ಬಲೂನು ಹಿಡಿದು 'ಜಸ್ಟ್ ವ್ಹಾವ್ಹ್' ಎಂದ ನಿವೇದಿತಾ: ಮಕ್ಳು ಮಾಡ್ಕೊ ಸರಿಯಾಗತ್ತೆ ಅಂದ್ರು ನೆಟ್ಟಿಗರು!
ಜಾಸ್ಮಿನ್ ಕೌರ್ ಎಂಬ ಮಹಿಳೆಯ ವೀಡಿಯೊ ಆನ್‌ಲೈನ್‌ನಲ್ಲಿ "ವಾವ್" ಟ್ರೆಂಡ್ ಶುರು ಮಾಡಿದಾಗಿನಿಂದಲೂ ಇದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಟ್ರೆಂಡಿಂಗ್ ಆಗಿದೆ. ಜಾಸ್ಮಿನ್ ಅವರು ತಮ್ಮ ಬಟ್ಟೆ ಅಂಗಡಿಯಲ್ಲಿರುವ ಬಟ್ಟೆಗಳನ್ನು ತೋರಿಸಲು ವಿಶೇಷ ರೀತಿಯನ್ನು ತಮ್ಮದಾಗಿಸಿಕೊಂಡು So beautiful, so elegant, just looking like a wow, (ತುಂಬಾ ಸುಂದರವಾಗಿದೆ, ತುಂಬಾ ಸೊಗಸಾಗಿದೆ, ವಾವ್‌ನಂತೆ ಕಾಣುತ್ತದೆ) ಎಂದಿದ್ದರು. ಇದು ಇನ್ಸ್ಟಾಗ್ರಾಮ್ನಲ್ಲಿ ಟ್ರೆಂಡ್ ಶುರುವಾಗಿದೆ. ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟ-ನಟಿಯರೂ ತಮ್ಮದೇ ಆದ ರೀತಿಯಲ್ಲಿ ಈ ಟ್ರೆಂಡ್ ಮುಂದುವರೆಸಿದ್ದಾರೆ. ಭಾರತ ರೈಲ್ವೆ ಇಲಾಖೆಯೂ ತಮ್ಮ ರೈಲಿನ ಪ್ರಮೋಷನ್ಗೂ ಇದನ್ನು ಬಳಕೆ ಮಾಡಿದ್ದು, ಈ ಟ್ರೆಂಡ್ ಸಕತ್ ಹವಾ ಸೃಷ್ಟಿಸುತ್ತಿದೆ.
ಇದೀಗ ಬಿಗ್ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಕೂಡ So beautiful, so elegant, just looking like a wow ಎಂದಿದ್ದಾರೆ. ತಮ್ಮ ಪತಿ ಚಂದನ್ ಶೆಟ್ಟಿ ಜೊತೆಗೂಡಿ ಹಾರ್ಟ್ಷೇಪ್ನ ಬಲೂನ್ ಹಿಡಿದುಕೊಂಡು ಈ ಮಾತನ್ನು ಹೇಳಿದ್ದಾರೆ. ಇದಕ್ಕೆ ಹಾರ್ಟ್ ಇಮೋಜಿಗಳ ಸುರಿಮಳೆಯಾಗಿದೆ. ಅದೇ ವೇಳೆ ಕೆಲವರು ಮದುವೆಯಾಗಿ ಮೂರು ವರ್ಷ ಆಯ್ತು. ಈಗ ಬಲೂನ್ ಹಿಡಿದುಕೊಳ್ಳೋದು ನೀವಲ್ಲ, ಮಕ್ಕಳು. ಮಕ್ಕಳನ್ನು ಮಾಡಿಕೊಂಡ್ರೆ ಆಗ ವಾವ್ ಆಗ್ತದೆ ಎಂದು ನಿವೇದಿತಾರ ಕಾಲೆಳೆದಿದ್ದಾರೆ. ಅಂದಹಾಗೆ ನಿವೇದಿತಾಗೆ ಈಗ 25 ವರ್ಷ ವಯಸ್ಸು. ಇವರ ಪತಿ ಚಂದನ್ ಶೆಟ್ಟಿಗೆ 34 ವರ್ಷ ವಯಸ್ಸು. ಈಗ ಮಕ್ಕಳು ಮಾಡಿಕೊಳ್ಳಲು ಸರಿಯಾದ ಟೈಮ್. ಇನ್ನೂ ಚಿಕ್ಕ ಮಕ್ಕಳಂತೆ ಆಡಬೇಡ, ಬಲೂನ್ ಹಿಡಿದುಕೊಳ್ಳಲು ಮಕ್ಕಳು ಬರಲಿ ಎಂದೆಲ್ಲಾ ನಟಿಗೆ ಕಿವಿಮಾತು ಹೇಳ್ತಿದ್ದಾರೆ ನೆಟ್ಟಿಗರು.
