13 ಬಟ್ಟೆಗಳನ್ನು 13 ಸೆಕೆಂಡ್‌ನಲ್ಲಿ ಬದಲಾಯಿಸುತ್ತೀನಿ; ನಿವೇದಿತಾ ಗೌಡ ವಿಡಿಯೋ ವೈರಲ್!

By Vaishnavi Chandrashekar  |  First Published Aug 18, 2023, 3:02 PM IST

ಜನರಿಗೋಸ್ಕರ ಸ್ಪೆಷಲ್ ವಿಡಿಯೋ ಕ್ರಿಯೇಟ್ ಮಾಡಿದ ನಿವೇದಿತಾ ಗೌಡ. 13 ಉಡುಪುಗಳ ಸ್ಪೆಷಾಲಿಟಿ ಏನು? 
 


ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 360 ಡಿಗ್ರಿ ರೀಲ್ಸ್‌ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಭಾರತದ 13 ಶೈಲಿ ಉಡುಪುಗಳನ್ನು ಧರಿಸಿ ಮಿಂಚಿದ್ದರು. ಕೇವಲ 30ರಿಂದ 60 ಸೆಕೆಂಡ್ ನೋಡುವ ಈ ವಿಡಿಯೋ ಹಿಂದೆ ಎಷ್ಟು ಕಷ್ಟ ಇದೆ, ಯಾವ ರೀತಿ ಶೂಟಿಂಗ್ ನಡೆಯುತ್ತದೆ ಎಂದು ನಿವೇದಿತಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

'ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಡಿಫರೆಂಟ್ ಆಗಿರುವ ವಿಡಿಯೋ ಮಾಡುವ ಪ್ಲ್ಯಾನ್ ಮಾಡಿರುವೆ. ನನ್ನ ಜೀವನದಲ್ಲಿ ಮೊದಲ ಸಲ ಈ ಕಾನ್ಸೆಪ್ಟ್‌ ಪ್ರಯತ್ನ ಮಾಡುತ್ತಿರುವುದು. ಮೊದಲು ಹೇರ್‌ ಸ್ಟೈಲ್ ಮತ್ತು ಮೇಕಪ್ ಮಾಡಿಕೊಂಡು ಭಾರತದಲ್ಲಿರುವ ಪ್ರತಿ ರಾಜ್ಯದ ಸ್ಪೆಷಲ್ ಉಡುಪುಗಳನ್ನು ಧರಿಸುವೆ. ತುಂಬಾ ಖುಷಿಯಾಗಿರುವೆ ಅಲ್ಲದೆ ಬ್ರೈಟ್ ಬಣ್ಣ ಇರುವುದು ಖುಷಿ ಕೊಡುತ್ತದೆ' ಎಂದು ನಿವೇದಿತಾ ಹೇಳುತ್ತಾ ವಿಡಿಯೋ ಆರಂಭಿಸಿದ್ದಾರೆ. 

Latest Videos

ತಮಾಷೆಗೆ ಹೆದರಿಸಿದ ಚಂದನ್ ಶೆಟ್ಟಿ; ಬೀಪ್‌ ಪದಗಳಿಂದ ಬೈದ ನಿವೇದಿತಾ ಗೌಡ, ವಿಡಿಯೋ ವೈರಲ್!

'ಗಾನವಿ ಮೇಕಪ್ ಮಾಡುತ್ತಿದ್ದಾರೆ ದೀಪ್ತಿ ನನಗೆ ಡ್ರೆಸ್ ಮಾಡುತ್ತಾರೆ. ಮೋಹಿನಿಯಾಟ್ಟಂ ಉಡುಪು ನನಗೆ ತುಂಬಾ ಇಷ್ಟವಾಗುತ್ತದೆ ಯಾವತ್ತೂ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಉಡುಪು ಧರಿಸಿ ನನಗೆ ಸುಸ್ತಾಗಿದೆ ಆಗಲೇ 200 ಉಡುಪು ಬದಲಾಯಿಸಿರುವೆ ಅನಿಸುತ್ತಿದೆ' ಎಂದು ತುಂಬಾ ಎಂಜಾಯ್ ಮಾಡಿಕೊಂಡು ನಿವೇದಿತಾ ವಿಡಿಯೋ ಮಾಡಿದ್ದಾರೆ.

undefined

ಚಂದನ್ ಹೆಂಡ್ತಿಗೆ ದೊಡ್ಡ ಬಟ್ಟೆ ಕೊಡ್ಸಪ್ಪ; ನಿವೇದಿತಾ ಡ್ಯಾನ್ಸ್‌ ವಿಡಿಯೋಗೆ ಹರಿದು ಬಂತು ಕಾಮೆಂಟ್ಸ್‌!

'ಬೆಳಗ್ಗೆ ಆರಂಭಿಸುವ ಮುನ್ನ 13 ಉಡುಪುಗಳನ್ನು 13 ಸೆಕೆಂಡ್ ಅಥವಾ ನಿಮಿಷದ ಮಾಡಿ ಮುಗಿಸಬಹುದು ಅಂದುಕೊಂಡಿರುವೆ ಆದರೆ ಆಗುತ್ತಿಲ್ಲ ಅಷ್ಟು ಸುಸ್ತಾಗುತ್ತಿದೆ' ಎಂದಿದ್ದಾರೆ ನಿವೇದಿತಾ. ಹಲವಾರು ರಾಜ್ಯಗಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಭಾರತದ ಸಂಪ್ರದಾಯವನ್ನು ಸಾರುವ ವಿಡಿಯೋ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಥಹರೇವಾಗಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಕಿರುತೆರೆ ಸೆಲೆಬ್ರಿಟಿಗಳ ಮಧ್ಯೆ ಗುರುತಿಸಿಕೊಳ್ತಿರೋ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾರನ್ನು ಹಲವರು ಬಾರ್ಬಿ ಡಾಲ್​ ಎಂದೇ ಕರೆಯುತ್ತಿದ್ದಾರೆ. ಇತ್ತೀಚೆಗೆ ಇವರು ಮ್ಯೂಸಿಕ್ ಆಲ್ಬಂ ಕೂಡ ಮಾಡಿ ಸುದ್ದಿಯಾಗಿದ್ದಾರೆ. ಇದು  ರಿಲೀಸ್​ಗೆ ರೆಡಿಯಾಗಿದೆ. ಇದರಲ್ಲಿ ನಟಿ ಶಮಂತ್ ಅಥವಾ ಬ್ರೋ (Bro Gowda) ಗೌಡ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇವುಗಳ ನಡುವೆಯೇ ಇನ್ಸ್​ಸ್ಟಾಗ್ರಾಮ್​ನಲ್ಲಿ ಸಕತ್​ ಆ್ಯಕ್ಟೀವ್​ ಇದ್ದು, ಆಗ್ಗಾಗ್ಗೆ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಆಗಾಗ ಸೋಲೋ ಟ್ರಾವೆಲ್ ಮಾಡುತ್ತಾ, ಇನ್ನು ಕೆಲವೊಮ್ಮೆ ಪತಿಯ ಜೊತೆ ಸುತ್ತಾಟದಲ್ಲಿ ತೊಡಗಿ ಅದರ ವಿಡಿಯೋ ಶೇರ್​ ಮಾಡುತ್ತಿರುತ್ತಾರೆ. 

 

click me!