ಎರಡೂವರೆ ವರ್ಷಗಳಿಂದ ಟಾಪ್‌ 3 ಸ್ಥಾನದಲ್ಲಿದ್ದ Lakshmi Baramma Serial ಅಂತ್ಯ ಆಗ್ತಿರೋದು ಯಾಕೆ?

ʼಲಕ್ಷೀ ಬಾರಮ್ಮʼ ಧಾರಾವಾಹಿಯ ಟಿಆರ್‌ಪಿ ಚೆನ್ನಾಗಿದ್ರೂ ಯಾಕೆ ಅಂತ್ಯ ಆಗ್ತಿದೆ ಎಂಬ ಕುತೂಹಲ ಅನೇಕರಿಗೆ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ. 
 


‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತ್ಯ ಆಗ್ತಿದೆ ಎಂದು ವಾಹಿನಿಯೇ ಅಧಿಕೃತವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೆ ನೀಡಿದೆ. ಇದಕ್ಕೆ ಕಾರಣ ಏನಿರಬಹುದು ಎನ್ನೋದು ಎಲ್ಲರಿಗೂ ಕಾಡುತ್ತಿದೆ. ವಾಹಿನಿಯಲ್ಲಿ ಟಾಪ್‌ 3 ಧಾರಾವಾಹಿಗಳಲ್ಲಿ ʼಲಕ್ಷ್ಮೀ ಬಾರಮ್ಮʼ ಕೂಡ ಒಂದು. ಟಿಆರ್‌ಪಿ ಕಡಿಮೆ ಆದಾಗ ಸೀರಿಯಲ್‌ ಅಂತ್ಯ ಮಾಡಲಾಗುತ್ತೆ ಅಥವಾ ಕಥೆ ಇನ್ನೂ ಮುಂದುವರೆಸಲು ಬಾರದಿದ್ದಾಗ ಈ ರೀತಿ ಮಾಡೋದುಂಟು. 

ಸೀರಿಯಲ್‌ ಅಂತ್ಯ ಯಾಕೆ?
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಒಳ್ಳೆಯ ಕತೆ ಇತ್ತು, ಇನ್ನೂ ಸಾಕಷ್ಟು ವಿಷಯ ಹೇಳಬಹುದಿತ್ತು. ಆರಂಭದಲ್ಲಿ ಸಾಕಷ್ಟು ಕಥೆ ಎಳೆದು, ಈಗ ಫಾಸ್ಟ್‌ ಆಗಿ ಸಾಗುತ್ತಿರುವ ಹಾಗೆ ಕಾಣ್ತಿದೆ. ಕಥೆಗೆ ಒಂದು ಅಂತ್ಯ ಕೊಡಲೆಂದೇ ಈ ರೀತಿ ಮಾಡುತ್ತಿರೋದು ಸ್ಪಷ್ಟವಾಗಿ ಕಾಣ್ತಿದೆ. ಹಾಗಾದರೆ ಯಾಕೆ ಈ ನಿರ್ಧಾರ ತಗೊಂಡರು ಎನ್ನೋದು ಈಗ ಇರುವ ಪ್ರಶ್ನೆ. 

Latest Videos

ಸೀರಿಯಲ್ ಮುಗಿಯುತ್ತಿದ್ದಂತೆ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ಬಾರಮ್ಮ ನಟಿ … ಬೆಲೆ ಎಷ್ಟು ಗೊತ್ತ?

ಕಲಾವಿದರು ಬೇರೆ ಕಡೆ ಬ್ಯುಸಿ! 
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌ ಅವರು ತೆಲುಗು ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ತಿಂಗಳಲ್ಲಿ ಅವರು ಒಂದಷ್ಟು ದಿನ ಬೆಂಗಳೂರು, ಹೈದರಾಬಾದ್‌ ಅಂತ ಬ್ಯುಸಿ ಇರುತ್ತಾರೆ. ಇನ್ನೊಂದು ಕಡೆ ವೈಷ್ಣವ್‌ ಪಾತ್ರದಲ್ಲಿ ಶಮಂತ್‌ ಬ್ರೊ ಗೌಡ ಅವರು ಸಿನಿಮಾ ಮಾಡುತ್ತಿದ್ದು, ತಮ್ಮ ಸಿನಿಮಾದಲ್ಲಿ ಅವರೇ ಹೀರೋ, ಅವರೇ ನಿರ್ಮಾಪಕರು. ಹೀಗಾಗಿ ಕೆಲಸ ಜಾಸ್ತಿ ಇರುವುದು. ಇನ್ನುಳಿದಂತೆ ಬೇರೆ ಯಾವ ಕಲಾವಿದರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಅಷ್ಟಾಗಿ ಬ್ಯುಸಿ ಆಂದತಿಲ್ಲ. 

