ಮದ್ವೆ ಆಗೋತನ್ಕ ತಡ್ಕೊಳ್ರಪ್ಪಾ... ಇಲ್ಲೇ ಎಲ್ಲಾ ಮುಗಿಸಬೇಡ್ರಪ್ಪಾ ... ಸೀತಾರಾಮರ ಕಾಲೆಳಿತಿರೋ ಫ್ಯಾನ್ಸ್​

By Suchethana D  |  First Published Jul 5, 2024, 5:21 PM IST

ಮದುವೆಯ ಮನೆಯಲ್ಲಿಯೇ ಸೀತಾ ರಾಮರ ರೊಮಾನ್ಸ್​ ಶುರುವಾಗಿದ್ದು, ಮದುವೆಯಾಗುವವರೆಗೆ ತಡ್ಕೊಳಿ ಅಂತಿದ್ದಾರೆ ನೆಟ್ಟಿಗರು.
 


ಸೀತಾ ಮತ್ತು ರಾಮದ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ನಡೆಯುತ್ತಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ,  ಮದುವೆಯ ಶಾಸ್ತ್ರಗಳೂ ಮುಗಿದು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಸೀತಾ-ರಾಮ ಜೋಡಿ. ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ಒಂದು ಹಂತದಲ್ಲಿ ನಿರುಮ್ಮಳಾಗಿದ್ದಾಳೆ. ಆದರೂ ಮದುವೆ ಮುಗಿಯುವವರೆಗೆ ಏನೋ ಆತಂಕ.  ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್​ ಆಗುತ್ತಲೇ ಇದೆ. ಇದೀಗ ನಿರ್ವಿಘ್ನವಾಗಿ ಮದುವೆ ಮುಗಿಯುವ ಹಾಗೆ ಕಾಣಿಸುತ್ತಿದೆ.

ಆದರೆ ಇದರ ನಡುವೆಯೇ ಮದುವೆಯ ಮನೆಯಲ್ಲಿ ಸೀತಾ ಮತ್ತು ರಾಮರ ರೊಮಾನ್ಸ್​ ಜೋರಾಗಿದೆ. ಒಮ್ಮೆ ರಾಮ್​ ಸೀತಾಳನ್ನು ಹುಡುಕಿ ಬರುವುದು, ಇನ್ನೊಮ್ಮೆ ಸೀತಾ ರಾಮ್​ನನ್ನು ಹುಡುಕಿ ಹೋಗುವುದು. ಬೇರೆ ವೇಷದಲ್ಲಿ ರಾಮ್​ ಬರುವುದು, ಇಬ್ಬರೂ ಯಾರಿಗೂ ಕಾಣದಂತೆ ರೊಮಾನ್ಸ್​ ಮಾಡುವುದು, ಕಿಸ್​ ಕೊಟ್ಟಿಕೊಳ್ಳುವುದು... ಇದೇ ಮುಂದುವರೆದಿದೆ. ಇದ್ಯಾಕೋ ಅತಿಯಾಯ್ತು ಎಂದು ಹೇಳುತ್ತಿರುವ ಕೆಲವು ಸೀರಿಯಲ್​  ಪ್ರೇಮಿಗಳು ನಿಮ್ಮ ರೊಮಾನ್ಸ್​ ಸ್ವಲ್ಪ ತಡ್ಕೊಳ್ರಪ್ಪ, ಮದ್ವೆ ಮುಗಿಯೋ ತನಕ ವೇಟ್​ ಮಾಡ್ರಪ್ಪ ಎನ್ನುತ್ತಿದ್ದಾರೆ. ಪ್ಲೀಸ್​ ಡೈರೆಕ್ಟರ್​ ಸಾಹೇಬ್ರೇ ಮದ್ವೆ ಬೇಗ ಮುಗಿಸಿ, ಇವರ ರೊಮಾನ್ಸ್​ ನೋಡಲು ಆಗ್ತಿಲ್ಲ ಎಂದು ಹಲವರು ಕಾಲೆಳೆಯುತ್ತಿದ್ದಾರೆ. ಇದಕ್ಕೂ ಮುನ್ನ ಸೀತಾಳಿಗೆ ರಾಮ್​ ಕಣ್ಣುಮುಚ್ಚಿ ಸೀರೆ ಉಡಿಸಿದ್ದು ಕೂಡ ಸಕತ್​ ಟ್ರೋಲ್​ ಆಗಿತ್ತು. ಇದೆಲ್ಲಾ ಅತಿಯಾಯ್ತು. ಬೇಗ ಮದ್ವೆ ಮುಗಿಸಿ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು 

Tap to resize

Latest Videos

ಚೆಲುವಾದ ಗೊಂಬೆ... ಚಂದನದ ಮಾಜಿ ಗೊಂಬೆ... ಎನ್ನುತ್ತಲೇ ಹಿಂದೆ ಇರೋದು ಯಾರ ಕೈ ಎಂದು ನಿವೇದಿತಾಗೆ ಕೇಳೋದಾ ನೆಟ್ಟಿಗರು?

ಅಷ್ಟಕ್ಕೂ,  ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ.  ಆದರೂ ಕೆಲವೊಮ್ಮೆ ಅತಿಯಾಗಿ ಎಳೆಯುವುದು ಸರಿಯಲ್ಲ ಎನ್ನುವ ಮಾತು ಕೇಳಿಬರುತ್ತಲೇ ಇದೆ.

ಅದರಲ್ಲಿಯೂ ಸೀತಾರಾಮ ಕಲ್ಯಾಣದ ವಿಶೇಷತೆಯೇ ಬೇರೆ ಇದೆ. ಇವರ ಮದುವೆ ಬೇಗ ಒಳ್ಳೆಯ ರೀತಿಯಲ್ಲಿ ಮುಗಿಯಲಿ ಎನ್ನುವುದು ಅಭಿಮಾನಿಗಳ ಹಾರೈಕೆ. ಇದಾಗಲೇ ರುದ್ರಪ್ರತಾಪನನ್ನು   ಮಟ್ಟ ಹಾಕಲಾಗಿದೆ. ಭಾರ್ಗವಿಯ ಕುತಂತ್ರ ಬಯಲಾಗುವ ಭಯದಲ್ಲಿ ಇರುವ ಕಾರಣ ಸದ್ಯ ಅವಳೂ ಬಾಲ ಮುದುಡಿಕೊಂಡು ಇರುತ್ತಾಳೆ ಎನ್ನುವುದು ಸತ್ಯವಾದರೂ ಸಿಹಿ, ಸೀತಾಳ ಹಿನ್ನೆಲೆ ಮದುವೆಗೆ ವಿಘ್ನ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾದರೆ, ಮದುವೆ ನಡೆಯುತ್ತದೆ, ಆದರೆ ಇದೇ ಹಿನ್ನೆಲೆಯಿಂದಾಗಿಯೇ ಅವರಿಬ್ಬರ ಮದುವೆ ಲೈಫ್​ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್​  ಕುತೂಹಲದಿಂದ ಕೂಡಿದೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. 

ವಾರದ ಏಳು ದಿನ ಯಾವುದು ಎಂದ್ರೆ ಹೀಗೆ ಹೇಳೋದಾ ಅಮೃತಧಾರೆ ಮಲ್ಲಿ! ಮಕ್ಕಳು ಕೇಳಿಸಿಕೊಂಡ್ರೆ ಅಷ್ಟೆ...


click me!