ಒಂದೇ ವಾರದಲ್ಲಿ ತಂದೆ-ತಾಯಿ ನಿಧನ: ಇನ್ನೊಂದಿಷ್ಟು ಟೈಮ್‌ ಕಳೆಯಬೇಕಿತ್ತು ಎಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ

Published : May 11, 2025, 02:32 PM ISTUpdated : May 12, 2025, 10:32 AM IST
ಒಂದೇ ವಾರದಲ್ಲಿ ತಂದೆ-ತಾಯಿ ನಿಧನ: ಇನ್ನೊಂದಿಷ್ಟು ಟೈಮ್‌ ಕಳೆಯಬೇಕಿತ್ತು ಎಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ

ಸಾರಾಂಶ

ಅಕ್ಷತಾ ಮಾಯಸಂದ್ರ ತಾಯಂದಿರ ದಿನದಂದು ತಮ್ಮ ಅಗಲಿದ ತಾಯಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮದುವೆಪೂರ್ವದ ಜಗಳಗಳು, ಮದುವೆಯ ನಂತರದ ಕಡಿಮೆ ಭೇಟಿಗಳು, ಅಮ್ಮನ ಅನಾರೋಗ್ಯ, ಆಸ್ಪತ್ರೆಯ ಓಡಾಟ, ಕೆಲಸದ ಒತ್ತಡಗಳ ನಡುವೆ ತಾಯಿಯೊಂದಿಗೆ ಸಮಯ ಕಳೆಯಲಾಗದ ಪಶ್ಚಾತ್ತಾಪ, ಈಗ ತಂದೆ-ತಾಯಿ ಇಬ್ಬರೂ ಇಲ್ಲದ ಶೂನ್ಯತೆಯನ್ನು ಭಾವುಕವಾಗಿ ವ್ಯಕ್ತಪಡಿಸಿದ್ದಾರೆ.

ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ನಟಿ ಅಕ್ಷತಾ ಮಾಯಸಂದ್ರ ಅವರು ʼತಾಯಂದಿರ ದಿನʼಕ್ಕೆ ವಿಶೇಷವಾದ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇವತ್ತು ತಾಯಂದಿರ ದಿನ.

ಮದುವೆಯ ಮೊದಲು, ಅಮ್ಮನ ಜೊತೆಗೆ ಏನೇ ಮನಸ್ತಾಪ, ಭಿನ್ನಾಭಿಪ್ರಾಯ, ಕದನ, ಜಗಳ ಆದ್ರೂ ಅದೊಂದು ದಿನಕ್ಕಷ್ಟೇ.... ರಾತ್ರಿಯ ವೇಳೆಗೆ ನನಗೆ ಬೇಸರವಾಗಿ ಕ್ಷಮೆ ಕೇಳಿಯೋ ಅಥವಾ ನಾನೇನು ತಿಂದಿಲ್ಲ, ಹಸಿವಾಗಿರಬೇಕು ಎನ್ನುವ ಕಾಳಜಿಯಿಂದ ಆಯ್ತು ಬಿಡು, ನಾ ಬೈಯೊಲ್ಲ ಅಂತ ಬಂದು ತಬ್ಬಿ ತುತ್ತಿಕ್ಕಿ ಅಂದಿನ ದಿನಕ್ಕೆ ಮಂಗಳ ಹಾಡಿ ಮಲಗಿಸುತ್ತಿದ್ದಳು ನನ್ನಮ್ಮ.

ಮದುವೆ ನಂತರ, ನೀ‌ ಬರುವುದೇ ಅಪರೂಪ, ಇರೋದೇ ಇಲ್ಲ, ಹೀಗೆ ಬಂದು ಹಾಗೆ ಹೋಗೋಕೆ ಯಾಕೆ ಬರೋದು, ಅನ್ನುವಷ್ಟಕ್ಕೆ ನಮ್ಮ ಜಗಳ ಮುಗಿಯುತ್ತಿತ್ತು. 

