30 ಜೊತೆ ಬಟ್ಟೆ, ಚಪ್ಪಲಿ ಬೇಕೆ ಬೇಕು; Mrs India ಸತ್ಯ ಬಯಲು ಮಾಡಿದ ನಿವೇದಿತಾ ಗೌಡ!

By Vaishnavi ChandrashekarFirst Published Jul 14, 2022, 12:48 PM IST
Highlights

ಮಿಸಸ್‌ ಇಂಡಿಯಾ vlog ಅಪ್ಲೋಡ್ ಮಾಡಿದ ನಿವೇದಿತಾ ಗೌಡ. ಡಯಟ್‌ ಲಿಸ್ಟ್‌ನಲ್ಲಿ ಏನೆಲ್ಲಾ ಇದೆ?

ಕನ್ನಡ ಕಿರುತೆರೆ ಬಾರ್ಲಿ ಡಾಲ್ ನಿವೇದಿತಾ ಗೌಡ ಮೂರ್ನಾಲ್ಕು ತಿಂಗಳುಗಳ ಕಾಲ ಮಿಸಸ್ ಇಂಡಿಯಾ ಶೋನಲ್ಲಿ ಸ್ಪರ್ಧಿಸಿ ಫಿನಾಲೆ ಹಂತ ತಲುಪಿ People's Choice ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಜರ್ನಿಯಲ್ಲಿ ನಿವೇದಿತಾ ಸಖತ್ ಹಾಟ್ ಅಂಡ್ ಯಂಗ್ ಆಗಿ ಮಿಂಚಿದ್ದಾರೆ. ಹೀಗಾಗಿ ನಿವಿ ಡಯಟ್ ಮತ್ತು ಫ್ಯಾಷನ್‌ ಬಗ್ಗೆ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಕೇಳಿರುವ ಕಾರಣ ಯೂಟ್ಯೂಬ್‌ ವಿಡಿಯೋ ಮೂಲಕ ಉತ್ತರಿಸಿದ್ದಾರೆ. ಅಲ್ಲದೆ ವಿಡಿಯೋ ಅಪ್ಲೋಡ್ ಮಾಡಿದ ಒಂದು ದಿನಕ್ಕೆ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. 

ಡಯಟ್‌: 

ಶೋಗೆ ಒರಿಯೆಂಟೇಶನ್‌ ದಿನದಿಂದ ಹಿಡಿದು 7 ದಿನಗಳ ಕಾಲ ಮುಂಬೈನಲ್ಲಿ ವಾಸವಿರಬೇಕಿತ್ತು.  ಪ್ರಯಾಣ ಆರಂಭಿಸುವ ದಿನ ನಿವಿ ಒಂದು ಬ್ರೆಡ್‌ ಟೋಸ್ಟ್‌, ಎರಡು ಹಣ್ಣು ಮತ್ತು ಡ್ರೈ ಫ್ರೂಟ್ಸ್‌ ಸೇವಿಸುತ್ತಾರೆ. ಎಜರ್ನಿ ಹೆಚ್ಚಾಗಿರಬೇಕು ಎಂದು ಪೀನಟ್‌ ಬಟರ್ ಕೂಡ ಸೇವಿಸುತ್ತಾರೆ. 

ಉದ್ದ ಕೂದಲಿದ್ದರೂ ಎಷ್ಟು ಸಿಂಪಲ್ ನೋಡಿ ನಿವೇದಿತಾ ಗೌಡ ಹೇರ್‌ಸ್ಟೈಲ್!

'ಬೇರೆ ಬೇರೆ ರಾಜ್ಯಗಳಿಂದ ಸ್ಪರ್ಧಿಗಳು ಬರುತ್ತಾರೆ. 7 ದಿನಗಳ ಕಾಲ ಮುಂಬೈನಲ್ಲಿ ವಾಸವಿರಬೇಕು.  ಎಷ್ಟು ಪ್ಯಾಕಿಂಗ್ ಮಾಡಬೇಕು ಅಂದ್ರೆ ದಿನಕ್ಕೆ ಮೂರು ಸಲ ಬಟ್ಟೆ ಬದಲಾಯಿಸಬೇಕು ಅಂದ್ರೆ 7 ದಿನಕ್ಕೆ 21 ಬಟ್ಟೆ ಆಗುತ್ತದೆ ಜೊತೆಗೆ ನಾನು ಬೇರೆ ಬಟ್ಟೆನೂ ತೆಗೆದುಕೊಂಡು ಹೋಗಬೇಕು ಒಟ್ಟು 30 ಜೊತೆ ಬೇಕೆ ಬೇಕು. ಇದಕ್ಕೆ ಮ್ಯಾಚ್ ಆಗುವ ರೀತಿಯಲ್ಲಿ ಹೀಲ್ಸ್‌ ಮತ್ತು ಚಪ್ಪಲಿ ತೆಗೆದುಕೊಂಡು ಹೋಗಬೇಕು.  ಎಲ್ಲಾ ಬಟ್ಟೆಗಳಿಗೂ ಹೊಂದಿಕೊಳ್ಳುವಂತೆ ಆಭರಣ ಮ್ಯಾಚ್ ಮಾಡಿಕೊಳ್ಳಬೇಕು. ಡಿಸೈನರ್ ಹ್ಯಾಂಡ್‌ ಬ್ಯಾಗ್ ಕೂಡ ಬೇಕೆ ಬೇಕೆ. ಪ್ಯಾಕಿಂಗ್ ಮಾಡುವುದು ಸಖತ್ ಟ್ರಿಕಿಯಾಗಿರುತ್ತದೆ ಏಕೆಂದರೆ ಪ್ರಯಾಣ ಮಾಡುವಾಗ ಎಲ್ಲನೂ ಮ್ಯಾನೇಜ್ ಮಾಡುವುದು ಕಷ್ಟ ಆಗುತ್ತದೆ. ಇಷ್ಟೆಲ್ಲಾ ಫಿಟ್ ಆಗಬೇಕು ಅಂದ್ರೆ ದೊಡ್ಡ ಬ್ಯಾಗ್ ಬೇಕು. ಆರಂಭದಲ್ಲಿ ಇಂಡಕ್ಷನ್ ರೌಂಡ್‌ ಇರುತ್ತದೆ ರ್ಯಾಂಪ್‌ ವಾಕ್ ಅಭ್ಯಾಸ ಮಾಡಿಸುತ್ತಾರೆ.  ಒಟ್ಟು 60 ಜನ ಮಹಿಳೆಯರು ಬರುತ್ತಾರೆ ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತೀವಿ ಎಷ್ಟು ಸ್ನೇಹಿತರನ್ನು ಸಂಪಾದಿಸುತ್ತೀನಿ ನೋಡಬೇಕು' ಎಂದು ನಿವೇದಿತಾ ಗೌಡ ಹೇಳಿದ್ದಾರೆ. 

