ಬಿಗ್‌ಬಾಸ್, ಗಿಚ್ಚಿ ಗಿಲಿಗಿಲಿ ಸೀಸನ್ ಮೂಲಕ ಯಶಸ್ಸು ಕಂಡ ನಿವೇದಿತಾ ಗೌಡಗೆ ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಬರಲು ಕಾರಣ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ. ಆದರೆ, ಇತ್ತೀಚೆಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಬೇರೆಬೇರೆಯಾಗಿದ್ದರು.
ಬೆಂಗಳೂರು (ಜು.5): ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಬೆನ್ನುಬೆನ್ನಿಗೆ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಹಾಗೂ ರಾಪರ್ ಚಂದನ್ ಶೆಟ್ಟಿ ಜೊತೆಗೆ ವಿಚ್ಛೇದನ ಪಡೆದುಕೊಂಡ ಬಳಿಕ ಇನ್ಸ್‌ಟಾಗ್ರಾಮ್‌ನಲ್ಲಿ ನಿವೇದಿತಾ ಗೌಡ ರೀಲ್ಸ್‌ಗೆ ಕಳೆ ಬಂದಿದೆ. ಅವರ ರೀಲ್ಸ್‌ಗೆ ಹಿಂದಿನದಕ್ಕಿಂತ ಹೆಚ್ಚಿನ ವೀವ್ಸ್‌ಗಳು, ಕಾಮೆಂಟ್‌ಗಳು ಹಾಗೂ ಲೈಕ್ಸ್‌ಗಳು ಬರುತ್ತಿವೆ. ಅದರೊಂದಿಗೆ ಸಾಕಷ್ಟು ಪ್ರಮೋಷನ್, ಕೊಲಾಬ್ರೇಷನ್‌ಗಳನ್ನೂ ನಿವೇದಿತಾ ಭಾಗಿಯಾಗ್ತಿದ್ದಾರೆ. ಮೂರು ದಿನಗಳ ಹಿಂದೆ ನೀಲಿ ಬಣ್ಣದ ಟಾಪ್ ಹಾಗೂ ಅದಕ್ಕೆ ಒಪ್ಪುವಂತ ಶಾರ್ಟ್‌ನಲ್ಲಿ ಸಖತ್ ರೀಲ್ ಮಾಡಿದ್ದಾರೆ. ರೀಲ್‌ನಲ್ಲಿ ಅವರ ಅಂದ-ಚೆಂದಕ್ಕಿಂತ ಹೆಚ್ಚಾಗಿ, ಅವರು ಹಾಕಿಕೊಂಡಿರುವ ಕ್ಯಾಪ್ಶನ್ ಎಲ್ಲರ ಗಮನಸೆಳೆದಿದೆ. 'ನೀವು ಎಂದಾದರೂ ನಿಮ್ಮ ಮಾತುಗಳಿಂದ ಯಾರನ್ನಾದರೂ ಕೆಟ್ಟದಾಗಿ ಅಥವಾ ನೋಯಿಸಿದ್ದೀರಾ ...?' ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಆದರೆ ಕಾಮೆಂಟ್ ಮಾಡಿದ ಯಾರೊಬ್ಬರೂ ಕೂಡ ನಿವೇದಿತಾ ಗೌಡ ಅವರ ಈ ಪ್ರಶ್ನೆಗೆ ಉತ್ತರ ನೀಡಿಲ್ಲ. ಎಲ್ಲರೂ ಕೂಡ ಚಂದನ್ ಶೆಟ್ಟಿ ಅವರನ್ನು ಬಿಟ್ಟಿರುವ ಬಗ್ಗೆಯೇ ನಿವೇದಿತಾ ಗೌಡಗೆ ದೂಷಣೆ ಮಾಡಿದ್ದಾರೆ.