Happy mother's day  ಅಮ್ಮ ಅಂತ ಫೋನ್ ಮಾಡಿ ವಿಶ್ ಮಾಡಿದ್ರೆ "ಇವತ್ತೊಂದಿನ ನೆನಪಾದೆ ಅಲ್ವಾ, ಹೋಗ್ಲಿ ಬಿಡು, ಇವತ್ತಾದರೂ ಎಲ್ಲಾರೂ  ಒಟ್ಟಿಗೆ ಹೊರಗೆ ಊಟ ಮಾಡಿ ಬರೋಣ ಬಾ" ಅನ್ನುತಿದ್ರು.  ಹೊತ್ತು ಗೊತ್ತಿಲ್ಲದ ಕೆಲಸಗಳ ಒತ್ತಡದ ನಡುವೆ ಟ್ರೈ ಮಾಡ್ತೀವಿ, ನನಗೆ ಸ್ವಲ್ಪ ಕೆಲಸ ಇದೆ, ಇವರು ಬಿಜಿ ಅಂದ್ರೆ "ಮೂರು ಹೊತ್ತೂ ಕೆಲ್ಸ ಇರುತ್ತೆ, ಒಂದು ಹೊತ್ತಿನ ಊಟಕ್ಕೂ ಪುರುಸೊತ್ತು ಇರಲ್ವ, ಹೋಗ್ಲಿ. ಮನೆಲೇ ಅಡುಗೆ ಮಾಡ್ತೀನಿ ಇಲ್ಲೇ ಬನ್ನಿ" ಅಂತ ಹೇಗಾದರೂ ಬಯಸಿದಾಗಲೆಲ್ಲ ಮನೆಗೆ ಕರೆಸಿಕೊಳ್ಳುವ ಪ್ರಯತ್ನ ಅವಳದ್ದು. 

ಅಮ್ಮ ಹುಷಾರು ತಪ್ಪಿದಾಗ ಆಸ್ಪತ್ರೆ ಓಡಾಟ, ಬಿಟ್ರೆ ಶೂಟಿಂಗ್ ಅಂತ ಬೇರೆ ಊರಿಗೆ ಪಯಣದ ನಡುವೆ ಅವಳ ಜೊತೆ ಇಡೀ ದಿನ ಕಾಲ ಕಳೆಯಲೂ ಸಮಯ ಇಲ್ಲದಂತೆ ಆಯಿತು. ಕಡೆಯ ಎರಡು ಬಾರಿ ಆಸ್ಪತ್ರೆ ವಾಸದ ನಂತರ, ನಾನೂ ಊರಿಗೆ ಹೋಗ್ತಾ ಇರ್ತೀನಿ ನಿಮ್ಮೊಬ್ಬರಿಗೆ ಅಮ್ಮನ್ನ ನೋಡೋದು ಕಷ್ಟ ಅಂತ ಒಬ್ಬ ಕೇರ್ ಟೇಕರ್‌ನನ್ನು ಗೊತ್ತು ಮಾಡಿ ಬಂದೆ. ಕಡೆಯ ಎರಡ್ಮೂರು ತಿಂಗಳು ಬಹುತೇಕ ಜೊತೆಯಲ್ಲೇ ಇದ್ದೆ.

ಎಲ್ಲಾದರೂ ಕೆಲಸದ ಮೇಲೆ ಹೊರಬಂದರೆ ಸಾಕು, "ಅವಳು ಎಲ್ಲಾ ಮಾಡ್ತಾಳೆ ಕಣೆ, ನೀ ಜೊತೆಲಿರು ಸಾಕು" ಅಂತ ಫೋನ್ ಮಾಡಿ ಅಳೋಳು ಅಮ್ಮ. ಕೆಲಸಕ್ಕೆ ಹೋಗಿಲ್ಲ ಅಂದ್ರೆ ಹೇಗಮ್ಮ, ನಾನು ಮಗು ಆಗಿದ್ದಾಗ ನೀ ಕೆಲಸಕ್ಕೆ ಹೋಗೋವಾಗ ನಾ ಹಠ ಮಾಡಿದ್ನಾ, ಈಗ ನೀನು ಮಗು... ನಾನು ಅಮ್ಮ ಅಂದುಕೋ... ಜಾಣೆ ಅಂತ ಸಮಾಧಾನ ಮಾಡಿ ಮಾತು ಮುಂದುವರೆಸಲೂ ಆಗದೆ ಅಪ್ಪನಿಗೆ ಕೊಡು ಫೋನ್ ಅಂತ ಅಪ್ಪನ ಬಳಿ ಅಳ್ತಿದ್ದೆ. 

