ಗೌತಮ್ನ ಹುಟ್ಟುಹಬ್ಬವನ್ನು ಮರೆತ ಹಾಗೆ ಮಾಡಿರುವ ಭೂಮಿಕಾ ಗಂಡನನ್ನು ಸತಾಯಿಸುತ್ತಿದ್ದಾಳೆ. ಇದಕ್ಕೆ ನೆಟ್ಟಿಗರು ಹೇಳ್ತಿರೋದೇನು?
ಗೌತಮ್ ಹುಟ್ಟುಹಬ್ಬದ ಖುಷಿಯಲ್ಲಿದ್ದಾನೆ. ಆದರೆ ಗಂಡನನ್ನು ಸತಾಯಿಸಲು ಭೂಮಿಕಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಮಾರನೆಯ ದಿನ ಹುಟ್ಟುಹಬ್ಬ ಇರುವ ಕಾರಣಕ್ಕೆ, ಭೂಮಿಕಾಳನ್ನು ಎಲ್ಲಿಯಾದರೂ ಕರೆದುಕೊಂಡು ಹೋಗುವ ಪ್ಲ್ಯಾನ್ ಡುಮ್ಮಾ ಸರ್ದು. ಆದರೆ ತನ್ನ ಹುಟ್ಟುಹಬ್ಬ ಎಂದು ಬಾಯಿಬಿಟ್ಟು ಹೇಗೆ ಹೇಳುವುದು? ಅದಕ್ಕಾಗಿಯೇ ಭೂಮಿಕಾಗೆ ನೀವು ನಾಳೆ ಫ್ರೀ ಇದ್ದೀರಾ ಎಂದು ಕೇಳಿದ್ದಾನೆ. ಗಂಡ ಯಾಕೆ ಕೇಳ್ತಿರೋದು ಎಂದು ಈ ಜಾಣೆ ಪತ್ನಿಗೆ ಗೊತ್ತಾಗದೇ ಇರುತ್ತಾ? ಕೂಡಲೇ ಗಂಡನನ್ನು ಸತಾಯಿಸುವ ಆಸೆ ಆಕೆಯದ್ದು. ಇದೇ ಕಾರಣಕ್ಕೆ ನಾಳೆ ಅಮ್ಮ ಮನೆಗೆ ಕರೆದಿದ್ದಾರೆ. ತುಂಬಾ ದಿನ ಆಯ್ತಲ್ಲ ಹೋಗಿ. ಅಲ್ಲಿಗೆ ಹೋಗ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ಗೌತಮ್ಗೆ ಠುಸ್ ಎನಿಸಿದೆ. ಹಾಗಿದ್ರೆ ಭೂಮಿಕಾಗೆ ನನ್ನ ಹುಟ್ಟುಹಬ್ಬದ ನೆನಪೇ ಇಲ್ವಾ? ಛೇ ಎಂದು ಪರಿತಪಿಸುತ್ತಿದ್ದಾನೆ. ಗಂಡ ಈ ರೀತಿ ಪರಿತಪಿಸುವುದನ್ನು ನೋಡಿರೋ ಭೂಮಿಕಾ ಮರೆಯಲ್ಲಿಯೇ ನಗುತ್ತಾ, ನಾಳೆ ಗೊತ್ತಾಗತ್ತೆ ಏನು ಸರ್ಪ್ರೈಸ್ ಅಂತ ಎಂದಿದ್ದಾಳೆ.
ಅಮೃತಧಾರೆ ಸೀರಿಯಲ್ನ ಈ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದನ್ನು ನೋಡಿ ಸೀರಿಯಲ್ ಪ್ರೇಮಿಗಳು ಸೋ ಸ್ವೀಟ್ ಎನ್ನುತ್ತಿದ್ದಾರೆ. ಈ ರೀತಿ ಪತಿ-ಪತ್ನಿ ಒಬ್ಬರನ್ನೊಬ್ಬರು ಆಗಾಗ್ಗೆ ಸತಾಯಿಸುತ್ತಿದ್ದರೆ ಕುಟುಂಬ ಎಷ್ಟು ಚೆನ್ನಾಗಿರುತ್ತೆ ಎನ್ನುತ್ತಿದ್ದಾರೆ. ಸಂಬಂಧಗಳೇ ಕಳೆದು ಹೋಗುತ್ತಿರುವ ಈ ಹೊತ್ತಿನಲ್ಲಿ ಇಂಥ ದೃಶ್ಯಗಳು ಎಷ್ಟೋ ಕುಟುಂಬಗಳಿಗೆ ಸ್ಫೂರ್ತಿಯೂ ಆಗಬಹುದು ಎನ್ನುವುದು ಬಹುತೇಕ ಅಭಿಮಾನಿಗಳ ಅಭಿಮತ.
ಒಡೆದ ಹಾಲಲ್ಲೂ ಸಿಹಿ ಮಾಡ್ಬೋದಲ್ವಾ? ಪುಟ್ಟಕ್ಕನ ಸಂಸಾರದ ಟಿಪ್ಸ್ ಈಗಿನ ಕಾಲಕ್ಕೂ ಸರಿಹೊಂದುತ್ತಾ?
