ಊಟಿಯಲ್ಲಿ, ಸೃಜನ್​ ಲೋಕೇಶ್​ ಮನೆಯಲ್ಲಿ... ಭೂತ ಕಂಡದ್ದನ್ನು ತಿಳಿಸಿದ ಪ್ರಿಯಾಂಕಾ ಉಪೇಂದ್ರ

Published : May 04, 2025, 03:02 PM ISTUpdated : May 05, 2025, 11:02 AM IST
ಊಟಿಯಲ್ಲಿ, ಸೃಜನ್​ ಲೋಕೇಶ್​ ಮನೆಯಲ್ಲಿ... ಭೂತ ಕಂಡದ್ದನ್ನು ತಿಳಿಸಿದ ಪ್ರಿಯಾಂಕಾ ಉಪೇಂದ್ರ

ಸಾರಾಂಶ

ಭೂತಪ್ರೇತಗಳ ಅಸ್ತಿತ್ವದ ಬಗ್ಗೆ ಚರ್ಚೆ ಸಾಮಾನ್ಯ. ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಊಟಿಯಲ್ಲಿ ನೆರಳಿನ ಆಕಾರ ಕಂಡು ಭಯಭೀತರಾದ ಘಟನೆ, ಸೃಜನ್ ಮನೆಯಲ್ಲಿ ಕಂಡ ಅನುಭವವನ್ನು ತಮಾಷೆಯಾಗಿ ನಿರೂಪಿಸಿದ್ದಾರೆ. ಮುಖ ಗುರುತಿಸದ ಫೋನ್ ಬಗ್ಗೆಯೂ ಉಪೇಂದ್ರ ಹೇಳಿದ್ದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಪ್ರಿಯಾಂಕಾ ಅವರ ನೇರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇದನ್ನು ನಂಬಲಿ ಬಿಡಲಿ ಇಂಥ ಸೀರಿಯಲ್​ಗಳು, ಸಿನಿಮಾಗಳು ಬಂದರೆ ಅದನ್ನು ದೊಡ್ಡ ಪ್ರಮಾಣದ ಜನರು ನೋಡುತ್ತಾರೆ ಎನ್ನುವುದು ಸುಳ್ಳಲ್ಲ. ಒಂಥರಾ ಥ್ರಿಲ್​ ಎನ್ನುವುದಕ್ಕಾಗಿಯಾದರೂ ಈ ಸಿನಿಮಾ ನೋಡುವವರು ಇರುವುದರಿಂದಲೇ ಇದಾಗಲೇ ಹಲವಾರು ಸಿನಿಮಾಗಳು ಆತ್ಮ, ಭೂತ, ಪ್ರೇತಗಳನ್ನು ಮುಂದಾಸಿಕೊಂಡೇ ಬಂದಿವೆ.

ಅದರಲ್ಲಿ ಒಂದು, ರಿಯಲ್‌ ಸ್ಟಾರ್‌ ಉಪೇಂದ್ರ ಅವರು ನಿರ್ದೇಶಿಸಿದ್ದ ಶ್‌ ಸಿನಿಮಾ ಹಾಗೂ ಖುದ್ದು ಪ್ರಿಯಾಂಕಾ ಅವರ ಮಮ್ಮಿ ಚಿತ್ರ. ಹೀಗೆ ಕೆಲವು ಭೂತದ ಚಿತ್ರಗಳಲ್ಲಿಯೇ ಪ್ರಿಯಾಂಕಾ ಉಪೇಂದ್ರ ಫೇಮಸ್​  ಆಗಿದ್ದಾರೆ. ಭೂತ, ಆತ್ಮದ ಚಿತ್ರಗಳನ್ನು ಮಾಡುವ ಸಮಯದಲ್ಲಿ, ಕೆಲವು ನಟರಿಗೆ ಕೆಲವೊಂದು ರೀತಿಯ ವಿಚಿತ್ರ ಅನುಭವಗಳು ಆಗುವುದು ಉಂಟು. ಇದಾಗಲೇ ಕೆಲವರು ಇದರ ಬಗ್ಗೆ ಮಾತನಾಡಿದ್ದಾರೆ. ಇದೀಗ ಅದೇ ಅನುಭವವನ್ನು ನಟಿ ಪ್ರಿಯಾಂಕಾ ಉಪೇಂದ್ರ ಅವರು ಕಲರ್ಸ್​ ಕನ್ನಡದ ಮಜಾ ಟಾಕೀಸ್​ ವೇದಿಕೆ ಮೇಲೆ ತೆರೆದಿಟ್ಟಿದ್ದಾರೆ. ನೀವು ಹಲವು ಭೂತದ ಸಿನಿಮಾ ಮಾಡಿದ್ದೀರಿ ನೀವು ಭೂತನ್ನಾ ನೋಡಿದ್ದೀರಾ ಎನ್ನುವ ಪ್ರಶ್ನೆಗೆ ಪ್ರಿಯಾಂಕಾ ಅವರು, ಭೂತವನ್ನು ನೋಡಿಲ್ಲ. ಆದರೆ ಅನುಭವ ಆಗಿತ್ತು ಎಂದಿದ್ದಾರೆ. ಊಟಿಯಲ್ಲಿ ಶೂಟಿಂಗ್​ ಮಾಡುವ ಸಮಯದಲ್ಲಿ  ಒಂದು ನೆರಳಿನ ಆಕಾರ ಕಾಣಿಸಿಕೊಂಡಿತ್ತು ಎಂದು ತಾವು ಭಯಪಟ್ಟುಕೊಂಡು ಭೂತದ ಅನುಭವ ಮಾಡಿಕೊಂಡಿರುವ ಘಟನೆ ವಿವರಿಸಿದ್ದಾರೆ.

