ವೇಟ್‌ಲಾಸ್‌ನಿಂದ ಲಕ್ಷಗಟ್ಟಲೆ ಹಣ ಕಳೆದುಕೊಂಡೆ; ಬಾಡಿ ಶೇಮಿಂಗ್‌ ಬಗ್ಗೆ ಮೌನ ಮುರಿದ ಪ್ರಥಮಾ ಪ್ರಸಾದ್

By Vaishnavi Chandrashekar  |  First Published Jan 5, 2023, 12:43 PM IST

ನಿಮ್ಮ ತಾಯಿಗಿಂತ ನೀವೇ ತಾಯಿ ರೀತಿ ಕಾಣಿಸುತ್ತಿದ್ದೀರಿ ಎಂದು ಪ್ರಥಮಾ ಪ್ರಸಾದ್ ಕಾಲೆಳೆದವರಿಗೆ ಕಿವಿ ಮಾತು ಹೇಳಿದ ನಟಿ.... 


ಕನ್ನಡ ಕಿರುತೆರೆ ಅದ್ಭುತ ಕಲಾವಿದೆ ಪ್ರಥಮಾ ಪ್ರಸಾದ್ ಕೆಲವು ತಿಂಗಳುಗಳ ಹಿಂದೆ ಬಾಡಿ ಶೇಮಿಂಗ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ನಟ ಕಮ್ ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಾಲ್ಯದಿಂದಲೂ ಬಾಡಿ ಶೇಮಿಂಗ್ ಎದುರಿಸುತ್ತಿರುವುದಾಗಿ ಪ್ರಥಮಾ ಮಾತನಾಡಿದ್ದಾರೆ. ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದಾಗ ಏನೆಲ್ಲಾ ಕಷ್ಟಗಳು ಅನುಭವಿಸಿದ್ದರು ಎಂದು ಹೇಳಿಕೊಂಡಿದ್ದಾರೆ. 

'ಬಾಡಿ ಶೇಮಿಂಗ್ ಅನ್ನೋದು ನಾನು ತುಂಬಾ ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಒಂದು ವಿಚಾರ. ನಿಮಗೆ ಯಾವುದಾದರೂ ಕೆಟ್ಟ ಚಟಗಳು ಅಂದ್ರೆ ವಿಪರೀತ ತಿನ್ನೋದು ವಿಪರೀತ ಕುಡಿಯುವುದು ಇಲ್ಲ ಅಂದ್ರೆ ನೀವಾಗಿ ನೀವೇ ಮಾಡಿಕೊಂಡಿರುವ ಫ್ಯಾಟ್ ದೇಹ ತುಂಬಿಕೊಳ್ಳುವುದಿಲ್ಲ. ಹಾರ್ಮೋನಲ್ ಸಮಸ್ಯೆ ಇರುತ್ತದೆ, ಮೆಡಿಕಲ್ ಸಮಸ್ಯೆ ಅಥವಾ ಆನುವಂಶಿಕವಾಗಿರುತ್ತದೆ, ಕೆಲವರ ದೇಹ ಪ್ರಕೃತಿ ಆ ರೀತಿ ಮಾಡಿರುತ್ತದೆ. ಅಷ್ಟಕ್ಕೂ ಬ್ಯೂಟಿ ಸ್ಟ್ಯಾಂಡರ್ಡಸ್‌ನ ಡಿಫೈನ್ ಮಾಡಿದವರು ಯಾರು? ಎಲ್ಲರೂ ಒಂದೇ ರೀತಿಯಲ್ಲಿ ಫಿಟ್‌ಇನ್ ಆಗಬೇಕು ಅಂತ ಮಾಡಿದವರು ಯಾರು? ಕೆಲವರು ತೆಳ್ಳಗಿರುತ್ತಾರೆ ಕೆಲವರು ಸ್ವಲ್ಪ ದಪ್ಪ ಇರುತ್ತಾರೆ ಕೆಲವರು ಬಿಳಿ ಇರುತ್ತಾರೆ ಕೆಲವರು ಕಂದು ಮೈ ಬಣ್ಣ ಇರುತ್ತಾರೆ ಕೆಲವರು ಕಪ್ಪು ಏನಿವಾಗ? ಇದೆಲ್ಲವೂ ದೇವರ ಸೃಷ್ಠಿ ಪ್ರಕೃತಿ. ನಾನು ಇಲ್ಲಿ ಪ್ರಕೃತಿ ವಿರುದ್ಧವಾಗಿ ಹೋಗುತ್ತೀನಿ ನಾನು ಸಣ್ಣ ಆಗೋಕೆ ಆಪರೇಷನ್ ಮಾಡಿಸಿಕೊಳ್ಳುತ್ತೀನಿ ಪುಡಿ ನುಂಗಿ ದಪ್ಪ ಆಗುತ್ತೀನಿ ಇದೆಲ್ಲಾ nonsense.' ಎಂದು ಪ್ರಥಮಾ ಮಾತನಾಡಿದ್ದಾರೆ. 

