ಬೆಳೆದ ಮಗನಿಗೆ ತಾಯಿ ಹೊಡೆಯೋದು ಅವಮಾನ, ಬೆಳೆದ ಹೆಣ್ಣಿಗೆ ಗಂಡ ಹೊಡೆಯೋದು ಸರೀನಾ? ಕುಸುಮಾ ಪ್ರಶ್ನೆಗೆ ಗಂಡಸರೇ ಉತ್ತರ ಕೊಡಿ!

By Suvarna News  |  First Published Dec 4, 2023, 2:03 PM IST

ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ಲಿನಲ್ಲಿ ಕುಸುಮಾ ಗಂಡಸರು ಮುಟ್‌ನೋಡ್ಕೊಳ್ಳೋ ಥರದ ಮಾತು ಹೇಳಿದ್ದಾಳೆ.


ಈ ಸಮಾಜದಲ್ಲಿ ಮೇಲ್ ಇಗೋ ಯಾವ ಲೆವೆಲ್‌ನಲ್ಲಿದೆ ಅನ್ನೋದನ್ನು ಸೀರಿಯಲ್ ಒಂದು ಮನ ಮುಟ್ಟೋ ಹಾಗೆ ಹೇಳೋ ಪ್ರಯತ್ನ ಮಾಡಿದೆ. 'ಭಾಗ್ಯಲಕ್ಷ್ಮೀ' ಸೀರಿಯಲ್ಲಿನಲ್ಲಿ ಮೇಲ್ ಇಗೋ ಯಾವ ರೀತಿ ಕೆಲ್ಸ ಮಾಡುತ್ತೆ ಅನ್ನೋದನ್ನು ಸಾಕ್ಷಿ ಸಮೇತ ತೋರಿಸೋ ಪ್ರಯತ್ನ ನಡೆದಿದೆ. ಈ ಸೀರಿಯಲ್‌ನ ನೆಗೆಟಿವ್ ಶೇಡ್ ಇರೋ ಹೀರೋ ಕಂ ವಿಲನ್ ಪಾತ್ರಧಾರಿ ತಾಂಡವ್ ಮುಗ್ಧ ಹೆಂಡತಿ ಕೆನ್ನೆಗೆ ಬಾರಿಸಿದ್ದಾನೆ. ಹೆಂಡತಿಗೆ ಹೊಡೆದ ಕೈಗೆ ಅವನ ತಾಯಿ ಬರೆ ಇಟ್ಟಿದ್ದಾಳೆ. ತಾಯಿಯ ಈ ವರ್ತನೆ ನೋಡಿ ತಾಂಡವ್, 'ಬೆಳೆದ ಮಗನಿಗೆ ಹೊಡೆಯೋದಕ್ಕೆ ನಾಚಿಕೆ ಆಗಲ್ವಾ?' ಅನ್ನೋ ರೀತಿ ಮಾತಾಡಿದ್ದಾನೆ. 'ನಿನ್ನ ಹೆಂಡತಿ ಚಿಕ್ಕ ಹುಡುಗಿ ಅಲ್ಲ ತಾನೇ? ಅವಳಿಗೆ ಮೂವತ್ತಾರು ವರ್ಷ ಆಗಿದೆ. ಅಷ್ಟು ದೊಡ್ಡ ಹೆಣ್ಣು ಮಗಳಿಗೆ ನೀನು ಹೊಡೀಬಹುದಾ?' ಅನ್ನೋ ಮಾತು ಕೇಳಿದ್ದಾಳೆ. ಅದಕ್ಕೆ ತಾಂಡವ್, 'ನಾನು ಅವಳಿಗೆ ತಾಳಿ ಕಟ್ಟಿದ ಗಂಡ, ನನಗೆ ಅಧಿಕಾರ ಇದೆ' ಅಂತ ಧಿಮಾಕಿನ ಮಾತು ಹೇಳಿದ್ದಾನೆ.

