ಫಸ್ಟ್‌ ನೈಟ್ ಮಂಚದ ಮೇಲೆ ಆಕಾಶ್ ಜತೆ ಮೈಮರೆತ ಪುಷ್ಪಾ; ಸಡನ್ನಾಗಿ ಆಕಾಶ್ ಮಾಡಿದ್ದು ನೋಡಿ ಶಾಕ್!

Published : Dec 04, 2023, 03:52 PM ISTUpdated : Dec 04, 2023, 04:22 PM IST
ಫಸ್ಟ್‌ ನೈಟ್ ಮಂಚದ ಮೇಲೆ ಆಕಾಶ್ ಜತೆ ಮೈಮರೆತ ಪುಷ್ಪಾ; ಸಡನ್ನಾಗಿ ಆಕಾಶ್ ಮಾಡಿದ್ದು ನೋಡಿ ಶಾಕ್!

ಸಾರಾಂಶ

'ನಾನು ನನ್ನ ತವರು ದಾಟಿ, ಈ ಮನೆಯ ಹೊಸಿಲು ದಾಟಿ, ಈಗ ಕೋಣೆಯ ಬಾಗಿಲನ್ನೂ ದಾಟಿ ನಿಮ್ಮ ಬಳಿ ಬಂದಿದ್ದೇನೆ. ನಾನು ಈಗ ನಿಮ್ಮನ್ನು ಇಷ್ಟಪಟ್ಟರೆ ನೀವು ಇದಕ್ಕೂ ಮೊದಲೇ ನನ್ನನ್ನು ಇಷ್ಟಪಟ್ಟಿದ್ದೀರಾ. ನನ್ನ ನೋಡುವ ಮೊದಲೇ ನೀವು ನನ್ನ ಹೆಸರನ್ನು ನಿಮ್ಮ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೀರಾ.

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಬೃಂದಾವನ ಸೀರಿಯಲ್‌ ಹೊಸ ಹಂತಕ್ಕೆ ಬಂದಿದೆ. ಸಡಗರ, ಭಾರೀ ಅದ್ದೂರಿತನದಿಂದ ಆಕಾಶ್-ಪುಷ್ಪಾ ಮದುವೆ ಮುಗಿದಿದೆ. ಫಸ್ಟ್‌ ನೈಟ್ (ಪ್ರಸ್ಥ)ದ ಶಾಸ್ತ್ರಕ್ಕೆ ಎಲ್ಲಾ ಸಿದ್ಧತೆ ಮಾಡಿ ನವ ವಧು-ವರರನ್ನು ಕೋಣೆಯ ಮಂಚಕ್ಕೆ ಬಿಡಲಾಗಿದೆ. ಅಲ್ಲಿ ಆಕಾಶ್ ಮಂಚದ ಮೇಲೆ ಕುಳಿತಿದ್ದರೆ ಪುಷ್ಪಾ ಪಕ್ಕದಲ್ಲೇ ನಿಂತು ಆಕಾಶ್ ಜತೆ ಮಾತನಾಡುತ್ತಿದ್ದಾಳೆ. ಆಕಾಶ್ ಆಕೆಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾನೆ, ಆದರೆ ರೆಸ್ಪಾನ್ಸ್ ಮಾಡುತ್ತಿಲ್ಲ. ಪುಷ್ಪಾ ತಾನೊಬ್ಬಳೇ ಒಂದೇ ಸವನೆ ಮಾತನಾಡುತ್ತಲೇ ಇದ್ದಾಳೆ. 

'ನಾನು ನನ್ನ ತವರು ದಾಟಿ, ಈ ಮನೆಯ ಹೊಸಿಲು ದಾಟಿ, ಈಗ ಕೋಣೆಯ ಬಾಗಿಲನ್ನೂ ದಾಟಿ ನಿಮ್ಮ ಬಳಿ ಬಂದಿದ್ದೇನೆ. ನಾನು ಈಗ ನಿಮ್ಮನ್ನು ಇಷ್ಟಪಟ್ಟರೆ ನೀವು ಇದಕ್ಕೂ ಮೊದಲೇ ನನ್ನನ್ನು ಇಷ್ಟಪಟ್ಟಿದ್ದೀರಾ. ನನ್ನ ನೋಡುವ ಮೊದಲೇ ನೀವು ನನ್ನ ಹೆಸರನ್ನು ನಿಮ್ಮ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೀರಾ. ನಿಮಗೆ ನೋವು ಕೊಡಬಾರದು ಎಂಬುದು ನನ್ನ ನಿರ್ಧಾರ. ಆದರೆ, ಹಚ್ಚೆ ಹಾಕಿಸಿಕೊಳ್ಳುವಾಗ ನೀವು ಖಂಡಿತ ನೋವು ಅನುಭವಿಸಿರ್ತೀರ ಅಲ್ವಾ? 