Tap to resize

Latest Videos

'ಬಾಡಿ ಶೇಮಿಂಗ್ ವಿಚಾರ ನನ್ನ ಜೀವನಕ್ಕೆ ಬಂದಾಗ ನಾನು ಮುಂಚಿನಿಂದಲೂ ಸ್ವಲ್ಪ chubby ಆಗಿದ್ದ ಮಗು. ಮೊದಲನೇ ಮೊಮ್ಮಗು ಆಗಿದ್ದ ಕಾರಣ ಚೆನ್ನಾಗಿ ಬೆಣ್ಣೆ ತುಪ್ಪ ಹಾಲು ಹಾಕಿ ಬೆಳೆಸಿದ್ದಾರೆ. ಒಂದು ಸಮದಯಲ್ಲಿ ನಾನು ವಿಪರೀತ ಸಣ್ಣ ಆಗಿದ್ದೆ. ಗ್ಲಾಮರ್ ಅಂತ ಬಂದಾಗ ಸ್ಕ್ರೀನ್ ತುಂಬಾ ನೀವೇ ಕಾಣಿಸುತ್ತೀರ ನಿಮ್ಮನ್ನು ನಾವು ಇಡುವುದಕ್ಕೆ ಆಗೋಲ್ಲ Fat for the role ಹೀಗೆ ಡೈರೆಕ್ಟ್‌ ಆಗಿ ನನ್ನ ಮುಖಕ್ಕೆ ಹೇಳಿದ್ದಾರೆ. ಕಲಾವಿದೆ ಆಗಿ ಇದರ ಬಗ್ಗೆ ನಾನು ತುಂಬಾ ಹೀಯಾಳಿಸಿಕೊಂಡು ಮಾತನಾಡಬಾರದು. ನನ್ನ ವಯಸ್ಸು ಕಡಿಮೆ ಇದ್ದರೂ ಕೂಡ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುತ್ತಿರುವೆ. ನನ್ನ ವಯಸ್ಸಿಗೆ ತಾಯಿ ಪಾತ್ರ ಯಾಕೆ ಎಂದು ಕೇಳಿದ್ದರೆ ಸ್ಕ್ರೀನ್ ಮೇಲೆ ನೀವು ಹಾಗೆ ಕಾಣಿಸುತ್ತೀರಿ ಎನ್ನುತ್ತಾರೆ. ಎಷ್ಟರ ಮಟ್ಟಕ್ಕೆ ಈ ಮಾತುಗಳು ನೋವಾಗುತ್ತದೆ ಅಂದ್ರೆ ಒಬ್ಬ ವ್ಯಕ್ತಿ ಮನಸ್ಸು ಮುರಿಯುತ್ತದೆ ಒಬ್ರು ಗಂಡಸೇ ಆಗಿರಲಿ ಹೆಂಗಸೇ ಆಗಿರಲಿ ತುಂಬಾ ನೋವಾಗುತ್ತದೆ' ಎಂದು ಪ್ರಥಮಾ ಹೇಳಿದ್ದಾರೆ.

