bigg boss : ಬಿಗ್ ಬಾಸ್ ಕಿಚ್ಚನಿಲ್ಲದೆ ಮುಂದುವರಿಯುತ್ತಾರಾ? ಅಭಿಮಾನಿಗಳು ಹೇಳೋದೇನು ?

By Roopa Hegde  |  First Published Aug 19, 2024, 1:16 PM IST

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಕಿಚ್ಚ ಸುದೀಪ್ ಅವರು ನಿರೂಪಕರಾಗಿ ಮುಂದುವರಿಯುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದು, ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ವೀಕ್ಷಿಸುವುದಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.


ಬಿಗ್ ಬಾಸ್ ಕನ್ನಡ ಸೀಸನ್ (Bigg Boss Kannada season) 11ಕ್ಕೆ ತಯಾರಿ ಜೋರಾಗಿ ನಡೆದಿದೆ. ಬಿಗ್ ಬಾಸ್ ಎಂದಾಗ ನೆನಪಾಗೋದು ಒಂದು ನಟ ಕಿಚ್ಚ ಸುದೀಪ್ (actor Kiccha Sudeep). ಇನ್ನೊಂದು ಬಿಗ್ ಬಾಸ್ ಮನೆ. ನಟ ಸುದೀಪ್ ಆಂಕರಿಂಗ್, ಸ್ಪರ್ಧಿಗಳನ್ನು ನಗಿಸುವ, ಅವರಿಗೆ ಮಾತಿನ ಮೂಲಕವೇ ಏಟು ನೀಡುವ ಪರಿ ಬಹುತೇಕ ಎಲ್ಲ ವೀಕ್ಷಕರಿಗೆ ಇಷ್ಟ. ಬಿಗ್ ಬಾಸ್ ಗೆ ಟಿ ಆರ್ ಪಿ (TRP) ಬರ್ತಿರೋದೆ ಸುದೀಪ್ ಅವರಿಂದ ಅಂದ್ರೆ ತಪ್ಪೇನಿಲ್ಲ. ವಾರಪೂರ್ತಿ ಬಿಗ್ ಬಾಸ್ ನೋಡದ ವೀಕ್ಷಕರು ಕೂಡ ಶನಿವಾರ ಮತ್ತು ಭಾನುವಾರ ಟಿವಿ ಮುಂದೆ ಕುಳಿತುಕೊಳ್ತಾರೆ.  ಕಿಚ್ಚನ ಪಂಚಾಯತಿ ಎಲ್ಲರ ಅಚ್ಚುಮೆಚ್ಚು. ಆದ್ರೆ ಈ ಬಾರಿ ಬಿಗ್ ಬಾಸ್ ಶೋದಲ್ಲಿ ಸುದೀಪ್ ಕಾಣಿಸಿಕೊಳ್ಳೋದಿಲ್ಲ ಎನ್ನುವ ಸುದ್ದಿಯೊಂದಿದೆ. ಅದನ್ನು ಕೇಳಿದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಬೇರೆ ಭಾಷೆಯಲ್ಲು ಪ್ರಸಾರವಾಗ್ತಿರುವ ಬಿಗ್ ಬಾಸ್ ಶೋಗಳ ನಿರೂಪಕರು ಬದಲಾಗಿದ್ದಾರೆ. ಅದೇ ರೀತಿ ಕನ್ನಡ ಶೋ ನಿರೂಪಕರು ಕೂಡ ಚೇಂಜ್ ಆಗ್ತಾರೆ ಎನ್ನುವ ಗಾಳಿ ಸುದ್ದಿಯೊಂದಿದೆ. ಕೆಲ ನಟರ ಹೆಸರು ಕೂಡ ನಿರೂಪಕರ ಪಟ್ಟಿಯಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನು ಚಾನೆಲ್ ಒಂದು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಅದ್ರ ವಿಡಿಯೋ ವೈರಲ್ ಆಗಿದೆ.

