Lakshana Serial: 500 ರೂಪಾಯಿಯಲ್ಲಿ ಮನೆ ನಿಭಾಯಿಸೋ ಟಾಸ್ಕ್, ನಕ್ಷತ್ರಾ ಗೆಲ್ಲುತ್ತಾಳಾ?

By Contributor Asianet  |  First Published Jan 5, 2023, 3:17 PM IST

ಲಕ್ಷಣ ಸೀರಿಯಲ್‌ ಸದ್ಯಕ್ಕೀಗ ಎಲ್ಲರ ಗಮನ ಸೆಳೆಯುತ್ತಿದೆ. ಇದರಲ್ಲೀಗ ನಕ್ಷತ್ರಾ ಮತ್ತು ಶ್ವೇತಾಗೆ ಹೊಸ ಟಾಸ್ಕ್ ಸಿಕ್ಕಿದೆ. 500 ರೂಪಾಯಿಯಲ್ಲಿ ಮನೆ ನಡೆಸೋ ಟಾಸ್ಕ್‌. ಇದರಲ್ಲಿ ನಕ್ಷತ್ರಾ ಗೆಲ್ಲುತ್ತಾಳಾ?


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷಣ. ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ನಕ್ಷತ್ರಾ ಅತ್ತೆ ಶಕುಂತಳಾ ದೇವಿಯಿಂದಲೇ ತನ್ನ ಸೊಸೆ ಅಂತ ಕರೆಸಿಕೊಳ್ತಾಳ ಅನ್ನೋದು ಟಾಸ್ಕ್‌. ಇಷ್ಟು ದಿನ ನಕ್ಷತ್ರಳನ್ನ ಸೊಸೆ ಅಂತ ಶಕುಂತಲಾ ದೇವಿ ಪರಿಗಣಿಸುತ್ತಿರಲಿಲ್ಲ. ಉಳಿದಿಬ್ಬರು ಸೊಸೆಯರಾದ ಮಯೂರಿ ಹಾಗೂ ಶೆರ್ಲಿ ಅವರನ್ನೂ ಶಕುಂತಲಾ ದೇವಿ ‘ಸೊಸೆ’ ಎಂದು ಪರಿಗಣಿಸಿಲ್ಲ. ಇದೀಗ ಚಂದ್ರಶೇಖರ್ ಕೊಟ್ಟಿರುವ ಟಾಸ್ಕ್‌ನಲ್ಲಿ ನಕ್ಷತ್ರ ಗೆದ್ದುಬಿಟ್ಟರೆ ಆಡಿದ ಮಾತಿನಂತೆ ಶಕುಂತಲಾ ದೇವಿ ನಡೆಯಲೇಬೇಕಿದೆ. ನಕ್ಷತ್ರಾ ಮತ್ತು ಶ್ವೇತಾ ಇಬ್ಬರೂ ಈ ಟಾಸ್ಕ್‌ನಲ್ಲಿದ್ದಾರೆ. ಯಾರು ಟಾಸ್ಕ್‌ ಗೆಲ್ತಾರೋ ಅವರಿಗೆ ಸೊಸೆ ಪಟ್ಟ ಪಕ್ಕಾ!

