ನೈಟೆಲ್ಲಾ ನಿದ್ದೆನೇ ಮಾಡಿಲ್ಲ ಎಂದ ನಿವೇದಿತಾ ಗಂಡಸ್ರಿಗೆ ಹೀಗೆ ಕೊಡೋದಾ ಓಪನ್​ ಚಾಲೆಂಜ್​? ಎಲ್ಲರೂ ಕಕ್ಕಾಬಿಕ್ಕಿ...

Published : Feb 06, 2025, 02:52 PM ISTUpdated : Feb 06, 2025, 06:41 PM IST
ನೈಟೆಲ್ಲಾ ನಿದ್ದೆನೇ ಮಾಡಿಲ್ಲ ಎಂದ ನಿವೇದಿತಾ ಗಂಡಸ್ರಿಗೆ ಹೀಗೆ ಕೊಡೋದಾ ಓಪನ್​ ಚಾಲೆಂಜ್​? ಎಲ್ಲರೂ ಕಕ್ಕಾಬಿಕ್ಕಿ...

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ, 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಉದ್ದ ಉಗುರುಗಳಿಂದ ಪುರುಷ ಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ. ೨೪/೭ ಉಗುರು ಧರಿಸಿ, ನಿಯಮ ಪಾಲಿಸಿದರೆ ಹುಡುಗಿಯರ ಮಾತು ಕೇಳುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಉಡುಗೆ, ಆಕೆಯ ಕನ್ನಡ ಜ್ಞಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಗಾಯಕ ಚಂದನ್​ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಮೇಲೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ  ಸೋಷಿಯಲ್​ ಮೀಡಿಯಾದ ಸೆನ್ಸೇಷನಲ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

ಇಂತಿಪ್ಪ ನಿವೇದಿತಾ ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದುದ್ದ ಉಗುರು ಬಿಟ್ಟುಕೊಂಡು ಅದನ್ನೇ ಫೋರ್ಕ್​ ಮಾಡಿಕೊಂಡು ಮುದ್ದೆಯನ್ನೂ ತಿಂದಿರುವ ನಿವೇದಿತಾ, ಈಗ ಅಲ್ಲಿರುವ ಗಂಡಸರಿಗೆ ಓಪನ್​ ಚಾಲೆಂಜ್​ ಮಾಡಿದ್ದಾರೆ. ಇಷ್ಟು ಉದ್ದದ ಉಗುರನ್ನು ಯಾಕೆ ಬಿಟ್ಟುಕೊಂಡಿರುವುದು ಎಂದು ಪ್ರಶ್ನಿಸಿದಾಗ, ನೀವು ಹತ್ತಿರ ಬಂದರೆ ಹೀಗೆ ಚುಚ್ಚೋಣ ಎಂದು ಸೆಲ್ಫ್​ ಡಿಫೆನ್ಸ್​ ಎಂದು ಉದ್ದ ಬಿಟ್ಟುಕೊಂಡಿದ್ದೇನೆ ಎಂದಿದ್ದಾರೆ. ಆಗ ಬಾಯ್ಸ್​ ಗುಂಪಿನ ಕಡೆಯಿಂದ ಹಾಗೇನೂ ಇಲ್ಲ. ಇದು ಗಮ್ ಹಾಕಿರೋದು. ಹೀಗೆ ಎಳೆದರೆ ಬಂದು ಬಿಡುತ್ತದೆ ಎಂದಿದ್ದಾರೆ.

ಅರಗಿಸಿಕೊಳ್ಳಲಾಗದ ಶಾಕ್​ ಕೊಟ್ಟ ನಿವೇದಿತಾ! 24 ಗಂಟೆಗಳಲ್ಲಿ ಸುನಾಮಿ ಎಚ್ಚರಿಸಿದ ಕಮೆಂಟಿಗರು- ಅಂಥದ್ದೇನಿದೆ ನೋಡಿ!

ಆಗ ನಿವೇದಿತಾ ಓಪನ್​ ಚಾಲೆಂಜ್​ ಕೊಟ್ಟಿದ್ದಾರೆ. ಅದೇನೆಂದರೆ. ತಮ್ಮ ರೀತಿಯಲ್ಲಿಯೇ ಇಷ್ಟು ಉದ್ದದ ಉಗುರನ್ನು ಬಾಯ್ಸ್​ ಗುಂಪು ಧರಿಸಿ ಬರಬೇಕು. 24/7 ಶೂಟಿಂಗ್​  ಸಮಯದಲ್ಲಿ ಇದನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಸರಿಯಾಗಿ ಇಟ್ಟುಕೊಂಡರೆ ಎಲ್ಲಾ ಗರ್ಲ್ಸ್​ ಅವರು ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ನಾನು ರಾತ್ರಿಯಿಡೀ ನಿದ್ದೆನೇ ಮಾಡಿಲ್ಲ ಗೊತ್ತಾ ಎಂದೂ ನಿವೇದಿತಾ ರಾಗ ಎಳೆದಿದ್ದಾರೆ. ಇದೀಗ ಉಗುರಿನ ಚಾಲೆಂಜ್​ ಕೊಡುವ ಮೂಲಕ ಪುರುಷರನ್ನು ಕೆಣಕಿದ್ದಾರೆ. ಯಾರು ನಿವೇದಿತಾ ಚಾಲೆಂಜ್​ ಸ್ವೀಕರಿಸುತ್ತಾರೋ ನೋಡಬೇಕು. 

ನಿವೇದಿತಾ ಪೋಸ್ಟ್​ ಹಾಕಿದಾಗಲೆಲ್ಲಾ, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದ ನೆಟ್ಟಿಗರು,   ನಿವೇದಿತಾಗೆ ಕನ್ನಡ ಬರುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಕೆಟ್ಟ ಕೆಟ್ಟ ಕಮೆಂಟ್​ ಮಾಡಿದರೆ ಆಕೆಗೆ ಅದು ಅರ್ಥವಾಗುವುದಿಲ್ಲ ಎಂದೂ ಹೇಳುವುದು ಉಂಟು. ಆದರೆ, ತಮಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಈ ಹಿಂದೆ ವಿಡಿಯೋ ಮೂಲಕ ತೋರಿಸಿದ್ದ್ ನಟಿ, ಈಗ ಈ ಷೋನಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಆದರೆ ಕಮೆಂಟ್ಸ್​ ಓದಲು ಬರುತ್ತದೆಯೋ ಇಲ್ಲವೋ ಎನ್ನುವುದು ಈಗ ಅಭಿಮಾನಿಗಳಿಗೆ ಇರುವ ಪ್ರಶ್ನೆ.

ಶ್ರೀಲಂಕಾದ ಜೂಜು ಅಡ್ಡೆಯಿಂದ ಬಾತ್​ರೂಮ್​ ಸೇರಿದ ನಿವೇದಿತಾ: 'ಐ ಮಿಸ್​ ಯು' ಎನ್ನುತ್ತಲೇ ಕೊಟ್ಟ ಪೋಸ್​ಗೆ ಫ್ಯಾನ್ಸ್​ ಸುಸ್ತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!