
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ನಿರೂಪಕಿ ಅನುಪಮಾ ಗೌಡ ರಾಜ್ಯ ಪ್ರಶಸ್ತಿ ಪಡೆದ ಮೇಲೆ ಕೊಂಚ ಬೇಡಿಕೆ ಹೆಚ್ಚಾಗಿದೆ. ಸಿನಿಮಾದಿಂದ ದೂರ ಉಳಿದು ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಅನುಪಮಾ ಗೌಡ ಪ್ರತಿ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಸಖತ್ ಸಿಂಪಲ್ ಆಗಿ ಅಚರಿಸುತ್ತಿದ್ದರು. ಆದರೆ ಈ ವರ್ಷ ಬಾಯ್ಸ್ ವರ್ಸ್ ಗರ್ಲ್ಸ್ ವೇದಿಕೆಯಲ್ಲಿ ಸಖತ್ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ರೆಟ್ರೋ ಲುಕ್ ರೌಂಡ್ ಆಗಿದ್ದ ಕಾರಣ ಅನುಪಮಾ ಗೌಡ 80ರ ದಶಕದ ನಟಿಯರಂತೆ ಅಲಂಕಾರ ಮಾಡಿಕೊಂಡಿದ್ದಾರೆ. ಈ ವರ್ಷ ಆಚರಣೆಯಲ್ಲಿ ಅನುಪಮಾಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದು ಅವರ ತಾಯಿ.
ಹೌದು! ಬಾಯ್ಸ್ ವರ್ಸ್ ಗರ್ಲ್ಸ್ ರಿಯಾಲಿಟಿ ಶೋ ಸ್ಪರ್ಧಿಗಳು ಈ ವರ್ಷ ಅನುಪಮಾ ಗೌಡ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ವೇದಿಕೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿಸಿ ಕೇಕ್ ಕಟ್ ಮಾಡಿಸಿದ್ದಾರೆ. ಮನೆ ಕೆಲಸ ಮಾಡಿಕೊಂಡು ಬೆಳೆದ ಹುಡುಗಿ ಈಗ ಕರ್ನಾಟಕದ ಮನೆ ಮಗಳು ಆಗಿದ್ದೀರಾ' ಎಂದು ಮಂಉ ಪಾವಗಡ ಹೇಳುತ್ತಾರೆ. ಹಲವು ವರ್ಷಗಳ ನಂತರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಕಾರಣ ಅನುಪಮಾ ಭಾವುಕರಾಗುತ್ತಾರೆ. ಅಷ್ಟೇ ಅಲ್ಲದೆ ತಾಯಿ ವೇದಿಕೆ ಮೇಲೆ ಆಗಮಿಸಿರುವುದು ನೋಡಿ ಶಾಕ್ ಆಗಿದ್ದಾರೆ. 'ಇದಕ್ಕಿಂತ ಹೆಮ್ಮೆ ಏನಮ್ಮಾ ಬೇಕು? ಏಳೇಳು ಜನ್ಮಕ್ಕೂ ಇದೆ ನಂಗೆ ಗಿಫ್ಟ್' ಎಂದು ತಾಯಿ ತಮ್ಮ ಕೈ ಮೇಲೆ ಅನುಪಮಾ ಗೌಡ ಮುಖದ ಅಚ್ಚೆ ಹಾಕಿಸಿಕೊಂಡಿರುವ ಫೋಟೋ ರಿವೀಲ್ ಮಾಡಿದ್ದಾರೆ.
ಆ್ಯಂಕರ್ ಅನುಪಮಾ ಗೌಡ ಹುಟ್ಟುಹಬ್ಬ: ಸಾವಿನ ಹಾದಿ ಹಿಡಿದು ಸಾಧನೆಯ ಶಿಖರವೇರಿದ
ಖುಷಿಯಿಂದ ಕಣ್ಣೀರಿಡುತ್ತಲೇ 'ಇದೇ ಮೊದಲು ನನಗೆ ಇಷ್ಟೋಂದು ಪ್ರೀತಿ ಸಿಕ್ಕಿರುವುದು' ಎಂದು ಅನುಪಮಾ ಗೌಡ ಹೇಳಿದ್ದಾರೆ. ಇಂಡಸ್ಟ್ರಿಗೆ ಕಾಲಿಡುವ ಮುನ್ನ ಅನುಪಮಾ ಗೌಡ ಜೀವನ ನಡೆಸಲು ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಮಿಡಲ್ ಕ್ಲಾಸ್ ಕುಟುಂಬಕ್ಕೆ ಸೇರಿದ ಈ ಸುಂದರೆ 7ನೇ ಕ್ಲಾಸ್‌ನಲ್ಲಿ ಇದ್ದಾಗಲೇ ಕಟ್ ಪೀಸ್ ಕೆಲಸ ಮಾಡುತ್ತಿದ್ದರು ಆನಂತರ ಮನೆ ಕೆಲಸ ಮಾಡಿಕೊಂಡು ಕಾಲೇಜ್ ಮುಗಿಸಿದರು. ಪುಟ್ಟ ಹುಡುಗಿ ಇದ್ದಾಗ ದರ್ಶನ್ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು ಅದಾದ ಮೇಲೆ ನೇರವಾಗಿ ಸೀರಿಯಲ್ ಲೋಕಕ್ಕೆ ಕಾಲಿಟ್ಟರು. ಅಕ್ಕ ಸೀರಿಯಲ್‌ನ ಜನಪ್ರಿಯತೆಯಿಂದ ಬಿಗ್ ಬಾಸ್ ಆಫರ್ ಗಿಟ್ಟಿಸಿಕೊಂಡರು. ಅಲ್ಲಿಂದ ಇಂಡಸ್ಟ್ರಿಗೆ ಕಾಲಿಟ್ಟರು ಅಲ್ಲಿಂಗ್ ನಿರೂಪಣೆಗೆ ಎಂಟ್ರಿ ಕೊಟ್ಟರು. ಬಸ್‌ನಲ್ಲಿ ಓಡಾಡುತ್ತಿದ್ದ ಸುಂದರಿ ಈಗ BMW ಕಾರಿನಲ್ಲಿ ಓಡಾಡುತ್ತಿದ್ದಾರೆ. ಇದು ನಿಜಕ್ಕೂ ಪ್ರೇರಣೆ ಅಂತಿದ್ದಾರೆ ಫ್ಯಾನ್ಸ್.
ತಾಯಿ ಅಗಲಿ 4 ದಿನ ಕಳೆದಿಲ್ಲ ಸೆಟ್‌ಗೆ ಆಗಮಿಸಿದ ಶುಭಾ ಪೂಂಜಾ; ಕಣ್ಣೀರಿಟ್ಟ ವಿಡಿಯೋ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.