ಸಡನ್ನಾಗಿ ರಜನಿಕಾಂತ್‌ ಲೈಫ್ ಟರ್ನಿಂಗ್; 25 ವರ್ಷ ಓದದೇ ಇಟ್ಟಿದ್ದ ಪುಸ್ತಕದಲ್ಲಿ ಅಂಥದ್ದೇನಿತ್ತು?

By Shriram BhatFirst Published Dec 4, 2023, 2:29 PM IST
Highlights

ನಟ ರಜನಿಕಾಂತ್ ಅವರು ಸಹಾಯ ಬೇಡಿ ಬಂದವರನ್ನು ಯಾವತ್ತೂ ಬರಿಗೈಲಿ ಕಳಿಸಿಲ್ಲ. ಮನೆಗೆ ಅಥವಾ ಶೂಟಿಂಗ್ ಸ್ಥಳಗಳಿಗೆ ಹೋದಾಗ ಯಾರಾದರೂ ಸಹಾಯ ಬೇಡಿದರೆ ನಟ ರಜನಿಕಾಂತ್ ಅವರು ಅವರನ್ನು ಅನುಕಂಪದಿಂದ ನೋಡಿ ತಮ್ಮಿಂದ ಸಾಧ್ಯವಾದ ಸಹಾಯ ಮಾಡುತ್ತಾರೆ ಎನ್ನಲಾಗುತ್ತದೆ. 

ಭಾರತದ ಸೂಪರ್ ಸ್ಟಾರ್, ಲೆಜೆಂಡ್ ನಟ ರಜನಿಕಾಂತ್ ಅವರು ತಮ್ಮ ಜೀವನವನ್ನೇ ಬದಲಾಯಿಸಿದ ಪುಸ್ತಕವೊಂದರ ಬಗ್ಗೆ ಹೇಳಿದ್ದಾರೆ. ನಟ ರಜನಿಕಾಂತ್ ಆಧ್ಯಾತ್ಮದ ದಾರಿಯಲ್ಲಿ ಹೋಗುತ್ತಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು. ಅವರು ವರ್ಷದಲ್ಲಿ 15 ದಿನಗಳು ಅಥವಾ ತಿಂಗಳುಗಳನ್ನು ಹಿಮಾಲಯದ ತಪ್ಪಲಿನಲ್ಲಿ ಕಳೆಯುತ್ತಾರೆ. ಅಲ್ಲಿ ಅವರು ಆಧ್ಯಾತ್ಮದ ಸಾಧನೆ ಮಾಡುತ್ತಾರೆ ಎನ್ನುತ್ತಾರೆ ಅವರ ಆಪ್ತರು. ನಟ ರಜನಿಕಾಂತ್ ಅಲ್ಲೇನು ಮಾಡುತ್ತಾರೋ ಏನೋ, ಆದರೆ ಸಮಾಜಕ್ಕೆ ಅವರು ಕೊಟ್ಟ ಕೊಡುಗೆಯಂತೂ ಅಪಾರ. 

ನಟ ರಜನಿಕಾಂತ್ ಅವರು ಸಹಾಯ ಬೇಡಿ ಬಂದವರನ್ನು ಯಾವತ್ತೂ ಬರಿಗೈಲಿ ಕಳಿಸಿಲ್ಲ ಎನ್ನಲಾಗಿದೆ. ಅವರ ಮನೆಯ ಬಳಿ ಇರುವ ಜನರಿರಬಹುದು, ಹೊರಗಡೆ ಹೋದಾಗ ಸಿಕ್ಕ ಭಿಕ್ಷಕರು ಇರಬಹುದು, ಮನೆಗೆ ಅಥವಾ ಶೂಟಿಂಗ್ ಸ್ಥಳಗಳಿಗೆ ಹೋದಾಗ ಯಾರಾದರೂ ಸಹಾಯ ಬೇಡಿದರೆ ನಟ ರಜನಿಕಾಂತ್ ಅವರು ಅವರನ್ನು ಅನುಕಂಪದಿಂದ ನೋಡಿ ತಮ್ಮಿಂದ ಸಾಧ್ಯವಾದ ಸಹಾಯ ಮಾಡುತ್ತಾರೆ ಎನ್ನಲಾಗುತ್ತದೆ. ಅವರಿಂದ ಸಹಾಯ ಪಡೆದುಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡ ಹಲವು ಜನರು ಅವಕಾಶ ಸಿಕ್ಕಾಗ ಈ ಬಗ್ಗೆ ಹೇಳಿದ್ದಾರೆ. ಆದ್ದರಿಂದ ರಜನಿಕಾಂತ್ ಮಾನವೀಯತೆ ಮತ್ತು ದಾನದ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡುತ್ತಲೇ ಇರುತ್ತವೆ. 

