ಇನ್‌ಸ್ಟಾಗ್ರಾಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟಕ್ಕನ ಮಗಳು ಸ್ನೇಹಾ! ಸೀರಿಯಲ್‌ ಬಿಟ್ಮೇಲೆ ನಟಿಗೆ ಇದೇನಾಯ್ತು?

By Suchethana D  |  First Published Nov 13, 2024, 9:01 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಬಿಟ್ಟ ನಟಿ ಸಂಜನಾ ಬುರ್ಲಿ ಈಗ ಸೋಷಿಯಲ್‌ ಮೀಡಿಯಾದಲ್ಲಿ ಬಂದು ಕಣ್ಣೀರು ಹಾಕಿದ್ದಾರೆ. ಇದೇನಿದು?
 


ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ನಾಯಕಿ ಎಂದೇ ಬಿಂಬಿತವಾಗಿದ್ದ ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ. ನಟಿ ಸಂಜನಾ ಬುರ್ಲಿ ಅವರು ಸೀರಿಯಲ್‌ ಬಿಡಬೇಕಾಗಿದ್ದ ಹಿನ್ನೆಲೆಯಲ್ಲಿ ಕಥೆಯನ್ನು ಬದಲಿಸಿ ಆ ಪಾತ್ರಕ್ಕೆ ಬೇರೊಬ್ಬರನ್ನು ತರದೇ ಪಾತ್ರವನ್ನೇ ಸಾಯಿಸಲಾಗಿದೆ. ಸ್ನೇಹಾಳ ಹೃದಯವನ್ನು ಇನ್ನೊಬ್ಬಳು ಸ್ನೇಹಾಕ್ಕೆ ಅಳವಡಿಸಲಾಗಿದ್ದು, ಇದೀಗ ಈ ಸ್ನೇಹಾಳ ರೂಪದಲ್ಲಿ ಆ ಸ್ನೇಹಾ ಮುಂದೆ ಬರುತ್ತಿದ್ದಾಳೆ. ಆದರೆ ಕೆಲವು ವರ್ಷ ಒಂದು ಪಾತ್ರವನ್ನು ನೋಡಿದ ಅಭಿಮಾನಿಗಳಿಗೆ ಆ ಪಾತ್ರ ಇನ್ನಿಲ್ಲ ಎಂದು ಗೊತ್ತಾದಾಗ ನೋವಾಗುವುದು ಸಹಜ. ಅದೇ ರೀತಿ ಸಂಜನಾ ಬುರ್ಲಿ ಅವರು ಸೀರಿಯಲ್‌ ಬಿಟ್ಟು ಹೋಗಿರುವುದಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ. 

ನಟಿ ಸೀರಿಯಲ್‌ ಬಿಟ್ಟ ಮೇಲೆ ಸೋಷಿಯಲ್‌ ಮೀಡಿಯಾದಲ್ಲಿ ಆಯಕ್ಟೀವ್‌ ಆಗಿದ್ದಾರೆ. ಮೊದಲಿನಿಂದಲೂ ಸಂಜನಾ ಅವರು ರೀಲ್ಸ್‌, ವಿಡಿಯೋ, ಡಾನ್ಸ್‌ ಎಲ್ಲಾ ಮಾಡುತ್ತಲೇ ಇದ್ದರು. ಈಗ ಸೀರಿಯಲ್‌ ಬಿಟ್ಟ ಮೇಲೆ ಮತ್ತಷ್ಟು ಆಯಕ್ಟೀವ್‌ ಆಗಿದ್ದಾರೆ. ಅಂದಹಾಗೆ ಈಗ ಇನ್ನೊಂದು ವಿಡಿಯೋ ಅನ್ನು ಸಂಜನಾ ಬುರ್ಲಿ ಅವರು ಶೇರ್‌ ಮಾಡಿದ್ದಾರೆ. ನಟಿಯ ವಿಡಿಯೋ ಶುರು ಮಾಡುವ ಮೊದಲು ಅವರ ಮುಖ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಆಮೇಲೆ ಈ ವಿಡಿಯೋ ಪ್ಲೇ ಮಾಡಿದ ಮೇಲೆ ನಟಿ ಸಂಜನಾ ಬುರ್ಲಿ ಅವರು ರೀಲ್ಸ್‌ ಮಾಡುತ್ತಿರುವುದು ತಿಳಿದಿದೆ. ಮಿನುಗುತಾರೆ ಕಲ್ಪನಾ ಅವರ ಸಿನಿಮಾದ ಡೈಲಾಗ್‌ ಅನ್ನು ಡಬ್‌ಮ್ಯಾಷ್‌ ಮಾಡಿ ಸಕತ್‌ ಆಕ್ಟಿಂಗ್‌ ಮಾಡಿದ್ದಾರೆ ನಟಿ. ಇದನ್ನು ನೋಡಿ ಅಭಿಮಾನಿಗಳು ಸೂಪರ್‌ ಎನ್ನುತ್ತಿದ್ದಾರೆ. 

Tap to resize

Latest Videos

undefined

ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ

ನೀವು ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಬಿಟ್ಟ ಮೇಲೆ ಆ ಸೀರಿಯಲ್‌ ನೋಡೋದನ್ನೇ ಬಿಟ್ಟಿದ್ದೇವೆ ಎಂದು ಕೆಲವರು ಕಮೆಂಟ್‌ ಮೂಲಕ ಹೇಳುತ್ತಿದ್ದಾರೆ. ಮತ್ತೆ ಸೀರಿಯಲ್‌ಗೆ ವಾಪಸ್‌ ಬನ್ನಿ ಎಂದು ಕೆಲವರು ಹೇಳುತ್ತಿದ್ದರೆ, ಬೇರೆ ಸೀರಿಯಲ್‌ನಲ್ಲಾದರೂ ಕಾಣಿಸಿಕೊಳ್ಳಿ ಎಂದು ಮತ್ತೆ ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ, ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ ಪಾತ್ರವನ್ನು ಸಾಯಿಸಿದ ಮೇಲೆ, ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಈ ಸೀರಿಯಲ್​ ಪ್ರೊಮೋ ಹಾಕಿದಾಗಲೆಲ್ಲಾ ಸಹನಾ ವಾಪಸ್​ ಬಂದರೆ, ಹೇಗಾದ್ರೂ ಮಾಡಿ ಸ್ನೇಹಾಳನ್ನೂ ವಾಪಸ್​ ಕರೆಸಿ, ಸೀರಿಯಲ್​ನಲ್ಲಿ ಏನು ಬೇಕಾದ್ರೂ ಆಗತ್ತೆ ಎನ್ನುತ್ತಿದ್ದಾರೆ. ಅತ್ತ ಕಂಠಿ ಸ್ನೇಹಾ ಬರೋದನ್ನು ಕಾಯ್ತಿದ್ರೆ ಇತ್ತ ಫ್ಯಾನ್ಸ್​ ಕೂಡ ಮತ್ತೆ ಸ್ನೇಹಾ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಅಷ್ಟಕ್ಕೂ  ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಗಿದೆ. 

ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು.  ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.

ಬಿಗ್​ಬಾಸ್​ಗೆ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..

click me!