ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಏನೇನೋ ತಿರುವುಗಳು ಬರುತ್ತಿವೆ. ಇದರಲ್ಲಿ ತಾರಿಣಿ ತಾತ ಪೋಷಕರು ಮಕ್ಕಳ ಮೇಲೆ ಅಧಿಕಾರ ಚಲಾಯಿಸೋದರ ಬಗ್ಗೆ ಆಡಿರೋ ಮಾತು ಹಲವರ ಮನ ಗೆದ್ದಿದೆ. ಅಷ್ಟಕ್ಕು ತಾತ ಹೇಳಿರೋ ಆ ಮಾತು ಯಾವುದು?
ಒಲವಿನ ನಿಲ್ದಾಣ ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಇದರಲ್ಲಿ ತಾರಿಣಿ ಮತ್ತು ಸಿದ್ಧಾಂತ್ ನಡುವಿನ ಪ್ರೇಮ, ಜಗಳ, ವಿರಹ, ನೋವಿನ ಕಥೆ ಇದೆ. ಇದೀಗ ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಕಾರಣ ಆಗಿದ್ದು ತಾರಿಣಿ ತಾತ. ಒಂದು ಕಾಲದಲ್ಲಿ ಪ್ರೇಮಿಸುತ್ತಿದ್ದ ತಾರಿಣಿ ಮತ್ತು ಸಿದ್ಧಾಂತ್ ಏನೇನೋ ಘಟನೆಗಳು ನಡೆದು ಸಪರೇಟ್ ಆಗಿರುತ್ತಾರೆ. ಕೆಟ್ಟ ಮನಸ್ಸಿನ ಧೀರಜ್ ಏನೇನೋ ಐಡಿಯಾ ಮಾಡಿ ತಾರಿಣಿಗೆ ಹತ್ತಿರಾಗುವ ಪ್ರಯತ್ನ ಮಾಡುತ್ತಾನೆ. ಕೊನೆಗೂ ಆಕೆಯ ಜೊತೆಗೆ ತನ್ನ ವಿವಾಹ ನಡೆಯುವ ಹಾಗೆ ನೋಡಿಕೊಳ್ಳುತ್ತಾನೆ. ಆದರೆ ತತ್ವಜ್ಞಾನಿಯಂತೆ ಇರುವ ತಾರಿಣಿಯ ಪ್ರೀತಿಯ ತಾತನಿಗೆ ತಾರಿಣಿ ಮತ್ತು ಸಿದ್ಧಾಂತ್ ನಡುವಿನ ನಿಜ ಪ್ರೀತಿಯ ಅರಿವಿದೆ. ಅವರಿಬ್ಬರನ್ನೂ ಒಂದು ಮಾಡುವ ಪ್ರಯತ್ನದಲ್ಲೇ ತಾತ ಇರುತ್ತಾರೆ. ತನಗೆ ಎದೆ ನೋವು ಬರುತ್ತಿದೆ ಎನ್ನುವ ಕಾರಣ ಕೊಟ್ಟು ಮದುವೆ ಮನೆಯಿಂದ ತಾರಿಣಿಯನ್ನು ಕೆರೆದುಕೊಂಡು ಬರುತ್ತಾರೆ. ನೇರ ಆಕೆಯನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರುತ್ತಾರೆ.
ಆದ್ರೆ ತಾರಿಣಿ ವಿಮಾನನಿಲ್ದಾಣಕ್ಕೆ ಬರುವುದರೊಳಗೆ ಫ್ಲೈಟ್ ಹೊರಟಿರುತ್ತೆ. ಅದಕ್ಕೆ ತಾರಿಣಿ ಸಿದ್ಧಾಂತ್ ತನ್ನಿಂದ ಸಂಪೂಣ ದೂರವಾದ ನೋವಲ್ಲಿ ತುಂಬಾ ಅಳುತ್ತಾಳೆ. ವಿಧಿಯಿಲ್ಲದೇ ಮನೆಗೆ ಹೋಗೋಣ ಬಾ ಎಂದು ತಾತ ಕರೆದುಕೊಂಡು ಹೋಗ್ತಾ ಇರ್ತಾರೆ. ಅಷ್ಟರಲ್ಲಿ ಸಿದ್ಧಾಂತ್ ಬರುತ್ತಾನೆ. ಇಬ್ಬರು ಪ್ರೇಮಿಗಳೂ ಒಂದಾಗುತ್ತಾರೆ. ತಾರಿಣಿಯನ್ನು ಬಿಟ್ಟು ಹೋಗುತ್ತೇನೆ ಅಂದುಕೊಂಡರೂ ಸಿದ್ಧಾಂತ್‌ಗೆ ಅದು ಸಾಧ್ಯವಾಗಿಲ್ಲ. ಆದ್ರೆ ಸಿದ್ಧಾಂತ್ ಆಸ್ಟ್ರೇಲಿಯಾಗೆ ಹೋಗುವುದನ್ನು ಬಿಟ್ಟು ತಾರಿಣಿಗಾಗಿ ವಾಪಸ್ ಬಂದಿದ್ದಾನೆ. ತಾರಿಣಿ ಪ್ರೀತಿ ಅವನ್ನನು ವಿದೇಶಕ್ಕೆ ಹೋಗಲು ಬಿಟ್ಟಿಲ್ಲ. ಸಿದ್ಧಾಂತ್‍ನನ್ನು ನೋಡಿ ತಾರಿಣಿ ತುಂಬಾ ಖುಷಿಯಾಗಿದ್ದಾಳೆ. ಇತ್ತ ತಾರಿಣಿ ಮನೆಗೆ ಬರ್ತಾ ಇದ್ದಾಳೆ ಎಂದು ಮನೆಯಲ್ಲಿ ಪಾಲಾಕ್ಷ ಮತ್ತು ಅವರ ಅಪ್ಪ-ಅಮ್ಮ ಧೀರಜ್ ಜೊತೆ ಮದುವೆ ಮಾಡೋಣ ಎಂದು ಎಲ್ಲಾ ಪ್ಲ್ಯಾನ್ ಮಾಡಿರುತ್ತಾಳೆ. ಅದಕ್ಕೆ ಎಲ್ಲ ತಯಾರಿ ನಡೆಸಿದ್ದಾರೆ.
