
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾಳ ಪಾತ್ರ ಮುಗಿದಿದೆ. ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಗಿದೆ. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು. ಅನಿವಾರ್ಯವಾಗಿ ನಾನು ಸೀರಿಯಲ್ ಸೆಟ್ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.
ಆದರೆ ಇದೀಗ ನಟಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಸಂಜನಾ ಅವರು ತಲೆಗೆ ಪಟ್ಟಿ ಸುತ್ತುಕೊಂಡಿರುವುದನ್ನು ನೋಡಬಹುದು. ಇದನ್ನು ನೋಡಿದರೆ ಅಪಘಾತವಾಗುತ್ತಿದ್ದಂತೆಯೇ ಭಾಸವಾಗುತ್ತದೆ. ಇದು ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಇದರಲ್ಲಿ ಸಂಜನಾ ನಗುತ್ತಿರುವುದನ್ನು ನೋಡಬಹುದು. ಆದರೂ ನಟಿಗೆ ಏನಾಯಿತು ಎನ್ನುವ ಆತಂಕದಲ್ಲಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ಒಂದೇ ವಿಡಿಯೋ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ನೋಡಿದರೆ ಅದು ಪುನಃ ಪುನಃ ಮೇಲಕ್ಕೆ ಬಂದು ವೈರಲ್ ಆಗುತ್ತದೆ. ಅದೇ ರೀತಿ ಇದೇ ವಿಡಿಯೋ ಕೂಡ ಆಗಿದೆ. ಇದು ಸ್ನೇಹಾ ಪಾತ್ರಧಾರಿ ಸತ್ತು ಚಿತೆಯ ಮೇಲೆ ಮಲಗುವ ಸಮಯದಲ್ಲಿ ಮಾಡಿರುವ ವಿಡಿಯೋ. ಹಿಂಭಾಗದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಕೆಲವು ಕಲಾವಿದರನ್ನು ಕೂಡ ನೋಡಬಹುದಾಗಿದೆ.
ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ
ಆದರೆ, ಅದನ್ನು ಅರಿಯದ ಅಭಿಮಾನಿಗಳು ಮಾತ್ರ ಕಮೆಂಟ್ನಲ್ಲಿ ಏನಾಯಿತು ಏನಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರಿಗೆ ಇದು ಸೀರಿಯಲ್ ಶೂಟಿಂಗ್ ಎಂದು ತಿಳಿದು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ನೀವು ಬಿಟ್ಟು ಹೋಗಬಾರದಿತ್ತು ಎನ್ನುತ್ತಿದ್ದಾರೆ. ಈ ಹಿಂದೆ ನಟಿ ನೀಡಿದ್ದ ಸಂದರ್ಶನಲ್ಲಿ, ಈ ಸೀರಿಯಲ್ ಕುರಿತು ಮಾತನಾಡಿದ್ದರು. ಸೀರಿಯಲ್ ಬಿಡಲು ನನಗೂ ಮನಸ್ಸು ಇರಲಿಲ್ಲ. ತುಂಬಾ ನೋವಿನಿಂದಲೇ ಹೊರಕ್ಕೆ ಬಂದಿದ್ದೇನೆ. ಮೂರು ತಿಂಗಳ ಹಿಂದೆಯೇ ನೋಟಿಸ್ ಪಿರಿಯಡ್ ಕೊಟ್ಟಿದ್ದೆ. ಈ ಮೂಲಕ ಸೀರಿಯಲ್ಗಳಿಗೆ ಬೈ ಹೇಳುತ್ತಿದ್ದೇನೆ. ಆದರೆ ನಟಿಯಾಗಿ ಮುಂದುವರೆಯುತ್ತಿದ್ದೇನೆ ಎಂದಿರುವ ಸಂಜನಾ, ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿ ಇದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದರು.
ಇದಾಗಲೇ ಕೆಲವು ಪ್ರಾಜೆಕ್ಟ್ಗಳನ್ನು ಮಾಡಿದ್ದೇನೆ. ಅದಾವುದೂ ಇನ್ನೂ ಬಿಡುಗಡೆಯಾಗಿಲ್ಲ. ನಟಿಯಾಗಿ ಇರುತ್ತೇನೆ. ನನಗೆ ಇಷ್ಟದ ಪಾತ್ರಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ನನಗೆ ಚಾಲೆಂಜಿಂಗ್ ಪಾತ್ರಗಳು ಎಂದರೆ ಇಷ್ಟ. ಹುಚ್ಚಿಯಂಥ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ನಾಯಕಿಯೇ ಆಗಬೇಕೆಂದೇನೂ ಇಲ್ಲ. ನನಗೆ ಇಷ್ಟ ಆಗುವ ಪಾತ್ರಗಳು ಆಗಬೇಕಷ್ಟೇ ಎಂದಿದ್ದರು ಸಂಜನಾ. ಇವರನ್ನು ಬೇರೆ ಸೀರಿಯಲ್ ಅಥವಾ ಸಿನಿಮಾಗಳ ಮೂಲಕ ಪರದೆಯ ಮೇಲೆ ನೋಡುವ ಆಸೆ ಅಭಿಮಾನಿಗಳಿಗೆ. ಆದರೆ ಸದ್ಯ ಈ ವಿಡಿಯೋ ಮಾತ್ರ ರಿಯಲ್ ಅಲ್ಲ ಎನ್ನುವುದಷ್ಟೇ ಸತ್ಯ.
ಪುಟ್ಟಕ್ಕನ ಮಕ್ಕಳು ನೋಡಿದ ಅಜ್ಜಿಗೆ ಹಾರ್ಟ್ ವೀಕ್, ಭಾಗ್ಯಲಕ್ಷ್ಮಿ ಮಾತ್ರ ತೋರಿಸ್ಬೇಡಿ ಅಂದ್ರು ಮತ್ತೊಬ್ಬರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.