
ದೆಹಲಿ ಮೂಲದ ಸೋಷಿಯಲ್ ಮೀಡಿಯಾ ಪ್ರಭಾವಿ ಅಂಜಲಿ ಅರೋರ ಪ್ರಸ್ತುತ ರಿಯಾಲ್ಟಿ ಶೋ ಲಾಕ್ ಅಪ್ಸ್ ನಲ್ಲಿ ಸ್ಪರ್ಧಿಯಾಗಿದ್ದಾರೆ. ಸಹಸ್ಪರ್ಧಿಗಳ ಜೊತೆಗಿನ ಜಗಳದ ಮೂಲಕ ಮನೆಮಾತಾಗಿರುವ ಈಕೆ, ಕಚ್ಚಾ ಬಾದಾಮ್ ಗೀತೆಗೆ ಹೆಜ್ಜೆ ಹಾಕಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ಜನಪ್ರಿಯತೆ ತಂದು ಕೊಟ್ಟಿತ್ತು. ಇತ್ತೀಚೆಗೆ ಶೋನಲ್ಲಿ ಅಂಜಲಿ, ರಷ್ಯಾದಲ್ಲಿದ್ದಾಗ ನಡೆದ ಘಟನೆಯೊಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಹೋಟೆಲ್ ರೆಸೆಪ್ಷನಿಸ್ಟ್ ನಿಂದ 2,737ರೂ. (5000 ರುಬೆಲ್) ಪಡೆದು, ಅದಕ್ಕೆ ಪ್ರತಿಯಾಗಿ ಶನಿವಾರ ರಾತ್ರಿ ಆತನ ಜೊತೆಗೆ ಪಾರ್ಟಿಗೆ ಹೋದ ಸೀಕ್ರೆಟ್ ಹಂಚಿಕೊಂಡಿದ್ದಾರೆ. 'ಡಿಸೆಂಬರ್ ನಲ್ಲಿ ನಾನು ರಷ್ಯಾಕ್ಕೆ ಹೋಗಿದ್ದೆ. ನಾನು ಒಬ್ಬಂಟಿಯಾಗಿದ್ದೆ. ನಾನು ಉಳಿದುಕೊಂಡಿದ್ದ ಹೋಟೆಲ್ ರಿಸೆಪ್ಷನಿಸ್ಟ್ ಅವರನ್ನು ನೋಡಿ ಆಕರ್ಷಿತಳಾದೆ. ಆತನಿಂದ 5000 ರುಬೆಲ್ಸ್ ಪಡೆದ ನಾನು, ಶನಿವಾರ ರಾತ್ರಿ ಅವನೊಂದಿಗೆ ಕಳೆದೆ. ನನಗೆ ಕೇವಲ ಹಣ ಬೇಕಿತ್ತು ಅಷ್ಟೇ. ಅದಕ್ಕಾಗಿ ಆತನನ್ನು ಕೇಳಿದ್ದೆ. ಆತ ಕೂಡ ನೀಡಿದ. ಆ ಬಳಿಕ ರಾತ್ರಿ ನಾವು ಜೊತೆಯಾಗಿ ಪಾರ್ಟಿಗೆ ಹೋಗಿದ್ವಿ. ನನ್ನ ಯಾವುದೇ ಸ್ನೇಹಿತರಿಗೂ ಈ ಬಗ್ಗೆ ತಿಳಿದಿಲ್ಲ. ನನ್ನ ಪಾಲಕರು ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಗೊತ್ತಿಲ್ಲ' ಎಂದು ಅಂಜಲಿ ಹೇಳಿದ್ದಾರೆ. ಪಾಯಲ್ ರೋಹ್ಟಗಿ ಅವರೊಂದಿಗಿನ ಜಗಳದ ಸಮಯದಲ್ಲಿ ಅಂಜಲಿ 'ನಾನು 5000 ರೂ. ಅಥವಾ 10000ರೂ.ಗಾಗಿ ಹೋಗಲು ಸಿದ್ಧಳಿದ್ದೇನೆ. ನಿನ್ನ ಬೆಲೆ ಎಷ್ಟು ಎಂದು ನಿನ್ಯಾಕೆ ಹೇಳಬಾರದು?' ಎಂದು ಕೇಳಿದ್ದರು.
