
ಮೂರ್‍ನಾಲ್ಕು ವಾಕ್ಯಗಳಲ್ಲಿ ಹೇಳುವ ಕಥೆಯನ್ನು ನಾಲ್ಕೈದು ವರ್ಷಗಳವರೆಗೆ ಎಳೆಯುವ ಇನ್ನೊಂದು ಹೆಸರೇ ಧಾರಾವಾಹಿ ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದರೂ ಬೈಯುತ್ತಲೇ ಧಾರಾವಾಹಿಗಳನ್ನು ಒಂದು ದಿನವೂ ಮಿಸ್ ಮಾಡದೇ ನೋಡುವುದು ಎಂದರೆ ಹಲವರಿಗೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಿಗೆ ತುಂಬಾ ಪ್ರೀತಿ. ಅದೇ ಅಕ್ರಮ ಸಂಬಂಧ, ಅತ್ತೆ- ಸೊಸೆ ದ್ವೇಷ, ಅಗತ್ಯಕ್ಕಿಂತ ಒಳ್ಳೆಯವಳು ಎನ್ನುವ ನಾಯಕಿ, ಅತಿಯಾಗಿ ಕೆಟ್ಟದಾಗಿ ತೋರಿಸುವ ವಿಲನ್... ಹೀಗೆ ಮಹಿಳೆಯರಿಂದ ಮಹಿಳೆಯರಾಗಿ ಇರುವುದೇ ಧಾರಾವಾಹಿಯ ಕಥಾವಸ್ತು. ಎಷ್ಟೋ ಧಾರಾವಾಹಿಗಳನ್ನು 15-20 ದಿನಗಳಿಗೆ ಒಮ್ಮೆ ನೋಡಿದರೂ ಸಾಕು, ಕಥೆ ಅಲ್ಲಿಯೇ ಇರುತ್ತದೆ, ಮುಂದಕ್ಕೆ ಹೋಗುವುದೇ ಇಲ್ಲ.
ಇಂಥ ಧಾರಾವಾಹಿಗಳ ಪ್ರೋಮೋಗಳು ರಿಲೀಸ್ ಆದಾಗ ನೆಟ್ಟಿಗರು ಜಾಲತಾಣಗಳಲ್ಲಿ ಕಾಲೆಳೆಯುವುದು ಉಂಟು. ಕೆಲವು ಧಾರಾವಾಹಿಗಳು ನೀಡುವ ಒಳ್ಳೆಯ ಸಂದೇಶವನ್ನು ಪ್ರಶಂಸಿಸಿದರೆ, ಇನ್ನು ಕೆಲವನ್ನು ದಯವಿಟ್ಟು ಬೇಗ ಮುಗಿಸಿ ಎಂದು ಗೋಗರೆಯುವುದೂ ಉಂಟು. ಆದರೆ ಅಚ್ಚರಿಯ ವಿಷಯ ಎಂದರೆ, ಹೀಗೆ ಗೋಗರೆಯುವವರೇ ಅದನ್ನು ಒಂದೂ ದಿನವೂ ಬಿಡದೇ ನೋಡುತ್ತಾರೆ. ಇದೇ ಕಾರಣಕ್ಕೆ ಧಾರಾವಾಹಿ ಇಂದಿಗೂ ಟಿಆರ್‌ಪಿಯನ್ನು ಹೆಚ್ಚಿಕೊಳ್ಳುತ್ತಲೇ ಸಾಗುತ್ತದೆ. ಇದೀಗ ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್‌ನಲ್ಲಿ ನೆಟ್ಟಿಗರು ಗರ್ಭಿಣಿ ನಾಯಕಿಯ ಕಾಲೆಳೆದಿದ್ದಾರೆ.
