
ತಾಂಡವ್ ಮನೆ ಬಿಟ್ಟು ಹೋದಾಗಿನಿಂದ ಕುಸುಮಾ ಹೊರತು ಪಡಿಸಿ ಮನೆಯಲ್ಲಿ ಎಲ್ಲರೂ ಭಾರೀ ಚಿಂತೆಯಲ್ಲಿ ಇದ್ದಾರೆ. ಭಾಗ್ಯಾ ಮಗಳು ತನ್ವಿ 'ಅಪ್ಪ ಇಲ್ಲದೇ ಅಮ್ಮನಿಂದ ಈ ಮನೆ ನಿಭಾಯಿಸಲು ಸಾಧ್ಯವಿಲ್ಲ' ಎಂದು ದೊಡ್ಡವರ ಮುಂದೆ ಮಾತನಾಡುತ್ತಾಳೆ. ಇದನ್ನು ಕೇಳಿದ ಕುಸುಮಾಗೆ ಕೆಂಡದಂತ ಕೋಪ ಬರುತ್ತದೆ. ತನ್ವಿ ಎದುರಿಗೆ ಬಂದು ನಿಂತು ಕುಸುಮಾ 'ಅಲ್ವೇ ತನ್ವಿ, ನಿನಗೆ ಎಷ್ಟು ವಯಸ್ಸು? ಭಾಗ್ಯಾ, ಇವಳಿಗೆ ಖಂಡಿತ 13 ವರ್ಷ ಅಲ್ವೇ ಅಲ್ಲ. 13 ವರ್ಷದ ಮಕ್ಕಳು ಹೀಗೆ ಮತಾಡ್ತಾರಾ? ತನ್ವಿಗೆ 60 ವರ್ಷ ಆಗಿದೆ. ಅವಳು ಮಾತಾಡೋದು ನೋಡಿದ್ರೆ ಅವಳೇ ಈ ಮನೆಯಲ್ಲಿ ಸೀನಿಯರ್.
ತನ್ವಿ, ನಿನ್ನಪ್ಪ ಇಲ್ದೇ ನಮಗೆ ಮನೆ ನಡೆಸೋಕೆ ಆಗಲ್ವಾ? ಖಮಡಿತ ಆಗುತ್ತೆ' ಎನ್ನುತ್ತಾಳೆ. ಕುಸುಮಾ ಮಾತನ್ನು ಕೇಳಿದ ಭಾಗ್ಯಾ ತಾಯಿ ಸುನಂದಾ ತನ್ನ ಮೊಮ್ಮಗಳು ಸಾನ್ವಿ ಮಾತಿಗೆ ಸಪೋರ್ಟ್ ಮಾಡುತ್ತಾಳೆ. 'ಸಾನ್ವಿ ಹೇಳುವುದು ನಿಜ ತಾನೆ? ತಾಂಡವ್ ಇಲ್ಲ ಅಂದ್ರೆ ಹೇಗೆ ಮನೆ ನಡೆಸೋಕೆ ಆಗುತ್ತೆ?' ಎಂದು ಕೇಳುತ್ತಾಳೆ. ಅದಕ್ಕೆ ಕುಸುಮಾ 'ಆಗುತ್ತೆ, ನಾನು ಮನೆ ನಡೆಸ್ತೀನಿ. ಮಗ ಕೆಲಸಕ್ಕೆ ಹೋಗೋ ಮೊದ್ಲು ನಾನು ಮನೆ ನಡೆಸಿರಲಿಲ್ವಾ' ಎನ್ನುತ್ತಾಳೆ. ಅದಕ್ಕೆ ಸುನಂದಾ 'ಆಗ ನಿಮ್ಮ ಯಜಮಾನ್ರು ಕೆಲಸಕ್ಕೆ ಹೋಗ್ತಾ ಇದ್ರು. ಈಗ ತಾಂಡವ್ ಬಿಟ್ರೆ ಯಾರು ದುಡಿಯೋದು' ಎಂದು ಕೇಳುತ್ತಾಳೆ.