ಹೆಣ್ಣನ್ನ ದುರ್ಗೆ, ಸರಸ್ವತಿ ಅಂತ ಪೂಜಿಸೋ ಮನೆ ನಮ್ಮದು. ಎಂದೂ ಯಾವತ್ತೂ ಹೆಣ್ಣನ್ನು ಅಗೌರವಿಸೋದನ್ನು ಮಗನಿಗೆ ಕಲಿಸಿಲ್ಲ. ಆದರೂ ತನ್ನ ಮಗ ಹೆಣ್ಣು ಮಗಳ ಮೇಲೆ ಹೇಗೆ ಕೈ ಮಾಡಿದ ಅನ್ನೋ ನೋವು, ವಿಷಾದದಲ್ಲಿ ಕುಸುಮಾ ಆತನನ್ನು ಮನೆಯಿಂದ ಹೊರ ಹಾಕ್ತಾನೆ. ಈ ಪರಮ ಸಾಧ್ವಿ ಭಾಗ್ಯನೋ ಅತ್ತೆ ಅಷ್ಟೆಲ್ಲ ಸ್ವಾಭಿಮಾನ ಮಾತು ಹೇಳಿದ್ದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ತಾಂಡವ್‌ನನ್ನು ಹುಡುಕಿಕೊಂಡು ಹೋಗಿದ್ದಾಳೆ. ಕಾರಿನ ಬಳಿ ಹೋಗಿ ಮಾತನಾಡುತ್ತಿದ್ದಂತೆ ತಾಂಡವ್‌, ಜೇಬಿನಿಂದ ದುಡ್ಡು ತೆಗೆದು ಭಾಗ್ಯಾಗೆ ಕೊಡುತ್ತಾನೆ. ನೀನು ಬಂದಿದ್ದು ಇದಕ್ಕೆ ತಾನೇ? ತೆಗೆದುಕೊಂಡು ಹೋಗು, ಇನ್ಮುಂದೆ ದುಡ್ಡು ಕೇಳಲು ಇಲ್ಲಿಗೆ ಬರಬೇಡ. ತಿಂಗಳು ತಿಂಗಳು ಇಂತಿಷ್ಟು ಕಳಿಸುತ್ತೇನೆ. ಆ ಮನೆ ನನ್ನದು ಅದನ್ನು ನಿಮ್ಮ ಅತ್ತೆಗೆ ದಾನ ಮಾಡಿದ್ದೇನೆ. ಅತ್ತೆ ಸೊಸೆ ಇಬ್ಬರೂ ರಾಜ್ಯಭಾರ ಮಾಡಿ ಎನ್ನುತ್ತಾನೆ. ತಾಂಡವ್‌ ದುರಹಂಕಾರದ ವರ್ತನೆ ಭಾಗ್ಯಾಳಿಗೆ ನೋವುಂಟು ಮಾಡುತ್ತದೆ. ದಯವಿಟ್ಟು ದುಡ್ಡಿನ ವಿಚಾರ ಮಾತನಾಡಬೇಡಿ. ನಾನು ದುಡ್ಡಿಗಾಗಿ ಇಲ್ಲಿಗೆ ಬರಲಿಲ್ಲ ದಯವಿಟ್ಟು ಮನೆಗೆ ಬನ್ನಿ ಎಂದು ಮನವಿ ಮಾಡುತ್ತಾಳೆ.‌

Tap to resize

Latest Videos

ಭಾಗ್ಯಾ ಎಷ್ಟೇ ಮನವಿ ಮಾಡಿದರೂ ತಾಂಡವ್‌, ಅದನ್ನು ಕೇರ್‌ ಮಾಡದ ಕಟುಕ. ಆ ಮನೆಗೂ ನನಗೂ ಸಂಬಂಧವಿಲ್ಲ, ನಾನು ಬರುವುದಿಲ್ಲ ಎನ್ನುತ್ತಾನೆ. ನೀವು ಮನೆಗೆ ಬರಬೇಕೆಂದರೆ ನಾನು ಏನು ಮಾಡಬೇಕು ಹೇಳಿ ಎಂದು ಭಾಗ್ಯಾ ಕೇಳುತ್ತಾಳೆ. ಹೌದಾ ಹಾಗಿದ್ರೆ ನನ್ನ ಕಾಲು ಹಿಡಿದು ಕ್ಷಮೆ ಕೇಳು ಎನ್ನುತ್ತಾನೆ. ಭಾಗ್ಯಾ ತಕ್ಷಣವೇ ಕಾಲು ಹಿಡಿದು, ನನ್ನನ್ನು ಕ್ಷಮಿಸಿ, ದಯವಿಟ್ಟು ಮನೆಗೆ ಬನ್ನಿ ಎನ್ನುತ್ತಾಳೆ. ಆದರೆ ದುರಂಹಕಾರಿ ತಾಂಡವ್‌ ಭಾಗ್ಯಾಳನ್ನು ಒದ್ದು ಬರುವುದಿಲ್ಲ ಹೋಗು ಎನ್ನುತ್ತಾನೆ. ತಾಂಡವ್‌ ಅತಿರೇಕದ ವರ್ತನೆ ಭಾಗ್ಯಾ ಮನಸ್ಸಿಗೆ ಬಹಳ ನಾಟುತ್ತದೆ.

