ಡ್ರೋನ್ ಪ್ರತಾಪ್ ಸಂಗ ಮಾಡಿದ ಗೆಳೆಯನಿಗೆ ಬ್ಲಾಸ್ಟ್ ಸಂಕಷ್ಟ, ಪೊಲೀಸರ ಹುಡುಕಾಟ!

By Chethan Kumar  |  First Published Dec 14, 2024, 6:52 PM IST

ಡ್ರೋನ್ ಹಾರಿಸಿ ಮೈಲೇಜ್ ಪಡೆದಿದ್ದ ಡ್ರೋನ್ ಪ್ರತಾಪನಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಬೆಂಬಿಡದೆ ಕಾಡುತ್ತಿದೆ. ಇದೀಗ ಸ್ಫೋಟ ಪ್ರಕರಣ ಡ್ರೋನ್ ಪ್ರತಾಪ್ ಮಾತ್ರವಲ್ಲ ಆತನ ಗೆಳೆಯನಿಗೂ ತಟ್ಟಿದೆ. ಡ್ರೋನ್ ಪ್ರತಾಪ್ ಗೆಳಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ತುಮಕೂರು(ಡಿ.14) ಡ್ರೋನ್ ಮೂಲಕವೇ ದೇಶ ವಿದೇಶ ಸುತ್ತಾಡಿ ಬಳಿಕ ಕರ್ನಾಟಕ ರಾಜ್ಯ ಪ್ರವಾಸ ಮಾಡಿದ್ದ ಡ್ರೋನ್ ಪ್ರತಾಪ್ ಭಾರಿ ವಿವಾದ ಸೃಷ್ಟಿಸಿದ್ದರು. ಡ್ರೋನ್ ಪ್ರತಾಪ್ ಡ್ರೋನ್ ಮಾತ್ರವಲ್ಲ, ಅದರ ಜೊತೆ ಎಲ್ಲರನ್ನೂ ಹಾರಿಸಿದ್ದಾರೆ ಅನ್ನೋ ಆರೋಪಗಳು, ಟೀಕಗಳು ಕೇಳಿಬಂದಿತ್ತು. ಆದರೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಡ್ರೋನ್ ತಮ್ಮ ಇಮೇಜ್ ಬದಲಸಿಕೊಂಡಿದ್ದರು. ಉಗಿದು ಉಪ್ಪಿನಕಾಯಿ ಹಾಕಿದ್ದ ಅದೇ ಮಂದಿ ಡ್ರೋನ್ ಪ್ರತಾಪ್ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ಬಿಗ್ ಬಾಸ್ ಮುಗಿಸಿ ತನ್ನ ಬ್ರ್ಯಾಂಡ್ ಹಾಗೇ ಮುಂದುವರಿಸಿದ್ದ ಡ್ರೋನ್ ಪ್ರತಾಪ್‌ಗೆ ಇದೀಗ ಸೋಡಿಯಂ ಬ್ಲಾಸ್ಟ್ ಪ್ರಕರಣ ಕೊರಳಿಗೆ ಸುತ್ತಿಕೊಂಡಿದೆ. ವಿಡಿಯೋಗಾಗಿ ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ ಸ್ಫೋಟ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪೊಲೀಸರು ಈಗಾಗಲೇ ಡ್ರೋನ್ ಪ್ರತಾಪ್‌ನ ಬಂಧಿಸಿದ್ದಾರೆ. ಆದರೆ ಈ ಸಂಕಷ್ಟ ಪ್ರತಾಪ್‌ಗೆ ಮಾತ್ರವಲ್ಲ ಆತನ ಗಳೆಯನಿಗೂ ಸಂಕಷ್ಟ ತಂದಿದೆ.

ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ನಡೆಸಿದ ಪ್ರಕರಣಧಲ್ಲಿ ಡ್ರೋನ್ ಪ್ರತಾಪ್‌ನ ತುಮಕೂರಿನ ಮಿಡಿಗೇಶಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಪ್ರಕರಣ ಇಷ್ಟಕ್ಕೆ ಮುಗಿದಿಲ್ಲ. ತನಿಖೆ ತೀವ್ರಗೊಳಿಸಿರುವ ಪೊಲೀಸರು ಸೋಡಿಯಂ ಮೂಲ ಪತ್ತೆಗೆ ಮುಂದಾಗಿದ್ದಾರೆ. ಡ್ರೋನ್ ಪ್ರತಾಪ್ ಗೆಳೆಯನ ಮೂಲಕ ಸೋಡಿಯಂ ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಡ್ರೋನ್ ಬಳಿ ಗೆಳೆಯನ ಕುರಿತು ವಿಚಾರಣೆ ನಡೆಸಿದ್ದಾರೆ.