'ನಾನು ಮೂರು ವರ್ಷದ ಮಗುವಿದ್ದಾಗಲೇ ನಾನು ಫ್ಯಾಷನ್ ಶೋ ಮತ್ತು ರ್ಯಾಂಪ್ ವಾಕ್ ಮಾಡಿರುವೆ. ನನ್ನ ತಾಯಿ ಆಗ ಸೇರಿಸಿದ್ದು, ಆಗ ನಾನು ತುಂಬಾ ಎಂಜಾಯ್ ಮಾಡಿದೆ ಪ್ರತಿ ಕ್ಷಣವೂ ನೆನಪು ಇದೆ. ಸ್ಪರ್ಧೆಗಳಿಂದ ನಾನು ದೂರ ಉಳಿದುಕೊಂಡಿದ್ದೆ ಆದರೆ ಒಂದು ದಿನ ಇನ್‌ಸ್ಟಾಗ್ರಾಂನಲ್ಲಿ ಈ ಸ್ಪರ್ಧಿ ಬಗ್ಗೆ ನೋಡಿದೆ. ಒಂದು ಪ್ರಯತ್ನ ಮಾಡೋಣ ಅಂದುಕೊಂಡು ಇದಕ್ಕೆ ಅಪ್ಲೈ ಮಾಡಿದೆ. ಪ್ರಯತ್ನ ಮಾಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಿದೆ. 60 ಮಹಿಳೆಯರನ್ನು ನಾನು ಭೇಟಿ ಮಾಡಿ ಅವರಿಂದ ಅನೇಕ ವಿಚಾರಗಳನ್ನು ಕಲಿಯುವೆ' ಎಂದು ನಿವೇದಿತಾ ಮಾತನಾಡಿದ್ದಾರೆ.

ಹೆಲ್ತಿ ಜ್ಯೂಸ್:

ಬೆಚ್ಚಗಿರುವ ನೀರಿಗೆ ನಾನು ಒಂದು ಸ್ವಲ್ಪ ಶುಂಠಿ ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಕುಡಿಯುತ್ತೀನಿ. ನಾನು ಸಕ್ಕರೆ ಬಳಸುವುದಿಲ್ಲ ನೀವು ದಿನ ಕುಡಿಯುವವರಾದರೆ ಶುಂಠಿ ಕಡಿಮೆ ಬಳಸಬೇಕು, ಬೇಕಿದ್ದರೆ ಸಕ್ಕರೆ ಹಾಕಿಕೊಳ್ಳಿ ಎಂದಿದ್ದಾರೆ ನಿವಿ.

ಚಂದನ್ ಸಮಕ್ಕೆ ನಾನು ದುಡಿಯುತ್ತಿರುವೆ, ಖರ್ಚು ನಾನೇ ನೋಡಿಕೊಳ್ಳಬೇಕು: ನಿವೇದಿತಾ ಗೌಡ

'ಪೇಜೆಂಟ್ ಗೋಸ್ಕರ ನಾನು ಹೊಸ ಸೂಟ್‌ಕೇಸ್‌ ಖರೀದಿಸಿರುವೆ. ಬಟ್ಟೆ ತುಂಬಿಸಿರುವುದಕ್ಕೆ ನಾನು ಅದರ ಮೇಲೆ ಕುಳಿತುಕೊಂಡು ಲಾಕ್ ಮಾಡಿರುವೆ. ಇಷ್ಟೆ ನನಗೆ ಸಾಕಾಗುವುದಿಲ್ಲ ಹೀಗಾಗಿ 7 ಕೆಜಿಯ ಹ್ಯಾಂಡ್‌ಬ್ಯಾಗ್ ಕ್ಯಾರಿ ಮಾಡುತ್ತೀನಿ. ಈಗ ದಿನ ಏನು ಧರಿಸಬೇಕು ಅಂತ ನಾನು ಮೊದಲೇ ನಿರ್ಧರ ಮಾಡಿ ಪ್ಯಾಕ್ ಮಾಡಿಕೊಂಡಿರುವೆ' ಎಂದು ನಿವಿ ಹೇಳಿದ್ದಾರೆ. 

 

click me!