ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ನಿಧಿಯನ್ನು ಮನೆ ತುಂಬಿಸಿಕೊಳ್ಳುವ ವೇಳೆ ಕಾಲುಂಗುರ ಇಲ್ಲದ್ದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಸೀರಿಯಲ್ ಮುಗಿಯತ್ತಾ?
ಶ್ರೀರಸ್ತು ಶುಭಮಸ್ತು ಸೀರಿಯಲ್ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಅದೇ ಇನ್ನೊಂದೆಡೆ, ಸಮರ್ಥ್, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. ಅದೇ ಇನ್ನೊಂದೆಡೆ, ಅತ್ತೆಯ ಮಾತು ಕೇಳಿ ತಂಗಿ ಪೂರ್ಣಿ ಹಾಗೂ ಅತ್ತೆ ತುಳಸಿ ಕಂಡರೆ ಉರಿಬೀಳುತ್ತಿದ್ದ, ಇಬ್ಬರಿಗೂ ಹಾನಿ ಉಂಟು ಮಾಡಲು ಅತ್ತೆಯ ಜೊತೆ ಸ್ಕೆಚ್ ಹಾಕುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾಳೆ. ಇನ್ನೇನು ಇದೆ ಬಾಕಿ? ಎಲ್ಲವೂ ಬಹುತೇಕ ಮುಗಿದೇ ಹೋಗಿದೆ. ಈಗೇನಿದ್ದರೂ ಶಾರ್ವರಿಯ ಕುತಂತ್ರ ಸಾಕ್ಷಿ ಸಹಿತ ಬಯಲಾಗಿ ಆಕೆ ಜೈಲುಪಾಲು ಆಗಬೇಕಿರುವುದು ಮಾತ್ರ ಉಳಿದಿದೆ. ಇದಾಗಲೇ ಕಾರು ಅಪಘಾತ ಮಾಡಿರುವುದು ಶಾರ್ವರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಾಗಿದೆ.
ಇದೀಗ ನಿಧಿಯ ಮದುವೆಯೂ ನಿರ್ವಿಘ್ನವಾಗಿ ನಡೆದುಹೋಗಿದೆ. ಹಾಗಿದ್ದರೆ ಇನ್ನೇನು ಸೀರಿಯಲ್ ಮುಗಿದೇ ಹೋಗುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ. ಮತ್ತೆ ಸೀರಿಯಲ್ ಎಳೆಯುವಲ್ಲಿ ಇನ್ನೇನೂ ಅರ್ಥವಿಲ್ಲ ಎನ್ನುವುದು ವೀಕ್ಷಕರ ಅಭಿಮತ. ಆದರೆ ಇದರ ನಡುವೆಯೇ, ನಿಧಿಯನ್ನು ಮನೆ ತುಂಬಿಸಿಕೊಳ್ಳುವ ಸಮಯದಲ್ಲಿ ನಿರ್ದೇಶಕರು ಮಾಡಿರುವ ಎಡವಟ್ಟು ನೆಟ್ಟಿಗರ ಕಣ್ಣು ಕುಕ್ಕಿದೆ. ನಿಧಿಯನ್ನು ಮದುವೆ ಮಾಡಿಸಿಕೊಟ್ಟ ಬಳಿಕ ಆಕೆಯನ್ನು ಮನೆ ತುಂಬಿಸಿಕೊಳ್ಳುವಾಗ ಸೇರು ಒದೆಯುವ ದೃಶ್ಯವಿದೆ. ಅದರಲ್ಲಿ ನಿಧಿ ಸೇರನ್ನು ಒದೆಯುವಾಗ ಆಕೆಯ ಕಾಲಿನಲ್ಲಿ ಕಾಲುಂಗುರ ಇಲ್ಲ! ಸೀರಿಯಲ್ಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ನೆಟ್ಟಿಗರು ಇದರ ಬಗ್ಗೆ ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ.
ಶ್ರೀರಸ್ತು ಶುಭಮಸ್ತುವಿಗೆ 700ರ ಸಂಭ್ರಮ: ಹುಟ್ಟುತ್ತಲೇ ಸೀರಿಯಲ್ನಲ್ಲಿ ಮಿಂಚ್ತಿರೋ ಈ ಪುಟಾಣಿ ಯಾರ ಮಗು?
