ರೋಚಕ ತಿರುವಿನಲ್ಲಿ ಪುಟ್ಟಕ್ಕನ ಮಕ್ಕಳು: ರಾಧಾ ಕೈಯಲ್ಲಿ ಪಿಸ್ತೂಲ್​- ಸ್ನೇಹಾಳೇ ಟಾರ್ಗೆಟ್​: ಮುಂದೇನು?

Published : May 11, 2025, 12:31 PM ISTUpdated : May 12, 2025, 10:37 AM IST
ರೋಚಕ ತಿರುವಿನಲ್ಲಿ ಪುಟ್ಟಕ್ಕನ ಮಕ್ಕಳು: ರಾಧಾ ಕೈಯಲ್ಲಿ ಪಿಸ್ತೂಲ್​- ಸ್ನೇಹಾಳೇ ಟಾರ್ಗೆಟ್​: ಮುಂದೇನು?

ಸಾರಾಂಶ

ಕಂಠಿ-ರಾಧಾ ಮದುವೆ ಸಿದ್ಧತೆ ನಡುವೆ, ಕಂಠಿ-ಸ್ನೇಹಾ ಪ್ರೀತಿ ಬಯಲಾಗಿದೆ. ರಾಧಾ ದುಷ್ಟತನ ಬೆಳಕಿಗೆ ಬಂದು, ಬಂಗಾರಮ್ಮ ಪೊಲೀಸರಿಗೆ ತಿಳಿಸಿದ್ದಾಳೆ. ರಾಧಾ ಸ್ನೇಹಾಳಿಗೆ ಗುರಿಯಿಟ್ಟಾಗ, ಕಂಠಿ ತೆಂಗಿನಕಾಯಿ ಎಸೆದು ಪಿಸ್ತೂಲ್ ಕೆಡವಿ, ರಾಧಾ ಬಂಧನವಾಗಿದೆ. ಈಗ ಕಂಠಿ-ಸ್ನೇಹಾ ಮದುವೆ, ಧಾರಾವಾಹಿ ಮುಂದುವರಿಕೆ ಕುತೂಹಲ ಮೂಡಿಸಿದೆ. ಸ್ನೇಹಾ ಪಾತ್ರ ಬದಲಾವಣೆ, ರವಿಚಂದ್ರನ್ ಆಗಮನದಿಂದ ಧಾರಾವಾಹಿ ವಿಮರ್ಶೆಗೊಳಗಾಗಿತ್ತು.

ಪುಟ್ಟಕ್ಕನ ಮಕ್ಕಳು ಸೀರಿಯಲ್​ ರೋಚಕ ಘಟ್ಟ ತಲುಪಿದೆ. ಕಂಠಿ ಮತ್ತು ರಾಧಾಳ ಮದುವೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಅತ್ತ ಕಂಠಿ, ಸ್ನೇಹಾಳ ಮೇಲೆ ಲವ್​ ಇಟ್ಟುಕೊಂಡಿದ್ರೆ, ಸ್ನೇಹಾ ಕೂಡ ಕಂಠಿಯನ್ನು ಪ್ರೀತಿಸುತ್ತಿದ್ದಾಳೆ. ಆದರೆ ನಡುವೆ ಆದ ಕೆಲವೊಂದು ಘಟನೆಗಳಿಂದ ಕಂಠಿ ರಾಧಾಳನ್ನು ಮದುವೆಯಾಗುವ ಹಾಗೆ ಮಾಡಿದೆ. ಅತ್ತ ಕಂಠಿಯ ಅಮ್ಮ ಬಂಗಾರಮ್ಮನಿಗೂ ರಾಧಾ ಕೆಟ್ಟವಳು ಎನ್ನುವ ವಿಷಯ ಗೊತ್ತಾಗಲೇ ಇಲ್ಲ. ಪುಟ್ಟಕ್ಕ ಮತ್ತು ಬಂಗಾರಮ್ಮನ ಅಮ್ಮ ಎಷ್ಟು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಬಂಗಾರಮ್ಮ ಇರಲಿಲ್ಲ. ಕೊನೆಗೆ ಆಕೆಗೆ ಎಲ್ಲಾ ವಿಷಯ ಗೊತ್ತಾಗಿದೆ. ತನ್ನ ಸೊಸೆ ಸ್ನೇಹಾಳ ಹೃದಯವನ್ನು ಈ ಸ್ನೇಹಾಗೆ ಅಳವಡಿಸಿರುವ ವಿಷಯವೂ ತಿಳಿದಿದೆ.