ಇನ್ ಸ್ಟ್ರಾಗ್ರಾಮ್ ನಲ್ಲಿ ಭಾರೀ ಫಾಲೋವರ್ಸ್
ಅಂಜಲಿ ಅರೋರ ಮನೋರಂಜನ ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿರದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ಪ್ರಸಿದ್ಧರು. ಇನ್ ಸ್ಟ್ರಾಗ್ರಾಮ್ ನಲ್ಲಿ ( Instagram) ಈಕೆಗೆ 11 ಶತಕೋಟಿ (1.10 ಕೋಟಿ) ಫಾಲೋವರ್ಸ್ (Followers) ಇದ್ದಾರೆ. ಈಕೆಗೆ ಆಗಾಗ ಫ್ಯಾನ್ಸ್ ಗಳಿಂದ ಉಡುಗೊರೆಗಳು (Gifts) ಹಾಗೂ ಸರ್ಪ್ರೈಸಸ್ (Surprises) ಬರುತ್ತಲೇ ಇರುತ್ತವೆ. ಈಕೆ ಸೋಷಿಯಲ್ ಮೀಡಿಯಾದಲ್ಲಿ (Social Media) ಒಂದು ಕೋಟಿ ಫಾಲೋವರ್ಸ್ ಹೊಂದಿದ ತಕ್ಷಣ ಆ ಕ್ಷಣವನ್ನು ಸೆಲೆಬ್ರೇಟ್ ಮಾಡಿದ್ದರು ಕೂಡ.
ಬಿಗ್ ಬಾಸ್ 9; ಪ್ರೋಮೋ ಶೂಟ್‌ಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ ಕಿಚ್ಚ ಸುದೀಪ್
ಕಚ್ಚಾ ಬಾದಾಮ್ ಮೂಲಕ ಫೇಮಸ್
ಅಂಜಲಿ ಅರೋರ ಕಚ್ಚಾ ಬಾದಾಮ್ ಗೀತೆಗೆ ಡ್ಯಾನ್ಸ್ ಮಾಡಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral) ಆಗುವ ಮೂಲಕ ಜನಪ್ರಿಯತೆ ತಂದು ಕೊಟ್ಟಿತ್ತು. ಇನ್ ಸ್ಟ್ರಾಗ್ರಾಮ್ ನಲ್ಲಿ ಈ ವೀಡಿಯೋ ಅಪ್ ಲೋಡ್ ಆಗಿ ತಿಂಗಳು ಕಳೆದ ಬಳಿಕವೂ ಅದಕ್ಕೆ ಪ್ರತಿಕ್ರಿಯೆಗಳು ಹರಿದು ಬಂದಿವೆ.
ಫಿಟ್ನೆಸ್ ಫ್ರೀಕ್
ಅಂಜಲಿ ಅರೋರ ಫಿಟ್ನೆಸ್ (Fitness) ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಹೊಂದಿದ್ದಾರೆ. ಜಿಮ್ ನಲ್ಲಿ ವರ್ಕ್ಔಟ್ ಮಾಡುವ ಫೋಟೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
'ಬಿಗ್ ಬಾಸ್ 9'ಗೆ ಭರ್ಜರಿ ಸಿದ್ಧತೆ; ಈ ಬಾರಿ ಹೇಗಿದೆ ಬಿಗ್ ಹೌಸ್? ಇಲ್ಲಿದೆ ಅಪ್‌ಡೇಟ್
ಟ್ರಾವೆಲ್ ಅಂದ್ರೆ ಇಷ್ಟ
ಅಂಜಲಿ ಅರೋರ ಇನ್ ಸ್ಟ್ರಾ ಖಾತೆಯಲ್ಲಿ ಭಾರತ ಹಾಗೂ ಜಗತ್ತಿನ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಫೋಟೋಗಳಿವೆ. ರಾಜಸ್ಥಾನ, ಕಾಶ್ಮೀರ, ಫರಿದಾಬಾದ್ ಮುಂತಾದ ಸ್ಥಳಗಳ ಜೊತೆಗೆ ಡಿಸ್ನಿಲ್ಯಾಂಡ್ (Disneyland), ಕ್ಯಾಲಿಫೋರ್ನಿಯಾ (California) ಹಾಗೂ ಮಾಸ್ಕೋಗೆ (Moscow) ಭೇಟಿ ನೀಡಿದ ಫೋಟೋಗಳು ಕೂಡ ಇವೆ. ಅಂಜಲಿ ಅರೋರ ಇತ್ತೀಚೆಗೆ ತಮ್ಮ 26ನೇ ಬರ್ತ್ ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದರು ಕೂಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.