ಸಂತು ಬಿಟ್ರೆ ದನ-ಕರು ನೋಡ್ಕೊಂಡು ಆರಾಮಾಗಿರ್ತೀನಿ: ಬಿಗ್​ಬಾಸ್​ ಮಾನಸಾ ಮನದ ಮಾತು ಕೇಳಿ

By Suchethana D  |  First Published Nov 13, 2024, 9:45 PM IST

ಇನ್ನೂ ಒಳ್ಳೆಯ ಅವಕಾಶಕ್ಕೆ ಬಿಗ್​ಬಾಸ್​  ತುಕಾಲಿ ಮಾನಸಾ ಕಾಯ್ತಿದ್ದೀರಾ ಎಂಬ ಪ್ರಶ್ನೆಗೆ ಅವರು ಕೊಟ್ಟದ್ದು ಅಚ್ಚರಿಯ ಉತ್ತರ. ಅದೇನದು?
 


'ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಸಾಕಷ್ಟು ಫೇಮಸ್​ ಆಗಿದ್ರು, ಜೊತೆಗೆ ಒಂದಿಷ್ಟು ಒಳ್ಳೆಯ ಹೆಸರುಗಳನ್ನೂ ಗಳಿಸಿದ್ದಾರೆ. ಫೈನಲ್​ ತನಕ ಹೋಗಿದ್ದರು. ಆದರೆ ಅವರ ಪತ್ನಿ ಮಾನಸಾ ಐದೇ ವಾರದಲ್ಲಿ ವಾಪಸ್​ ಆಗಿದ್ದಾರೆ. ಜೊತೆಗೆ ಸಾಕಷ್ಟು ಟ್ರೋಲ್​ಗೂ ಒಳಗಾಗಿದ್ದಾರೆ.  ಮಾನಸಾ ಅವರು ಪತಿ ಸಂತೋಷ್​ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದರೆ ಅವರು ಎಲಿಮಿನೇಟ್​ ಆಗಿ ಬಂದರು. ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್​ ಇನ್ಯಾರೂ ಆಗಿಲ್ಲ ಎನ್ನಬಹುದೇನೋ. 

 
ಅದೇನೇ ಇದ್ದರೂ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟು ಹೊರಕ್ಕೆ ಬಂದರು ಎಂದರೆ ಅವರಿಗೆ ಸಿಗುವಷ್ಟು ರಾಜಮರ್ಯಾದೆ, ಎಂಥ ದೊಡ್ಡ ಸಾಧನೆ ಮಾಡಿ, ದೇಶದ ಕೀರ್ತಿ ವಿಶ್ವಾದ್ಯಂತ ಹರಡಿದವರಿಗೂ  ಸಿಗುವುದಿಲ್ಲವೇನೋ! ಅದೇ ಕಾರಣಕ್ಕೆ ಈ ಮೊದಲು ತುಕಾಲಿ ಸಂತೋಷ್​ ಅವರಷ್ಟೇ ಫೇಮಸ್​  ಆಗಿದ್ದರು, ಈಗ ಅವರ ಪತ್ನಿ ಮಾನಸ ಅವರೂ ಜೊತೆಯಾಗಿದ್ದಾರೆ. ಮಾನಸಾ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಮಾಮೂಲಿನಂತೆ ಅವರಿಗೆ ಹಲವಾರು ರೀತಿಯ ಪ್ರಶ್ನೆ ಕೇಳಲಾಗಿದೆ. ಇದಾಗಲೇ ಅವರಿಗೆ ಸಾಕಷ್ಟು ಅವಕಾಶಗಳೂ ಸಿಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಒಳ್ಳೆ ಅವಕಾಶಕ್ಕೆ ಕಾಯುತ್ತಿದ್ದೀರಾ ಎನ್ನುವ ಪ್ರಶ್ನೆ ಕೇಳಲಾಗಿದೆ. ಹೊಳೆನರಸೀಪುರ ತುಕಾಲಿ  ಫ್ಯಾನ್ಸ್​ ಪೇಜ್​ನಲ್ಲಿ ಈ ವಿಡಿಯೋ ಶೇರ್​ ಆಗಿದೆ.

Tap to resize

Latest Videos

undefined

ಬಿಗ್​ಬಾಸ್​ನಲ್ಲಿ ಸಿಕ್ಕ ಪೇಮೆಂಟ್​ ಎಷ್ಟು? ಮಾಧ್ಯಮದ ಮುಂದೆ ಅಸಮಾಧಾನ ತೋಡಿಕೊಂಡ ಮಾನಸಾ!