ಹೆಣ್ಣಿಗೆ ಮದುವೆ ಮಾಡುವಾಗ ತಾಳಿ ಜೋತೆ ಕಾಲುಂಗುರ ಕೂಡಾ ಒಂದು ಒಡವೆ. ಕಾಲು ಉಂಗುರ ತೋಡಿಸಿ ಮದುವೆ ಮಾಡುವುದು ಡೈರೆಕ್ಟರ್ ಕರ್ತವ್ಯ. ಇಷ್ಟು ಸಣ್ಣ ಸಣ್ಣ ವಿಷಯಗಳು ನಮ್ಮ ಸಂಸ್ಕೃತಿ ಯನ್ನು ಪ್ರತಿಬಿಂಬಿಸುತ್ತವೆ . ಇಂತಹ ಸಣ್ಣ ವಿಷಯಗಳು ಡೈರೆಕ್ಟರ್ ತಲೆಗೆ ಹೊಳೆಯುವುದೆ ಇಲ್ಲ ಎಂದು ಕೆ.ಎಲ್.ಮಂಜುಳಾ ಎನ್ನುವವರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಅದಕ್ಕೆ ರಿಪ್ಲೈ ಕೂಡ ಬಂದಿದ್ದು ಅರ್ಜೆಂಟ್ ಮದ್ವೆಯಲ್ವಾ? ಅದ್ಕೇ ಕಾಲುಂಗುರ ಮರೆತಿರಬೇಕು ಎಂದು ತಮಾಷೆಯನ್ನೂ ಮಾಡಲಾಗಿದೆ. ಚಿಕ್ಕಪುಟ್ಟ ವಿಷಯಗಳನ್ನೂ ನಿರ್ದೇಶಕರು ಎಷ್ಟರಮಟ್ಟಿಗೆ ಗಮನ ಹರಿಸಬೇಕು ಎನ್ನುವುದಕ್ಕೆ ಈ ಒಂದು ದೃಶ್ಯ ಸಾಕ್ಷಿಯಾಗಿದೆ.
ಅದೇ ಇನ್ನೊಂದೆಡೆ, ತುಳಸಿಯ ಮಗಳಾಗಿ ಬಂದಿರುವ ಮುದ್ದು ಕಂದನ ಮೇಲೆ ಎಲ್ಲರ ಕಣ್ಣುನೆಟ್ಟಿದೆ. ಇದರ ಜೊತೆಗಿನ ಆಟ-ತುಂಟಾದ ಕ್ಷಣಗಳನ್ನು ದೀಪಿಕಾ ಪಾತ್ರಧಾರಿ, ನಟಿ ದರ್ಶಿನಿ ಡೆಲ್ಟಾ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರೂ ಮಗುವನ್ನು ಹೇಗೆ ಆಡಿಸುತ್ತಾರೆ, ಆ ಮಗು ಶೂಟಿಂಗ್ ಸೆಟ್ನಲ್ಲಿ ಹೇಗೆ ಸೈಲಂಟ್ ಆಗಿದೆ. ಎಲ್ಲರ ಬಳಿಯೂ ಎಷ್ಟೊಂದು ಸಲೀಸಾಗಿ ಹೊಂದಿಕೊಂಡಿದೆ ಎನ್ನುವುದನ್ನು ನೋಡಬಹುದಾಗಿದೆ. ಇದೀಗ ಈ ಮಗು ಯಾರು ಎಂಬ ಬಗ್ಗೆ ನೆಟ್ಟಿಗರು ತಡಕಾಡುತ್ತಿದ್ದಾರೆ. ಸಿಕ್ಕದ್ದೇ ಛಾನ್ಸ್ ಎಂದುಕೊಂಡೋ ಏನೋ, ಒಬ್ಬರು ಇದು ತಮ್ಮ ಪಕ್ಕದ ಮನೆಯ ಮಗು ಎಂದಿದ್ದಾರೆ. ಅದಕ್ಕೆ ಹಲವಾರು ಮಂದಿ ರಿಪ್ಲೈ ಮಾಡಿದ್ದು, ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ ಅದಕ್ಕೆ ಯಾವುದಕ್ಕೂ ಅವರು ಉತ್ತರ ಕೊಟ್ಟಿಲ್ಲ. ಒಟ್ಟಿನಲ್ಲಿ ಹುಟ್ಟಿ ಕೆಲವೇ ದಿನಗಳಲ್ಲಿ ಮಗು ಸೀರಿಯಲ್ನಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅದು ತುಂಬಾ ಹಠ ಮಾಡದ ಕಾರಣ ಅಲ್ಲಿಯೇ ಇರುವ ಯಾರದ್ದೋ ಮಗುವಿರಬೇಕು ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಮಗು ಯಾರದ್ದೇ ಆಗಿದ್ದರೂ ಅದರ ಅಮ್ಮನನ್ನೂ ಶೂಟಿಂಗ್ ಸೆಟ್ಗೆ ಕರೆದುಕೊಂಡು ಬರಲೇಬೇಕು. ಅವರನ್ನು ಒಮ್ಮೆಯಾದರೂ ತೋರಿಸಿ ಎನ್ನುವುದು ಅಭಿಮಾನಿಗಳ ಕೋರಿಕೆ.
'ಯಜಮಾನ' ಸೀರಿಯಲ್ ಮೊದಲರಾತ್ರಿ ಶೂಟಿಂಗ್ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್