ಅದಕ್ಕೆ ಕುಸುಮಾ 'ಈಗಲೂ ಯಜಮಾನರ ದುಡ್ಡು ಇದೆ. ಯಜಮಾನರ ಪೆನ್ಶನ್ ಬರುತ್ತೆ, ಅದರಲ್ಲೇ ನಾನು ಮನೆ ನಡೆಸ್ತೀನಿ. ಯಾರೂ ತಲೆ ಕೆಡಿಸ್ಖೋಬೇಡಿ' ಎನ್ನುತ್ತಾಳೆ. ಸಾನ್ವಿ ಕಡೆ ತಿರಿಗಿದ ಕುಸುಮಾ 'ನೀನು ನಿನ್ನ ವಯಸ್ಸಿಗೆ ಮೀರಿದ ಮಾತು ಆಡ್ಬೇಡ. ನಿನ್ನ ಅಪ್ಪ ಇಲ್ದೇನೂ ಈ ಮನೆ ನಡೆಯುತ್ತೆ. ನಿನ್ನ ಅಪ್ಪಂಗೆ ಕೈಗೆ ಬರೆ ಹಾಕಿದ್ದೆ, ನಿಂಗೆ ನಾಲಿಗೆಗೆ ಬರೆ ಹಾಕ್ತೀನಿ. ನಿನ್ನ ವಯಸ್ಸಿಗೆ ಎಷ್ಟು ಸರಿಯೋ ಅಷ್ಟೇ ಮಾತು ಆಡು ಸಾಕು ಸಾನ್ವಿ' ಎಂದು ಹೇಳುತ್ತಾಳೆ. ಭಾಗ್ಯಾ ಕಡೆ ತಿರುಗಿ 'ನಿನ್ನ ಮಗಳಿಗೆ ಅಷ್ಟೋ ಇಷ್ಟೋ ಕಲಿಸಿಕೊಡು ಭಾಗ್ಯಾ' ಎಂದು ಹೇಳುತ್ತಾಳೆ. .
ವಾರದ ಕತೆ ಕಿಚ್ಚನ ಜತೆ ಮತ್ತೆ ಬಂತು; ಯಾರಿಗೆ ಗೇಟ್ ಪಾಸ್, ಯಾರು ಆಗಲಿದ್ದಾರೆ ಪಾಸ್!
ಅಷ್ಟಕ್ಕೇ ಸುಮ್ಮನಾಗದ ಕುಸುಮಾ 'ಸಾಕು, ಈಗ ಎಲ್ಲರೂ ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ. ಮನೆ ನಾನು ನಡೆಸುತ್ತೇನೆ. ಮನೆ ಬಿಟ್ಟು ಹೋಗಿರುವ ಮಗನನ್ನು 'ಮನೆಗೆ ಬಾ, ನೀನು ಇಲ್ಲದೇ ನಮ್ಮಿಂದ ಮನೆ ನಡೆಸೋದಕ್ಕೆ ಆಗಲ್ಲ ಎಂದು ಹೇಳಲ್ಲ. ಯಾರೂ ಮನೆ ನಡೆಸೋ ಬಗ್ಗೆ ಯೋಚ್ನೆ ಮಾಡ್ಬೇಡಿ, ಆ ಕೆಲಸ ನಾನು ನೋಡ್ಕೋತೀನಿ. ಈಗ ಎಲ್ರೂ ಹೊರಡಿ' ಎನ್ನುತ್ತಾಳೆ' ಕುಸುಮಾ. ಅಷ್ಟು ಹೇಳಿದ ಕುಸುಮಾ ಎಲ್ಲರನ್ನೂ ಅಲ್ಲೇ ಬಿಟ್ಟು ತಾನೇ ಮನೆ ಒಳಕ್ಕೆ ಹೊರಟು ಹೋಗುತ್ತಾಳೆ.
ಹಸಿವಿನಿಂದ ಕಂಗೆಟ್ಟ ಬಿಗ್‌ಬಾಸ್ ಸದಸ್ಯರಿಗೆ ಕಿಚ್ಚ ಸುದೀಪ್ ಕೈಯಡುಗೆ ಕೊಡುಗೆ!
ಭಾಗ್ಯಾ ಸೇರಿದಂತೆ ಎಲ್ಲರೂ ಶಾಕ್ ಆಗುತ್ತಾರೆ. ತನ್ವಿ ಹಾಗೂ ಭಾಗ್ಯಾ ಮಗ ಸಹ ಹೊರಟು ಹೋಗುತ್ತಾರೆ. ಮುಂದೇನು ಆಗುತ್ತದೆ ಎಂಬುದನ್ನು ತಿಳಿಯಲು ಇಂದಿನ ಹಾಗೂ ಮುಂದಿನ ಸಂಚಿಕೆಗಳನ್ನು ನೋಡಬೇಕು. ಅಂದಹಾಗೆ, ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ 7.00 ಗಂಟೆಗೆ ಪ್ರಸಾರವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.