ಮದುಮಗಳು ಸ್ನೇಹಾಳಿಂದ ಭರ್ಜರಿ ಡಾನ್ಸ್​- ಹೃದಯ ಜೋಪಾನ ಕಣೇ ಎಂದ ಫ್ಯಾನ್ಸ್​

Published : May 11, 2025, 12:53 PM ISTUpdated : May 12, 2025, 10:36 AM IST
ಮದುಮಗಳು ಸ್ನೇಹಾಳಿಂದ ಭರ್ಜರಿ ಡಾನ್ಸ್​- ಹೃದಯ ಜೋಪಾನ ಕಣೇ ಎಂದ ಫ್ಯಾನ್ಸ್​

ಸಾರಾಂಶ

ಕಂಠಿ-ಸ್ನೇಹಾ ಮದುವೆಗೆ ರಾಧಾ ಅಡ್ಡಿಪಡಿಸಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಳು. ದೇವಿಕಾ ಭಟ್ (ಸ್ನೇಹಾ) ಮತ್ತು ಶಿಲ್ಪಾ (ಸುಮಾ) "ದತ್ತಾ" ಚಿತ್ರಗೀತೆಗೆ ರೀಲ್ಸ್ ಮಾಡಿದ್ದಾರೆ. ದೇವಿಕಾ, ಮಾಜಿ ರೂಪದರ್ಶಿ ಮತ್ತು ಕಥಕ್ ನರ್ತಕಿ, ಎಂಬಿಎ ಪದವೀಧರೆ. ಶಿಲ್ಪಾ, "ಗೀತಾ" ಧಾರಾವಾಹಿಯಿಂದ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಫ್ಯಾಷನ್ ಡಿಸೈನರ್.

ಪುಟ್ಟಕ್ಕನ ಮಕ್ಕಳು ಸದ್ಯ ರೋಚಕ ಹಂತ ತಲುಪಿದ್ದು, ಸ್ನೇಹಾ ಮತ್ತು ಕಂಠಿಯ ಮದುವೆಯಾಗುವ ಕಾಲ ಕೂಡಿ ಬಂದಿದೆ. ಕಂಠಿ ಮತ್ತು ರಾಧಾಳ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಬಂಗಾರಮ್ಮ ಬಂದು ಮದುವೆಯನ್ನು ನಿಲ್ಲಿಸಿದ್ದಾಳೆ. ರಾಧಾಳನ್ನು ಪೊಲೀಸರ ವಶಕ್ಕೆ ಕೊಟ್ಟಿದ್ದಾಳೆ. ಆದರೆ ಅಲ್ಲಿ ರಾಧಾ ಏನು ಡ್ರಾಮಾ ಮಾಡುತ್ತಾಳೋ ಎನ್ನುವುದನ್ನು ಕಾದು ನೋಡಬೇಕಿದೆಯಷ್ಟೇ. ಪೊಲೀಸರ ಸೊಂಟದಲ್ಲಿದ್ದ ಪಿಸ್ತೂಲ್​ ಕಸಿದು ಸ್ನೇಹಾಳನ್ನು ಶೂಟ್​ ಮಾಡಲು ಹೋದಾಗ ಕಂಠಿ ಅದನ್ನು ತಪ್ಪಿಸಿದ್ದಾನೆ. ಇನ್ನು ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಕಾಣಿಸುತ್ತಿದೆ. ಕಂಠಿ-ಸ್ನೇಹಾಳ ಮದುವೆ ಸಾಂಗ್ಯವಾಗಿ ನೆರವೇರುವಂತೆ ಕಾಣಿಸುತ್ತಿದೆ.