ಶಕುಂತಲಾ ದೇವಿ ನಕ್ಷತ್ರ ಮದುವೆ ಆಗಿರುವ ಭೂಪತಿಯ ತಾಯಿ. ಆಕೆಗೆ ಭೂಪತಿ ಜೊತೆ ಶ್ವೇತಾಳನ್ನು ಮದುವೆ ಮಾಡುವ ಆಸೆ ಇತ್ತು. ಈಗಲೂ ಇದೆ. ಜೊತೆಗೆ ನಕ್ಷತ್ರಗೆ ಇಂಗ್ಲೀಷ್ ಬರಲ್ಲ..ಕಾಂಟಿನೆಂಟಲ್ ಫುಡ್ (Continental Food) ಬಗ್ಗೆ ಅರಿವಿಲ್ಲ ಎಂಬುದು ಸಿಟ್ಟು ತಂದಿದೆ. ಕಳೆದ ಎಪಿಸೋಡ್‌ನಲ್ಲಿ 'ಮನೆಗೆ ವಿದೇಶದಿಂದ ಡೆಲಿಗೇಟ್ಸ್ ಬರ್ತಾರೆ.. ಅವರಿಗೆ ಬೇಕಾಗಿರುವ ಅಡುಗೆ ಮಾಡು' ಎಂದು ನಕ್ಷತ್ರಗೆ ಶಕುಂತಲಾ ದೇವಿ ಸೂಚಿಸಿದ್ದರು. ನಕ್ಷತ್ರ ಸಾಂಪ್ರದಾಯಿಕ ಅಡುಗೆ (Traditional Dishes) ಮಾಡಿದ್ದಕ್ಕೆ ಶಕುಂತಲಾ ದೇವಿ ಸಿಡಿಮಿಡಿಗೊಂಡಿದ್ದರು. 'ನಕ್ಷತ್ರಗೆ ಕಾಂಟಿನೆಂಟಲ್ ಫುಡ್‌ ಬಗ್ಗೆ ಅರಿವಿಲ್ಲ. ಶ್ವೇತಾನೇ ನನಗೆ ತಕ್ಕ ಸೊಸೆ' ಎಂದು ಶಕುಂತಲಾ ದೇವಿ ಹೇಳಿದ್ದರು. ಇದು ನಕ್ಷತ್ರಾಗೆ ಬಹಳ ನೋವು ತಂದಿತ್ತು.

ಮತ್ತೆ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರಂತೆ ಅಗ್ನಿಸಾಕ್ಷಿ ವೈಷ್ಣವಿ, ಸೂರ್ಯ!

Tap to resize

Latest Videos

ನಕ್ಷತ್ರಳನ್ನ ಶ್ವೇತಾಗೆ ಹೋಲಿಸಿದ್ದು ಆಕೆಯ ರಿಯಲ್‌ ತಂದೆ ತಾಯಿಗಳಾದ ಚಂದ್ರಶೇಖರ್ ಹಾಗೂ ಆರತಿಗೂ ಹರ್ಟ್ ಆಗಿದೆ. ಅವರು ಒಂದು ಟಾಸ್ಕ್ ನೀಡಿದ್ದಾರೆ. ಶ್ವೇತಾ ಮತ್ತು ನಕ್ಷತ್ರ ಮಧ್ಯೆ ಯಾರು ಬೆಸ್ಟ್ ಅಂತ ಶಕುಂತಲಾ ದೇವಿಗೆ ಗೊತ್ತಾಗಬೇಕು ಎಂದು ಚಂದ್ರಶೇಖರ್ - ಆರತಿ ದಂಪತಿ ಇಬ್ಬರಿಗೂ ಈ ಟಾಸ್ಕ್ ನೀಡಿದ್ದಾರೆ. 500 ರೂಪಾಯಿ ದುಡ್ಡಿನಲ್ಲಿ ಒಂದು ದಿನ ಇಡೀ ಮನೆಯನ್ನ ಮ್ಯಾನೇಜ್ ಮಾಡಲು ನಕ್ಷತ್ರ ಹಾಗೂ ಶ್ವೇತಾಗೆ ಚಂದ್ರಶೇಖರ್ ಟಾಸ್ಕ್ ಕೊಟ್ಟಿದ್ದಾರೆ. ಚಂದ್ರಶೇಖರ್‌ಗೆ ಮೊದಲಿಂದಲೂ ನಕ್ಷತ್ರ ಬಗ್ಗೆ ವಿಶ್ವಾಸ. ಈಗ ಈ ಟಾಸ್ಕ್‌ನಲ್ಲಿ ನಕ್ಷತ್ರ ಗೆದ್ದೇ ಗೆಲ್ಲುತ್ತಾಳೆ ಎಂಬ ನಂಬಿಕೆ ಚಂದ್ರಶೇಖರ್‌ಗಿದೆ. ಹೀಗಾಗಿ, ಚಂದ್ರಶೇಖರ್‌ಗೆ ಶಕುಂತಲಾ ದೇವಿ ಸವಾಲು ಹಾಕಿದ್ದಾರೆ. 'ಒಂದ್ವೇಳೆ ನಕ್ಷತ್ರ ಗೆದ್ದರೆ ನಾನು ಆಕೆಯನ್ನ ಸೊಸೆ ಅಂತ ಒಪ್ಪಿಕೊಳ್ಳುತ್ತೇನೆ. ಒಂದ್ವೇಳೆ ನಕ್ಷತ್ರ ಗೆಲ್ಲದೇ ಹೋದರೆ.. ಆಕೆ ಶಾಶ್ವತವಾಗಿ ಮನೆ ಬಿಟ್ಟು ಹೋಗಬೇಕು’ ಎಂದು ಚಂದ್ರಶೇಖರ್‌ಗೆ ಶಕುಂತಲಾ ದೇವಿ ತಿಳಿಸಿದ್ದಾರೆ. ಶಕುಂತಲಾ ದೇವಿ ಕಂಡೀಷನ್‌ಗೆ ಚಂದ್ರಶೇಖರ್ ಕೂಡ ಒಪ್ಪಿಗೆ ನೀಡಿದ್ದಾರೆ.