ಸಡನ್ನಾಗಿ ರಜನಿಕಾಂತ್‌ ಲೈಫ್ ಟರ್ನಿಂಗ್; 25 ವರ್ಷ ಓದದೇ ಇಟ್ಟಿದ್ದ ಪುಸ್ತಕದಲ್ಲಿ ಅಂಥದ್ದೇನಿತ್ತು?

ಆದ್ರೂ ಆ ನಿಮ್ಮ ನೋವು ನಂಗೆ ಖುಷಿ ಕೊಡುತ್ತೆ. ಯಾಕೆ ಗೊತ್ತಾ? ನೀವು ನನ್ನ ಹೆಸರನ್ನು ನಿಮ್ ತೋಳಿಗೆ ಹಚ್ಚೆ ಹಾಕಿಸಿಕೊಂಡ್ರೆ ನನಗೆ ಸಂತೋಷ ಆಗ್ದೇ ಇರುತ್ತಾ ಹೇಳಿ! ನಿಜವಾಗ್ಲೂ ನಾವು ಇನ್ಮುಂದೆ ಖುಷಿಖುಷಿಯಾಗಿ ಇರೋಣ. ನೀವು ನಿಜವಾಗ್ಲೂ ಗ್ರೇಟ್' ಎನ್ನುತ್ತ ಪುಷ್ಪಾ ಆಕಾಶ್ ಕುಳಿತಿದ್ದ ಮಂಚದ ಬಳಿ ನಿಧಾನಕ್ಕೆ ಬಂದು ಕುಳಿತುಕೊಳ್ಳುತ್ತಾಳೆ. ಆಗ ಆಕಾಶ್ ತಕ್ಷಣ ಎದ್ದು ಹೊರಟು ಮಂಚದ ಮೇಲಿದ್ದ ದಿಂಬು ತೆಗೆದುಕೊಂಡು ಅದನ್ನು ಕಾರ್ಪೆಟ್ ಮೇಲೆ ಹಾಕಿಕೊಂಡು ಮಲಗಿಬಿಡುತ್ತಾನೆ. ಗಾಬರಿಯಾದ ಪುಷ್ಪಾ 'ಅಯ್ಯೋ, ಇದ್ಯಾಕೆ ಹೀಗೆ ಮಾಡ್ಬಿಟ್ರಿ? ನಾನು ಏನಾದ್ರೂ ತಪ್ಪು ಮಾತಾಡಿ ಬಿಟ್ನಾ? ಎಂದು ಆಕಾಶ್‌ ಬಳಿ ಬಂದು ಪ್ರಶ್ನೆ ಮಾಡತೊಡಗುತ್ತಾಳೆ. 

ಸಂಗೀತಾಗೆ ನಮ್ಮನೆ ನಾಯಿ ಮರಿ ಎಂದ್ರು ತುಕಾಲಿ ಸಂತು; ಕಾರ್ತಿಕ್ ನೋಡಿ 'ಅಯ್ಯೋ ಪಾಪ' ಎನ್ನುತ್ತಿರುವ ನೆಟ್ಟಿಗರು

ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ 'ಬೃಂದಾವನ' ಸೀರಿಯಲ್ ಪ್ರಸಾರವಾಗುತ್ತಿದೆ. ಈ ಸೀರಿಯಲ್ಲಿ ಶುರುವಿನಲ್ಲೇ ಮದುವೆ ಸೀನ್ ಸಂಚಿಕೆಗಳು ಪ್ರಸಾರ ಆಗಿದ್ದು, ಉಳಿದ ಸೀರಿಯಲ್‌ಗಳಿಗೆ ಹೋಲಿಸಿದರೆ ವಿಭಿನ್ನ ಎನಿಸಿದೆ. ವರುಣ್ ಆರಾಧ್ಯ ಅವರು ಸೀರಿಯಲ್‌ನಲ್ಲಿ ನಾಯಕರಾಗಿ ನಟಿಸುತ್ತಿದ್ದು ಅಮೂಲ್ಯ ಭಾರದ್ವಾಜ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೀರೋ ಬದಲಾವಣೆ ಮೂಲಕ ಶುರುವಿನಲ್ಲೇ ಸಖತ್ ಸದ್ದು ಮಾಡಿದ್ದ ಈ ಸೀರಿಯಲ್ ಈಗ ನಿಧಾನವಾಗಿ ಜನಮನ್ನಣೆ ಪಡೆದುಕೊಳ್ಳುತ್ತಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?