ಚೆಲುವಾದ ಗೊಂಬೆ... ಚಂದನದ ಮಾಜಿ ಗೊಂಬೆ... ಎನ್ನುತ್ತಲೇ ಹಿಂದೆ ಇರೋದು ಯಾರ ಕೈ ಕೇಳೋದಾ ನೆಟ್ಟಿಗರು?

By Suchethana D  |  First Published Jul 5, 2024, 4:57 PM IST

ಚಂದನ್‌ ಶೆಟ್ಟಿ ಜೊತೆ ಡಿವೋರ್ಸ್‌ ಆದ ಬಳಿಕ ಸೈಲೆಂಟ್‌ ಆಗಿದ್ದ ನಿವೇದಿತಾ ಗೌಡ ಮತ್ತೆ ರೀಲ್ಸ್‌ನಲ್ಲಿ ಮುಳುಗಿದ್ದಾರೆ. ನೆಟ್ಟಿಗರು ಕೋಪದಿಂದ ಏನೆಲ್ಲಾ ಹೇಳ್ತಿದ್ದಾರೆ ನೋಡಿ...  
 


ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ ನಟಿ, ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ಇದೀಗ ನಿವೇದಿತಾ ಅವರು ಬಾರ್ಬಿ ಡಾಲ್​ ರೀತಿಯಲ್ಲಿ ಕ್ಯೂಟ್​ ಆಗಿ ಡ್ರೆಸ್​  ಮಾಡಿಕೊಂಡು ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿ ಕಮೆಂಟ್ಸ್​ ಮಾಡಿದ್ದಾರೆ.

ಆದರೆ ಕೆಲವು ತರ್ಲೆಗಳು ಚೆಲುವಾದ ಗೊಂಬೆ, ಚಂದನದ ಗೊಂಬೆ ಎನ್ನುವ ಬದಲು ಚಂದನದ ಮಾಜಿ ಗೊಂಬೆ ಎಂದು ನಿವೇದಿತಾರ ಕಾಲೆಳೆದಿದ್ದಾರೆ. ಈ ರೀಲ್ಸ್​ನಲ್ಲಿ ಡಿಸೈನರ್​ ಅವರ ಕೈ ಕಾಣಿಸುತ್ತಿದ್ದು, ಸುಖಾ ಸುಮ್ಮನೆ ನಿವೇದಿತಾರನ್ನು ರೇಗಿಸಿರುವ ಕೆಲವು ತರ್ಲೆಗಳು ಹಿಂದೆ ಇರುವ ಕೈ ಯಾರದ್ದು ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಒಹೊ ಮಗು ಮತ್ತೆ ಆ್ಯಕ್ಟೀವ್​ ಆಗಿದೆ ಎನ್ನುತ್ತಿದ್ದರೆ, ಸುಮ್ಮನೇ ಸಂಸಾರ ಮಾಡಿಕೊಂಡು ಚಂದನ್​ ಜೊತೆಗೆ ಇರಲು ನಿನಗೆ ಏನು ಆಗಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಆಗ ಬೇರೆ ರೀತಿ, ಈಗ ಬೇರೆ ರೀತಿಯಲ್ಲಿ ನಿವೇದಿತಾ ಕಾಲೆಳೆಯುವುದನ್ನೇ ನೋಡುತ್ತಿದ್ದಾರೆ ಟ್ರೋಲಿಗರು. 

Tap to resize

Latest Videos

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

ಅದರಲ್ಲಿಯೂ ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. 

ಅಷ್ಟಕ್ಕೂ ಮೊದಲಿನಿಂದಲೂ  ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಗ್‌ಬಾ‌ಸ್‌ ಬೆಡಗಿ, ಗೊಂಬೆ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ, ಡಿವೋರ್ಸ್‌ ಕೇಸ್‌ ಬಳಿಕ ಕೆಲ ದಿನ ಸೈಲೆಂಟ್‌ ಆಗಿದ್ರು. ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್​ ಆಗುವ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ ಮೇಲೆ ಕೆಲ ತಿಂಗಳುಗಳಿಂದ ಇನ್ನಷ್ಟು ಹಾಟ್​ ಆಗಿಯೇ ನಟಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇವರಿಬ್ಬರ  ಡಿವೋರ್ಸ್ ಪ್ರಕರಣ  ಅಭಿಮಾನಿಗಳಿಗೆ  ಶಾಕ್‌ ಕೊಟ್ಟಿತ್ತು. ಸ್ವಲ್ಪ ದಿನ ಸುಮ್ಮನೆ ಇದ್ದ ನಟಿ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು ರೀಲ್ಸ್‌ ಮಾಡಿದ್ದಾರೆ. ಡಿವೋರ್ಸ್​ ಬಳಿಕ  ಸಿಂಪಲ್‌ ಡ್ರೆಸ್‌ನಲ್ಲಿ ಮಿಂಚಿದ್ದ ನಿವೇದಿತಾ, ಈಗ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. 

ವಾರದ ಏಳು ದಿನ ಯಾವುದು ಎಂದ್ರೆ ಹೀಗೆ ಹೇಳೋದಾ ಅಮೃತಧಾರೆ ಮಲ್ಲಿ! ಮಕ್ಕಳು ಕೇಳಿಸಿಕೊಂಡ್ರೆ ಅಷ್ಟೆ...

click me!