Tap to resize

Latest Videos

ಸೋಡಿಯಂ ಬಳಸಿ ಸ್ಫೋಟ ಪ್ರಕರಣ, ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಅರೆಸ್ಟ್!

ಆದರೆ ಸ್ಫೋಟ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅರೆಸ್ಟ್ ಆಗುತ್ತಿದ್ದಂತೆ ಸೋಡಿಯಂ ಸ್ಫೋಟಕ ನೀಡಿದ ಗೆಳೆಯ ನಾಪತ್ತೆಯಾಗಿದ್ದಾನೆ. ಇದೀಗ ಪೊಲೀಸರು ಡ್ರೋನ್ ಪ್ರತಾಪ್ ಗೆಳೆಯನ ಹುಡುಕಾಟ ಆರಂಭಿಸಿದ್ದಾರೆ. ಈ ಸ್ಫೋಟಕವನ್ನು ಯಾವ ಅಂಗಡಿಯಲ್ಲಿ ಖರೀದಿ ಮಾಡಲಾಗಿದೆ ಅನ್ನೋದರ ತನಿಖೆಯೂ ನಡೆಯುತ್ತಿದೆ. ಡ್ರೋನ್ ಪ್ರತಾಪ್ ಗೆಳೆಯ ಈ ಸ್ಫೋಟಕ ಖರೀದಿಸಿ ನೀಡಿದ್ದಾನೆ ಎನ್ನಲಾಗುತ್ತಿದೆ. ಗೆಳೆಯನ ವಿಚಾರಣೆ ನಡೆಸಿದರೆ ಸ್ಫೋಟಕ ಖರೀದಿಸಿದ ಅಂಗಡಿ ಸೇರಿದಂತೆ ಇತರ ಮಾಹಿತಿಗಳು ಬಹಿರಂಗವಾಗಲಿದೆ.

undefined

ಸೋಶಿಯಲ್ ಮೀಡಿಯಾದ ವಿಡಿಯೋಗಾಗಿ ಈ ಸ್ಫೋಟ ನಡೆಸಲಾಗಿದೆ ಅನ್ನೋದನ್ನು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಹಾಗಿದ್ದರೆ ಶೂಟ್ ಮಾಡಿದ ಕ್ಯಾಮೆರಾ ಎಲ್ಲಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ಕ್ಯಾಮೆರಾ ವಶಪಡಿಸಿಕೊಳ್ಳಲು ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪ್ರಕರಣ ಮೇಲ್ನೋಟಕ್ಕೆ ಸಾಮಾನ್ಯ  ಎನಿಸಿದರೂ ಗಂಭೀರವಾಗಿದೆ. ಹೀಗಾಗಿ ಡ್ರೋನ್ ಸಂಕಷ್ಟಗಳ ಸರಮಾಲೆಯೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮಿಡಿಗೇಶಿ ಠಾಣಾ ಪೊಲೀಸರು ಡ್ರೋನ್ ಪ್ರತಾಪ್‌ನ ಕರೆದುಕೊಂಡು ಸ್ಥಳ ಮಹಜರು ನಡೆಸಿದ್ದಾರೆ. ಸ್ಫೋಟಕ ನಡೆಸಿದ ಕೃಷಿ ಹೊಂಡದ ಬಳಿ ಮಹಜರು ನಡೆಸಲಾಗಿದೆ.  

ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅನುಮತಿ ಪಡೆಯದೆ ಸ್ಫೋಟ ನಡೆಸಿರುವುದು ದೊಡ್ಡ ತಪ್ಪು. ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿರುವುದು ಮತ್ತೊಂದು ದುರಂತ. ಈ ನೀರಿನ ಜಲಚರಗಳು ಗತಿ ಏನು? ಈ ನೀರನ್ನು ಪ್ರಾಣಿ ಪಕ್ಷಿಗಳು ಕುಡಿದರೆ ಪ್ರಾಣಕ್ಕೆ ಅಪಾಯವಿದೆ. ಇದೆಲ್ಲಾ ಸಾಮಾನ್ಯ ವ್ಯಕ್ತಿಗೂ ಗೊತ್ತಿದೆ. ಆದರೆ ವಿಜ್ಞಾನಿ ಎಂದೇ ಗುರುತಿಸಿಕೊಳ್ಳುವ ಡ್ರೋನ್ ಪ್ರತಾಪ್‌ಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪರಿಸರ ಪ್ರೇಮಿಗಳು ಡ್ರೋನ್ ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದು ಎಲ್ಲರಿಗೂ ಪಾಠವಾಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಗಳು ಕೇಳಿಬರುತ್ತಿದೆ. ಯಾವತ್ತೂ ನಿಯಮ ವಿರುದ್ದ, ಪರಿಸರಕ್ಕೆ ಹಾನಿಯಾಗುವ ಕೆಲಸಕ್ಕೆ ಕೈಹಾಕಿದರೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ. 

click me!