ಕಾರು ಅಪಘಾತ ಮಾಡಿ ಗುದ್ದಿದ್ದು ನಟಿ ಹರಿಣಿ! ವಿಷ್ಯ ಕೇಳಿ ಪ್ರಿಯಾಂಕಾ ಉಪೇಂದ್ರ ಶಾಕ್​...​

Published : May 04, 2025, 01:34 PM ISTUpdated : May 05, 2025, 11:06 AM IST
ಕಾರು ಅಪಘಾತ ಮಾಡಿ ಗುದ್ದಿದ್ದು ನಟಿ ಹರಿಣಿ! ವಿಷ್ಯ ಕೇಳಿ ಪ್ರಿಯಾಂಕಾ ಉಪೇಂದ್ರ ಶಾಕ್​...​

ಸಾರಾಂಶ

ಹರಿಣಿ ಕಾರು ಕಲಿಯುವಾಗ ಉಪೇಂದ್ರ ಮನೆಯ ಕುಂಡಗಳಿಗೆ ಗುದ್ದಿ ಹಾಳುಗೆಡವಿದ್ದ ಘಟನೆಯನ್ನು ಮಜಾ ಟಾಕೀಸ್‌ನಲ್ಲಿ ಬಹಿರಂಗಪಡಿಸಿದರು. ಉಪೇಂದ್ರ ಕಾರು ತಳ್ಳಲು ಸಹಾಯ ಮಾಡಿದ್ದರೆಂದು ಹೇಳಿದರು. ಪ್ರಿಯಾಂಕಾ ಉಪೇಂದ್ರ ಈ ಘಟನೆಗೆ ಆಶ್ಚರ್ಯ ವ್ಯಕ್ತಪಡಿಸಿದರೂ, ಅದು ತಮಾಷೆಯ ನಾಟಕವಾಗಿತ್ತು.

ಸ್ಯಾಂಡಲ್​ವುಡ್​ ಸ್ಟಾರ್​ ಉಪೇಂದ್ರ ಅವರ ಮನೆಯ ಕಾಂಪೌಂಡ್​ಗೆ ಗುದ್ದಿ ಅಲ್ಲಿದ್ದ ಕುಂಡಗಳನ್ನು ಹಾಳು ಮಾಡಿದ್ದು, ನಟಿ ಹರಿಣಿ ಎನ್ನುವ ಶಾಕಿಂಗ್​ ವಿಷ್ಯವೊಂದು  ಕಲರ್ಸ್​ ಕನ್ನಡದ ಮಜಾ ಟಾಕೀಸ್​ ವೇದಿಕೆ ಮೇಲೆ ರಿವೀಲ್​ ಆಗಿದ್ದು, ಇದನ್ನು ಕೇಳಿ ಪ್ರಿಯಾಂಕಾ ಉಪೇಂದ್ರ ಶಾಕ್​ ಆಗಿದ್ದಾರೆ. ಈ ಬಾರಿಗೆ ಮಜಾ ಟಾಕೀಸ್​ಗೆ ನಟಿಯರಾದ ಪ್ರಿಯಾಂಕಾ ಉಪೇಂದ್ರ, ಹರಿಣಿ ಸೇರಿದಂತೆ ಕೆಲವು ನಟ-ನಟಿಯರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ತಾವು ಕಾರು ಕಲಿಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಹರಿಣಿ, ಅಂದು ನಡೆದ ಘಟನೆಯನ್ನು ವಿವರಿಸುತ್ತಾ, ಅಪಘಾತ ಮಾಡಿದ್ದನ್ನು ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಪ್ರಿಯಾಂಕಾ ಹಾಗಿದ್ರೆ ಅಂದು ಅಪಘಾತ ಮಾಡಿದ್ದು ನೀವಾ ಎಂದು ಶಾಕ್​ ಆಗಿ ಕೇಳಿದಾಗ, ಹರಿಣಿ ಅವರು ಹೌದು, ಗೊತ್ತಾಗೋಯ್ತಾ ಎಂದಿದ್ದಾರೆ.

