ಆಫರ್‌ ಬಂತು ಅಂದ್ಲು: ಆಮೇಲೆ ಗೊತ್ತಾಯ್ತು ಅದು ಸಿನಿಮಾದಲ್ಲ, ಮದ್ವೆದಾಗಿತ್ತು: ಆ ದಿನ ನೆನೆದ ನಟಿ ಅಪೇಕ್ಷಾ ಅಮ್ಮ

By Suvarna News  |  First Published Dec 16, 2023, 3:46 PM IST

ಪವನ್ ಒಡೆಯರ್ ಹಾಗೂ ಅಪೇಕ್ಷಾ ಮದುವೆಯ ಇಂಟರೆಸ್ಟಿಂಗ್‌ ವಿಷ್ಯವನ್ನು ಜೀ ಟಿವಿಯ ಕಿಚನ್‌ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ ಅಪೇಕ್ಷಾ ಅಮ್ಮ. ಅವರು ಹೇಳಿದ್ದೇನು? 
 


 'ಗೋವಿಂದಾಯ ನಮಃ', 'ಗೂಗ್ಲಿ', 'ರಣವಿಕ್ರಮ', 'ಜೆಸ್ಸಿ' ಹಾಗೂ 'ನಟರಾಜ ಸರ್ವೀಸ್' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಜನಪ್ರಿಯ ನಿರ್ದೇಶಕ ಪವನ್ ಒಡೆಯರ್ ಹಾಗೂ  'ಕಾಫಿ ತೋಟ' ಸಿನಿಮಾದಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಅಪೇಕ್ಷಾ ಅವರ ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಈಗ ಇವರಿಬ್ಬರೂ ಇಬ್ಬರು ಮುದ್ದು ಮಕ್ಕಳ ಪಾಲಕರು. ಬಾಗಲಕೋಟೆ ಮೂಲದ ಅಪೇಕ್ಷಾ ಪುರೋಹಿತ್ ಹಾಗೂ ಬೆಳಗಾವಿ ಮೂಲದ ಪವನ್ ಒಡೆಯರ್ ಅವರ ಮದುವೆಯ ಬಗ್ಗೆ ಕುತೂಹಲದ ಮಾಹಿತಿ ಶೇರ್‌ ಮಾಡಿಕೊಂಡಿದ್ದಾರೆ ಅಪೇಕ್ಷಾ ಅಮ್ಮ. 
 
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಿಚನ್‌ ಕಾರ್ಯಕ್ರಮದಲ್ಲಿ ಈ ಜೋಡಿ ಆಗಮಿಸಿದೆ. ಈ ಸಂದರ್ಭದಲ್ಲಿ ಇವರ ಬದುಕಿನ ಕೆಲವೊಂದು ಕ್ಷಣಗಳ ಬಗ್ಗೆ ಮಾತನಾಡಲಾಗಿದೆ. ಮದುವೆಯ ಬಗ್ಗೆ ಮಾತನಾಡುವ ಸಮಯದಲ್ಲಿ ಅಪೇಕ್ಷಾ ಅವರ ಅಮ್ಮ ಕಾಣಿಸಿಕೊಂಡು, ಮಗಳು ಮದ್ವೆ ಆಫರ್‌ ಹೇಳಿದ್ದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಒಂದು ದಿನ ಅಪೇಕ್ಷಾ ಕಾಲ್‌ ಮಾಡಿದ್ಲು. ಪವನ್ ಒಡೆಯರ್‌ ಅಂತ, ನಿರ್ದೇಶಕರು... ಆಫರ್‌ ಇದೆ ಅಂದ್ಲು. ಅದು ಸಿನಿಮಾ ಆಫರ್‌ ಅಂದುಕೊಂಡ್ವಿ. ಆಮೇಲೆ ಗೊತ್ತಾಯ್ತು, ಇದು ಸಿನಿಮಾ ಆಫರ್‌ ಅಲ್ಲ. ಮದ್ವೆಯದ್ದು ಎಂದು ತಮಾಷೆ ಮಾಡಿದರು. ನಂತರ ಪವನ್‌ ತಮ್ಮ ಅಳಿಯ ಅಲ್ಲ, ಮಗ ಆಗಿದ್ದಾರೆ ಅಂತ ಅಮ್ಮ ಈಗಲೂ ಹೇಳ್ತಾರೆ. ಇದನ್ನು ನೋಡಿದರೆ ಭಾವುಕಳಾಗುತ್ತೇನೆ ಎಂದು ಅಪೇಕ್ಷಾ ಕಣ್ಣೀರು ಹಾಕಿದರು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಇದರ ಪ್ರೊಮೋ ಇದೀಗ ರಿಲೀಸ್‌ ಆಗಿದೆ. 

