ತೆಲುಗು ಕಿರುತೆರೆಯಲ್ಲಿ ಕನ್ನಡಿಗರಿಗೆ ಭಾರಿ ಡಿಮ್ಯಾಂಡ್! ಹೊಸ ಸೀರಿಯಲ್’ನಲ್ಲಿ ಜೋಡಿಯಾದ ಚಂದು ಗೌಡ -ತನ್ವಿಯಾ

Published : Dec 14, 2024, 05:27 PM ISTUpdated : Dec 14, 2024, 07:12 PM IST
ತೆಲುಗು ಕಿರುತೆರೆಯಲ್ಲಿ ಕನ್ನಡಿಗರಿಗೆ ಭಾರಿ ಡಿಮ್ಯಾಂಡ್! ಹೊಸ ಸೀರಿಯಲ್’ನಲ್ಲಿ ಜೋಡಿಯಾದ ಚಂದು ಗೌಡ -ತನ್ವಿಯಾ

ಸಾರಾಂಶ

ಕನ್ನಡ ಕಿರುತೆರೆ ನಟರು ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ರಶ್ಮಿ ಪ್ರಭಾಕರ್, ನೇಹಾ ಗೌಡ ಸೇರಿದಂತೆ ಹಲವರು ಲೀಡ್ ಪಾತ್ರಗಳಲ್ಲಿ ಮೆರೆಯುತ್ತಿದ್ದಾರೆ. "ಎನ್ನಲೋ ವೆಚ್ಚಿನ ಹೃದಯಂ" ಧಾರಾವಾಹಿಯಲ್ಲಿ ಚಂದು ಗೌಡ ವಿಶೇಷ ಚೇತನ ವ್ಯಕ್ತಿಯಾಗಿ, ತನ್ವಿಯಾ ಬಾಲರಾಜ್ ಶಿಕ್ಷಕಿಯಾಗಿ ನಟಿಸಿದ್ದಾರೆ. ಬಿಡುಗಡೆಯಾದ ಪ್ರೊಮೊ ವೀಕ್ಷಕರ ಮನಗೆದ್ದಿದೆ.

ತೆಲುಗು ಕಿರುತೆರೆಯಲ್ಲಿ (Telugu serials) ಪ್ರಸಾರವಾಗುತ್ತಿರುವ ಸೀರಿಯಲ್ ಗಳನ್ನು ನೋಡಿದ್ರೆ ಅಲ್ಲಿ ಕನ್ನಡಿಗರದ್ದೆ ಹವಾ ಎದ್ದು ಕಾಣುತ್ತೆ. ಅದು ಲೀಡ್ ರೋಲ್ ಗಳು ಆಗಿರಲಿ ಅಥವಾ ಪೋಷಕ ಪಾತ್ರಗಳೇ ಆಗಿರಲಿ, ಎಲ್ಲಾ ಕಡೆಯೂ ಕನ್ನಡದ ನಟ ನಟಿಯರು ಮೆರೆಯುತ್ತಿದ್ದಾರೆ ಅಂದ್ರೆ ತಪ್ಪಾಗಲ್ಲ. ಇಲ್ಲಿವರೆಗೆ ಸಾಕಷ್ಟು ಕನ್ನಡ ಕಿರುತೆರೆ ನಟರು ತೆಲುಗಿನಲ್ಲಿ ಅಭಿನಯಿಸಿದ್ದಾರೆ. ರಶ್ಮಿ ಪ್ರಭಾಕರ್ (Rashmi Prabhakar), ನೇಹಾ ಗೌಡ, ಭೂಮಿ ಶೆಟ್ಟಿ, ಭೂಮಿಕಾ ರಮೇಶ್, ಚಂದು ಗೌಡ, ಚಂದನ್ ಕುಮಾರ್, ಅಭಿನವ್ ವಿಶ್ವನಾಥನ್, ದಿಲೀಪ್ ಶೆಟ್ಟಿ, ಪ್ರಿಯಾಂಕ ಶಿವಣ್ಣ, ಪ್ರೇರಣಾ, ಯಶ್ಮಿ ಗೌಡ, ನಿಖಿಲ್ ಗೌಡ, ಪಲ್ಲವಿ ಗೌಡ (Pallavi Gowda), ಶರ್ಮಿತಾ ಗೌಡ ಇವರೆಲ್ಲರೂ ಕನ್ನಡ ನಟರೆ. ಆದರೆ ಕನ್ನಡಕ್ಕಿಂತ ಹೆಚ್ಚಾಗಿ ಸದ್ಯ ತೆಲುಗಿನಲ್ಲಿ ಸದ್ದು ಮಾಡುತ್ತಿದ್ದಾರೆ. 