Tap to resize

Latest Videos

vaishnavi gowda : ಅತ್ತಿಗೆ ಸೀಮಂತದಲ್ಲಿ ಮಿಂಚಿದ ನಟಿ ವೈಷ್ಣವಿ ಗೌಡ

ಮೈಕ್ ಹಿಡಿದು ಜನರ ಮುಂದೆ ಹೋಗುವ ನಿರೂಪಕರೊಬ್ಬರು, ಬಿಗ್ ಬಾಸ್ ನಲ್ಲಿ ಈ ಬಾರಿ ಸುದೀಪ್ ಪಾಲ್ಗೊಳ್ತಿಲ್ಲ ಎನ್ನುತ್ತಿದ್ದಾರೆ, ನಿಮ್ಮ ಅಭಿಪ್ರಾಯ ಏನು ಅಂತ ಕೇಳ್ತಾರೆ. ಬಹುತೇಕರು, ಸುದೀಪ್ ಇಲ್ಲ ಅಂದ್ರೆ ಶೋ ನೋಡೋದಿಲ್ಲ ಎಂದಿದ್ದಾರೆ. ಸುದೀಪ್ ಗಾಗಿಯೇ ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಣೆ ಮಾಡ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬೇರೆ ಯಾರೂ ಮಾಡಿದ್ರೂ ಶೋ ನೋಡೋದಿಲ್ಲ, ಸುದೀಪ್ ಮಾಡಿದ್ರೆ ಮಾತ್ರ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಬಿಗ್ ಬಾಸ್ ತನ್ನ ಕಳೆ ಕಳೆದುಕೊಳ್ಳುತ್ತೆ ಎಂದ ಅಭಿಮಾನಿಗಳು, ಸುದೀಪ್ ಏನಾದ್ರೂ ಶೋ ಬಿಟ್ರೆ, ಬಿಗ್ ಬಾಸ್ ಗೆ ಟಿಆರ್ ಪಿ ಇರೋದಿಲ್ಲ ಎಂದಿದ್ದಾರೆ. 

ಈ ವಿಡಿಯೋಕ್ಕೆ ಪೋಸ್ಟ್ ಮಾಡಿದ ಅಭಿಮಾನಿಗಳು ಕೂಡ ಬಾಸ್ ಇಲ್ಲ ಅಂದ್ರೆ ಬಿಗ್ ಬಾಸ್ ನೋಡಲ್ಲ ಎಂದಿದ್ದಾರೆ. ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಪರ್ಫೆಕ್ಟ್ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

ಬಿಗ್ ಬಾಸ್ ಕನ್ನಡ ಸೆಪ್ಟೆಂಬರ್ ಕೊನೆ ವಾರದಲ್ಲಿ ಪ್ರಸಾರವಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹೈದ್ರಾಬಾದ್ ನಲ್ಲಿ ಪ್ರೋಮೋ ಶೂಟ್ ಆಗಿದೆ. ಪ್ರೋಮೋಗೆ ಸಂಬಂಧಿಸಿದಂತೆ ಒಂದು ಮೀಟಿಂಗ್ ಕೂಡ ನಡೆದಿದೆ ಎನ್ನಲಾಗಿದೆ. ಶೋಗೆ ಸಂಬಂಧಿಸಿದ ಎರಡು ಫೋಟೋಗಳು ವೈರಲ್ ಆಗಿವೆ. ಈ ಫೋಟೋ ಬ್ಲರ್ ಆಗಿದ್ರೂ ಅದ್ರಲ್ಲಿರೋದು ಸುದೀಪ್ ಅಂತ ಸ್ಪಷ್ಟವಾಗಿ ಹೇಳ್ಬಹುದು. ಅಂದ್ರೆ ಈ ಬಾರಿ ಬಿಗ್ ಬಾಸ್ ಹೊಣೆ ಸುದೀಪ್ ಮೇಲೆಯೇ ಇದೆ ಎಂದಾಯ್ತು. ಇದನ್ನು ಕೇಳಿದ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿದೆ.

ಪತಿ ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಸನ್ನಿ ಲಿಯೋನ್: ಫೋಟೋಸ್ ವೈರಲ್

ಬಿಗ್ ಬಾಸ್ ಗೆ ಸ್ಪರ್ಧಿಗಳ ಆಯ್ಕೆ ಕೂಡ ನಡೆಯುತ್ತಿದೆ. ಕಲರ್ಸ್ ಕನ್ನಡದ ಮೂರು ಧಾರಾವಾಹಿಗಳು ಬಿಗ್ ಬಾಸ್ ಹಿನ್ನಲೆಯಲ್ಲಿ ರದ್ದಾಗುತ್ತಿದ್ದು, ಆ ಧಾರಾವಾಹಿ ನಟರು ಸೇರಿದಂತೆ ಅನೇಕ ಕಲಾವಿದರ ಹೆಸರುಗಳು ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರ್ತಿವೆ. ಎಸ್ ನಾರಾಯಣ ಪುತ್ರ ಪಂಕಜ್ ನಾರಾಯಣ್ ಬಿಗ್ ಬಾಸ್ ಮನೆಗೆ ಬರುವ ನಿರೀಕ್ಷೆ ಇದೆ. ಹಾಗೆಯೇ  ಅಂತರಪಟ ಸೀರಿಯಲ್ ಹಿರೋಯಿನ್ ತನ್ವಿಯಾ ಬಾಲರಾಜ್ ,ಶನಿ ಸೀರಿಯಲ್ ನಲ್ಲಿ ಫೇಮಸ್ ಆಗಿದ್ದ ನಟ ಸುನೀಲ್, ತುಕಾಲಿ ಸಂತು ಪತ್ನಿ ಮಾನಸ, ಗಿಚ್ಚಿಗಿಲಿಗಿಲಿಯ ನಟ ರಾಗಿಣಿ ಅಲಿಯಾಸ್ ರಾಘವೇಂದ್ರ. ರೀಲ್ಸ್ ರೇಷ್ಮಾಗೆ ಕರೆ ಹೋಗಿದೆ ಎನ್ನಲಾಗಿದೆ. 

click me!