಗೌಡ ಫೋಸ್ಟ್:
'ಹ್ಯಾಪಿ ಆನಿವರ್ಸರಿ ಮುದ್ದು. ನಾನು ಒಟ್ಟಿಗೆ ನಮ್ಮ ಪ್ರಯಾಣವನ್ನು ನೆನಪಿಸಿಕೊಂಡಾಗ ನನ್ನ ಹೃದಯವು ಕೃತಜ್ಞತೆ ಮತ್ತು ನಿಮ್ಮ ಮೇಲಿನ ಪ್ರೀತಿ ಹುಕ್ಕಿ ಹರಿಯುತ್ತದೆ. ನೀವು ನನ್ನ ನೆಚ್ಚಿನ ವ್ಯಕ್ತಿ, ನನ್ನ ಸುರಕ್ಷಿತ ಸ್ವರ್ಗ, ಜೀವನದ ದಾರಿಯನ್ನು ತೋರಿಸುವ ನನ್ನ ಬೆಳಕು. ನೀವು ನನ್ನ ಜೀವನಕ್ಕೆ ಬಂದ ಕ್ಷಣದಿಂದ ಪ್ರತಿಯೊಂದು ಒಳ್ಳೆಯದಕ್ಕೆ ಬದಲಾಗುತ್ತದೆ. ನೀವು ನನ್ನವರು ಎಂದು ಹೇಳುವುದಕ್ಕೆ ಪುಣ್ಯ ಮಾಡಿದ್ದೀನಿ. ನಿಮ್ಮ ಪ್ರೀತಿ ನನಗೆ ದೊಡ್ಡ ಶಕ್ತಿ ನೀಡಿದೆ, ನಾನು ಬೇಸರಲ್ಲಿ ಇದ್ದಾಗ ನೀವು ಕೊಟ್ಟ ಸಪೋರ್ಟ್ ನನಗೆ ಮುಖ್ಯವಾಗಿತ್ತು. ನಿಮ್ಮ ಕೈಂಡ್ನೆಸ್ ನಿಜಕ್ಕೂ ಪಾರ್ಟನರ್‌ಶಿಪ್‌ನ ನಿಜವಾದ ಅರ್ಥ ತಿಳಿಸಿದೆ. ನೀವು ನನ್ನ ಬೆಸ್ಟ್ ಫ್ರೆಂಡ್, ನನ್ನ ಗ್ರೇಟ್ ಕಾನ್ಫಿಡೆಂಟ್ ಹಾಗೂ ನನ್ನ ಸೋಲ್‌ಮೇಟ್...ಎಲ್ಲವೂ ಒಟ್ಟುಕೂಡಿರುವ ಅದ್ಭುತ ವ್ಯಕ್ತಿ. ನೀನು ನನಗೆ ಎಷ್ಟು ಮುಖ್ಯ ಎಂದು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಆದರೆ ನನ್ನ ನೋಟ , ನನ್ನ ಸ್ಪರ್ಧ ಮತ್ತು ಪ್ರತಿ ಕ್ಷಣದಲ್ಲಿ ನೀವು ಅದನ್ನು ಅರ್ಥ ಮಾಡಿಕೊಂಡು ಅನುಭವಿಸುತ್ತಿದ್ದೀರಿ ಅಂದುಕೊಂಡಿರುವೆ.
ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ
ನಿಮ್ಮ ಜೊತೆ ನನಗೆ ಪ್ರತಿ ದಿನವೋ ಹೊಸ ಅಡ್ವೆಂಚರ್ ಇದ್ದ ಹಾಗೆ..ಖುಷಿ, ನಗು ಮತ್ತು ಲೆಕ್ಕವಿಲ್ಲದಷ್ಟು ನೆನಪುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತೀನಿ. ನಿಜವಾದ ಪ್ರೀತಿ ಅಂದರೆ ಏನು ಎಂದು ತಿಳಿಸಿಕೊಟ್ಟಿದ್ದೀರಿ..ಅದು ದೊಡ್ಡ ವಿಚಾರಗಳಲ್ಲಿ ಅಲ್ಲದಿದ್ದರೂ ಸಣ್ಣ ಪುಟ್ಟ ದಿನನಿತ್ಯದಲ್ಲಿ ಎನ್ನಬಹುದು. ನಿಮ್ಮ ಬೆಚ್ಚನೆಯ ಅಪ್ಪುಗೆ ಮತ್ತು ಮನಸ್ಸು ಖುಷಿ ಕೊಡುವ ಪದಗಳ ಮೂಲಕ ನಾನು ಬದುಕಿರುವ ಅತಿ ಹೆಚ್ಚು ಅದೃಷ್ಟವಂತೆ ಎಂದು ಫೀಲ್ ಮಾಡಿಸುತ್ತೀರಿ.
ಮಧು ಗೌಡ ಮದುವೆಯಲ್ಲಿ ಅಳಿಯನ ಮೇಲೆ ಅತ್ತೆ ರಂಪಾಟ; ಇಡೀ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಹೋದರ ಮದನ್
ನಾವು ಮತ್ತೊಂದು ವರ್ಷ ಪೂರೈಸಿದ್ದೀವಿ. ಹೀಗೆ ಮುಂದೆ ಬರುವಷ್ಟು ವರ್ಷಗಳು ಖುಷಿಯಾಗಿ ಕನಸು ಕಟ್ಟಿಕೊಂಡು ದೊಡ್ಡ ಜೀವನ ಕಟ್ಟಿಕೊಂಡು ನೆಮ್ಮದಿಯಾಗಿರೋಣ. ನನ್ನ ಪಾರ್ಟನರ್ ನನ್ನ ರಾಕ್ ನನ್ನ ಪ್ರಪಂಚ ನೀನು. ನಮ್ಮ ಪುಟ್ಟ ಕಂದಮ್ಮನ ಜೊತೆ ಈ ಆನಿವರ್ಸರಿ ಆಚರಿಸಿಕೊಳ್ಳುತ್ತಿರುವುದು ಮತ್ತೊಂದು ಖುಷಿ.