ಬಿರಿಯಾನಿಗೆ ಕಾಫಿ ಮಿಕ್ಸ್‌, ರಸ್ತೆಯಲ್ಲಿ 500 ರೂಪಾಯಿಗೆ ಜಗಳ: ನಿವೇದಿತಾ ಗೌಡ ವಿಡಿಯೋ ವೈರಲ್

By Vaishnavi Chandrashekar  |  First Published Jan 5, 2023, 3:50 PM IST

ವಿಚಿತ್ರ ಪ್ರಯೋಗಕ್ಕೆ ಮುಂದಾದ ನಿವೇದಿತಾ ಗೌಡ. ಬಕ್ರ ಮಾಡಲು ಹೋಗಿ 500 ರೂಪಾಯಿ ಕಳೆದುಕೊಂಡ ನಟಿ.. 
 


ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಲಿವಿಂಗ್‌ಯಿಂದ ಹಿಡಿದು ಡ್ರೆಸ್ಸಿಂಗ್‌ವರೆಗೂ ಹೇಗಿರುತ್ತಾರೆ ಏನು ಮಾಡುತ್ತಾರೆ ಎನ್ನುವ ಕ್ಯೂರಿಯಾಗಿಸಿ ಜನರಿಗೆ ಹೆಚ್ಚಿದೆ. ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವಿ ನೆಟ್ಟಿಗರಿಗೆ ನಾಲ್ಕು ಪ್ರಶ್ನೆ ಕೇಳುತ್ತಾರೆ. ಜನರು ಯಾವ ಉತ್ತರ ಕೊಡುತ್ತಾರೆ ಅದರ ಪ್ರಕಾರ ಒಂದು ದಿನ ನಡೆದುಕೊಳ್ಳುವುದಾಗಿ ಹೇಳುತ್ತಾರೆ. ನಿವಿ ಸುಳ್ಳು ಹೇಳುತ್ತಿರಬಹುದು ಎಂದು ಅನೇಕು ಕಾಮೆಂಟ್ ಮಾಡಿದ್ದರು ಹೀಗಾಗಿ ವಿಡಿಯೋ ಮಾಡಿದ್ದಾರೆ. 

'ನನ್ನ ದಿನ ಹೇಗಿರಬೇಕು ಎಂದು ಇನ್‌ಸ್ಟಾಗ್ರಾಂ ಫ್ಯಾಮಿಲಿ ನಿರ್ಧಾರ ಮಾಡಿದೆ. ಈ ರೀತಿ ಎಂದೂ ಮಾಡಿರಲಿಲ್ಲ ಹೀಗಾಗಿ ನಾನು ಖುಷಿಯಾಗಿರುವೆ. ಮೊದಲ ಪ್ರಶ್ನೆ, ನಾನು ಇವತ್ತು ರೆಡಿಯಾದಾಗ ಹೀಲ್ಸ್‌ ಹಾಕಬೇಕಾ ಅಥವಾ ಫ್ಲ್ಯಾಟ್ಸ್‌? ಎಂದು ಪ್ರಶ್ನೆ ಕೇಳಿದ್ದೆ ಅದಿಕ್ಕೆ 63% ಜನ ಹೀಲ್ಸ್‌ ಅಂದಿದ್ದಾರೆ 37% ಜನರ ಫ್ಲ್ಯಾಟ್ಸ್‌ ಅಂತ ಹೇಳಿದ್ದಾರೆ. ಎರಡನೇ ಪ್ರಶ್ನೆ, ಯಾವುದರಲ್ಲಿ ಪ್ರಯಾಣ ಮಾಡಲಿ ಬಸ್/ ಮೆಟ್ರೋ ಅಥವಾ ಕಾರ್ ಎಂದು. 65% ಮೆಟ್ರೋ ಎಂದಿದ್ದಾರೆ 35% ಜನರ ಕಾರ್ ಹೇಳಿದ್ದಾರೆ. ಮೆಟ್ರೋದಲ್ಲಿ ಓಡಾಡುವುದು ಅಂದ್ರೆ ಇಷ್ಟನೇ ಆಗೋಲ್ಲ ಏಕೆಂದರೆ ಮೆಟ್ರೋ ಬೇಕು ಅಂದ್ರೆ ಗಾಡಿ ತೆಗೆದುಕೊಂಡು ಹೋಗಬೇಕು ಅಲ್ಲಿಂದ ಮೆಟ್ರೋ ಮತ್ತೆ ಅಲ್ಲಿ ಇಳಿದು ಮತ್ತೊಂದು ಗಾಡಿ ಇದೆಲ್ಲಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬದಲಿಗೆ ಗಾಡಿಯಲ್ಲಿ ನೇರವಾಗಿ ಹೋಗಬಹುದು. ಚಂದನ್ ಕೂಡ ಮೆಟ್ರೋ ಬಳಬೇಕು ಅಂತಿದ್ದರು ಬರಲ್ಲ ಎಂದು ಹೇಳಿದೆ. ಇವತ್ತು ನೀವು ಹೇಳಿರುವುದಕ್ಕೆ ಒಂದು ಸಲ ಪ್ರಯಾಣ ಮಾಡುವೆ' ಎಂದು ನಿವೇದಿತಾ ಗೌಡ ಮಾತನಾಡಿದ್ದಾರೆ.

