
ಕನ್ನಡ ಧಾರಾವಾಹಿಯೊಂದು ‘ಮಂತ್ರಾಲಯ'ದೊಳಗೆ ಶೂಟಿಂಗ್ ಮಾಡಿದೆ. ಮೊದಲ ಬಾರಿಗೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ರಾಯರ ನೆನೆಯಬೇಕು!
ಈ ಹಿಂದೆ ಯಾವ ಧಾರಾವಾಹಿಯಲ್ಲಿಯೂ ಮಂತ್ರಾಲಯ ತೋರಿಸಿರಲಿಲ್ಲ, ಮೊದಲ ಬಾರಿಗೆ ಕನ್ನಡದ ʼನೂರು ಜನ್ಮಕೂʼ ಸೀರಿಯಲ್‌ನಲ್ಲಿ ಮಂತ್ರಾಲಯ ತೋರಿಸಲಾಗಿದೆ. ರಾಘವೇಂದ್ರ ಸ್ವಾಮಿಗಳು ಎಂದಕೂಡಲೇ ರಾಯರ ಸನ್ನಿಧಿ ಮಂತ್ರಾಲಯ ನೆನಪಾಗುವುದು. ಯಾವುದೇ ಕಷ್ಟವಿರಲೀ ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ತ್ರಿವಿಕ್ರಮ್ 'ಮುದ್ದು ಸೊಸೆ' ಧಾರಾವಾಹಿಗೋಸ್ಕರ ಯಾವ ಸೀರಿಯಲ್ ಅಂತ್ಯ ಆಗತ್ತೆ?
ಮಂತ್ರಾಲಯಕ್ಕೆ ಹೋಗಿದ್ದು ಯಾಕೆ?
ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿ ಪಡೆದಿದೆ. ನಿತ್ಯವೂ ಈ ದೇಗುಲಕ್ಕೆ ಸಾವಿರಾರು ಭಕ್ತರು ಬರುತ್ತಾರೆ. 'ನೂರು ಜನ್ಮಕೂ' ಧಾರಾವಾಹಿಯ ಕಥಾನಾಯಕಿ ಮೈತ್ರಿ, ಕಥಾನಾಯಕ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಒಂದು ಹಳೆಯ ಹರಕೆ ತೀರಿಸಲು ಇಲ್ಲಿಗೆ ಭೇಟಿ ಕೊಡ್ತಾರೆ.
'ನೂರು ಜನ್ಮಕೂ' ಧಾರಾವಾಹಿ ಹೀರೋಯಿನ್ ಮೈತ್ರಿ ಜೀವನದಲ್ಲಿ ಸಂಕಷ್ಟಗಳೇ ತುಂಬಿದೆ. ಅವಳ ತಂದೆ ರಮೇಶ್, ತಾಯಿ ರಾಣಿ ಇವರಿಬ್ಬರೂ ಇದಕ್ಕೆಲ್ಲ ಏನು ಕಾರಣ ಎಂದು ಯೋಚಿಸುತ್ತ ಕೂತಾಗ ಅವರಿಗೆ ಮೈತ್ರಿ ಹುಟ್ಟುವ ಮುನ್ನ ತಾವು ಹೊತ್ತ ಹರಕೆ ನೆನಪಾಗುತ್ತದೆ. ಆ ಕಾರಣಕ್ಕೆ ಮೈತ್ರಿಗೆ ಕೆಟ್ಟದ್ದು ಆಗ್ತಿರಬಹುದು ಅಂತ ನಿರ್ಧಾರ ಮಾಡಿ ಮಂತ್ರಾಲಯಕ್ಕೆ ಮಗಳು, ಅಳಿಯ ಚಿರಂಜೀವಿಯನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡ್ತಾರೆ.
ಕನ್ನಡ ಕಿರುತೆರೆಯ ನಿಮ್ಮ ಫೇವರಿಟ್ ಜೋಡಿ ಯಾರು?