ಅಷ್ಟಕ್ಕೂ ಗೌತಮ್ ಮೊದಲು ಪ್ರೀತಿ ಬಗ್ಗೆ ಹೇಳಲಿ ಎಂದು ಭೂಮಿಕಾ, ಭೂಮಿಕಾ ಮೊದಲು ಹೇಳಲಿ ಎಂದು ಗೌತಮ್... ಒಟ್ಟಿನಲ್ಲಿ ಇಬ್ಬರೂ ಐ ಲವ್ ಯೂ ಅನ್ನೋದಕ್ಕೆ ಪರದಾಡುತ್ತಿದ್ದರು. ಗೌತಮ್ ಮತ್ತು ಭೂಮಿಕಾ ನಡುವೆ ಲವ್ ಶುರುವಾಗಿದೆ. ಆದರೆ ಇಬ್ಬರೂ ಒಬ್ಬರಿಗೊಬ್ಬರು ಈ ವಿಷಯವನ್ನು ಹೇಳಿಕೊಂಡಿಲ್ಲ. ಆನಂದ್ ಮತ್ತು ಪತ್ನಿ ಇವರಿಬ್ಬರನ್ನು ಹೇಗಾದರೂ ಒಂದು ಮಾಡಲು ನೋಡುತ್ತಿದ್ದಾರೆ. ಭೂಮಿಕಾಳಿಗೆ ಆನಂದ್ ಪತ್ನಿ ಬಂದು ಎಲ್ಲಿಗೆ ಬಂತು ಲವ್‌ಸ್ಟೋರಿ ಎಂದಿದ್ದಾಳೆ. ಅದಕ್ಕೆ ಭೂಮಿಕಾ, ಗೌತಮ್ ನನ್ನನ್ನು ತುಂಬಾ ಪ್ರೀತಿಸ್ತಾರೆ. ಅವರೇ ಮೊದಲು ಹೇಳಲಿ ಎಂದುಕೊಂಡು ಸುಮ್ಮನಿದ್ದೇನೆ. ನಾನು ಹೇಳಲು ಹೋಗುವುದಿಲ್ಲ ಎಂದಿದ್ದಾಳೆ. ಹೀಗೆ ಮೊದಲೇ ಹೆಣ್ಣುಮಕ್ಕಳ ಲವ್ ಫೀಲಿಂಗ್ಸ್ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರೆ. ಅದಕ್ಕೇ ಅವರೇ ಮೊದಲು ಹೇಳಲಿ. ಅವರಿಗೆ ನನಗಿಂತಲೂ ಹೆಚ್ಚಾಗಿ ನನ್ನ ಮೇಲೆ ಲವ್ ಇದೆ ಅದಕ್ಕಾಗಿಯೇ ಅವರೇ ಮೊದ್ಲು ಹೇಳಿ ಎನ್ನುತ್ತಿದ್ದಾಳೆ.
ಹೀಗೆ ಬಿಟ್ಟರೆ ಇವರಿಬ್ಬರೂ ಲವ್ ಬಗ್ಗೆ ಹೇಳುವುದೇ ಇಲ್ಲ ಎಂದು ಆನಂದ್ ಮತ್ತು ಪತ್ನಿ ಪ್ಲ್ಯಾನ್ ಮಾಡುತ್ತಲೇ ಇದ್ದಾರೆ. ಅದೇ ಇನ್ನೊಂದೆಡೆ ಬಂಗಾಳಿಯ ಕ್ಲೈಂಟ್ಸ್ ಜೊತೆ ಗೌತಮ್ ಮೀಟಿಂಗ್ ಫಿಕ್ಸ್ ಆಗಿದೆ. ಅವರನ್ನು ಸ್ವಾಗತಿಸಲು ಬಂಗಾಳಿಯಲ್ಲಿ ಮಾತನಾಡುವಂತೆ ಆನಂದ್ ಹೇಳಿದ್ದಾನೆ. ಒಂದಿಷ್ಟು ಬಂಗಾಳಿಯಲ್ಲಿ ಗೌತಮ್ ಮಾತನಾಡಿದ್ದಾನೆ. ಕೊನೆಗೆ ಅಲ್ಲಿ ಭೂಮಿಕಾ ಬಂದಿದ್ದಾಳೆ. ನಾವು ನಿಮ್ಮವರು ಎನ್ನಲು ಬೆಂಗಾಳಿಯಲ್ಲಿ ಹೇಗೆ ಹೇಳ್ತೀರಾ ಎಂದು ಕೇಳಿದ್ದಾಳೆ. ಅದಕ್ಕೆ ಗೌತಮ್ ಬಂಗಾಳಿಯಲ್ಲಿ ಮಾತನಾಡಿದ್ದಾನೆ. ನಿಜವಾಗಿ ಹೇಳಬೇಕು ಎಂದರೆ ಅದು ಬಂಗಾಳಿಯಲ್ಲಿ ಐ ಲವ್ ಯು ಎನ್ನುವುದು. ಇದು ಗೌತಮ್ಗೂ ತಿಳಿದಿರಲಿಲ್ಲ, ಭೂಮಿಕಾಗೂ ತಿಳಿದಿರಲಿಲ್ಲ. ಕೊನೆಗೆ ಆನಂದ್ನೇ ನೀನು ಹೇಳಿದ್ದು ಐ ಲವ್ ಯು ಅಂತ ಹೇಳಿದ್ದಾನೆ. ಇದನ್ನು ಮರೆಯಿಂದ ಕೇಳಿಸಿಕೊಂಡು ಭೂಮಿಕಾ ನಾಚಿ ನೀರಾಗಿದ್ದಾಳೆ. ಗೌತಮ್ ತಲೆ ತಲೆ ಚಚ್ಚಿಕೊಂಡಿದ್ದಾನೆ. ಆದರೆ ಭೂಮಿಕಾ ಫುಲ್ ಖುಷ್ ಆಗಿದ್ದು, ಈಗ ಪತಿಗೆ ಸತಾಯಿಸುತ್ತಿದ್ದಾಳೆ.
ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..