ಕನ್ನಡ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ತಿರುವು. ಡೆತ್ ನೋಟ್ ಪತ್ತೆ, ಖಿನ್ನತೆ ಕಾರಣ ಎನ್ನಲಾಗಿದೆ. ಪೊಲೀಸರಿಂದ ತನಿಖೆ ಮುಂದುವರೆದಿದೆ.
ಕನ್ನಡದ ಸಿನಿಮಾ ಹಾಗೂ ಸೀರಿಯಲ್ ನಟಿ 30 ವರ್ಷದ ಶೋಭಿತಾ ಶಿವಣ್ಣ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದು, ಕನ್ನಡ ಮನರಂಜನಾ ಲೋಕಕ್ಕೆ ಬರಸಿಡಿಲಿನಂತೆ ಎರಗಿತ್ತು. ಆದರೆ, ಆಕೆಯದ್ದು ಸಾವು ಆತ್ಮಹತ್ಯೆಯೋ? ಕೊಲೆಯೋ? ಎನ್ನುವ ಬಗ್ಗೆ ಅನುಮಾನಗಳು ಬಂದಿದ್ದವು. ಮನೆಯ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅವರು ಸಾವಿಗೆ ಶರಣಾಗಿದ್ದರು. ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭ ಮಾಡಿರುವ ಹೊತ್ತಿಗೆ ಆಕೆಯ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಪೊಲೀಸರು ಅದನ್ನು ಸೀಜ್ ಮಾಡಿದ್ದಾರೆ.ತನ್ನ ಪತಿ ಸುಧೀರ್ ರೆಡ್ಡಿ ಜೊತೆ ಹೈದರಾಬಾದ್‌ನ ಗಚ್ಚಿಬೌಳಿಯ ಶ್ರೀರಾಮ್‌ನಗರ ಕಾಲೋನಿಯ ಸೀಬ್ಲಾಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ಅವರು ವಾಸವಾಗಿದ್ದರು. ನೇಣು ಬಿಗಿದುಕೊಂಡು ಈಕೆ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೀಡಾಗಿದ್ದಾರೆ. ಪೊಲೀಸರು ಆಕೆಯ ಕೋಣೆಯ ಪರಿಶೀಲನೆ ಸಮಯದಲ್ಲಿ ಡೆತ್ ನೋಟ್‌ಅನ್ನು ವಶಪಡಿಸಿಕೊಂಡಿದ್ದಾರೆ.
ಖಿನ್ನತೆಯ ಕಾರಣಕ್ಕೆ ಆಕೆ ಸಾವಿಗೀಡಾಗಿದ್ದಾಳೆ ಅನ್ನೋದುಸ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಗಂಡ-ಹೆಂಡತಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಕೂಡ ಇದ್ದಿರಲಿಲ್ಲ ಎನ್ನಲಾಗಿದೆ. ಪತಿ ಸುಧೀರ್ ರೆಡ್ಡಿಯ ಹೇಳಿಕೆಯನ್ನೂ ಕೂಡ ಪೊಲೀಸ್ ದಾಖಲಿಸಿಕೊಂಡಿದ್ದಾರೆ. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಶೋಭಿತಾ ಶಿವಣ್ಣ ಅವರ ಪ್ರೊಫೈಲ್‌ಅನ್ನು ನೋಡಿದ್ದ ಸುಧೀರ್ ರೆಡ್ಡಿ, ಮದುವೆಯ ಪ್ರಪೋಸಲ್ ಮಾಡಿದ್ದರು. ಮನೆಯ ಹಿರಿಯರ ಒಪ್ಪಿಗೆಯ ಮೇರೆ ವಿವಾಹ ನಡೆದಿತ್ತು. ಮದುವೆಯಾದ ಬಳಿಕ ಶೋಭಿತಾ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟನೆ ಮಾಡೋದನ್ನು ಬಿಟ್ಟಿದ್ದರು.
ಇನ್ನು ಆಕೆಯ ಡೆತ್ ನೋಟ್‌ನಲ್ಲಿ 'ಇಫ್ ಯು ವಾಂಟ್ ಟು ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್' ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಇದರರ್ಥ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಎನ್ನುವುದಾಗಿದೆ.
ಆಕೆ ಯಾಕಾಗಿ ಹೀಗೆ ಬರೆದಿದ್ದಾಳೆ ಅನ್ನೋದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನೋ ಕಾರಣಕ್ಕಾಗಿಯೇ ಆಕೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲವೇ? ಖಿನ್ನತೆಯೇ ಆಕೆಯ ಸಾವಿಗೆ ಕಾರಣವೇ? ಸೀರಿಯಲ್‌ಗಳಲ್ಲಿ ನಟಿಸದೇ ಇರೋದು ಆಕೆಯ ಖಿನ್ನತೆಗೆ ಕಾರಣವಾಗಿತ್ತೇ ಅನ್ನೋದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಗಚ್ಚಿಬೌಲಿ ಇನ್ಸ್‌ಪೆಕ್ಟರ್ ಹಬೀಬುಲ್ಲಾ ಖಾನ್ ಮಾತನಾಡಿದ್ದು, ಸುಧೀರ್ ರೆಡ್ಡಿ ಹೈದರಾಬಾದ್‌ನ ತಕ್ಕುಗುಡ್ಡಾ ಮೂಲದವರು. ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಶೋಭಿತಾ ಅವರನ್ನು ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸುಧೀರ್ ಮದುವೆಯ ಬಳಿಕ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದರು. ಶನಿವಾರ ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದರು. ಆ ಬಳಿಕ ಆಕೆ ನಿದ್ರೆ ಮಾಡುತ್ತೇನೆ ಎಂದು ಕೋಣೆಗೆ ಹೋಗಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಯ ಇನ್‌ಸ್ಟಾ ಪೋಸ್ಟ್‌ನಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಶೋಭಿತಾ ಶಿವಣ್ಣ?
ವರ್ಕ್ ಫ್ರಮ್ ಹೋಮ್‌ನಲ್ಲಿದ್ದ ಸುಧೀರ್ ರೆಡ್ಡಿ ಇನ್ನೊಂದು ರೂಮ್‌ಗೆ ಹೋಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 10 ಗಂಟೆ ಆದರೂ ಶೋಭಿತಾ ಕೋಣೆಯ ಬಾಗಿಲು ತೆಗೆದಿರಲಿಲ್ಲ. ಮನೆಕೆಲಸದ ಹೆಂಗಸು ಶೋಭಿತಾ ಅವರ ರೂಮ್‌ನ ಬಾಗಿಲು ಬಡಿದಿದ್ದಾರೆ. ಎಷ್ಟೇ ಬಾರಿ ಬಡಿದರೂ ಆಕೆ ಬಾಗಿಲು ತೆರೆದಿರಲಿಲ್ಲ. ಬಳಿಕ ಸುಧೀರ್ ರೆಡ್ಡಿಗೆ ತಿಳಿಸಿದ್ದಾರೆ. ಸುಧೀರ್ ರೆಡ್ಡಿ ಕೋಣೆಯ ಬಾಗಿಲನ್ನು ಒಡೆದು ಒಳಹೊಕ್ಕಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶೋಭಿತಾ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಿಧನರಾದ ನಟಿ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದುಮುದ್ದಾದ ಫೋಟೋಸ್!