Tap to resize

Latest Videos

'ಮೂರನೇ ಪ್ರಶ್ನೆ, ನಾನು ಯಾರಿಗೆ ಪ್ರ್ಯಾಂಕ್ ಮಾಡಬೇಕು ಸ್ನೇಹಿತರು ಅಥವಾ ಅಪರಿಚಿತರು. 50% ಸ್ನೇಹಿತರು 50% ಅಪರಿಚಿತರು ಎಂದು ಹೇಳಿದ್ದಾರೆ. ಹೀಗಾಗಲೆ ನಾನು ಫ್ಯಾಮಿಲಿಗೆ ಪ್ರ್ಯಾಂಕ್ ಮಾಡಿರುವ ಕಾರಣ ಅಪರಿಚಿತರಿಗೆ ಪ್ರ್ಯಾಂಕ್ ಮಾಡುವೆ. ನಾಲ್ಕನೇ ಪ್ರಶ್ನೆ, ಯಾವುದನ್ನು ತಿನ್ನಬೇಕು ಮೊಸರು ಜೊತೆ ಜಿಲೇಬಿ ಮತ್ತು ಮೊಸರು ಅಥವಾ ಬಿರಿಯಾನಿ ಮತ್ತು ಕಾಫಿ. 69% ಜನ ಬಿರಿಯಾಗಿ ಕಾಫಿ 31% ಜನ ಬಿಲೇಬಿ ಮೊಸರು ಆಯ್ಕೆ ಮಾಡಿದ್ದಾರೆ. ಎಲ್ಲವೂ ಡಿಫರೆಂಟ್ ಆಗಿದೆ ಬನ್ನಿ ಟ್ರೈ ಮಾಡೋಣ' ಎಂದು ನಿವಿ ವಿಡಿಯೋ ಆರಂಭಿಸಿದ್ದಾರೆ.

ಮಕ್ಳು ಮಾಡ್ಕೊಂಡ್ರೆ ಅವ್ರೆ ನಂಗೆ ಊಟ ಮಾಡಿಸಬೇಕು; ತಾಯಿತನದ ಬಗ್ಗೆ ನಿವೇದಿತಾ ಗೌಡ ಶಾಕಿಂಗ್ ಹೇಳಿಕೆ

ಬಿರಿಯಾನಿಗೆ ಕಾಫಿ ಸೇರಿಸಿಕೊಂಡು ತಿಂದು ನಿವಿ ಕೆಟ್ಟದಾಗಿ ಮುಖ ಮಾಡಿದ್ದಾರೆ. ಅಂದುಕೊಂಡ ರೀತಿಯಲ್ಲಿ ಕೆಟ್ಟದಾಗಿಲ್ಲ ಬಿರಿಯಾನಿನ ನೀರಿನಲ್ಲಿ ತೊಳೆದರೆ ಹೇಗಿರುತ್ತದೆ ಅದೇ ರೀತಿ ಇದೆ ಆದರೆ ಇದಕ್ಕೆ ಕಾಫಿ ಮಿಕ್ಸ್‌ ಆಗಿದೆ. ಇದನ್ನು ಯಾರು ಮನೆಯಲ್ಲಿ ಪ್ರಯೋಗ ಮಾಡಬೇಡಿ ಎಂದಿದ್ದಾರೆ. ಹೀಲ್ಸ್‌ ಧರಿಸಿ ಇಡೀ ದಿನ ಪ್ರಯಾಣ ಮಾಡಿದ್ದಾರೆ. ಮೆಟ್ರೋ ಟ್ರೈನ್‌ ಬರುತ್ತಿದ್ದಂತೆ ಫಿಲ್ಮಿ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದಾದ ಮೇಲೆ ಇಬ್ಬರಿಗೆ ಪ್ರ್ಯಾಂಕ್ ಮಾಡಿದ್ದಾರೆ. ರಸ್ತೆಯಲ್ಲಿ 500 ರೂಪಾಯಿ ಬೀಳಿಸಿ ಯಾರ ಹಣ ಎಂದು ಕೇಳಲು ಮುಂದಾಗುತ್ತಾರೆ. ಒಂದು ಜೋಡಿ ನಮ್ಮದಲ್ಲ ಎಂದು ಸತ್ಯ ಒಪ್ಪಿಕೊಂಡು ನಿವೇದಿತಾ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ, ಎಳೆನೀರು ಮಾರಾಟ ಮಾಡುವ ಮಹಿಳೆ ನನ್ನ ಹಣ ಎಂದು ಹೇಳುತ್ತಾಳೆ ಆಗ ನಿವಿ ಜಗಳ ಮಾಡುತ್ತಾರೆ. ಸುಮಾರು ಹೊತ್ತು ವಾದ-ವಿವಾದ ನಡೆದ ನಂತರ ಕ್ಯಾಮೆರಾ ಇದೆ ನಿಮಗೆ ಫೋಲ್ ಮಾಡಿದ್ದು ಎಂದು ಹೇಳುತ್ತಾರೆ. ನಿವಿ ತುಂಟಾಟ ನೋಡಿ ಕೆಲವರು ಖುಷಿ ಪಟ್ಟಿದ್ದಾರೆ ಇನ್ನೂ ಕೆಲವರು ವೀಕ್ಷಣೆ ಬೇಕೆಂದು ಮತ್ತೊಬ್ಬರ ಭಾವನೆ ಜೊತೆ ಆಟ ಆಡಬೇಡಿ ಎಂದು ಹೇಳಿದ್ದಾರೆ. 

 

click me!