ಅವಳ ಡ್ರೆಸ್ಗೆ ರಕ್ತದ ಕಲೆ, ಮುಂದೆ?... 'ಅಂತರಪಟ' ಕೊಟ್ಟ ಒಳ್ಳೆಯ ಮೆಸೇಜ್ಗೆ ಮೆಚ್ಚುಗೆಗಳ ಮಹಾಪೂರ
ಈ ಧಾರಾವಾಹಿಯಲ್ಲಿ ನಾಯಕಿ ಸುಮನಾ ಗರ್ಭ ಧರಿಸಿ ಹಲವು ಕಂತುಗಳೇ ಮುಗಿದು ಹೋಗಿವೆ. ಇಂದಿಗೂ ಆಕೆಯ ಡೆಲಿವರಿ ಆಗದೇ ಇರುವುದು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಇದೇ ಕಾರಣಕ್ಕೆ ಇದರ ಪ್ರೋಮೋಗೆ ಸಕತ್ ಟ್ರೋಲ್ ಮಾಡುತ್ತಿದ್ದಾರೆ. ಅಂದಹಾಗೆ, ಕೆಂಡಸಂಪಿಗೆ ಸೀರಿಯಲ್‌ನ ಕಥಾನಾಯಕ ತೀರ್ಥಂಕರ್ ಪ್ರಸಾದ್ ಅವಕಾಶವಾದಿ ರಾಜಕಾರಣಿ. ಕಾರ್ಪೊರೇಟರ್ ಆಗಿದ್ದ ತೀರ್ಥಂಕರ್ ಪ್ರಸಾದ್ ಇದೀಗ ಎಂಎಲ್‌ಎ. ತೀರ್ಥಂಕರ್ ಪ್ರಸಾದ್ ಶಾಸಕನಾಗುವುದರ ಹಿಂದೆ ಸುಮನಾನ ಶ್ರಮ ಹೆಚ್ಚಿದೆ. ಹಾಗೆ ನೋಡಿದರೆ, ಎಲೆಕ್ಷನ್‌ನಲ್ಲಿ ಗೆಲ್ಲುವ ಕಾರಣಕ್ಕಾಗಿಯೇ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಸುಮನಾಳ ಕೊರಳಿಗೆ ತೀರ್ಥಂಕರ್ ಪ್ರಸಾದ್ ತಾಳಿ ಕಟ್ಟಿದ. ಆ ಮೂಲಕ ಮೀಡಿಯಾಗಳಲ್ಲಿ ತೀರ್ಥಂಕರ್ ಪ್ರಸಾದ್ ಹೀರೋ ಆದ.
ಎಲೆಕ್ಷನ್‌ನಲ್ಲಿ ಗೆದ್ದ ಮೇಲೆ ಸುಮನಾಳಿಗೆ ವಿಚ್ಛೇದನ ಕೊಡಲು ತೀರ್ಥಂಕರ್ ಪ್ರಸಾದ್ ನಿರ್ಧರಿಸಿದ್ದ. ಅಷ್ಟರಲ್ಲೇ ಸುಮನಾ ಗರ್ಭಿಣಿಯಾದಳು. ಇದೀಗ ಗರ್ಭಿಣಿ ಪತ್ನಿಯನ್ನ ತೀರ್ಥಂಕರ್ ಪ್ರಸಾದ್ ಕಾಳಜಿ ಮಾಡುತ್ತಿದ್ದಾನೆ. ಪತ್ನಿಯನ್ನು ಕೇರ್ ಮಾಡುವ ಈತ, ಆಕೆಯ ಕಾಲು ಒತ್ತುವುದು, ಸೇವೆ ಮಾಡುವುದು ಮಾಡುತ್ತಿದ್ದಾನೆ. ಅಪ್ಪ ಆಗುವುದು ತಿಳಿಯುತ್ತಿದ್ದಂತೆಯೇ ಪ್ರತಿಯೊಬ್ಬ ಪುರುಷನಲ್ಲಿಯೂ ಹಲವಾರು ರೀತಿಯ ಬದಲಾವಣೆ ಆಗುತ್ತದೆ, ಜವಾಬ್ದಾರಿ ಹೆಚ್ಚುತ್ತದೆ, ಪತ್ನಿಯ ಮೇಲೆ ಪ್ರೀತಿ ಹುಟ್ಟುತ್ತದೆ ಎಂದೆಲ್ಲಾ ಹೇಳುತ್ತಾನೆ ಹೀರೋ. ಈ ಡೈಲಾಗ್‌ಗಳನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರಿಗೆ ಸುಮನಾ ಡೆಲವರಿ ಯಾವಾಗ ಆಗತ್ತೆ ಅನ್ನೋ ಚಿಂತೆ. ಸುಮನ ನಿನಗೆ 9 ತಿಂಗಳು ಆಗಿಲ್ವಾ ನೀ ಯಾವತರ ಬಸ್ರಿ ಏನ್ ಮಗು ಹೊಟ್ಟೆ ಒಳಗೆ ಕಾಲೇಜು ಹೋಗ್ತಿದ್ಯ ಎಂದು ಓರ್ವ ನೆಟ್ಟಿಗರು ಕಮೆಂಟ್ ಮಾಡಿದ್ದರೆ, ಯಪ್ಪಾ ಏನೋ ಸೀರಿಯಲ್ ಇದು ಅವಳು ಬಸರಿ ಆಗಿ 100 ವರ್ಷ ಆಗತಾ ಬಂತು ಎಂದಿದ್ದಾರೆ ಇನ್ನು ಕೆಲವರು.
ಅರೆರೆ! ಇಲ್ಲಿ ನಿಂತು ಡಾ.ಬ್ರೋ ಇದೇನ್ ಮಾಡ್ತಿದ್ದಾರೆ? ಚೀನಾದಲ್ಲಿ ನಕ್ಕು ನಗಿಸುವ ಆಟವಿದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.