
Actress Crying After Wedding: ಖ್ಯಾತ ಕಿರುತೆರೆ ನಟಿ ಮದುವೆಯಾಗಿ ಮಾರ್ಚ್ 2ಕ್ಕೆ ಒಂದು ವರ್ಷವಾಗುತ್ತದೆ. ಮದುವೆ ವಾರ್ಷಿಕೋತ್ಸವಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಕಣ್ಣೀರು ಹಾಕುತ್ತಿರೋ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್ ಕಂಡು ಒಂದು ಕ್ಷಣ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫೋಟೋ ಜೊತೆ ದೀರ್ಘವಾಗಿ ಕೆಲವು ಸಾಲುಗಳನ್ನು ಸಹ ನಾಗಿಣಿ ಸೀರಿಯಲ್ ನಟಿ ಬರೆದುಕೊಂಡಿದ್ದಾರೆ. ಹಾಗಾದ್ರೆ ಯಾರು ಈ ನಟಿ? ಕಣ್ಣೀರು ಹಾಕುತ್ತಿರೋ ಫೋಟೋ ಹಂಚಿಕೊಂಡಿದ್ಯಾಕೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ನಾಗಿಣಿ ಧಾರಾವಾಹಿ ಖ್ಯಾತಿಯ ಸುರಭಿ ಚಂದನಾ, ವಾರ್ನಿಂಗ್, ನನ್ನ ಪತಿಯ ಹಿಂದೆ ಬೀಳಬೇಡಿ. ಅವನು ನನ್ನನ್ನು ಅಳಿಸಲ್ಲ, ಬದಲಾಗಿ ನಗಿಸುವ ವ್ಯಕ್ತಿಯಾಗಿದ್ದಾರೆ. ಈ ಫೋಟೋವನ್ನು 21ನೇ 2024ರಲ್ಲಿ ಕ್ಲಿಕ್ಕಿಸಿಕೊಳ್ಳಲಾಗಿತ್ತು. ಅಂದು ನಾವು ಮದುವೆಯಾದ 2 ತಿಂಗಳ ಸಂಭ್ರಮದಲ್ಲಿದ್ದೇವು. ನನ್ನ ಮೂಡ್ ಸರಿಯಾಗಲಿ ಎಂದು ಈ ಫೋಟೋವನ್ನ ನನ್ನ ಗಂಡನೇ ಕ್ಲಿಕ್ ಮಾಡಿದ್ದು. ಸೋಶಿಯಲ್ ಮೀಡಿಯಾದಲ್ಲಿ ಜನರು ಕೇವಲ ಒಳ್ಳೆಯ ದಿನಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ. ಯಾರು ಸಹ ತಮ್ಮ ಕೆಟ್ಟ ದಿನಗಳ ಬಗ್ಗೆ ತಿಳಿಸಲು ಮುಂದಾಗಲ್ಲ. ಈ ರೀತಿಯಾಗಿದ್ರೆ ಎಲ್ಲವೂ ಚೆನ್ನಾಗಿದೆ ಎಂದು ತಿಳಿದುಕೊಂಡಿರುತ್ತಾರೆ. ಇನ್ನೊಂದು ತಿಂಗಳು ಕಳೆದರೆ ನಮ್ಮ ಮದುವೆಯ ಮೊದಲ ವಾರ್ಷಿಕೋತ್ಸವ. ಹಾಗಾಗಿ 21ನೇ 2024ರಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸುರಭಿ ಚಂದನಾ ಬರೆದುಕೊಂಡಿದ್ದಾರೆ.
ಮುಂದುವರಿದು ಬರೆದುಕೊಂಡಿರುವ ಸುರಭಿ ಚಂದನಾ, ಗಂಡ ಮತ್ತು ಹೆಂಡತಿಯಾಗಿ ಜೀವನ ಶುರು ಮಾಡಿದ್ಮೇಲೆ ಎಲ್ಲವೂ ಸುಲಭವಾಗಿರಲ್ಲ. ಮದುವೆ ಬಳಿಕ ನನ್ನ ಪೋಷಕರನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ. ಅದರಲ್ಲಿ ನನ್ನ ತಂದೆ ಬಹಳ ನೆನಪಾಗುತ್ತಿದ್ದರು. ಮದುವೆ ಬಳಿಕ ನಿಮ್ಮ ಮೇಲಿನ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೊಸ ಜಾವಾಬ್ದರಿಗಳು ಹೇಗೆ ಇರುತ್ತೆ ಎಂಬುದನ್ನು ನಿಮಗೆ ಮದುವೆ ಮೊದಲು ಯಾರು ಹೇಳಿಕೊಟ್ಟಿರಲ್ಲ. ಜೀವನ ಬದಲಾದ ಕೂಡಲೇ ಹೊಸ ಸವಾಲುಗಳು ಬರುತ್ತವೆ. ಮದುವೆಯಾದ ಮೊದಲ ವರ್ಷ ತುಂಬಾ ಕಠಿಣವಾಗಿರುತ್ತದೆ. ಎಲ್ಲರಿಗೂ ಹೀಗೆ ಆಗಿರುತ್ತೆ ಅಲ್ಲವಾ ಎಂದು ಸುರಭಿ ಚಂದನಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಸಂಗಾತಿಯೊಂದಿಗೆ ಒಂದೇ ರೀತಿಯಾಗಿರೋದು ತುಂಬಾ ಕಷ್ಟವಾಗುತ್ತದೆ. ಅದು ಸಹ ನಾವು 14 ವರ್ಷ ಡೇಟಿಂಗ್ ಮಾಡಿದ್ದೇವು. ಆದ್ರೆ ನಮ್ಮ ಪೋಷಕರು ಸಹ ಯಾವುದೇ ವಿರೋಧ ಮಾಡದೇ ನಮ್ಮ ಪ್ರೀತಿಯನ್ನು ಒಪ್ಪಿಕೊಂಡರು. ನಾವು ಪ್ರತಿದಿನ ನಮ್ಮ ಜೀವನಕ್ಕೆ ಯಾವುದು ಉತ್ತಮ ದಾರಿ ಎಂದು ಹುಡುಕುತ್ತಿರುತ್ತೇವೆ. ಜೀವನದಲ್ಲಿ ಒಬ್ಬರಿಗೊಬ್ಬರು ಅಡ್ಜಸ್ಟ್ ಮಾಡಿಕೊಂಡು ಬದುಕುತ್ತಿದ್ದು, ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದೇವೆ ಎಂದು ಸುರಭಿ ಚಂದನಾ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಜೈಪುರದಲ್ಲಿ ದೀರ್ಘಕಾಲದ ಗೆಳೆಯ ಕರಣ್ ಶರ್ಮಾ ಅವರನ್ನು ಸುರಭಿ ಚಂದನಾ ವಿವಾಹವಾಗಿದ್ದರು.
ಇದನ್ನೂ ಓದಿ: ತಾಂಡವ್‌ಗೆ ಹೊಟ್ಟೆ ಉರಿ, ಭಾಗ್ಯಾಗೆ ಕಸಿವಿಸಿ; ಸಾಕಪ್ಪಾ ಸಾಕು ಅಂದ್ರು ವೀಕ್ಷಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.