ಅಪ್ಪ, ಏನೇ ಕಷ್ಟ ಇದ್ರೂ ಹೇಳಿಕೊಳ್ಳದವರು. "ನೀನೇನು ಯೋಚನೆ ಮಾಡಬೇಡ ಮಗಳೇ. ನಾನು ನೋಡ್ಕೋತೀನಿ. ಕೇರ್ ಟೇಕರ್ ಇದ್ದಾರೆ ನೀನು ಆರಾಮಾಗಿ ನಿನ್ ಕೆಲಸ ಮಾಡ್ಕೋ, ಬೇಕು ಅಂದಾಗ ನಾನೇ ಫೋನ್ ಮಾಡ್ತೀನಿ. ಅಮ್ಮನ ಮಾತಿಗೆ ತಲೆ ಕೆಡಿಸ್ಕೋಬೇಡ, ನಿನ್ನ ಕೆಲಸದ ಮೇಲೆ ಗಮನ ಕೊಡು" ಅಂತ ಅಪ್ಪನೇ ನನಗೆ ಸಮಾಧಾನ ಮಾಡ್ತಾ ಇದ್ದರು.

ಪ್ರಾಯಶಃ ಅಮ್ಮನಿಗೆ ಅಲ್ಲೂ ನೋಡಿಕೊಳ್ಳೋಕೆ ಒಬ್ಬರು ಬೇಕು ಅಂತ ವಾರವೊಪ್ಪತ್ತಿನಲ್ಲೇ ಅಪ್ಪನೂ ಅಮ್ಮನ ಹತ್ತಿರ ಹೊರಟುಬಿಟ್ರು.

ಇವತ್ತು ತಾಯಂದಿರ ದಿನ ಫೋನ್ ಮಾಡಿ ವಿಶ್ ಮಾಡೋದಕ್ಕೆ ಜಗಳ ಮಾಡೋದಿಕ್ಕೆ ಅವಳು ಇಲ್ಲ.
ಅಮ್ಮ ಜಗಳ ಮಾಡಿದ್ಲು ಅಂತ ಅತ್ಕೊಂಡು ಹೇಳಿಕೊಳ್ಳೋದಕ್ಕೆ, ಕೇಳಿಸಿಕೊಂಡು ಸಮಾಧಾನ ಮಾಡಲಿಕ್ಕೆ ಅಪ್ಪನೂ ಇಲ್ಲ.

ಅವರಿಬ್ಬರೂ ಇದ್ದಾಗ ಇನ್ನೊಂದಷ್ಟು ಹೆಚ್ಚು ಸಮಯ ಅವರ ಜೊತೆ ಕಳೆದಿದ್ದರೆ ಚೆನ್ನಾಗಿರೋದು ಅಂತ ಈಗಲೂ ಗಿಲ್ಟ್ ಕಾಡತ್ತೆ. ಇದು ಎಲ್ಲರನ್ನೂ ಕಾಡುವ ಅತೃಪ್ತಿ.

But I know they are at a better place now, looking after me and guiding me from there.

Happy mother's day Amma

Appa you are no less than amma, so happy mother's day to you too.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನಿಲ್ಲ, ಏನಿಲ್ಲ... ಎನ್ನುತ್ತಲೇ ಹೀಗೆ ಮಾಡಿದ Bigg Boss ಐಶ್ವರ್ಯ ಸಿಂಧೋಗಿ- ರಜತ್​ ಶಾಸ್ತ್ರಿ ಜೋಡಿ
ಎಲ್ಲರಿಗೂ Bigg Boss ಗೆಲ್ಲೋ ಚಿಂತೆಯಾದ್ರೆ, ರಕ್ಷಿತಾ ಶೆಟ್ಟಿಗೆ ಇನ್ನೇನೋ ಕನಸು: ಆಸೆ ಕೇಳಿದ್ರೆ ಹೀಗೇ ಹೇಳೋದಾ ಪುಟ್ಟಿ?