ಅಂದು ಹೊಸದಾಗಿ ಕಾರು ಕಲಿಯುತ್ತಿದ್ದರಂತೆ ನಟಿ ಹರಿಣಿ. ಬೆಂಗಳೂರಿನ ಸದಾಶಿವನಗರದ ಬಳಿ ಮುಂದೆ ದೊಡ್ಡದೊಂದು ಕಾರು ಬಂದಾಗ, ಭಯಪಟ್ಟು ಆಕ್ಸಿಲರೇಟರ್​ ತಿರುಗಿಸಿಬಿಟ್ಟೆ. ಅಲ್ಲಿಯೇ ಇದ್ದ ಮನೆಯೊಂದರ ಎದುರಿಗೆ ಇದ್ದ ಕುಂಡಗೆಳೆಲ್ಲಾ ಪುಡಿಪುಡಿಯಾದವು. ಕೊನೆಗೆ ನೋಡಿದ್ರೆ ಸೌಂಡ್​ ಕೇಳಿ ಮೇಲಿನಿಂದ ಉಪೇಂದ್ರ ಬಂದರು. ಅದು ಉಪೇಂದ್ರ ಅವರ ಮನೆಯೆಂದು ಆಗ ಗೊತ್ತಾಯ್ತು. ನನಗೆ ತುಂಬಾ ಭಯವಾಗಿತ್ತು. ಆಗ ಉಪೇಂದ್ರ ಅವರು ನನ್ನನ್ನು ನೋಡಿ, ಏನ್ರೀ ನೀವಾ? ಕಾರನ್ನು ಇಲ್ಲೆಲ್ಲಾ ಬಂದು ಕಲೀತಾರಾ? ಯಾವುದಾದ್ರೂ ಗ್ರೌಂಡ್​ಗೆ ಹೋಗಬಾರದಾ ಎಂದು ಕೇಳಿದ್ರು. ಕೊನೆಗೆ ಉಪೇಂದ್ರ, ಅವರ  ಮಗ, ನನ್ನ ಮಗ ಎಲ್ಲಾ ಸೇರಿ ಕಾರನ್ನು ತಳ್ಳಿಕೊಂಡು ಹೊರಕ್ಕೆ ತೆಗೆದರು ಎಂದು ವಿವರಿಸಿದ್ದಾರೆ. ಅಷ್ಟಕ್ಕೂ ಈ ಘಟನೆಯ ಬಗ್ಗೆ ಮೊದಲೇ ಪ್ರಿಯಾಂಕಾ ಅವರಿಗೆ ತಿಳಿದೇ  ಇರುತ್ತದೆ. ಆದರೂ ತಮಾಷೆಯಾಗಿ ವೇದಿಕೆ ಮೇಲೆ ಶಾಕ್​ ಆಗುವ ರೀತಿ ನಟಿಸಿದ್ದಾರೆ.

ನನಗೆ 8 ಮಕ್ಕಳು ಬೇಕಿತ್ತು... ಆದ್ರೆ... ನಟಿ ಪ್ರಿಯಾಂಕಾ ಉಪೇಂದ್ರ ರಿವೀಲ್​ ಮಾಡಿದ ಗುಟ್ಟೇನು?