ಯಾಕೋ ಈ ಟಾಸ್ಕ್‌ ನಕ್ಷತ್ರಾಗೂ ನಡುಕ ತಂದಿದೆ. ತಾನು ಈ ಟಾಸ್ಕ್‌ ಪೂರೈಸದಿದ್ದರೆ ಮನೆಯಿಂದ, ಭೂಪತಿಯಿಂದ ಶಾಶ್ವತವಾಗಿ ದೂರಹೋಗಬೇಕು ಅನ್ನೋದು ಅವಳಲ್ಲಿ ಆತಂಕ ಹೆಚ್ಚಿಸಿದೆ. ಶ್ವೇತಾಳನ್ನು ಇಷ್ಟ ಪಡೋ ಶಕುಂತಳಾ ದೇವಿ ಇದರಲ್ಲಿ ಶ್ವೇತಾನೇ ಗೆಲ್ಲಲಿ ಅಂತ ಹಾರೈಸುತ್ತಿದ್ದಾರೆ. ನಕ್ಷತ್ರಾ ಪರ ಆಕೆಯ ತಂದೆ ತಾಯಿ ಇದ್ದಾರೆ. ಈ ಟಾಸ್ಕ್‌ನಲ್ಲಿ ನಕ್ಷತ್ರ ಗೆಲ್ಲುತ್ತಾಳಾ? ಅಥವಾ ಇಲ್ಲೂ ಶ್ವೇತಾ ಕಿತಾಪತಿ ಮಾಡುತ್ತಾಳಾ? ಟಾಸ್ಕ್ ಗೆದ್ದರೆ ನಕ್ಷತ್ರಳನ್ನ ಶಕುಂತಲಾ ದೇವಿ ಸೊಸೆ ಅಂತ ಒಪ್ಪಿಕೊಳ್ಳುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರ ಮುಂದಿವೆ.

'ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಶ್ವೇತಾ ಆಗಿ ಸುಕೃತಾ ನಾಗ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ, ಚಂದ್ರಶೇಖರ್ ಆಗಿ ಕೀರ್ತಿ ಭಾನು, ಆರತಿ ಆಗಿ ದೀಪಾ ಅಯ್ಯರ್ ನಟಿಸಿದ್ದಾರೆ.

ಟ್ರಿಡೆಷನಲ್ ಡ್ರೆಸ್ಸಲ್ಲೂ ಕನ್ನಡತಿಯ ವರೂಧಿನಿ ಎಷ್ಚು ಚೆಂದ ಕಾಣಿಸ್ತಾರೋ ನೋಡಿ!

click me!