ಇದರ ನಡುವೆಯೇ, ರಾಧಾ ಮಾಡಿರುವ ಎಲ್ಲಾ ಕಿತಾಪತಿಗಳು ಒಂದೊಂದಾಗಿ ಬಯಲಾಗಿದೆ. ಆದರೂಕೊನೆಯವರೆಗೂ ತಾನು ನಿರಪರಾಧಿ ಎಂದು ಪ್ರೂವ್ ಮಾಡಿಕೊಳ್ಳುತ್ತಲೇ ಇದ್ದಾಳೆ ರಾಧಾ. ಆದರೆ ಅದಾಗಲೇ ಬಂಗಾರಮ್ಮನಿಗೆ ಎಲ್ಲಾ ವಿಷಯ ತಿಳಿದು ಮದುವೆ ಮನೆಗೆ ಪೊಲೀಸರನ್ನು ಕರೆಸಿ ರಾಧಾಳನ್ನು ಅರೆಸ್ಟ್​ ಮಾಡುವಂತೆ ಹೇಳಿದ್ದಾಳೆ. ಕೂಡಲೇ ರಾಧಾ ಪೊಲೀಸರಿಂದ ಪಿಸ್ತೂಲ್​ ಕಸಿದುಕೊಂಡು ಅದನ್ನು ಸ್ನೇಹಾಳಿಗೆ ಟಾರ್ಗೆಟ್​  ಮಾಡಿದ್ದಾಳೆ. ಯಾರಾದರೂ ಸ್ವಲ್ಪ ಅಲ್ಲಾಡಿದರೆ ಸ್ನೇಹಾಳನ್ನು ಶೂಟ್​ ಮಾಡುವುದಾಗಿ ಹೇಳಿದ್ದಾಳೆ. ಆದರೆ ಇಲ್ಲಿಗೇ ನಿಲ್ಲಲ್ಲಲ್ಲ. ಕೂಡಲೇ ಕಂಠಿ ಅಲ್ಲಿಯೇ ಇರುವ ತೆಂಗಿನ ಕಾಯಿಯನ್ನು ಕೈಗೆತ್ತಿಕೊಂಡು ರಾಧಾಳ ಕೈಗೆ ಹೊಡೆದಿದ್ದಾನೆ. ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ಏನು ಬೇಕಾದರೂ ಆಗತ್ತೆ ಅಲ್ವಾ? ಹಾಗೆಯೇ ತೆಂಗಿನಕಾಯಿ ಪಿಸ್ತೂಲ್​ಗೆ ತಾಗಿ ಅದು ಕೆಳಕ್ಕೆ ಬಿದ್ದಿದೆ. ಪೊಲೀಸರು ರಾಧಾಳನ್ನು ಅರೆಸ್ಟ್​  ಮಾಡಿಕೊಂಡು ಹೋಗಿದ್ದಾರೆ.

ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

ಈಗ  ಮುಂದೆ ಕಂಠಿ ಮತ್ತು ಸ್ನೇಹಾಳ ಮದುವೆಯಾಗುತ್ತಾ? ಇನ್ನೇನು ನಡೆಯತ್ತೆ? ಪುಟ್ಟಕ್ಕನ ಮಕ್ಕಳು ಸೀರಿಯಲ್​ ಮುಗಿಯತ್ತಾ ಅಥ್ವಾ ಇನ್ನೇನಾದ್ರೂ ಟ್ವಿಸ್ಟ್​ ಬರತ್ತಾ ಎನ್ನುವ ಕುತೂಹಲದಲ್ಲಿ ಇದ್ದಾರೆ ಸೀರಿಯಲ್​ ಪ್ರೇಮಿಗಳು. ಅಷ್ಟಕ್ಕೂ ಅಸಲಿ ಸ್ನೇಹಾಳನ್ನು ಸಾಯಿಸಿದಾಗಲೇ ಪುಟ್ಟಕ್ಕನ ಮಕ್ಕಳು ಟಿಆರ್​ಪಿ ಕಡಿಮೆಯಾಗುತ್ತಾ ಬಂದಿತ್ತು.  ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಯಿತು. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬಂದಿತ್ತು.
 
ಆದರೆ, ಇದಾಗಲೇ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.  ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು. ಕೊನೆಗೆ ಆಕೆಯ ದೇಹವನ್ನು ಇನ್ನೊಬ್ಬಳು ಸ್ನೇಹಾಳಿಗೆ ಹಾಕಲಾಯಿತು.  ಆದರೆ ಅದ್ಯಾಕೋ  ಆ ನಟಿಯನ್ನೂ ತೆಗೆದು ಆಕೆಯ ಜಾಗಕ್ಕೆ ಮತ್ತೊಬ್ಬ ನಟಿಯನ್ನು ತರಲಾಯಿತು. ಹೀಗೆ ಏನೇನೋ ಆಗಿ ಪುಟ್ಟಕ್ಕನ ಮಕ್ಕಳು ಮೂಲ ಕಥೆ ಹಳ್ಳ ಹಿಡಿಯಿತು ಎಂದೆಲ್ಲಾ ಜನರು ನೊಂದುಕೊಂಡಿದ್ದರು. ಇದರ  ನಡುವೆಯೇ ಟಿಆರ್​ಪಿ ಏರಿಸುವುದಕ್ಕಾಗಿ ರವಿಚಂದ್ರನ್​ ಎಂಟ್ರಿಕೊಡಿಸಲಾಯಿತು. ಒಟ್ಟಿನಲ್ಲಿ ಈಗ ಸೀರಿಯಲ್​ ಮುಗಿಯುವ ಲಕ್ಷಣಗಳು ಕಾಣಿಸ್ತಿವೆ. 

ಗಂಡ ಮತ್ತೊಂದು ಮದ್ವೆಗೆ ಸಿದ್ಧನಾಗಿದ್ರೆ ಇಲ್ಲಿ ರೀಲ್ಸ್​ ಮಾಡ್ತಿದ್ದೀರಾ? ನಟಿ ಸಂಜನಾ ಕಾಲೆಳೀತಿರೋ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!