ಹಿಂದಿಯಲ್ಲಿ ಒಂದು ಶಬ್ದ ಹೇಳಿ ಎಂದ್ರೆ ಬ್ರಹ್ಮಗಂಟು ಪೆದ್ದಿ ದೀಪಾ ಹೀಗೆ ಹೇಳೋದಾ? ವಿಡಿಯೋ ವೈರಲ್

Published : Jan 23, 2025, 05:15 PM ISTUpdated : Jan 23, 2025, 05:18 PM IST
ಹಿಂದಿಯಲ್ಲಿ ಒಂದು ಶಬ್ದ ಹೇಳಿ ಎಂದ್ರೆ ಬ್ರಹ್ಮಗಂಟು ಪೆದ್ದಿ ದೀಪಾ ಹೀಗೆ ಹೇಳೋದಾ? ವಿಡಿಯೋ ವೈರಲ್

ಸಾರಾಂಶ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಬಾಹ್ಯ ಸೌಂದರ್ಯವನ್ನು ನಿಂದಿಸಲಾಗುತ್ತಿದೆ. ದೀಪಾಳ ರೂಪವನ್ನು ಮನೆಯವರು ತಿರಸ್ಕರಿಸುತ್ತಾರೆ. ಚಿರಾಗ್ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ದೀಪಾ ಷರತ್ತುಬದ್ಧವಾಗಿ ಒಪ್ಪಿದ್ದಾಳೆ. ನಟಿಯರು ಹಾಸ್ಯಮಯ ರೀಲ್ಸ್ ಮಾಡಿದ್ದಾರೆ. ದಿಯಾ ಪಾಲಕ್ಕಲ್ ನಿಜ ಜೀವನದಲ್ಲಿ ಸುಂದರಿ. ಧಾರಾವಾಹಿಯಲ್ಲಿ ಮೇಕಪ್ ಮೂಲಕ ಅವಳನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ.

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹೌದು. ಇವಳೇ ಜೀ ಕನ್ನಡ   ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.

ಇಲ್ಲಿ ದೀಪಾ ಕಂಡರೆ ಮನೆಯಲ್ಲಿ ಹೆಚ್ಚಿನವರಿಗೆ ಯಾರಿಗೂ ಆಗಲ್ಲ, ಅದರಲ್ಲಿಯೂ ಪತಿ ಚಿರಾಗ್​ಗೂ ಇಷ್ಟವಿಲ್ಲ. ದೀಪಾಳ ಸೌಂದರ್ಯದಿಂದಾಗಿ ಅವಳನ್ನು ಕಂಡರೆ ಎಲ್ಲರಿಗೂ ತಾತ್ಸಾರ. ಆದರೆ ಇದೀಗ ಸೀರಿಯಲ್​ ಕುತೂಹಲದ ಘಟ್ಟ ತಲುಪಿದೆ. ಅತ್ತಿಗೆಯ ಮಾತನ್ನು ಕೇಳಿ ಚಿರಾಗ್​ ದೀಪಾಳಿಗೆ ಡಿವೋರ್ಸ್​ ಕೊಡಲು ಮುಂದಾಗಿದ್ದಾನೆ. ಇದಾಗಲೇ ಅತ್ತಿಗೆಯನ್ನು ಎದುರು ಹಾಕಿಕೊಂಡಿರುವ ದೀಪಾ ತಲೆಯಲ್ಲಿ ಏನೋ ಪ್ಲ್ಯಾನ್​ ಮಾಡಿಕೊಂಡು ಡಿವೋರ್ಸ್​ಗೆ ಓಕೆ ಅಂದಿದ್ದಾಳೆ. ಆದರೆ ಒಂದು ದಿನಪೂರ್ತಿ ಚಿರಾಗ್​ ತನ್ನ ಜೊತೆಯಲ್ಲಿಯೇ ಇರಬೇಕು ಎಂದು ಷರತ್ತು ಹಾಕಿದ್ದರಿಂದ, ಚಿರಾಗ್​ ಒಪ್ಪಿ ದೀಪಾಳ ಎಲ್ಲಾ ಆಸೆಗಳನ್ನೂ ತೀರಿಸುತ್ತಿದ್ದಾನೆ. ದೀಪಾ-ಚಿರಾಗ್​ ಬೇರೆಯಾಗ್ತಾರಾ? ದೀಪಾ ಮನೆಯಿಂದ ಹೋದ ಮೇಲೆ ಚಿರಾಗ್​ಗೆ ಅತ್ತಿಗೆಯ ದುಷ್ಟಬುದ್ಧಿ ಗೊತ್ತಾಗತ್ತಾ? ದೀಪಾಳ ಮುಂದಿನ ನಡೆ ಏನು ಎಂಬೆಲ್ಲಾ ಬಗ್ಗೆ ಚರ್ಚೆ ಶುರುವಾಗಿರುವ ನಡುವೆಯೇ ಈ ಸೀರಿಯಲ್​ ನಟಿಯರು ಒಂದು ರೀಲ್ಸ್​ ಮಾಡಿದ್ದು ಎಲ್ಲರನ್ನೂ ನಗಿಸಿದ್ದಾರೆ.

