ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್‌ ಗರಂ...

Published : Dec 14, 2024, 07:48 PM ISTUpdated : Dec 15, 2024, 02:50 PM IST
ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್‌ ಗರಂ...

ಸಾರಾಂಶ

ನಿವೇದಿತಾ ಗೌಡ ತಮ್ಮನ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡಿದ್ದು, ಇಂಗ್ಲಿಷ್‌ ಬಳಕೆಗೆ ಟ್ರೋಲ್‌ಗೆ ಒಳಗಾಗಿದ್ದಾರೆ. ಚಂದನ್‌ ಶೆಟ್ಟಿ ಅವರ ಹಿಂದಿನ ಹೇಳಿಕೆ ನೆನಪಿಸುತ್ತಾ, ಅಡುಗೆ ಮಾಡಿಸಿಕೊಳ್ಳುವುದಕ್ಕೆ ವಿಚ್ಛೇದನ ಪಡೆದಿರಾ ಎಂದು ಕೆಲವರು ಪ್ರಶ್ನಿಸಿದ್ದಾರೆ.  

ಬಿಗ್‌ಬಾಸ್‌ ಖ್ಯಾತಿಯ ನಟಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ಅವರ ವಿಚ್ಛೇದನಕ್ಕೆ ಇದುವರೆಗೂ ಸರಿಯಾದ ಕಾರಣವಂತೂ ಸಿಕ್ಕಿಲ್ಲ. ಇವರಿಬ್ಬರು ಕೂಡ ಆ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಇದೇ ಕಾರಣಕ್ಕೆ, ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡುತ್ತಿದ್ದಾರೆ. ಅದರಲ್ಲಿಯೂ ವಿಚ್ಛೇದನದ ಬಳಿಕ  ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್‌ ಮಟ್ಟಿಗೂ ಬಂದು ನಿಂತಿದ್ದಾರೆ.   ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್​ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ!

ಇದೀಗ ನಿವೇದಿತಾ ಅವರು ತಮ್ಮ ತಮ್ಮನ ಪರಿಚಯವನ್ನು ಮಾಡಿಸಿದ್ದಾರೆ. ತಮ್ಮನ ಹುಟ್ಟುಹಬ್ಬದ ನಿಮಿತ್ತ ವಿಷ್‌ ಮಾಡಿರುವ ನಿವೇದಿತಾ, ತಮ್ಮ ಅಡುಗೆ ಮಾಡುತ್ತಿರುವ ವಿಡಿಯೋ ಶೇರ್‍‌ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಇದಕ್ಕೆ ಎರಡು ಮುಖ್ಯ ಕಾರಣ ಇವೆ. ಅದೇನೆಂದರೆ, ಇದರಲ್ಲಿ ನಿವೇದಿತಾ ಇಂಗ್ಲಿಷ್‌ನಲ್ಲಿ ತಮ್ಮನ ಪರಿಚಯ ಮಾಡಿಸಿದ್ದಾರೆ. ಅದಕ್ಕಾಗಿ ಇನ್ನಿಲ್ಲದಂತೆ ನೆಟ್ಟಿಗರು ನಟಿಯನ್ನು ವಾಚಾಮಗೋಚರವಾಗಿ ಬೈಯುತ್ತಿದ್ದಾರೆ. ಸರಿಯಾಗಿ ಕನ್ನಡನೂ ಬರಲ್ಲ, ಇಂಗ್ಲಿಷೂ ಬರಲ್ಲ. ಇಂಥ ಇಂಗ್ಲಿಷ್‌ ಮಾತನಾಡುವ ಬದಲು ಕನ್ನಡನಾದ್ರೂ ಮೊದಲು ಸರಿಯಾಗಿ ಕಲಿ, ನೀನು ಇರುವುದು ಕರ್ನಾಟಕದಲ್ಲಿ, ಗಾಂಚಾಲಿ ಬಿಡು ಎಂದೆಲ್ಲಾ ಹೇಳುತ್ತಿದ್ದಾರೆ. 

ಕ್ರಿಸ್‌ಮಸ್‌ ಡ್ರಿಂಕ್ಸ್‌ ಮತ್ತಿನಲ್ಲಿ ಫ್ರೆಂಡ್‌ಗೆ ಮುತ್ತು ಕೊಟ್ಟ ನಿವೇದಿತಾ: ಫೋಟೋ ನೋಡಿ ಟ್ರೋಲಿಗರು ಕೇಳ್ಬೇಕಾ?

ಮತ್ತೆ ಕೆಲವರು ನಿವೇದಿತಾ ಅವರ ಸಹೋದರ ಅಡುಗೆ ಮಾಡುತ್ತಿರುವುದನ್ನು ನೋಡಿ, ನಿನ್ನ ಗಂಡ ಚಂದನ್‌ ಶೆಟ್ಟಿ ಕೂಡ ಇದಕ್ಕೇ ತಾನೇ ಬಿಟ್ಟಿದ್ದು ಎನ್ನುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಹಿಂದೆಮಜಾ ಟಾಕೀಸ್‌ನಲ್ಲಿ ನಿವೇದಿತಾ ಮತ್ತು ಚಂದನ್‌ ಶೆಟ್ಟಿ ಕಾಣಿಸಿಕೊಂಡಿದ್ದಾಗ, ಚಂದನ್‌ ಶೆಟ್ಟಿಯವರುಮನೆಯ ಎಲ್ಲಾ ಕೆಲಸ ನಾನೇ ಮಾಡಬೇಕು, ಈಕೆ ಏಳುವುದೇ ಇಲ್ಲ. ತಿಂಡಿ, ಅಡುಗೆಯಿಂದ ಹಿಡಿದು ಪ್ರತಿಯೊಂದು ಮನೆ ಕೆಲಸ ನಾನೇ ಮಾಡಬೇಕು. ಇವತ್ತು ಮಾಡ್ತಾಳೆ, ನಾಳೆ ಮಾಡ್ತಾಳೆ ಎಂದು ನೋಡಿ ನೋಡಿ ಸುಸ್ತಾಯ್ತು. ಎಲ್ಲಾ ರೆಡಿ ಮಾಡಿದ ಮೇಲೆ ಇವಳನ್ನು ಎಬ್ಬಿಸಿ ನೀಡಬೇಕು ಎಂದಿದ್ದರು. ಇದನ್ನೀಗ ಚಂದನ್‌ ಶೆಟ್ಟಿ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ತಾನೇ ನಿನ್ನನ್ನು ನಿನ್ನ ಗಂಡ ಬಿಟ್ಟಿದ್ದು, ಈಗ ತಮ್ಮನ ಕೈಯಲ್ಲಿ ಅಡುಗೆ ಮಾಡಿಸ್ತಾ ಇದ್ದಿಯಾ, ನಾಚಿಕೆ ಆಗಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. 

