
ಮಂಡ್ಯ (ಆ.18): ಹೃದಯಾಘಾತಕ್ಕೆ 24 ವರ್ಷ ಯುವ ನಟನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ ಕಲಾವಿದ ಪವನ್ ಎಂಬವರು ಹೃದಯಾಘಾತದಿಂದ ಸಾವು ಕಂಡ ನಟ. ಈ ಕಿರುತೆರೆ ಕಲಾವಿದ ಮುಂಬೈನಲ್ಲಿ ನೆಲೆಸಿದ್ದರು. ಪವನ್, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದವರು. ಹಿಂದಿ, ತಮಿಳು ಕಿರುತೆರೆಯಲ್ಲಿ ಕಲಾವಿದರಾಗಿ ಪವನ್ ಹೊರಹೊಮ್ಮುತ್ತಿದ್ದರು. ಬೆಳ್ಳಿ ತೆರೆ ಚಿತ್ರಗಳಲ್ಲಿ ಅಭಿನಯಿಸುವ ಕನಸ್ಸು ಕಂಡಿದ್ದ ಯುವ ನಟ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ಇವರು ಮುಂಬೈನಲ್ಲಿ ನೆಲೆಸಿದ್ದರು. ಗುರುವಾರ ನಸುಕಿನ ಜಾವ ಹೃದಯಾಘಾತದಿಂದ ಸಾವು ಕಂಡಿದ್ದು, ಇಂದು ಹುಟ್ಟೂರಿನಲ್ಲಿ ಮೃತ ಯುವ ನಟನ ಅಂತ್ಯಸಂಸ್ಕಾರ ನಡೆಯಲಿದೆ.
ಸೌಮ್ಯ ಮುಖದ ಸುಂದರ ಹಠಮಾರಿ ಸ್ಪಂದನಾ ಸೀರೆ ಕ್ರೇಜ್
ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಕೂಡ ಹೃದಯಾಘಾತದಿಂದ ಮೃತ ಪಟ್ಟಿದ್ದರು. ಅವರಿಗೆ 37 ವರ್ಷವಷ್ಟೇ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಯುವ ನಟನ ಮರಣವಾಗಿದೆ. ಇತ್ತೀಚೆಗೆ ಹೃದಯಾಘಾತದಿಂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜೀವನ ಶೈಲಿ , ಆಹಾರ ಪದ್ಧತಿಗಳು ಇದಕ್ಕೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.