ಏಕಾಏಕಿ ನಾಯಿಯಂತೆ ನಡೆದ ರುಂಡ ಇಲ್ಲದ ಅಜ್ಜಿ! ನಡುರಾತ್ರಿ ಕಂಡ ಬೆಚ್ಚಿ ಬೀಳೋ ಘಟನೆ ನೆನೆದ ನಟ ಚಂದು ಗೌಡ

ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಗಗನಂ ಭುವನಂ ನಾಯಕ ನಾಯಕಿ ಅಭಿನವ್ ವಿಶ್ವನಾಥನ್ ಮತ್ತು ಭೂಮಿಕಾ ರಮೇಶ್,  ನಾನು ನೆನು ಪ್ರೇಮ ಸೀರಿಯಲ್ ನಲ್ಲಿ ಸ್ವಾಮಿನಾಥನ್ ಮತ್ತು ಪವಿತ್ರಾ ನಾಯ್ಕ್, ತ್ರಿನಯನಿ ಸೀರಿಯಲ್ ನಲ್ಲಿ ಚಂದು ಗೌಡ (Chandu Gowda) ಮತ್ತು ಆಶಿಕಾ ಪಡುಕೋಣೆ, ಕೃಷ್ಣ ಸುಂದರಿ ಸೀರಿಯಲ್ ನ ದಿಲೀಪ್ ಶೆಟ್ಟಿ - ಐಶ್ವರ್ಯ ಎಚ್, ಕೃಷ್ಣ ಮುಕುಂದ ಮುರಾರಿಯ ಪ್ರೇರಣಾ, ಯಶ್ಮಿ ಗೌಡ ಹಾಗೂ ಗಗನ್ ಚಿನ್ನಪ್ಪ (Gagan Chinnappa)… ಹೀಗೆ ಹಲವು ಧಾರಾವಾಹಿಗಳಲ್ಲಿ ನಾಯಕ ಮತ್ತು ನಾಯಕಿ ಸ್ಥಾನವನ್ನು ತುಂಬಿದವರು ನಮ್ಮ ಕನ್ನಡಿಗರೇ. ಇದೀಗ ಆ ಸಾಲಿಗೆ ಮತ್ತೊಂದು ಸೀರಿಯಲ್ ಸೇರುತ್ತಿದೆ. ಅದುವೇ ‘ ಎನ್ನಲೋ ವೆಚ್ಚಿನ ಹೃದಯಂ’ ಸೀರಿಯಲ್. 

ಝೀ ತೆಲುಗಿನಲ್ಲಿ ಪ್ರಸಾರವಾಗಲಿರುವ ಈ ಹೊಸ ಸೀರಿಯಲ್  ‘ ಎನ್ನಲೋ ವೆಚ್ಚಿನ ಹೃದಯಂ’ (Ennallo Vechina Hrudayam)ನಲ್ಲಿ ಚಂದು ಗೌಡ ಹಾಗೂ ಅಂತರಪಟ ಧಾರಾವಾಹಿಯ ತನ್ವಿಯಾ ಬಾಲರಾಜ್ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಚಂದು ಗೌಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಪ್ರೊಮೋ ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ. ಇನ್ನು ಕಥೆ ಹೇಗಿರಬಹುದು ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದಾರೆ. ಝೀ ತೆಲುಗಿನಲ್ಲಿ ಶೀಘ್ರದಲ್ಲೇ ಈ ಧಾರಾವಾಹಿ ಬಿಡುಗಡೆಯಾಗಲಿದೆ. 

ಪ್ರೋಮೊ ಮೂಲಕ ಸದ್ದು ಮಾಡ್ತಾ ಇರೋ ಅಂತರಪಟ ಸೀರಿಯಲ್ ನಾಯಕಿ ಇವರೇ....

ಚಂದು ಗೌಡ ಈ ಹೊಸ ಧಾರಾವಾಹಿಯಲ್ಲಿ ಇನ್ನು ಶಾಲೆಗೆ ಹೋಗುವ ವಿಶೇಷ ಚೇತನ ವ್ಯಕ್ತಿಯಂತೆ ನಟಿಸಿದ್ದಾರೆ. ಶಾಲೆಯ ಯೂನಿಫಾರ್ಮ್ ಧರಿಸಿ, ಬ್ಯಾಗ್ ಟೀಫನ್ ತೆಗೆದುಕೊಂಡು, ಸ್ಕೂಲ್ ವ್ಯಾನ್ ಹತ್ತಿ, ಪುಟಾಣಿ ಮಕ್ಕಳ ಜೊತೆಗೆ ಕ್ಲಾಸಲ್ಲಿ ಕೂರುವ, ಮುಗ್ಧ ಮಗುವಿನಂತೆ ನಗುವ ಪಾತ್ರದಲ್ಲಿ ಚಂದು ಗೌಡ ಅದ್ಭುತವಾಗಿ ನಟಿಸಿದ್ದಾರೆ. ಇವರಿಗೆ ಶಿಕ್ಷಕಿಯಾಗಿ ತನ್ವಿಯಾ ಬಾಲರಾಜ್ (Tanviya) ನಟಿಸುತ್ತಿದ್ದಾರೆ. ತನ್ವಿಯಾ ಯಾವ ರೀತಿ ಮಗು ಮನಸ್ಸಿನ ವ್ಯಕ್ತಿಯ ಮನಸ್ಸನ್ನು ಬದಲಾಯಿಸಿ, ಅವನನ್ನು ಎಲ್ಲ ವ್ಯಕ್ತಿಯಂತೆ ಮಾಡುತ್ತಾಳೆ ಅನ್ನೋದೆ ಕಥೆ ಇರಬಹುದು. ಒಟ್ಟಲ್ಲಿ ಪ್ರೊಮೋ ಜನರಿಗೆ ಸಿಕ್ಕಾಪಟ್ಟೆ ಹಿಡಿಸಿದೆ. ಸೀರಿಯಲ್ ಶೀಘ್ರವೇ ಪ್ರಸಾರವಾಗಲಿ ಎಂದು ಕಾಯುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