ಗಾಯಕ, ನಟ ಚಂದನ್ ಶೆಟ್ಟಿ ಹುಸ್ನ್ ತೆರಾ ತೌಬಾ ತೌಬಾ ಹಾಡಿಗೆ ಸ್ಟೆಪ್ ಹಾಕಿದ್ರೆ ಅಭಿಮಾನಿಗಳಿಗೆ ಅವರ ಮದುವೆಯದ್ದೇ ಚಿಂತೆ. ಫ್ಯಾನ್ಸ್ ಕೇಳ್ತಿರೋದೇನು?
ಗಾಯಕ, ನಟ ಚಂದನ್ ಶೆಟ್ಟಿ ಕಳೆದೊಂದು ತಿಂಗಳಿನಿಂದ ತುಂಬಾ ಸದ್ದು ಮಾಡುತ್ತಿರುವುದಕ್ಕೆ ಕಾರಣ, ನಿವೇದಿತಾ ಗೌಡ ಮತ್ತು ಅವರ ವಿಚ್ಛೇದನ ಹಿನ್ನೆಲೆಯಲ್ಲಿ. ಯಾವುದೇ ಗಲಾಟೆ, ಗೊಂದಲಕ್ಕೆ ಆಸ್ಪದ ಕೊಡದೇ ಡಿವೋರ್ಸ್ ಪಡೆದುಕೊಂಡಿರುವ ಈ ದಂಪತಿಯನ್ನು ಹಲವರು ಶ್ಲಾಘಿಸುತ್ತಿದ್ದರೂ, ಚಂದನ್ ಶೆಟ್ಟಿ ಪರವೇ ಬಹುತೇಕ ಮಂದಿ ನಿಂತಿರುವುದೂ ಸಾಕ್ಷಿಯಾಗಿದೆ. ಡಿವೋರ್ಸ್ ಬಳಿಕವೂ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಉಳಿಸಿಕೊಂಡು, ನಿವೇದಿತಾರನ್ನು ಬಹುವಚನದಿಂದಲೇ ಸಂಬೋಧಿಸುತ್ತಾ ಆಕೆಯ ಬಗ್ಗೆ ಕಾಳಜಿ ತೋರುವುದರಿಂದಲೂ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತರಾಗುತ್ತಿದ್ದಾರೆ. ಡಿವೋರ್ಸ್ ಬಳಿಕ ಚಂದನ್ ಶೆಟ್ಟಿಯವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿ ಎನ್ನಬಹುದು.
ಡಿವೋರ್ಸ್ ಹಿನ್ನೆಲೆಯಲ್ಲಿ, ಚಂದನ್ ಶೆಟ್ಟಿಯವರು ಯಾವಾಗ ಗುಡ್‌ನ್ಯೂಸ್ ಕೊಡುತ್ತಾರೆ ಎಂದೇ ಬಹುತೇಕ ಮಂದಿ ಕಾಯುತ್ತಿದ್ದಾರೆ. ಸದ್ಯ ತಮ್ಮ ಕರಿಯರ್ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮದುವೆ ಎಲ್ಲಾ ಆಮೇಲೆ ಎಂದು ಇದಾಗಲೇ ಹಲವು ಬಾರಿ ಚಂದನ್ ಅವರು ಹೇಳಿದ್ದರೂ, ಅವರ ಅಭಿಮಾನಿಗಳಿಗೆ ಅವರನ್ನು ಮದುವೆ ಮಾಡಿಸುವವರೆಗೂ ಸಮಾಧಾನವಿಲ್ಲ. ಇದೀಗ ಚಂದನ್ ಶೆಟ್ಟಿ ಅವರು, ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ "ಹುಸನ್ ತೆರಾ ತೌಬಾ ತೌಬಾ" ಹಾಡಿಗೆ ಭರ್ಜರಿ ರೀಲ್ಸ್ ...ಮಾಡಿದ್ದಾರೆ. ಇದರ ಅರ್ಥ ನಿನ್ನ ಸೌಂದರ್ಯ ಭಲೆ ಭಲೆ ಎನ್ನುವುದು. ಅದಕ್ಕಾಗಿಯೇ ಅಭಿಮಾನಿಗಳು ಈ ಹಾಡಿಗೂ, ಚಂದನ್ ಶೆಟ್ಟಿ ಮದ್ವೆಗೂ ಕನೆಕ್ಟ್ ಮಾಡಿದ್ದು, ಗುಡ್‌ನ್ಯೂಸಾ ಕೇಳ್ತಿದ್ದಾರೆ. ಒಟ್ಟಿನಲ್ಲಿ ಫ್ಯಾನ್ಸ್‌ಗೆ ಅವರ ಮದುವೆ ಮಾಡಿಸುವವರೆಗೆ ನೆಮ್ಮದಿ ಇದ್ದಂತೆ ಕಾಣುತ್ತಿಲ್ಲ.