ಅದೇ ಇನ್ನೊಂದೆಡೆ, ನಿವೇದಿತಾ, ಇತ್ತೀಚೆಗೆ ವಾಣಿ ಎನ್ನುವ ಸ್ನೇಹಿತೆಯ ಜೊತೆ  ಹೆಚ್ಚಾಗಿ ಕಾಣಿಸಿಕೊಳ್ತಿರೋದನ್ನೂ ನೋಡಲಾಗ್ತಿಲ್ಲ ನೆಟ್ಟಿಗರಿಗೆ.  ಈ ಸ್ನೇಹಿತೆಯ ಜೊತೆ ನಿವೇದಿತಾ  ಒಮ್ಮೆ ಬಾತ್‌ರೂಮ್‌ನಲ್ಲಿ, ಇನ್ನೊಮ್ಮೆ ಬೆಡ್‌ರೂಮ್‌ನಲ್ಲಿ... ಹೀಗೆ  ಮೈಚಳಿ ಬಿಟ್ಟು ಡಾನ್ಸ್‌ ಮಾಡುತ್ತಿರುತ್ತಾರೆ.  ಇಲ್ಲಿಯವರೆಗೆ ಡೀಸೆಂಟ್‌ ಬಟ್ಟೆ ಧರಿಸುತ್ತಿದ್ದ ಅವರ ಸ್ನೇಹಿತೆ ಕೂಡ ನಿವೇದಿತಾ ಹಾದಿಯನ್ನೇ ಹಿಡಿದಿರುವ ಕಾರಣ ಕಮೆಂಟಿಗರು ನಾಲಿಗೆ ಹರಿಬಿಡುತ್ತಿದ್ದಾರೆ.  ಕೆಲ ದಿನಗಳ ಹಿಂದೆ ಇದೇ ಸ್ನೇಹಿತೆ ಜೊತೆ ಬೆಡ್​ರೂಮ್​ನಲ್ಲಿ ನಿವೇದಿತಾ ತುಂಟಾಟವಾಡಿದ್ದರು. ಸುಮ್ಮನೇ ಸ್ನೇಹಿತೆಯನ್ನು ಅಪ್ಪಿಕೊಂಡಿದ್ದರು. ಇಬ್ಬರೂ ಸ್ನೇಹಿತೆಯರು ತುಂಬಾ ಕ್ಲೋಸ್​​ ಫ್ರೆಂಡ್ಸ್​ ರೀತಿಯಲ್ಲಿ ನಗುತ್ತಿದ್ದಾರೆ. ಆದರೆ ಇದಕ್ಕೂ ನೆಟ್ಟಿಗರು ಸುಮ್ಮನೇ ಬಿಟ್ಟಿಲ್ಲ. ಬೆಡ್​ರೂಮ್​ನಲ್ಲಿ ಈ ಪರಿಯ ಚೆಲ್ಲಾಟ ಮಾಡಿದ್ರೆ ಇದನ್ನು ಏನು ಅಂದುಕೊಳ್ಳಬೇಕು ಎಂದು ಪ್ರಶ್ನಿಸಿದ್ರು. ಅದರಲ್ಲಿಯೂ ನಿವೇದಿತಾ ಸ್ನೇಹಿತೆಯ ಬಟ್ಟೆಯ ಬಟನ್​ ಬಿಚ್ಚುವಂತೆ ಮಾಡಿದ್ದು, ಇದಕ್ಕೆ ಸಕತ್​ ನೆಗೆಟಿವ್​ ಕಮೆಂಟ್ಸ್​ ಬಂದಿತ್ತು.  ಇನ್ನು ಕೆಲವರು ಇಬ್ಬರು ಸ್ನೇಹಿತೆಯರು ಸುಮ್ಮನೇ ಎಂಜಾಯ್​ ಮಾಡಬಾರದಾ? ಅದಕ್ಕೂ ಕೆಟ್ಟ ಕಮೆಂಟ್ಸ್​ ಯಾಕೆ ಎಂದು ಕಮೆಂಟ್ಸ್​ ಹಾಕುತ್ತಿರುವವರ ವಿರುದ್ಧ ಕಿಡಿ ಕಾರಿದ್ದೂ ಇದೆ.

ಟೋಲ್‌ನಲ್ಲಿ ಲೇಟಾದ್ರೆ ದುಡ್ಡು ಕೊಡ್ಬೇಡಿ- ರೂಲ್ಸ್‌ ಹೇಳಿದ ಲಾಯರ್ ಜಗದೀಶ್‌ಗೇ ದಂಡ ಹಾಕಿ ಅನ್ನೋದಾ ನೆಟ್ಟಿಗರು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?