ಈ ಪ್ರಶ್ನೆಗೆ ಮಾನಸಾ ಅವರು, ಅಯ್ಯೋ ಸಂತು ನನಗೇನಾದ್ರೂ ಎಲ್ಲಿಯೂ ಕರ್ಕೊಂಡು ಹೋಗದಿದ್ರೆ ನಾನು ದನ-ಕರು ಮೇಯಿಸಿಕೊಂಡು ಆರಾಮಾಗಿ ಊರಲ್ಲಿ ಇರ್ತಿನಿ. ಆ ಖುಷಿ ಯಾವ ಶೋಗೆ ಹೋಗುವುದರಲ್ಲಿಯೂ ಸಿಗುವುದಿಲ್ಲ. ಬಿಗ್​ಬಾಸ್​​ ಅಂತಲ್ಲ. ನನಗೆ ಇಂಥದ್ದೆಲ್ಲಾ ಇಷ್ಟವಿಲ್ಲ. ಹಳ್ಳಿ ಜೀವನವೇ ಖುಷಿ. ಮೊದಲಿನಿಂದಲೂ ನನಗೆ ಅದೇ ಇಷ್ಟ. ಈ ಹೊಸ ಜರ್ನಿ ಇಷ್ಟ ಅಂತಲ್ಲ, ಆದ್ರೆ ದನ- ಕರುಗಳನ್ನು ನೋಡಿಕೊಂಡು ಇರೋ ಸಂತೋಷ ಬೇರೆ ಕಡೆ ಸಿಗುವುದಿಲ್ಲ. ಅಲ್ಲಿಯ ಲೈಫ್ ತುಂಬಾ ಖುಷಿ ಕೊಡುತ್ತದೆ ಎಂದಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ ಸುರಿಮಳೆಯಾಗಿದ್ದು, ನಿಜಕ್ಕೂ ಹಳ್ಳಿಯಲ್ಲಿರೋ ಸುಖ ಪೇಟೆಯಲ್ಲಿ ಸಿಗುವುದಿಲ್ಲ. ಎಷ್ಟೇ ಹೆಸರು, ಖ್ಯಾತಿ ಬಂದರೂ ನಮ್ಮ ಬೇರೇ ನಮ್ಮ ಹೆಮ್ಮೆ ಎನ್ನುತ್ತಿದ್ದಾರೆ. 

ಈ ಹಿಂದೆ ಸಂದರ್ಶನವೊಂದರಲ್ಲಿ ತುಕಾಲಿ ಸಂತೋಷ್​ ಅವರು ಪತ್ನಿ ಬಗ್ಗೆ ಮಾತನಾಡುತ್ತಾ, ಇಎಂಐ ತೀರಿಸಲು ಬಿಗ್​ಬಾಸ್​ಗೆ ಹೋಗಿದ್ಲು, ಆದರೆ ಐದೇ ವಾರಕ್ಕೆ ವಾಪಸ್​ ಬಂದಳು. ಮುಂದೆ ಸಮಸ್ಯೆ ಇದದ್ದೇ ಅಲ್ವಾ ಎಂದರು ಸಂತೋಷ್​​. ಇದೇ ವೇಳೆ ತಾವು ಬಿಗ್​ಬಾಸ್​ ಒಳಗೆ ಹೋಗುವಾಗ ಸಂತೋಷ್​ ಅವರ ಸಜೆಷನ್​ ತೆಗೆದುಕೊಂಡಿರಲಿಲ್ಲ. ಅದೇ ಮಾಡಿದ ತಪ್ಪು ಎನ್ನಿಸತ್ತೆ. ಅವರ ಹಾಗೆ ನಾನು ಆಗುವುದು ಬೇಡ, ನನ್ನ ಸ್ಟೈಲ್​ನಲ್ಲಿಯೇ ನಾನು ಇರೋಣ ಅಂದುಕೊಂಡೆ. ಸಂತು ಕೂಡ ಹಾಗೇ ಹೇಳಿದ್ರು. ಆದ್ರೆ ಸಜೆಷನ್​ ತಗೋಬಿಕಿತ್ತೇನೋ ಎಂದರು. ಇದೇ ವೇಳೆ, ಬಿಗ್​ಬಾಸ್​ನಿಂದ ಬೇರೆಯವರಿಗೆ ಗೌರವ ಕೊಡಬೇಕು, ಮಾತಿನ ಮೇಲೆ ನಿಗಾ ಇಡಬೇಕು ಎನ್ನುವುದನ್ನು ಕಲಿತೆ. ಯೋಚನೆ ಮಾಡಿ ಮಾತನಾಡಬೇಕು ಎನ್ನುವುದನ್ನು ಬಿಗ್​ಬಾಸ್​ ಕಲಿಸಿತು ಎಂದರು.
 

ಇನ್‌ಸ್ಟಾಗ್ರಾಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟಕ್ಕನ ಮಗಳು ಸ್ನೇಹಾ! ಸೀರಿಯಲ್‌ ಬಿಟ್ಮೇಲೆ ನಟಿಗೆ ಇದೇನಾಯ್ತು?

click me!