Bhagyalaxmi serial : ಸೊಸೆ ಮೇಲೆ ಗೂಬೆ ಕೂರಿಸೋ ಬದಲು ಕುಸುಮಾಳಂತೆ ಸ್ಟ್ರಾಂಗ್ ಇದ್ರೆ ಗಂಡಸರು ಸರಿ ದಾರೀಲಿರ್ತಾರೆ!
ಆದರೆ ಇಲ್ಲಿ ತಾತ ತಾನೇ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಅಂದುಕೊಂಡಂತೆ ಮದುವೆಯಾಗಿದೆ. ಮದುಮಕ್ಕಳ ಜೊತೆಗೆ ತಾತ ಸಿದ್ಧಾಂತ್ ಮನೆಗೆ ಹೋದಾಗ ತೀವ್ರ ಪ್ರಶ್ನೆ(Question) ಎದುರಿಸಬೇಕಾಗುತ್ತದೆ. ಸಿದ್ಧಾಂತ್ ತಂದೆಯೇ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ತಾತ ನೀಡುವ ಉತ್ತರ ಎಲ್ಲ ಪೋಷಕರಿಗೂ ಪಾಠದ(Lesson) ಹಾಗಿದೆ. 'ಮಕ್ಕಳ ಮದುವೆ ಮಾಡಿಸೋ ಹಕ್ಕು ಪೋಷಕರಾದ ನಿಮಗೂ ಇಲ್ಲ. ಮಕ್ಕಳು ನಮ್ಮ ಸೊತ್ತಲ್ಲ. ನಮ್ಮ ಮೂಲಕ ಈ ಭೂಮಿಗೆ ಬರ್ತಾರೆ ಅಷ್ಟೇ. ಅವರನ್ನು ನಾವು ಗೈಡ್ ಮಾಡಬಹುದೇ ವಿನಃ ಕಂಟ್ರೋಲ್ ಮಾಡಬಾರದು. ಸಿದ್ಧಾಂತ್ ತಾರಿಣಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಆದರೆ ಮನೆ ಸಮಸ್ಯೆಗಳಿಂದ ಹೇಳಿಕೊಳ್ಳಲಿಕ್ಕಾಗಿರಲಿಲ್ಲ. ಅವರಿಗೆ ಗೈಡ್(Guide) ಮಾಡೋದಿಕ್ಕೆ ಒಬ್ಬ ವ್ಯಕ್ತಿ ಬೇಕಿತ್ತು. ಆ ಕೆಲಸ ನಾನು ಮಾಡಿದೆ. ಮಕ್ಕಳನ್ನು ಪ್ರೀತಿಸ್ತೀವಿ, ಅವರೇ ನಮ್ಮ ಸರ್ವಸ್ವ ಅಂದುಕೊಳ್ತೀವಿ. ಆದರೆ ನಾವು ಪ್ರೀತಿಸೋ ಮಕ್ಕಳ ಸ್ವಾತಂತ್ರ್ಯ ಕಸಿಯೋದು ಸರೀನಾ?' ಅಂತ ಕೇಳ್ತಾರೆ.
ತಾತ ಹೇಳುವ ಈ ಮಾತು ಮದುವೆ ವಯಸ್ಸಿಗೆ ಬಂದ ಎಲ್ಲ ಪೋಷಕರಿಗೂ ಪಾಠದ ಹಾಗಿದೆ. ಅದನ್ನು ತಾತನ ಪಾತ್ರದ ಮೂಲಕವೇ ಹೇಳಿಸಿರೋದು ಆ ಪಾತ್ರದ ಘನತೆಯನ್ನು ಹೆಚ್ಚಿಸಿದೆ. ಅವರಿಂದಾಗಿ ಈ ಮಾತಿನ ಘನತೆಯೂ ಹೆಚ್ಚಾಗಿದೆ. ಇತ್ತ ಸಿದ್ಧಾಂತ್ ತಾಯಿ ನಿರುಪಮಾ ಇದೇ ಅವಕಾಶ(Oportunity) ಬಳಸಿ ತಾತನ ವಿರುದ್ಧ ತಾರಿಣಿ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ತಾರಿಣಿ ಸಿದ್ಧಾಂತ್ ಪ್ರೀತಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ.
ಬೋಲ್ಡ್ ಲುಕ್ಕಲ್ಲಿ ಕಾಣಿಸಿಕೊಂಡ ಸರಿಗಮಪ ಲಿಟಲ್ ಚಾಂಪ್ಸ್ ಅಂಕಿತಾ ಕುಂಡು