
ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಸೀತಾ ರಾಮ. ನಟಿ ವೈಷ್ಣವಿ ಗೌಡ (Vaishnavi Gowda) ಮತ್ತು ಗಗನ್ ಚಿನ್ನಪ್ಪ (Gagan Chinnappa) ಮುಖ್ಯಪಾತ್ರದಲ್ಲಿ ಹಾಗೂ ಪುಟಾಣಿ ರೀತು ಸಿಂಗ್ (Reethu Singh)ಕೂಡ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಧಾರಾವಾಹಿ ತನ್ನ ವಿಭಿನ್ನ ಕಥಾ ಹಂದರದ ಮೂಲಕ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಧಾರಾವಾಹಿ ತಮಿಳಿಗೆ ಡಬ್ ಆಗಲಿದೆ.
ಮಗುಚಿಬಿದ್ದ ತೆಪ್ಪ, ವೈಷ್ಣವಿ ಗೌಡ ಮತ್ತು ಟೀಮ್ ಸ್ವಲ್ಪದರಲ್ಲೇ ಪಾರು! ಅಷ್ಟಕ್ಕೂ ಸೀತಮ್ಮಂಗೆ ಏನಾಗಿತ್ತು ಗೊತ್ತಾ?
ಸೀತಾ ರಾಮಾ ಧಾರಾವಾಹಿ (Seetha Rama Serial) ಕನ್ನಡ ಕಿರುತೆರೆಯಲ್ಲಿ ಈಗಾಗಲೇ 400 ಎಪಿಸೋಡ್ ಗಳನ್ನು ಪೂರೈಸಿ, 500 ಎಪಿಸೋಡ್ ಗಳತ್ತ ದಾಪು ದಾಲಿಡುತ್ತಿದೆ. ಇದೊಂದು ವಿಭಿನ್ನ ಕಥೆಯಾಗಿದ್ದು, ನಾಯಕ, ನಾಯಕಿ ಮತ್ತು ಮಗುವಿನ ಅಭಿನಯ ಮತ್ತು ಕಥೆ ಓಡಿಸಿಕೊಂಡು ಹೋಗುತ್ತಿರುವ ರೀತಿ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈ ಧಾರಾವಾಹಿ ಝೀಕನ್ನಡದಲ್ಲಿ 9.30ಕ್ಕೆ ರಾತ್ರಿ ಪ್ರಸಾರವಾಗುತ್ತಿತ್ತು, ಸದ್ಯ ಸಂಜೆ 5.30ಕ್ಕೆ ಹಾಗೂ ರಾತ್ರಿ 11 ಗಂಟೆಗೆ ಪ್ರಸಾರವಾಗುತ್ತಿದೆ.
ಸಾಮಾನ್ಯ ಕುಟುಂಬದ ಹುಡುಗಿ ಸೀತಾ, ತನ್ನದಲ್ಲದ ಆದರೆ, ತನ್ನದೇ ಹೊಟ್ಟೆಯಲ್ಲಿ ಹುಟ್ಟಿದ ಸಿಹಿಯನ್ನು ತಾಯಿಯಂತೆ ಸಲಹುತ್ತಿರುತ್ತಾಳೆ, ವಠಾರದಲ್ಲಿ ಜೀವನ. ಸಿಹಿಗೆ ಸೀತಮ್ಮನೇ ಪ್ರಪಂಚ. ಇವರ ಜೀವನಕ್ಕೆ ಎಂಟ್ರಿ ಕೊಡುವವನು ಶ್ರೀರಾಮ್ ದೇಸಾಯಿ ಅಕಾ ರಾಮ್. ಸೀತಾ ಮತ್ತು ರಾಮ ಹೇಗೆ ಜೋಡಿಯಾಗ್ತಾರೆ, ಪುಟ್ಟ ಸಿಹಿ ಇವರಿಬ್ಬರ ಪ್ರೀತಿಗೆ ಹೇಗೆ ಸೇತುವೆ ಆಗ್ತಾಳೆ ಅನ್ನೋದು ಕಥೆಯಾಗಿತ್ತು. ಇದೀಗ ಪುಟ್ಟ ಸಿಹಿ ಭಾರ್ಗವಿಯ ಕುತಂತ್ರದಿಂದಾಗಿ ಸಾವನ್ನಪ್ಪಿದ್ದಾಳೆ. ಅವಳ ಜಾಗಕ್ಕೆ ಇದೀಗ ಸುಬ್ಬಿ ಬಂದಿದ್ದಾಳೆ. ಸುಬ್ಬಿ ಸಿಹಿಯ ಜಾಗವನ್ನು ತುಂಬಿ ಸೀತಾಳ ಬದುಕಿಗೆ ಮತ್ತೆ ಬೆಳಕಾಗಿದ್ದಾಳೆ. ಸುಬ್ಬಿಗೆ ಮಾತ್ರ ಕಾಣಿಸಿಕೊಳ್ಳುವ ಸಿಹಿ, ಸುಬ್ಬಿಗೆ ಒಂದೊಂದೇ ಸತ್ಯವನ್ನು ಹೇಳುತ್ತಿದ್ದಾಳೆ. ಸಿಹಿಯಾಗಿ ಸುಬ್ಬಿ ಭಾರ್ಗವಿಯ ಆಟಗಳನ್ನು ಹೇಗೆ ಮಟ್ಟ ಹಾಕುತ್ತಾಳೆ ಅನ್ನೋದೆ ಮುಂದಿನ ಕಥೆ. ಸದ್ಯಕ್ಕಂತೂ ಸೀರಿಯಲ್ ಇಂಟ್ರೆಸ್ಟಿಂಗ್ ಆಗಿಯೇ ಸಾಗುತ್ತಿದೆ. ಅಷ್ಟರಲ್ಲೇ ಸೀತಾ ರಾಮಾ ಧಾರಾವಾಹಿ ತಮಿಳಿಗೂ ಡಬ್ ಆಗಿದೆ. ಈಗಾಗಲೇ ಪ್ರೊಮೋ ಕೂಡ ರಿಲೀಸ್ ಆಗಿದೆ. ಈಗಾಗಲೇ ಈ ಸೀರಿಯಲ್ ಮಲಯಾಲಂನಲ್ಲಿ ಡಬ್ (dubbed to malayalam) ಆಗಿ ಪ್ರಸಾರ ಕಾಣುತ್ತಿದೆ.
ಸೀತಾರಾಮ ಧಾರಾವಾಹಿ ಬಿಗ್ ಟ್ವಿಸ್ಟ್: ಅಘೋರಿ ಬಾಬಾ ಸಿಹಿಗೆ ಕೊಟ್ಟ 'ಹನುಮ ರಕ್ಷೆ'ಯ ಶಕ್ತಿ ಏನು ಗೊತ್ತಾ?
ಕನ್ನಡದ ಸೀರಿಯಲ್ ಗಳು (Kannada Serial) ಬೇರೆ ಭಾಷೆಗೆ ಡಬ್ ಆಗೋದು ತುಂಬಾನೆ ಕಡಿಮೆ. ಆದರೆ ಇದೀಗ ಸೀತಾ ರಾಮ ಧಾರಾವಾಹಿ ಡಬ್ ಆಗುವ ಮೂಲಕ ಸದ್ದು ಮಾಡಿದೆ. ಇದೇ ಮಾರ್ಚ್ 17 ರಿಂದ ಝೀ ತಮಿಳಿನಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ತಮಿಳಿನಲ್ಲಿ ರಾಮನ್ ತೇಡಿಯ ಸೀತೈ (Raman Thediya Seethai) ಹೆಸರಿನಲ್ಲಿ ಸೀರಿಯಲ್ ಮದ್ಯಾಹ್ನ 2.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಪ್ರೊಮೋವನ್ನು ಜನ ಇಷ್ಟಪಟ್ಟಿದ್ದಾರೆ. ಡಬ್ಬಿಂಗ್ ಬೇಡ, ತಮಿಳಿನಲ್ಲಿ ಈ ಸೀರಿಯಲ್ ರಿಮೇಕ್ (remake serial) ಮಾಡಿ ಎಂದು ಕೇಳಿಕೊಂಡಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.