ಎಲ್ಲವೂ ಸರಿಯಿದ್ದರೆ ಗಂಡು-ಹೆಣ್ಣು ಮಗುವಿನ ಚಿಂತೆ: ಆದ್ರೆ ಈ ಅಮ್ಮನ ಆಸೆ ಕೇಳಿ ಪ್ರೇಕ್ಷಕರು ಭಾವುಕ!

Tap to resize

Latest Videos

ಇನ್ನು ಈ ಜೋಡಿಯ ಮದುವೆಯ ಕುರಿತು ಹೇಳುವುದಾದರೆ,  ಬೆಳಗಾವಿಯ ಪವನ್ ಒಡೆಯರ್ ಉತ್ತರ ಕರ್ನಾಟಕದ ಹುಡುಗಿಯನ್ನೇ ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಮನೆಯಲ್ಲೂ ಕೂಡ ಅದರಂತೆಯೇ ಬಾಗಲಕೋಟೆಯ ಹುಡುಗಿಯನ್ನ ಸೊಸೆ ಮಾಡಿಕೊಂಡಿದ್ದಾರೆ.  ಪವನ್ ಹಾಗೂ ಅಪೇಕ್ಷಾ ಎಂಗೇಜ್ ಮೆಂಟ್ ನಲ್ಲಿ ಇಬ್ಬರ ಮನೆಯ ಸಂಬಂಧಿಕರು ಹಾಗೂ ಸ್ನೇಹಿತರಷ್ಟೇ ಭಾಗಿಯಾಗಿದ್ದರು. 2018ರ ಆಗಸ್ಟ್  ಬೆಂಗಳೂರಿನಲ್ಲಿ ಈ ಜೋಡಿ ಮದುವೆ ಆಗಿದೆ. 
 
 202ರಲ್ಲಿ ಮೊದಲ ಮಗು ಹುಟ್ಟಿದ ಸಂದರ್ಭದಲ್ಲಿ ಪವನ್‌ ಅವರು, 'ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ, ಹಾಡಿನರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ' ಎಂದು ಶೇರ್‌ ಮಾಡಿಕೊಂಡಿದ್ದರು, ಕಳೆದ ಸೆಪ್ಟೆಂಬರ್‌ನಲ್ಲಿ ಎರಡನೆಯ ಮಗುವಿಗೆ ಅಪೇಕ್ಷಾ ಜನ್ಮ ನೀಡಿದ್ದಾರೆ.   ಮಗುವಿನ ನಾಮಕರಣ ಸಮಾರಂಭ ಅದ್ಧೂರಿಯಾಗಿ ಮಾಡಿದ್ದರು. ತಮ್ಮ ಪುತ್ರಿಗೆ ‘ಯಾದ್ವಿ’  ಹೆಸರಿಟ್ಟಿದ್ದಾರೆ.  ‘’ಇವಳೇ.. ನಮ್ಮ ಜೀವನದ ಹೊಸ ಪ್ರೀತಿ, ರಾಜಕುಮಾರಿ ಹಾಗೂ ಶೌರ್ಯನ ತಂಗಿ. ನಾವು ಇವಳನ್ನ ‘ಯಾದ್ವಿ ಒಡೆಯರ್’ ಅಂತ ಕರೆಯುತ್ತೇವೆ’’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪೇಕ್ಷಾ ಪುರೋಹಿತ್ ಬರೆದುಕೊಂಡಿದ್ದರು. ಅಂದಹಾಗೆ ಮೊದಲ ಮಗನ ಹೆಸರು ಶೌರ್ಯ. 

ಕೋಳಿ ಕೂಗಿದ್ರೆ ಬೆಳಗಾಗ್ತದೆಂಬ ಭ್ರಮೆ ಗಂಡಸ್ರಿಗೆ ಬೇಡ: ಹೆಣ್ಣಿನ ಶಕ್ತಿಯೇನು? ಭಾಗ್ಯಲಕ್ಷ್ಮಿ ಕುಸುಮಾ ಮಾತು ಕೇಳಿ...

click me!