'ಕೇವಲ ರೀಲ್ಸ್ ಮಾಡುವ ಒಂದೇ ಒಂದು ಕಾರಣಕ್ಕೆ ನೀವು ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದುಕೊಂಡಿದ್ದಿರಬಹುದು..' ಎಂದು ಒಬ್ಬರು ಬರೆದಿದ್ದಾರೆ. 'ಕೊನೆಯದಾಗಿ, ಜನರು ತಮ್ಮ ಮಾತುಗಳಿಂದ ಇತರರನ್ನು ಕೆಡವಬೇಕು ಎಂದು ಜನರು ಭಾವಿಸುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ಇದಕ್ಕಾಗಿ ಕ್ಷಮಿಸಿ. ಇದು ಸರಿಯಲ್ಲ, ಮತ್ತು ನೀವು ಅದನ್ನು ನಿಭಾಯಿಸಲು ಕ್ಷಮಿಸಿ. ನೀವು ಪ್ರೀತಿ, ಗೌರವಕ್ಕೆ ಅರ್ಹರು, ಮತ್ತು ದಯೆ - ಮತ್ತು ಈ ಹೋರಾಟದಲ್ಲಿ ನೀವು ಒಬ್ಬಂಟಿಯಾಗಿಲ್ಲ ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ' ಎಂದು ಇನ್ನೊಬ್ಬರು ನಿವೇದಿತಾ ಪರವಾಗಿ ಕಾಮೆಂಟ್ ಮಾಡಿದ್ದಾರೆ.
'ರೀಲ್ಸ್‌ಗಾಗಿ ಗಂಡನನ್ನೇ ಬಿಟ್ಟ ಮಹಾನ್ ತ್ಯಾಗಿ..' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಮದುವೆ ಆಗಿದ್ರೆ ಉರಿನೋರಿಗೆಲ್ಲ ಕಾಸಿಲ್ಲದೆ ಈ ತರ ಪಿಕ್ಚರ್ ತೋರಿಸೋಕೆ ಆಗೋಲ್ಲ ಅಂತಾ ನಿನ್ ಅಭಿಮಾನಿಗಳಿಗೋಸ್ಕರ ಡೈವೋರ್ಸ್ ತಗೊಂಡೆ ಅಲ್ವಾ...... ಥು..' ಎಂದು ಮತ್ತೊಬ್ಬರು ನಿವೇದಿತಾ ಗೌಡ ರೀಲ್ಸ್‌ಗೆ ಟೀಕೆ ಮಾಡಿದ್ದಾರೆ.
ಟೀ-ಕಾಫಿಗಾಗಿ ಡಿವೋರ್ಸ್ ಪಡೆದುಕೊಂಡ ವ್ಯಕ್ತಿಗಳನ್ನ ನಾನು ನೋಡ್ತಿರೋದೇ ಇದೇ ಮೊದಲು ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ರೆ, 'ಈ ಶೋಕಿ ಮಾಡೋಕೆ ಅಂತಾನೆ ಡೈವೋರ್ಸ್ ಕೊಟ್ಟಿದಿಯ ನೀವಿ..' ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಎದೆಯುಬ್ಬಿಸಿ ನಿಂತ ಜ್ಯೋತಿ ರೈ, ಹಾಟ್ ಬ್ಯೂಟಿ ಬರ್ತ್‌ಡೇ ಲುಕ್‌ಗೆ ಫ್ಯಾನ್ಸ್ ಫಿದಾ!
ಒಂದೆಡೆ ನಿವೇದಿತಾ ಗೌಡ ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದರೆ, ಇನ್ನೊಂದೆಡೆ ಚಂದನ್ ಶೆಟ್ಟಿ ಶಿರಡಿ ಯಾತ್ರೆ ಕೈಗೊಂಡಿದ್ದಾರೆ. ಚಂದನ್ ಶೆಟ್ಟಿ ಶಿರಡಿಗೆ ಹೋಗುತ್ತಿರುವ ಸುದ್ದಿ ಗೊತ್ತಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಕೆಲವರು ಸಹಜವಾಗಿ ಕಾಮೆಂಟ್ ಮಾಡಿದ್ರೆ ಇನ್ನೂ ಹಲವರು ಲೈಟ್ ಆಗಿ ಕಾಲೆಳೆದು ಹ್ಯಾಪಿ ಜರ್ನಿ ಎಂದು ವಿಶ್ ಮಾಡಿದ್ದಾರೆ.
'ನನಗೂ ವಿನಯ್ ರಾಜ್‌ಕುಮಾರ್‌ಗೂ ಮದುವೆಯಾಗಿಲ್ಲ..' ಸ್ಪಷ್ಟನೆ ನೀಡಿದ ಸರಳ ಪ್ರೇಮಕಥೆ ನಾಯಕಿ!
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ 2020ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಗಾಯಕ ಹಾಗೂ ನಟ ಚಂದನ್ ಶೆಟ್ಟಿ. ಇತ್ತೀಚೆಗಷ್ಟೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ತೆಗೆದುಕೊಂಡು ಬೇರೆಬೇರೆಯಾಗಿದ್ದಾರೆ.