ಅಮೃತಧಾರೆ ಗೌತಮ್‌ ರಿಯಲ್‌ ಅತ್ತೆ ಭಾವಿ ಅಳಿಯನ ಬಗ್ಗೆ ಕಂಡಿದ್ದ ಕನಸೇನು? ಆಗಿದ್ದೇನು?

ನಿಮ್ಮ ಮೇಲಿನ ಪ್ರೀತಿಯನ್ನು ನಾನು ಪದೇ ಪದೇ ಸಾಬೀತು ಮಾಡಲು ಸಾಧ್ಯವಿಲ್ಲ. ನಿಜಕ್ಕೂ ನನಗೆ, ಅತ್ತೆಗೆ ನಿಮ್ಮ ಮೇಲೆ ಪ್ರೀತಿ ಇರುವುದು ನಿಜವಾದರೆ ನೀವೇ ಮನೆಗೆ ವಾಪಸ್‌ ಬರುತ್ತೀರಿ, ಹಾಗೇ ಇನ್ಮುಂದೆ ನಾನು ನಿನ್ನನ್ನು ಹುಡುಕಿ ಬರುವುದಿಲ್ಲ. ನಿಮ್ಮ ಬಳಿ ದುಡ್ಡನ್ನೂ ಕೇಳುವುದಿಲ್ಲ. ಅತ್ತೆ, ಮನೆಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಭಾಗ್ಯಾ ತಾಂಡವ್‌ ಮುಂದೆ ಶಪಥ ಮಾಡುತ್ತಾಳೆ. ಆದರೆ ಮದವೇರಿದ ತಾಂಡವ್‌ಗೆ ಭಾಗ್ಯಾ ಹೇಳುವ ಯಾವ ಮಾತೂ ಕೇಳುವುದಿಲ್ಲ.

ಭಾಗ್ಯಾ ತಾಂಡವ್ ಹುಡುಕಿಕೊಂಡು ಹೋಗಿದ್ದು ಕಂಡು ಕುಸುಮಾ ರೊಚ್ಚಿಗೆದ್ದಿದ್ದಾಳೆ. 'ಹೆಣ್ಣಿಗೆ ಹೊಡೆದ ಕೈಗೆ ತಾಯಿ ಬರೆ ಹಾಕಿದ್ದಾಳೆ ಅಂದರೆ ನಾನು ಮಾಡಿದ್ದು ಸರಿ ಇಲ್ಲ ಅನ್ನೋದು ಅವನಿಗೆ ಅರ್ಥ ಆಗಬೇಕಿತ್ತು. ಆದರೆ ಅವನು ಅದನ್ನು ಅವಮಾನ ಅಂತ ಭಾವಿಸಿದ್ದಾನೆ ಅಂದರೆ ಅದು ತಾನು ಗಂಡಸು, ಬೇಕಿದ್ದು ಮಾಡಬಹುದು ಅನ್ನೋ ಇಗೋ. ಈ ಥರದವನ ಬಳಿ ನನ್ನ ಸೊಸೆಯಾಗಿ ನೀನು ಹೋಗಿ ಮನೆಗೆ ವಾಪಾಸ್ ಬರಲು ರಿಕ್ವೆಸ್ಟ್ ಮಾಡಿದೆಯಾ?' ಅಂತ ಕುಸುಮಾ ಪ್ರಶ್ನೆ ಮಾಡೋದು ಗಂಡಸರು ಮುಟ್ಟಿಕೊಂಡು ನೋಡೋ ಥರ ಇದೆ. ಕುಸುಮಾ ಕೇಳೋ ಪ್ರಶ್ನೆಗೆ ದುರಹಂಕಾರಿ ಗಂಡಸರ ಬಳಿ ಉತ್ತರ ಇದೆಯಾ?

ಸುಖ ಸಂಸಾರಕ್ಕೆ 12 ಸೂತ್ರ ಯಾಕಪ್ಪ? ಇದೊಂದೇ ಸೂತ್ರ ಪಾಲಿಸಿ ನೋಡಿ, ಲೈಫ್​ ಸೂಪರ್​ ಎಂದ ಅಮೃತಧಾರೆ ಗೌತಮ್!
 

click me!