ನನ್ನ ಮಗುವಿಗೋಸ್ಕರ ಬದುಕಬೇಕು; ಡಿಪ್ರೆಶನ್‌ಗೆ ಜಾರಿದ ನಟಿ ಪ್ರಥಮ್ ಪ್ರಸಾದ್ ಕಿವಿ ಮಾತು

'ಬಾಡಿ ಶೇಮಿಂಗ್‌ನ ನಾನು ಎಷ್ಟು ಅನುಭವಿಸಿದ್ದೀನಿ ಅದರಿಂದ ನಾನು ಈಗ ಗಟ್ಟಿ ಮನಸ್ಸು ಮಾಡಿದ್ದೀನಿ. ವೇಟ್‌ಲಾಸ್‌ ಕಾರ್ಯಕ್ರಮಗಳು ಫಿಟ್ನೆಸ್ ವಿಚಾರ ಏನೇ ಇರಲಿ ನಾನು ಅಲ್ಲಿಗೆ ಹೋಗುವುದಿಲ್ಲ ಆದರೆ ಲಕ್ಷಗಟ್ಟಲೆ ಕಳೆದುಕೊಂಡಿರುವುದು ಮಿರಾಕಲ್ ಡ್ರಿಂಕ್ಸ್‌ ಮತ್ತು ಮಾತ್ರೆಗಳಿಂದ ನನ್ನ ಆರೋಗ್ಯ ಕಳೆದುಕೊಂಡಿದ್ದೆ. ಆಪರೇಷನ್ ಮಾಡಿಸಿಕೊಳ್ಳುವ ಸಲಹೆ ನನಗೂ ಕೊಟ್ಟಿದ್ದರು ಜೀವನ ಇಲ್ಲದೆ ಸಣ್ಣ ದಪ್ಪ ಇದು ಏನು ಮಾಡಬೇಕು? ಒಂದು ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಹೊರ ಹೋಗಬೇಕು ಅಂದ್ರೆ concious ಆಗುತ್ತಿದ್ದೆ. ಸ್ಟೇಜ್‌ ಮೇಲೆ ಹೋಗಬೇಕು ಅಂದ್ರೆ concious ಆಗುತ್ತಿದ್ದೆ. ಕ್ಯಾಮೆರಾದಲ್ಲಿ ನನ್ನನ್ನು ನಾನು ನೋಡಿಕೊಂಡರೆ concious ಆಗುತ್ತಿದ್ದೆ. ಆಮೇಲೆ ನಾನು ಯೋಚನೆ ಮಾಡುತ್ತಿದ್ದೆ ಪ್ರಪಂಚದಲ್ಲಿ  ಇಷ್ಟೆಲ್ಲ ಸಮಸ್ಯೆಗಳಿದೆ ಊಟಕ್ಕೆ ಗತಿ ಇಲ್ಲದವರು ಇದ್ದಾರೆ ಮನೆ ಇಲ್ಲದವರು ನರಳುತ್ತಿದ್ದಾರೆ ಇದೆಲ್ಲ ಒಂದು ಸಮಸ್ಯೆನಾ? ಬಾಡಿ ಫ್ಯಾಟ್ ಅಥವಾ ಬಾಡಿ thin ಅನ್ನೋದು ದೊಡ್ಡ ಸಮಸ್ಯೆನಾ? ಭಗವಂತನ ದಯೆಯಿಂದ ಎರಡು ಹೊತ್ತು ಊಟ ಮಾಡುತ್ತಿದ್ದೀವಿ ಒಂದು ಮುದ್ದಾದ ಸಂಸಾರವಿದೆ. ಮರ್ಯಾದೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬೇಡ್ವಾ? ಕೋವಿಡ್ ಸಮಯದಲ್ಲಿ ಇದರ ಬಗ್ಗೆ ಅರಿವು ತುಂಬಾ ಆಯ್ತು' ಎಂದಿದ್ದಾರೆ ಪ್ರಥಮಾ. 

ಅಬ್ಬಬ್ಬಾ, ವಿನಯಾ ಪ್ರಸಾದ್ ಮಗಳು ನೀವಂದುಕೊಂಡ ಹಾಗಲ್ಲ!

'ಬಹಳ ವರ್ಷಗಳಿಂದ ಬಾಡಿ ಶೇಮಿಂಗ್ ಬಗ್ಗೆ ಏನ್ ಏನು ಹೀಯಾಳಿಕೆ ಇದೆ ಅದನ್ನು ಅನುಭವಿಸಿಕೊಂಡು ಬಂದವಳು ನಾನು. ಎಲ್ಲರೂ ತೆಳ್ಳಗೆ ಬೆಳ್ಳಗೆ ಇರಬೇಕು ಅನ್ನೋದು ಮೂರ್ಖತನ. ನನಗೆ ಆಪರೇಷನ್ ಆದ ಸಮದಯಲ್ಲಿ ಅಥವಾ ಕೋವಿಡ್ ಬಂದ ಸಮಯದಲ್ಲಿ ಸ್ಟಿರಾಯ್ಡ್ ನೀಡಿದಕ್ಕೆ ರೆಗ್ಯುಲರ್‌ನಿಂದ ಎಕ್ಸಟ್ರಾ ಲಾರ್ಜ್‌ಗೆ ಬಂದು. ಮಗು ಹುಟ್ಟದ್ದಾಗ ದೇಹ ಬದಲಾಗುತ್ತದೆ. ನನ್ನ ತಾಯಿ ಜೊತೆ ಹೊಲಿಸುತ್ತಾರೆ. ನಿಮ್ಮ ತಾಯಿಗಿಂತ ನೀವೇ ತಾಯಿ ರೀತಿ ಕಾಣಿಸುತ್ತಾರೆ ಎಂದು ಮುಖಕ್ಕೆ ಹೇಳುತ್ತಾರೆ' ಎಂದು ಪ್ರಥಮಾ ಮನಬಿಚ್ಚಿ ಮಾತನಾಡಿದ್ದಾರೆ.  

click me!