Latest Videos

ಸಂತೋಷಂ ಅವಾರ್ಡ್ಸ್ ಅವಾಂತರ; ಬೆಂಗಳೂರಿಗೆ ವಾಪಸ್ ಹೊರಟ ಸ್ಯಾಂಡಲ್‌ವುಡ್ ತಾರೆಯರು

ಸ್ವತಃ ನಟ ರಜನಿಕಾಂತ್ ತಮ್ಮ ಜೀವನದಲ್ಲಿ 'ಟರ್ನಿಂಗ್' ಪಾಯಿಂಟ್ ಬಂದಿದ್ದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ. 1978 ನಲ್ಲಿ ಈ 'ಆಟೋಬಯಾಗ್ರಫಿ ಆಫ್ ಅ ಯೋಗಿ (Autobiography of a Yogi)'ಪುಸ್ತಕ ಸಿಕ್ಕಿತು. ಆದರೆ ನಾನು ನನ್ನ ವೃತ್ತಿಜೀವನದಲ್ಲಿ ಬಹಳಷ್ಟು ಬ್ಯುಸಿ ಇದ್ದ ಕಾರಣಕ್ಕೆ ಅದನ್ನು ಹಾಗೇ ಇಡಬೇಕಾಯ್ತು. ಆದರೆ 25 ವರ್ಷಗಳ ಬಳಿಕ ನಾನು ಅದನ್ನು ಓದತೊಡಗಿದೆ. ನನಗೆ ಈ ಪುಸ್ತಕವನ್ನು ಓದಿ ಮುಗಿಸದೇ ಕೆಳಗೆ ಇಡಲು ಅಸಾಧ್ಯವಾಯ್ತು. ಪರಮಹಂಸ ಯೋಗಾನಂದ, ಮಹಾವತಾರ್ ಬಾಬಾಜಿ ಅವರ ಸಾಧನೆಗಳನ್ನೆಲ್ಲ ನೋಡಿ ನಾನು ನಿಜವಾಗಿಯೂ ಅಚ್ಚರಿಗೊಂಡೆ.

ಯಾರದೋ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ರಶ್ಮಿಕಾ ಮಂದಣ್ಣ ಉಪದೇಶ ಕೇಳಿ ನೆಟ್ಟಿಗರು ಸುಸ್ತೋ ಸುಸ್ತು!

ನಾನು ಈ ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದಾಗ ನನಗೆ ಹೊಸದೊಂದು ಲೋಕವೇ ನನ್ನೆದುರು ತೆರೆದುಕೊಂಡಂತೆ ಅನಿಸಿತು. ಬಳಿಕ ನಾನು ಆಧ್ಯಾತ್ಮದ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟೆ. ಪ್ರಾಣಾಯಾಮ, ಕ್ರಿಯಾಯೋಗ ಮುಂತಾದವುಗಳನ್ನು ಕಲಿತುಕೊಂಡೆ. ನನ್ನ ಅದೃಷ್ಟಕ್ಕೆ ಒಳ್ಳೆಯ ಗುರುಗಳಿಂದ ನನಗೆ ಕ್ರಿಯಾಯೋಗಕ್ಕೆ 'ಇನಿಶಿಯೇಶನ್ (ಉಪದೇಶ) ಕೂಡ ಸಿಕ್ಕು, ನಾನು ಸ್ಪಿರಿಚ್ಯುವಲ್ ಜರ್ನಿ ಪ್ರಾರಂಭಿಸಲು ಸಹಾಯ ದೊರಕಿತು. ಅಂದಿನಿಂದ ನಾನು ನನ್ನ ಸ್ಪಿರಿಚ್ಯುವಲ್ ಪ್ರಯಾಣವನ್ನು ಮಾಡುತ್ತಲೇ ಇದ್ದೇನೆ' ಎಂದಿದ್ದಾರೆ ನಟ ರಜನಿಕಾಂತ್. 

click me!