'ಜಿಂಗಿ ಚಕಾ..ಜಿಂಗಿ ಚಕಾ..ಕುಚ್‌ ಕುಚ್‌ ಟುವಿ ಟುವಿ..' ವೈರಲ್‌ ಹಾಡಿನ ಸಿಂಗರ್‌ ಇವರೇ ನೋಡಿ..!

Published : Aug 17, 2023, 06:54 PM ISTUpdated : Aug 17, 2023, 06:58 PM IST
'ಜಿಂಗಿ ಚಕಾ..ಜಿಂಗಿ ಚಕಾ..ಕುಚ್‌ ಕುಚ್‌ ಟುವಿ ಟುವಿ..' ವೈರಲ್‌ ಹಾಡಿನ ಸಿಂಗರ್‌ ಇವರೇ ನೋಡಿ..!

ಸಾರಾಂಶ

'ಜಿಂಗಿ ಚಕಾ..ಜಿಂಗಿ ಚಕಾ..ಕುಚ್‌ ಕುಚ್‌ ಟುವಿ ಟುವಿ.. ಇನ್ಸ್‌ಟಾಗ್ರಾಮ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿರುವ ಹಾಡು. ಬಹುಶಃ ಈ ಹಾಡು ಎಷ್ಟು ಫೇಮಸ್‌ ಎಂದರೆ, ಇದನ್ನು ಕೇಳಿದ ತಕ್ಷಣ ನಗು ಬಂದೇ ಬರುತ್ತದೆ. ಈ ವೈರಲ್‌ ಹಾಡಿನ ನಿಜವಾದ ಸಿಂಗರ್‌ ಯಾರು ಅನ್ನೋದು ನಿಮಗೆ ಗೊತ್ತಾ?

ಬೆಂಗಳೂರು (ಆ.17): ತೀರಾ ಹೊಸದೇನಲ್ಲ.. ಒಂದಷ್ಟು ವರ್ಷ ಹಳೆಯ ಕನ್ನಡ ಚಿತ್ರದ ಹಾಡು ಅದು. 'ಜಿಂಗಿ ಚಕಾ... ಜಿಂಗಿ ಚಕಾ..' ಎಂದು ಆರಂಭವಾಗುವ ಈ ಹಾಡು ಸೋಶಿಯಲ್‌ ಮೀಡಿಯಾದಲ್ಲಿ ಯಾವ ಪರಿ ವೈರಲ್‌ ಆಗಿತ್ತೆಂದರೆ, ಟ್ರೋಲರ್ಸ್‌ಗಳು ಇದರ ಹಬ್ಬ ಮಾಡಿಬಿಟ್ಟಿದ್ದರು. ಇನ್ಸ್‌ಟಾಗ್ರಾಮ್‌ನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಎಲ್ಲೇ ಕಂಡರು ಇದೇ ಹಾಡಿನ ಟ್ಯೂನ್‌. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೀಮ್ಸ್‌ಗಳಲ್ಲಿ ಟ್ರೋಲ್‌ಗಳಲ್ಲಿ ಈ ಹಾಡಿನ ಬಳಕೆ ಬಹಳ ವ್ಯಾಪಕವಾಗಿತ್ತು.. ಇದೇ ಹಾಡಿನ ತಮಾಷೆಯ ರೀಲ್ಸ್‌ಗಳನ್ನು ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳು ಬಳಸಿಕೊಂಡು ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್‌ ಮೀಡಿಯಾ ಸೆನ್ಸೇಷನಲ್‌ ಸಾಂಗ್‌ ಆಗಿದ್ದ ಈ ಹಾಡಿನ ಧ್ವನಿ ಯಾರದ್ದು ಎನ್ನುವ ಕುತೂಹಲ ನಿಮಗೆ ಬಂದಿರಲಿಕ್ಕೂ ಸಾಕು? ಈಗಲೂ ಕೂಡ ನಿಮಗೆ ಈ ಹಾಡಿನ ಮೂಲ ಸಿಂಗರ್‌ ಯಾರು ಅನ್ನೋದು ನಿಮ್ಮ ಕುತೂಹಲವೇ ಆಗಿದ್ದರೆ, ಇಲ್ಲಿದೆ ನೋಡಿ ಉತ್ತರ..