ಇದರ ನಡುವೆಯೇ ಸ್ನೇಹಾ ಪಾತ್ರಧಾರಿ ದೇವಿಕಾ ಭಟ್​ ಮತ್ತು ಸುಮಾ ಪಾತ್ರಧಾರಿ ಶಿಲ್ಪಾ ಸವಸೆರೆ ಭರ್ಜರಿ ರೀಲ್ಸ್​ ಮಾಡಿದ್ದಾರೆ. ಸೀರಿಯಲ್​ನಲ್ಲಿ ಒರಿಜಿನಲ್ ಸ್ನೇಹಾಳ ಹೃದಯವನ್ನು ಈ ಸ್ನೇಹಾಳಿಗೆ ಆಪರೇಷನ್​ ಮೂಲಕ ಹಾಕಿರುವ ಕಾರಣದಿಂದ ಹೃದಯ ಜೋಪಾನ ಕಣೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಆದರೆ ಸೀರಿಯಲ್​ ಸಹೋದರಿಯರು ದತ್ತಾ ಚಿತ್ರದ ಬಾರೆ ಬಾರೆ ಬಾರೆ ನನ್ನ ಬಜಾರಿ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಇಬ್ಬರೂ ಒಬ್ಬರನ್ನು ಒಬ್ಬರು ಮೀರಿಸುವಂತೆ ಸ್ಟೆಪ್​ ಹಾಕಿದ್ದಾರೆ. ಇದು ಸ್ನೇಹಾಳ ಮದುವೆಯ ಸಂದರ್ಭದಲ್ಲಿ ಮಾಡಿರುವ ರೀಲ್ಸ್​ ಆಗಿದ್ದರಿಂದ ಇಬ್ಬರೂ ಅದೇ ಸೀರೆಯಲ್ಲಿ ಇರುವುದನ್ನು ನೋಡಬಹುದು. 

ರೋಚಕ ತಿರುವಿನಲ್ಲಿ ಪುಟ್ಟಕ್ಕನ ಮಕ್ಕಳು: ರಾಧಾ ಕೈಯಲ್ಲಿ ಪಿಸ್ತೂಲ್​- ಸ್ನೇಹಾಳೇ ಟಾರ್ಗೆಟ್​: ಮುಂದೇನು?

ಇನ್ನು ಸ್ನೇಹಾ ಪಾತ್ರಧಾರಿಯ ಕುರಿತು ಹೇಳುವುದಾದರೆ, ಇವರ ಹೆಸರು ದೇವಿಕಾ ಭಟ್​. ರಾಮಾಚಾರಿ ಸೀರಿಯಲ್​ನಲ್ಲಿ ರುಕ್ಮಿಣಿ ಪಾತ್ರ ಮಾಡಿ ಮನೆಮಾತಾಗಿದ್ದ ನಟಿ ಈಕೆ. ಸ್ನೇಹಾಳ ಪಾತ್ರದಲ್ಲಿ ನಟಿಸಿದ್ದ ಅಪೂರ್ವ ನಾಗಾರಾಜ್ ಅವರನ್ನು ಕೈಬಿಟ್ಟು ದೇವಿಕಾ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ದೇವಿಕಾ ಭಟ್​  ಬೆಂಗಳೂರಿನವರು. ಓದಿದ್ದು ಎಂಬಿಎ.  ಮೊದಲಿನಿಂದಲೂ  ಇವರಿಗೆ ಕಲೆ ಬಗ್ಗೆ ಆಸಕ್ತಿ. ಇವರು ಕಥಕ್​ ಡ್ಯಾನ್ಸರ್ ಕೂಡ ಹೌದು. ಇವರು ಮಾಡೆಲ್​ ಹಾಗೂ ಫ್ಯಾಷನ್​ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. 

ಇನ್ನು ಶಿಲ್ಪ ಬಣ್ಣದ ಲೋಕದಲ್ಲಿ ಕಾಲಿಡಲು ಆಕೆಗೆ ತನ್ನ ಮನೆಯಲ್ಲಿ ಬಹಳ ಪ್ರೋತ್ಸಾಹ ಕೂಡ ಸಿಕ್ಕಿದೆ.  ಮೊದಲು ಇವರು ಗೀತಾ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಈ ಧಾರಾವಾಹಿಯಲ್ಲಿ ವಿಜಯ್ ತಂಗಿ ಶ್ರುತಿ ಪಾತ್ರದಲ್ಲಿ ಮಿಂಚಿದ್ದರು. ಆ ಬಳಿಕ ಇವರಿಗೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಾನ್ಸ್ ಸಿಕ್ಕಿದ್ದು, ಇಲ್ಲಿ ಸುಮಾ ಆಗಿ ನಟಿಸುತ್ತಿದ್ದಾರೆ.   ಹೈಸ್ಕೂಲ್ ಬಳಿಕ  ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡಿದ್ದಾರೆ ಶಿಲ್ಪಾ.  

ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!