ಸೀರೆ ಉಟ್ರೂ ಶೋಕಿ ಬಿಟ್ಟಿಲ್ಲ, ನೀನೊಬ್ಳು ಹೆಣ್ಣಾ ಅಂತ ನಿವೇದಿತಾ ವಿರುದ್ಧ ಫ್ಯಾನ್ಸ್ ತಿರುಗಿ ಬೀಳೋದಾ?
ಅಷ್ಟಕ್ಕೂ, ಬಾರ್ಬಿಡಾಲ್ ಎಂದೇ ಫೇಮಸ್ ಆಗಿರೋ, ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್ ಸಂಖ್ಯೆ ಸಕತ್ ಹೆಚ್ಚಿದೆ. ಇದೇ ಕಾರಣಕ್ಕೆ ಇವರು ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಹಲವೊಮ್ಮೆ ಸಿಂಗಲ್ ಆಗಿ, ಕೆಲವೊಮ್ಮೆ ಪತಿ ಚಂದನ್ ಶೆಟ್ಟಿ ಜೊತೆ ಈಕೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ. ಟ್ರೋಲ್ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಮೊನ್ನೆಯಷ್ಟೇ ಇವರು, ಸೀರೆಯುಟ್ಟು ಕ್ಯೂಟ್ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಅವರು, ತಮ್ಮ ರೆಪ್ಪೆಯನ್ನು ಉದ್ದಕ್ಕೆ ಬೆಳೆಸಿರುವ ಬಗ್ಗೆ ತೋರಿಸಿದ್ದಾರೆ. ತಾವು ರೆಪ್ಪೆ ಉದ್ದ ಬೆಳೆಸುವ ತರಬೇತಿ ಪಡೆದು ಹೀಗೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದರೂ ಗರಂ ಆಗಿದ್ದ ಫ್ಯಾನ್ಸ್, ಸೀರೆ ಹಾಕಿದ್ರೂ ಇಂಗ್ಲೀಷ್ ಶೋಕಿ ಬಿಟ್ಟಿಲ್ಲ ಅಲ್ಲಮ್ಮ ತಾಯಿ..ನಿಂಗೆ ಯೇನ್ ತೊಗೊಂಡು ಹೊಡಿಬೇಕು ಹೇಳು..ದುಡ್ಡು ಮಾಡೋದು ಇಲ್ಲೆ ಹುಟ್ಟಿರೋದು ಇಲ್ಲೆ ಆದ್ರೆ ಬೇರೆ ಭಾಷೆ ಶೋಕಿ ಮಾಡ್ತಿಯ ನಚ್ಕೆ ಆಗೋಲ್ವಾ ನಿಂಗೆ ಎಂದು ಬೈದಿದ್ದರು. ಮದುವೆಯಾದರೂ ಮಂಗಳಸೂತ್ರ ಹಾಕಿದ್ದೇ ಇಲ್ಲ ನಟಿ, ಅದಕ್ಕೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.
ಪದೇ ಪದೇ ಚಡ್ಡಿ ಯಾಕೆ ತೋರಿಸ್ತಿಯಾ? ಪ್ಯಾಂಟ್ ಕೊಳ್ಳೋಕೂ ದುಡ್ ಇಲ್ವಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್!