ಈ ಹಾಡು ಕನ್ನಡ ಸಿನಿಮಾ 'ಫೈವ್‌ ಈಡಿಯಟ್ಸ್‌' ಚಿತ್ರದ್ದು. ಇದನ್ನು ಹಾಡಿದ್ದು ಬೇರೆ ಯಾರೂ ಅಲ್ಲ, ಈಗ ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸುತ್ತಿರುವ ಅಶೋಕ್‌ ಶರ್ಮ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಮಿಸ್ಟರ್‌ & ಮಿಸೆಸ್‌ ರಾಮಚಾರಿ ಚಿತ್ರದಲ್ಲಿ ರಾಧಿಕಾ ಪಂಡಿತ್‌ ಅವರ ಅಣ್ಣ ಹಾಗೂ ಯಶ್‌ ಅವರ ಸ್ನೇಹಿತನಾಗಿ ನಟಿಸಿದ್ದ ಅಶೋಕ್‌ ಶರ್ಮ ಈ ಗೀತೆಯನ್ನು ಹಾಡಿದವರು. ಇಂದು ವೈರಲ್‌ ಆಗಿರುವ 'ಜಿಂಗಿ ಚಕಾ..ಜಿಂಗಿ ಚಕಾ..ಕುಚ್‌ ಕುಚ್‌ ಟುವಿ ಟುವಿ..'  ಹಾಡಿನ ಮೂಲ ಸಿಂಗರ್‌ ಇದೇ ಅಶೋಕ್‌ ಶರ್ಮ. 2011ರಲ್ಲಿ ಅವರು ಈ ಹಾಡನ್ನು ಹಾಡಿದ್ದರು. ಆದರೆ, ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಹೆಚ್ಚೇನು ಯಶಸ್ಸು ಕಾಣದ ಕಾರಣ ಈ ವೈರಲ್‌ ಹಾಡು ಕೂಡ ಜಾಸ್ತಿ ಸದ್ದು ಮಾಡಲಿಲ್ಲ. ಅದಲ್ಲದೆ, ಆಗ ಸೋಶಿಯಲ್ ಮೀಡಿಯಾ ಕೂಡ ಅಷ್ಟೇನೂ ಜನಪ್ರಿಯವಾಗಿರದ ಕಾರಣ ಸುದ್ದಿಯೂ ಆಗಿರಲಿಲ್ಲ.

ಆದರೆ, ಈಗ ಒಳ್ಳೆಯದೋ ಕೆಟ್ಟದ್ದೋ.. 'ಜಿಂಗಿ ಚಕಾ..ಜಿಂಗಿ ಚಕಾ..ಕುಚ್‌ ಕುಚ್‌ ಟುವಿ ಟುವಿ..' ಹಾಡು ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌. ಇಂದು ನಟನಾಗಿ ಕೆಲವೊಂದು ಪೋಷಕ ಪಾತ್ರಗಳಲ್ಲಿ ನಟಿಸಿರುವ ಅಶೋಕ್‌ ಶರ್ಮ ಈ ಹಾಡಿನ ಯಶಸ್ಸನ್ನು ಸೋಶಿಯಲ್‌ ಮೀಡಿಯಾಗೆ ಸಲ್ಲಿಸಿದ್ದಾರೆ. ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸಿರುವ ವೈಷ್ಣವಿ ಅವರ ಯೂಟ್ಯೂಬ್‌ ಪೇಜ್‌ನ ವಿಡಿಯೋದಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಸೀತಾ ರಾಮ ಸೀರಿಯಲ್‌ನ ನಟರಾದ ಗಗನ ಚಿನ್ನಪ್ಪ, ಮೇಘಾ ಶಂಕರಪ್ಪ ಹಾಗೂ ವೈಷ್ಣವಿ ಈ ವೈರಲ್‌ ಸಾಂಗ್‌ನ ಹಿನ್ನಲೆ ಗಾಯಕನನ್ನು ಅನಾವರಣ ಮಾಡಿದ್ದಾರೆ.