ಮೈತ್ರಿಗೂ, ಮಂತ್ರಾಲಯಕ್ಕೂ ಇರುವ ನಂಟು ಏನು?
ಹರಕೆಯ ಕಾರಣಕ್ಕೆ ಮಂತ್ರಾಲಯಕ್ಕೆ ಭೇಟಿ ನೀಡುವ ಮೈತ್ರಿಗೂ ಹಾಗೂ ಮಂತ್ರಾಲಯಕ್ಕೂ ಇರುವ "ಆ ಜನ್ಮ ಸಂಬಂಧ' ಇಲ್ಲಿ ಬಯಲಾಗುತ್ತದೆ. ಮೈತ್ರಿ ಮಂತ್ರಾಲಯದಲ್ಲಿ ಹೆಜ್ಜೆ ಇಡುತ್ತಿದ್ದ ಹಾಗೆ ಅಲ್ಲಿದ್ದ ಸಾಧು ಒಬ್ಬರಿಗೆ ಮೈತ್ರಿ ಬಂದಳು ಅನ್ನೋ ಸೂಚನೆ ಸಿಗತ್ತೆ. ಮೈತ್ರಿಗೂ ಮಂತ್ರಾಲಯಕ್ಕೂ ಒಂದು 'ಪೂರ್ವ ಜನ್ಮದ ಪುಣ್ಯ' ಇರುವ ಹಾಗೆ ಕತೆ ಸಾಗುತ್ತದೆ. ನಂತರ ಗುರುರಾಯರ ಪವಾಡಗಳು ನಡೆಯುತ್ತಾ ಹೋಗಿ, ಮೈತ್ರಿ ಮತ್ತು ಚಿರಂಜೀವಿಯ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂದು ಧಾರಾವಾಹಿಯಲ್ಲಿ ನೋಡಬೇಕು.
ಆಶೀರ್ವದಿಸಿದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು!
ಮಂತ್ರಾಲಯದ ಸ್ವಾಮೀಜಿ ಶ್ರೀ ಸುಬುಧೇಂದ್ರ ತೀರ್ಥರು ಚಿರಂಜೀವಿ, ಮೈತ್ರಿಗೆ ಆಶೀರ್ವಾದವನ್ನು ಮಾಡುತ್ತಾರೆ. ಸುಬುಧೇಂದ್ರ ತೀರ್ಥರು ಶೂಟಿಂಗ್‌ನಲ್ಲಿ ಭಾಗಿಯಾಗಿರೋದು ಖುಷಿಯ ವಿಷಯ.
ಮೂರು ದಿನಗಳ ಕಾಲ ಶೂಟಿಂಗ್!
ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನ ಇದೆ. ಇಲ್ಲಿ ನಾಯಕಿ ಮಾಡುವ ಪ್ರಾರ್ಥನೆಯ ದೊಡ್ಡ ಸನ್ನಿವೇಶವೊಂದರ ಚಿತ್ರೀಕರಣವಾಗಿದೆ. ಮಂತ್ರಾಲಯದ ಮೂಲೆ ಮೂಲೆಯಲ್ಲೂ ಒಳಗೂ ಹೊರಗೂ ಸತತ ಮೂರು ದಿನಗಳ ಕಾಲ ಧಾರಾವಾಹಿ ಶೂಟಿಂಗ್ ಆಗಿದೆ.
ಯಾವಾಗ ಪ್ರಸಾರ?
ಈ ವಾರಾಂತ್ಯ ಶನಿವಾರ, ಭಾನುವಾರ ಮಾರ್ಚ್ 22, 23ರಂದು ಸಂಜೆ 6.30 ಕ್ಕೆ 'ನೂರು ಜನ್ಮಕೂ ' ಧಾರಾವಾಹಿಯ ಈ ವಿಶೇಷ ಎಪಿಸೋಡ್ ಪ್ರಸಾರ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.