ಅಂದಹಾಗೆ ನಟಿ ಹರಿಣಿ ಶ್ರೀಕಾಂತ್​ ಸೀರಿಯಲ್​ ಪ್ರಿಯರಿಗೆ ತುಂಬಾ  ಪರಿಚಯದ ಮುಖ. ಅಮ್ಮನಾಗಿ, ಅತ್ತೆಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಾರೆ. ಇದೀಗ ಅವರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  'ಗೌರಿಶಂಕರ' ಸೀರಿಯಲ್​ನಲ್ಲಿ  ಭೈರಾದೇವಿಯಾಗಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು,  ನಿರೂಪಕರಾಗಿ ಕಿರುತೆರೆಯ ನಂಟು ಬೆಳೆಸಿಕೊಂಡವರು. ದೂರದರ್ಶನದ ಸವಿನೆನಪು ಕಾರ್ಯಕ್ರಮದ ನಿರೂಪಕರಾಗಿ ಎಂಟ್ರಿ ಕೊಟ್ಟ ನಟಿ,  'ಪ್ರತಿಭೆ' ಎನ್ನುವ ಸೀರಿಯಲ್​ ಮೂಲಕ ಕಿರುತೆರೆ ಪ್ರವೇಶಿಸಿದರು. ಇದಾದ ಬಳಿಕ "ಆತ್ಮ" ಎನ್ನುವ ಸೀರಿಯಲ್​ನಲ್ಲಿ ನಟಿಸಿದರು. ಬಳಿಕ ಮದುವೆಯಾದ ಮೇಲೆ ಬಣ್ಣದ ಲೋಕದಿಂದ ದೂರ ಸರಿದರು. ಕೊನೆಗೆ ಪತಿಯ  ಪ್ರೋತ್ಸಾಹದಿಂದ ಮತ್ತೆ ಕಿರುತೆರೆಗೆ ಮರಳಿದ ಅವರು, ಈಗ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರೆ.
 
ಇನ್ನು ನಟಿ ಪ್ರಿಯಾಂಕಾ ಉಪೇಂದ್ರ ಅವರ ಬಗ್ಗೆ ಹೇಳುವುದೇ ಬೇಡ. ಪ್ರಿಯಾಂಕಾ ಎಂದಾಕ್ಷಣ ಹೂವೇ ಹೂವೇ ಎಂದು ನೆನಪಾಗುವುದು ಸಹಜ.  ಜನಿಸಿದ್ದು ಕೋಲ್ಕತಾದ ಬಂಗಾಳಿ ಫ್ಯಾಮಿಲಿಯಲ್ಲಿ.  ಮಾಡೆಲಿಂಗ್​ನಲ್ಲಿ ಮಿಂಚಿದವರು.  1996 ರಲ್ಲಿ ಮಿಸ್ ಕೊಲ್ಕತ್ತಾ ಆದವರು. ಕೊನೆಗೆ ಸಿನಿಮಾಗಳು ಅರಸಿ ಬಂದವು.  ಕನ್ನಡ, ತಮಿಳು,ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರೋ ನಟಿ ಎಚ್​2ಓ ಚಿತ್ರದ ಹೂವೇ ಹೂವೇ ಹಾಡಿನಿಂದಲೇ ಸಕತ್​ ಫೇಮಸ್​ ಆಗಿದ್ದಾರೆ. ನಿರ್ಮಾಪಕಿಯಾಗಿಯೂ  ಗುರುತಿಸಿಕೊಂಡಿರುವ ಪ್ರಿಯಾಂಕಾ ಅವರು, ನಟನೆಯಿಂದ ದೂರ ಸರಿದಿದ್ದಾರೆ.  

ಕೊನೆಗೂ ಆ್ಯಂಕರ್​ ಅನುಶ್ರೀ ಬೆರಳಿಗೆ ಬಂತು ಉಂಗುರ! ಮದುವೆಗೆ ರೋಚಕ ಟ್ವಿಸ್ಟ್​ ಕೊಟ್ಟ ನಟಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್: ಮೇಕಪ್ ಮಾಡ್ಕೊಳ್ಳೋ ಗ್ಯಾಪ್‌ನಲ್ಲಿ ಕಾವ್ಯಾಗೆ 'ಲವ್ ಪ್ರಪೋಸ್' ಮಾಡೇಬಿಟ್ಟ ಗಿಲ್ಲಿ ನಟ!
Bigg Boss: ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್​? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್​