ಡೈರೆಕ್ಟ್ರು ಹೇಳಿದ್ರೂ ಕೇಳ್ದೇ ನನ್ ಪರವಾಗಿನೇ ಇರ್ಬೇಕು ಎಂದು ಲೈವ್‌ನಲ್ಲೇ ಚಿರುಗೆ ಧಮ್ಕಿ ಹಾಕೋದಾ ಸೌಂದರ್ಯ?

ಡಬ್​ಸ್ಮ್ಯಾಷ್​ ಮಾಡಿರುವ ಈ ರೀಲ್ಸ್​ನಲ್ಲಿ ದೀಪಾ ಪಾತ್ರಧಾರಿಯಾಗಿರುವ    ದಿಯಾ ಪಾಲಕ್ಕಲ್ , ಅರ್ಚನಾ ಪಾತ್ರಧಾರಿಯಾಗಿರುವ ಸನ್ಮಿತಾ ಪಿ. ಮತ್ತು ಚಿಕ್ಕಿಯ ಪಾತ್ರದಲ್ಲಿ ನಟಿಸಿರುವ ಶ್ವೇತಾ ರಾವ್​ ಕಲೌಸೆ ರೀಲ್ಸ್​ ಮಾಡಿದ್ದಾರೆ. ಹಿಂದಿಯಲ್ಲಿ ಒಂದು ಶಬ್ದ ಹೇಳಿ ಎಂದಾಗ, ಮೊದಲಿಗೆ ಶ್ವೇತಾ ಅವರು, ಸಲಾಂ ವಾಲಿಕ್ಕುನ್​ ಎಂದಿದ್ದಾರೆ, ಬಳಿಕ ಅರ್ಚನಾ ಉರ್ಫ್​ ಸನ್ಮಿತಾ ಪಿ. ಅವರು, ವಾಲಿಕ್ಕುಂ ಅಸ್ಸಲಾಂ ಎಂದಿದ್ದಾರೆ. ಈಗ ದೀಪಾಳ ಸರದಿ. ಅವಳು ಅಬ್ದುಲ್​ ಕಲಾಂ ಎಂದಿದ್ದಾಳೆ! ಜೋಕ್​ ಇಷ್ಟೇ. ಆದರೆ ಇದನ್ನು ಖ್ಯಾತ ನಟಿಯರು ಮಾಡಿರುವ ಹಿನ್ನೆಲೆಯಲ್ಲಿ ಇದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. 

ಇನ್ನು ದೀಪಾ ಪಾತ್ರಧಾರಿಯಾಗಿರುವ ದಿಯಾ ಪಾಲಕ್ಕಲ್  ಅವರು ಸೀರಿಯಲ್​ನಲ್ಲಿ ಎಷ್ಟು ಆಂತರಿಕವಾಗಿ ಸುಂದರಿಯಾಗಿದ್ದಾರೋ, ನಿಜ ಜೀವನದಲ್ಲಿ ಬಾಹ್ಯ ಸೌಂದರ್ಯವೂ ಅವರದ್ದು. ಆದರೆ ಸೀರಿಯಲ್​ ಪಾತ್ರಕ್ಕೆ ತಕ್ಕಂತೆ ಆಕೆಗೆ ಮೇಕಪ್​ ಮಾಡುವ ಮೂಲಕ ಎಷ್ಟು ಕೆಟ್ಟಿದ್ದಾಗಿ ತೋರಿಸಲು ಸಾಧ್ಯವೋ ಅಷ್ಟು ತೋರಿಸಲಾಗುತ್ತಿದೆ. ಆದರೆ ಈಕೆಯ ಒಳ್ಳೆಯತನದ ಮುಂದೆ ಧಾರಾವಾಹಿಯಲ್ಲಿ ಸೌಂದರ್ಯ ವೀಕ್ಷಕರಿಗೆ ಗಣನೆಗೆ ಬರುವುದೇ ಇಲ್ಲ. ಇಂತಿಪ್ಪ ದಿಯಾ ಪಾಲಕ್ಕಲ್​ ಅವರು ಸೋಷಿಯಲ್​  ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದು, ರೀಲ್ಸ್​ ಮಾಡುತ್ತಲೇ ಇರುತ್ತಾರೆ.   ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು.  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ  ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ.   2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. 

'ಬ್ರಹ್ಮಗಂಟು' ಸೋಡಾಗ್ಲಾಸ್ ದೀಪಾಳ ಕಲರ್ ದಿನವೂ ಚೇಂಜ್‌ ಆಗ್ತಿರಲು ಇದೇ ಕಾರಣ ನೋಡಿ! ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