ಕಚ್ಚಿ ಕಚ್ಚಿ ತಿನ್ನೋದೆಂದ್ರೆ ಇಷ್ಟ ಅಂತ ನಿವೇದಿತಾ ರಾಗಿಮುದ್ದೆ ಹೀಗೆ ತಿನ್ನೋದಾ? 'ಸೀತೆ'ಯೂ ಸಾಥ್‌!

Published : Aug 19, 2024, 01:09 PM ISTUpdated : Aug 19, 2024, 01:22 PM IST
 ಕಚ್ಚಿ ಕಚ್ಚಿ ತಿನ್ನೋದೆಂದ್ರೆ ಇಷ್ಟ ಅಂತ ನಿವೇದಿತಾ ರಾಗಿಮುದ್ದೆ ಹೀಗೆ ತಿನ್ನೋದಾ? 'ಸೀತೆ'ಯೂ ಸಾಥ್‌!

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ರಾಗಿಮುದ್ದೆಯನ್ನು ಕಚ್ಚಿ ಕಚ್ಚಿ ತಿಂದ್ರೆ, ಸೀತಾರಾಮ ಸೀತಾ ವೈಷ್ಣವಿ ಗೌಡ ಹೇಗೆ ತಿಂದ್ರು ನೋಡಿ...   

ಮುದ್ದೆ ತಿನ್ನಲು ಅದರದ್ದೇ ಆದ ಪದ್ಧತಿ ಇದೆ. ಮುದ್ದೆಯನ್ನು ಸರಿಯಾಗಿ ತಿನ್ನುವುದು ಗೊತ್ತಿಲ್ಲದವರಿಗೆ ಸುಲಭವೇನಲ್ಲ. ಹಾಸನ, ಮಂಡ್ಯ ಈ ಭಾಗಗಳಲ್ಲಿ ಹುಟ್ಟಿ ಬೆಳೆದವರಿಗೆ ಹುಟ್ಟಿನಿಂದಲೇ ಮುದ್ದೆ ತಿನ್ನುವ ಕಲೆ ಕರಗತವಾಗಿರುತ್ತದೆ. ಆದರೆ ಬಯಲುಸೀಮೆ, ಮಲೆನಾಡು, ಹೀಗೆ ಹಲವು ಭಾಗಗಳ ಎಷ್ಟೋ ಮಂದಿ ಮುದ್ದೆಯನ್ನು ಜೀವನದಲ್ಲಿ ಒಂದು ಬಾರಿಯೂ ಕಣ್ಣಾರೆ ನೋಡಿರುವುದಿಲ್ಲ, ಮುಟ್ಟಿರುವುದೂ ಇಲ್ಲ. ಇನ್ನು ತಿನ್ನುವುದಂತೂ ದೂರದ ಮಾತೇ. ಒಂದು ವೇಳೆ ಅವರಿಗೆ ಆಸೆಯಾಗಿ ಮುದ್ದೆ ತಿನ್ನಲು ಟ್ರೈ ಮಾಡಿದರೂ ಸಾಂಬಾರಿನಲ್ಲಿ ಅದನ್ನು ಅದ್ದಿ ತಿನ್ನುವುದು ಮೊದಲ ಬಾರಿಗಂತೂ ಸುಲಭದ ಮಾತಲ್ಲ. ಅದರಲ್ಲಿಯೂ ಬೇರೆ ಅಡುಗೆ ಪದಾರ್ಥಗಳದ್ದು ಒಂದು ಪದ್ಧತಿಯಾದ್ರೆ, ಮುದ್ದೆಯದ್ದು ಇನ್ನೊಂದೇ ತಿನ್ನುವ ರೀತಿ. ಅದನ್ನು ಕಚ್ಚಿ ತಿನ್ನುವ ಬದಲು ಒಂದೇ ಸಲ ಗುಳುಂ ಮಾಡಿ ತಿನ್ನುವುದು ಎಲ್ಲರಿಗೂ ಒಲ್ಲದ ಕಲೆ.