ಡಿವೋರ್ಸ್ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್ ಶೆಟ್ಟಿ
ಸದ್ಯ ಚಂದನ್ ಶೆಟ್ಟಿ ಅವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈಚೆಗಷ್ಟೇ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಚಂದನ್ ಶೆಟ್ಟಿ ಅವರಿಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ರೀತಿ ಇವರ ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ಅಷ್ಟಕ್ಕೂ ಚಂದನ್ ಶೆಟ್ಟಿಯವರು ಈ ರೀತಿ ರೀಲ್ಸ್ ಮಾಡುವುದು ಕಡಿಮೆ. ಅದರಲ್ಲಿಯೂ ಡಾನ್ಸ್‌ಗೆ ರೀಲ್ಸ್ ಮಾಡುವುದು ಕಡಿಮೆಯೇ. ಆದರೆ ಇವರ ಮಾಜಿ ಪತ್ನಿ ನಿವೇದಿತಾ ಮಾತ್ರ ದಿನವೂ ಹೊಸ ಹೊಸ ವಿಡಿಯೋ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಆದರೆ ವಿಚಿತ್ರ ಎಂದರೆ ನಿವೇದಿತಾ ಅವರಿಗೆ ಎಲ್ಲರೂ ಟ್ರೋಲ್ ಮಾಡಿದರೆ, ಚಂದನ್ ಶೆಟ್ಟಿ ಪರವೇ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ಈ ಹಿಂದೆ ಡಿವೋರ್ಸ್ ಕುರಿತು ಚಂದನ್ ಶೆಟ್ಟಿ ಮಾತನಾಡಿದ್ದರು. ಪ್ರತಿಯೊಬ್ಬರ ಜೀವನದಲ್ಲಿಯೂ ಡಿವೋರ್ಸ್ಗೆ, ಪತಿ-ಪತ್ನಿ ನಡುವೆ ಬಿರುಕು ಮೂಡಲು ಮೂರನೆಯ ವ್ಯಕ್ತಿಯೇ ಕಾರಣ. ಇದು 100 ಪರ್ಸೆಂಟ್ ನಿಜ. ಆದರೆ ಆ ಮೂರನೆಯ ವ್ಯಕ್ತಿ ಯಾರು ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಆ ವ್ಯಕ್ತಿ ನಮ್ಮೊಳಗೇ ಇರಬಹುದು, ಅದು ನಮ್ಮ ಮನಸ್ಸೇ ಆಗಿರಬಹುದು. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎನ್ನುವ ಮೂಲಕ ತಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟಿರೋ ಆ ಮೂರನೆಯ ವ್ಯಕ್ತಿ ಯಾರು ಎಂದು ಈ ಮೂಲಕ ಹೇಳಿದ್ದರು. ಇದಕ್ಕೆ ಇನ್ನಷ್ಟು ಎಕ್ಸ್ಪ್ಲನೇಷನ್ ಕೊಟ್ಟಿರೋ ಚಂದನ್ ಅವರು, ನೋಡಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಎರಡೆರಡು ಶೇಡ್ಗಳು ಇರುತ್ತವೆ. ಒಳಗೆ ಒಂದು, ಹೊರಗೆ ಒಂದು ಇರಬಹುದು ಅಥವಾ ಮನೆಯಲ್ಲಿ ಒಂದು, ಹೊರಗಡೆ ಒಂದು ಇರಬಹುದು. ಆ ಶೇಡ್ನಲ್ಲಿ ಒಂದು ಮೂರನೆಯ ವ್ಯಕ್ತಿ ಆಗಿರಬಹುದು. ಪ್ರತಿಯೊಂದು ವಿಚ್ಛೇದನದ ಹಿಂದೆಯೂ ಇದೇ ಮೂರನೆಯ ವ್ಯಕ್ತಿ ಎಂಟ್ರಿಕೊಟ್ಟಾಗಲೇ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ ಎಂದಿದ್ದರು.
ಕಚ್ಚಿ ಕಚ್ಚಿ ತಿನ್ನೋದೆಂದ್ರೆ ಇಷ್ಟ ಅಂತ ನಿವೇದಿತಾ ರಾಗಿಮುದ್ದೆ ಹೀಗೆ ತಿನ್ನೋದಾ? 'ಸೀತೆ'ಯೂ ಸಾಥ್!