ವಿಡಿಯೋದಲ್ಲಿ ಈ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಶೋಕ್‌ ಶರ್ಮ, ಆರಂಭದಲ್ಲಿ ಸಿಂಗರ್‌ ಆಗಬೇಕು ಅನ್ನೋದೆ ನನ್ನ ಕನಸಾಗಿತ್ತು ಎಂದಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹಿನ್ನಲೆ ಗಾಯಕನಾಗಬೇಕು ಅನ್ನೋದು ತಮ್ಮ ದೊಡ್ಡ ಆಸೆಯಾಗಿತ್ತು. ಅದಕ್ಕಾಗಿ ಅವಕಾಶದ ಹುಡುಕಾಟದಲ್ಲಿದ್ದೆ ಎಂದು ಹೇಳಿದ್ದಾರೆ. ಅದಲ್ಲದೆ, ಈ ಹಾಡನ್ನು ಬರೆದವರು ಯಾರು ಅನ್ನೋದರ ಬಗ್ಗೆಯೂ ಮಾಹಿತಿ ನೀಡಿದ್ದು, ಒಂದೋ ಈ ಹಾಡು ಹಿಟ್‌ ಆಗುತ್ತದೆ. ಇಲ್ಲವೇ ಯಾರಿಗೂ ತಿಳಿಯದಂತೆ ಮುಚ್ಚಿ ಹೋಗುತ್ತದೆ ಎಂದು ಅಗಲೇ ಭವಿಷ್ಯ ನುಡಿದಿದ್ದರು ಎಂದು ಅಶೋಕ್‌ ಶರ್ಮ ಹೇಳಿದ್ದಾರೆ.

'ನೀನೇ ನನ್ನ ಅಲ್ಟಿಮೇಟ್‌ ಲವರ್‌..' ಬಿಕಿನಿ ಧರಿಸಿ ಪತಿಯ ಜನ್ಮದಿನಕ್ಕೆ ಶುಭ ಕೋರಿದ ಬೆಬೋ ಕರೀನಾ!

ಅವರ ಈ ಮಾತು ಈಗ ನಿಜವಾಗಿದೆ. ಈ ಹಾಡಿನ ವಿಚಾರದಲ್ಲಿ ಅವರು ಹೇಳಿದ ಎರಡೂ ಕೂಡ ಆಗಿದೆ. ಚಿತ್ರ ಬಿಡುಗಡೆಯಾದಾಗ ಮಾತ್ರ ಇದು ಯಾರಿಗೂ ಗೊತ್ತಾಗಲಿಲ್ಲ. ಚಿತ್ರ ಬಿಡುಗಡೆಯಾಗಿ ಇಷ್ಟು ವರ್ಷಗಳಾದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವವಾಗಿ ಹಿಟ್‌ ಆಗಿದೆ. 2011ರಲ್ಲಿ ಚಿತ್ರ ಬಿಡುಗಡೆಯಾದಾಗ ಈ ಹಾಡನ್ನು ಯಾರೂ ಕನಿಷ್ಠ ಕೇಳಿಯೂ ಕೂಡ ಇರಲಿಲ್ಲ. ಈ ಹಾಡಿಗೆ ಈಗೇನಾದರೂ ಸಡನ್‌ ಪ್ರಖ್ಯಾತಿ ಬಂದಿದ್ದರೆ, ಅದಕ್ಕೆ ಸೋಶಿಯಲ್‌ ಮೀಡಿಯಾ ಕಾರಣ ಎಂದಿದ್ದಾರೆ. ಹಾಗಂತ ಅಶೋಕ್‌ ಶರ್ಮ ಹಾಡಿದ ಗೀತೆ ಇದೊಂದೇ ಅಲ್ಲ, ಕನ್ನಡದ ಫ್ರೆಂಡ್ಸ್‌ ಚಿತ್ರದಲ್ಲಿ ಫೇಮಸ್‌ ಆಗಿರುವ 'ತಿರುಪತಿ ತಿರುಮಲ ವೆಂಕಟೇಶ' ಹಾಡಿನ ಹಿನ್ನಲೆ ಗಾಯಕ ಅಶೋಕ್‌ ಶರ್ಮ.  ಆದರೆ, ಗಾಯನದಲ್ಲಿ ಅವಕಾಶಗಳು ಕಡಿಮೆಯಾದ ಕಾರಣಕ್ಕೆ ತಾವು ಸಿನಿಮಾ ನಟನಾಗುವ ನಿರ್ಧಾರ ಮಾಡಿದೆ ಎಂದಿದ್ದಾರೆ.

ರಿಲೀಫ್‌ ಬೆನ್ನಲ್ಲೇ, 'ರಕ್ತ ಕಣ್ಣೀರು' ಡೈಲಾಗ್‌ ಧಾಟಿಯಲ್ಲಿ ತಿರುಗೇಟು ಕೊಟ್ಟ ಉಪೇಂದ್ರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