ಏನಾಗಿರಬಹುದು?
ಬಹುಶಃ ಡೇಟ್‌ ಸಮಸ್ಯೆಯಿಂದ ಸೀರಿಯಲ್‌ ಮುಗಿಸುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಜಾಸ್ತಿ ಇದೆ. ಲೀಡ್‌ ಪಾತ್ರಧಾರಿಗಳು ಸೀರಿಯಲ್‌ನಿಂದ ಹೊರಗಡೆ ಬಂದರೆ, ಡೇಟ್‌ ಕಡಿಮೆ ಕೊಟ್ಟರೆ ಕತೆ ಚೆನ್ನಾಗಿ ಹೋಗೋದಿಲ್ಲ. ಈ ಧಾರಾವಾಹಿ ಶುರುವಾಗಿ ಎರಡೂವರೆ ವರ್ಷಗಳಾಯ್ತು. ಈಗ ಈ ಧಾರಾವಾಹಿಯಲ್ಲಿ ಲೀಡ್‌ ಪಾತ್ರಗಳನ್ನು ಬದಲಿಸೋದು ಸುಲಭ ಇಲ್ಲ. ಪಾತ್ರ ಬದಲಾದಕೂಡಲೇ ವೀಕ್ಷಕರು ಹೊಸ ಪಾತ್ರಕ್ಕೆ ಅಷ್ಟು ಸುಲಭವಾಗಿ ಹೊಂದಿಕೊಳ್ಳೋದಿಲ್ಲ. ಪಾತ್ರ ಬದಲಾವಣೆ ಮಾಡಿ ಸೀರಿಯಲ್‌ ಮುಂದುವರೆಸೋದಕ್ಕಿಂತ, ನಿಲ್ಲಿಸೋದು ಮುಖ್ಯ ಎಂದು ಕೂಡ ನಿರ್ಧಾರಕ್ಕೆ ಬರುತ್ತಾರೆ. ಈ ಧಾರಾವಾಹಿಯಲ್ಲಿ ಹೀಗೆ ಆಗಿರುವ ಸಾಧ್ಯತೆ ಜಾಸ್ತಿ ಇದೆ. ಆದರೆ ಈ ಬಗ್ಗೆ ವಾಹಿನಿಯಾಗಲೀ, ಕಲಾವಿದರಾಗಲೀ ಯಾವುದೇ ಮಾಹಿತಿ ಕೊಟ್ಟಿಲ್ಲ. 

ಶೀಘ್ರದಲ್ಲಿ ಅಂತ್ಯ ಕಾಣಲಿದೆ ಕಲರ್ಸ್ ಕನ್ನಡದ ಸೂಪರ್ ಹಿಟ್ ಸೀರಿಯಲ್ 'ಲಕ್ಷ್ಮೀ ಬಾರಮ್ಮ'…!

ಕಥೆ ಏನು?
ವೈಷ್ಣವ್‌ ಹಾಗೂ ಕೀರ್ತಿ ಪ್ರೀತಿಸಿದ್ದರೂ ಮದುವೆ ಆಗೋಕೆ ಆಗಿಲ್ಲ. ವೈಷ್ಣವ್‌ ತಾಯಿ ಕಾವೇರಿಯೇ ಇವರಿಬ್ಬರ ಪ್ರೀತಿಗೆ ಕೊಳ್ಳಿ ಇಟ್ಟಳು. ಇನ್ನೊಂದು ಕಡೆ ವೈಷ್ಣವ್‌ಗೆ ಲಕ್ಷ್ಮೀ ಜೊತೆ ಮದುವೆ ಮಾಡಿಸಿದಳು. ತನ್ನ ಮಗ ಕೈತಪ್ಪಿ ಹೋಗಬಾರದು ಎನ್ನೋ ಕಾರಣಕ್ಕೆ ಕಾವೇರಿ ಈ ರೀತಿ ಮಾಡಿದ್ದಳು. ಇನ್ನು ವೈಷ್ಣವ್‌ಗೆ ತಾಯಿ ಗುಣ ಏನು ಅಂತ ಗೊತ್ತಾಗಿಲ್ಲ. ಎಲ್ಲವನ್ನು ತಿಳಿದಿರುವ ಕೀರ್ತಿ ಈಗ ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕ್ಲೈಮ್ಯಾಕ್ಸ್‌ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಸೀರಿಯಲ್‌ ಮುಕ್ತಾಯ ಆಗುತ್ತಿರೋದು ಅನೇಕರಿಗೆ ಬೇಸರ ತಂದಿದೆ. 

ಪಾತ್ರಧಾರಿಗಳು
ವೈಷ್ಣವ್-‌ ಶಮಂತ್‌ ಬ್ರೋ ಗೌಡ
ಲಕ್ಷ್ಮೀ- ಭೂಮಿಕಾ ರಮೇಶ್‌
ಕೀರ್ತಿ-ತನ್ವಿ ರಾವ್‌
ಕಾವೇರಿ- ಸುಷ್ಮಾ ನಾಣಯ್ಯ
 

click me!