ಆದರೆ ತನಗೆ ಎಲ್ಲವನ್ನೂ ಕಚ್ಚಿಕಚ್ಚಿ ತಿನ್ನುವುದು ಎಂದ್ರೆ ಇಷ್ಟ ಎಂದಿರುವ ಬಿಗ್‌ಬಾಸ್‌ ಖ್ಯಾತಿಯ ನಟಿ ನಿವೇದಿತಾ ಗೌಡ ರಾಗಿ ಮುದ್ದೆಯನ್ನೂ ಕಚ್ಚಿ ಕಚ್ಚಿ ತಿಂದಿದ್ದಾರೆ. ಇದಕ್ಕೆ ಸೀತಾರಾಮ ಸೀರಿಯಲ್‌ ಸೀತಾ ಅರ್ಥಾತ್‌ ವೈಷ್ಣವಿ ಗೌಡ ಸಾಥ್‌ ನೀಡಿದ್ದಾರೆ. ಇದರ ವಿಡಿಯೋ ಈಗ ವೈರಲ್‌ ಆಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಿವೇದಿತಾ ಗೌಡ ಮತ್ತು ವೈಷ್ಣವಿ ಗೌಡ ಅವರು, ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿದ್ದಾರೆ. ಕೈಯಲ್ಲಿ ಮುಟ್ಟದೇ ಮುದ್ದೆಯನ್ನು ತಿನ್ನಬೇಕು ಎನ್ನುವುದು. ಮುದ್ದೆಯ ಜೊತೆಗೆ ಸೈಡ್‌ನಲ್ಲಿ ತುಪ್ಪವನ್ನೂ ಇಡಲಾಗಿದೆ. ತುಪ್ಪ ತಿನ್ನುವುದು ಹೇಗೆ ಎಂದು ವೈಷ್ಣವಿ ಪ್ರಶ್ನಿಸಿದಾಗ ನಿವೇದಿತಾ ನೆಕ್ಕರೆ ಸಾಕು ಎಂದಿದ್ದಾರೆ.

'ಗೌರಿ' ನೋಡಲು ಬಂದ ನಿವೇದಿತಾ: ಅಂಗಡಿ ಮುಚ್ಕೊಳಮ್ಮಾ ಅಂತೆಲ್ಲಾ ಹೇಳೋದಾ ನೆಟ್ಟಿಗರು?

ಇದಾದ ಬಳಿಕ ಸ್ಪರ್ಧೆ ಶುರುವಾಗಿದೆ. ವೈಷ್ಣವಿ ಮುದ್ದೆಯನ್ನು ಬಾಯಿಯಿಂದ ತೆಗೆದುಕೊಂಡಿದ್ದರೆ, ನಿವೇದಿತಾ ಅದನ್ನು ಕಚ್ಚಿ ಕಚ್ಚಿ ತಿಂದಿದ್ದಾರೆ. ಮುದ್ದೆಯನ್ನು ಕಚ್ಚುತ್ತೀರಾ ಎಂದು ವೈಷ್ಣವಿ ಪ್ರಶ್ನಿಸಿದಾಗ, ನಿವೇದಿತಾ ನನಗೆ ಕಚ್ಚಿ ಕಚ್ಚಿ ತಿನ್ನುವುದು ಎಂದರೆ ತುಂಬಾ ಇಷ್ಟ ಎಂದಿದ್ದಾರೆ. ಕೊನೆಗೆ ತುಪ್ಪವನ್ನೂ ನೆಕ್ಕಿ ತಿಂದಿದ್ದಾರೆ. ಈ ವಿಡಿಯೋಗೆ ಥಹರೇವಾರಿ ಕಮೆಂಟ್ಸ್‌ ಸುರಿಮಳೆಯಾಗಿದೆ. ಮಾಮೂಲಿನಂತೆಯೇ ನಿವೇದಿತಾರನ್ನು ಚಂದನ್‌ ಶೆಟ್ಟಿ ಹೆಸರು ಹೇಳಿ ಕಮೆಂಟಿಗರು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ. ಮುದ್ದೆಯನ್ನು ಯಾರಾದರೂ ಹೀಗೆಯೇ ತಿಂತಾರಾ ಎಂದು ಕೆಲವರು ಪ್ರಶ್ನಿಸಿದ್ದರೆ, ಮುದ್ದೆಗೆ ಇಬ್ಬರೂ ಅವಮಾನ ಮಾಡಿದ್ದೀರಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಚಂದನ್‌ ಶೆಟ್ಟಿ ನಿಮಗೆ ಡಿವೋರ್ಸ್ ಕೊಟ್ಟು ಒಳ್ಳೆಯದು ಮಾಡಿದ್ರು ಎಂದು ಮತ್ತೆ ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ. 

 ಅಷ್ಟಕ್ಕೂ, ಬಿಗ್​ಬಾಸ್​ನಿಂದಲೇ ಖ್ಯಾತಿ ಪಡೆದು, ಇದೀಗ ಡಿವೋರ್ಸ್ ಬಳಿಕ ಮತ್ತಷ್ಟು ಹೆಸರು ಮಾಡುತ್ತಿರುವವರೆಂದರೆ ನಿವೇದಿತಾ ಗೌಡ. ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ  ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ
ಬಿಗ್ ಬಾಸ್ ಟ್ರೋಫಿನೂ ಇಲ್ಲ, ಜುಟ್ಟೂ ಇಲ್ಲ; 24 ಸ್ಪರ್ಧಿಗಳನ್ನು ಹೊರಹಾಕ್ತೀನೆಂದ ಧ್ರುವಂತ್ ಗೆಟಪ್ ಚೇಂಜ್!