ಕಾರು ಅಪಘಾತ ಮಾಡಿ ಗುದ್ದಿದ್ದು ನಟಿ ಹರಿಣಿ! ವಿಷ್ಯ ಕೇಳಿ ಪ್ರಿಯಾಂಕಾ ಉಪೇಂದ್ರ ಶಾಕ್​...​
 
ಇನ್ನೊಮ್ಮೆ ಭೂತ ನೋಡಿದ್ದರ ಬಗ್ಗೆಯೂ ಹೇಳಿದ್ದಾರೆ. ಅದು ಖುದ್ದು ಸೃಜನ್​  ಲೋಕೇಶ್​ ಅವರ ಮನೆಯಲ್ಲಿಯೇ ಎಂದಿದ್ದಾರೆ. ಆಗ ಸೃಜನ್​ ಅವರು ಶಾಕ್​  ಆದಾಗ, ಹೌದು. ನಿಮ್ಮ ಮನೆಗೆ ಬಂದಾಗ ನಿಮ್ಮನ್ನು ವಿತೌಟ್​  ಮೇಕಪ್​  ನೋಡಿದ್ದೆನಲ್ಲ, ಆಗ... ಎಂದು ತಮಾಷೆ  ಮಾಡಿದಾಗ ಸೃಜನ್​ ಲೋಕೇಶ್​ ಸುಸ್ತಾದರು. ಅಲ್ಲಿದ್ದವರೆಲ್ಲಾ ಬಿದ್ದೂ ಬಿದ್ದೂ ನಕ್ಕರು. ಆಗ ಸೃಜನ್​ ಅವರು ತೀರ್ಪುಗಾರರಾಗಿರುವ    ಯೋಗರಾಜ್​ ಭಟ್​ ಅವರ ಕಡೆಗೆ ತಿರುಗಿದರು. ಆಗ ಭಟ್ಟರು, ನಾನು ಹೇಳಿದ್ದಲ್ಲ, ಮೇಡಂ ಹತ್ರ ನೋಡು, ನನ್ನತ್ರ ಯಾಕೆ ನೋಡ್ತಿಯಾ ಕೇಳಿದಾಗ, ಸೃಜನ್​ ಅವರು ಅಲ್ಲ ನೀವು ತುಂಬಾ ಸಲ ನನ್ನನ್ನು ಮೇಕಪ್​ ಇಲ್ಲದೇ ನೋಡಿದ್ರಲ್ಲಾ ಅದಕ್ಕೇ ಎಂದು ತಮಾಷೆ ಮಾಡಿದರು.

ಇದೇ ವೇಳೆ ಇನ್ನೊಂದು ಗುಟ್ಟನ್ನು ಪ್ರಿಯಾಂಕಾ ಉಪೇಂದ್ರೆ  ತೆರೆದಿಟ್ಟರು. ಎಷ್ಟೋ ಸಲ, ನನ್ನ ಫೋನ್​ ಮುಖವನ್ನೇ ರೆಕಗ್ನೈಸ್​ ಮಾಡಲ್ಲ. ಅದಕ್ಕೇ ಉಪೇಂದ್ರ ಯಾವಾಗ್ಲೂ ಒಂದೋ ಮೇಕಪ್​ ಇಲ್ದೇ ಅದನ್ನು ಫೀಡ್​ ಮಾಡು, ಇಲ್ಲವೇ ಮೇಕಪ್​  ಮಾಡಿಕೊಂಡು ಮಾಡಿಡು. ಹಾಗೊಮ್ಮೆ ಹೀಗೊಮ್ಮೆ ಮಾಡಿದ್ರೆ ಅದು ಮುಖ ಹೇಗೆ ರೆಕಗ್ನೈಸ್​ ಮಾಡತ್ತೆ ಎಂದಿದ್ದರು. ಅದಕ್ಕೇ ಇದು ಕೂಡ ನೆನಪಿಗೆ ಬಂತು ಎಂದು ತಮಾಷೆ ಮಾಡಿದ್ದಾರೆ. ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ನೆಟ್ಟಿಗರು ಪ್ರಿಯಾಂಕಾ ಅವರು ಮಾಡುವ ತಮಾಷೆಗೆ ಭೇಷ್​ ಎನ್ನುತ್ತಿದ್ದಾರೆ. ಎಷ್ಟೊಂದು ಫ್ರ್ಯಾಂಕ್​ ಆಗಿ ಎಲ್ಲ ವಿಷಯ ತಿಳಿಸಿದರು ಎಂದಿದ್ದಾರೆ. 

ಅರಿಯದೇ ಭೂತ ಬಂಗಲೆಯೊಳಗೆ ಕಾಲಿಟ್ಟ ಸುಧಾರಾಣಿ... ಮುಂದಾಗಿದ್ದು ಘೋರ ದುರಂತ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಧ್ರುವಂತ್‌ಗೆ ಸವಾಲು ಹಾಕಿದ ರಕ್ಷಿತಾ ಶೆಟ್ಟಿ; ನಗೋದಲ್ಲ, ಆಕೆ ಮರಿ ರಾಕ್ಷಸಿ ಎಂದ ಫ್ಯಾನ್ಸ್
ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!